HomeUncategorized75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ....

75-80 ಸೀಟು ನಷ್ಟ! ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ….

40ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲ್ಲಿರುವ ಉತ್ತರಪ್ರದೇಶದ ನಷ್ಟ ಅಂದರೆ, ಅಧಿಕಾರದ ನಷ್ಟವೆಂದೇ ಅರ್ಥ

- Advertisement -
- Advertisement -

ಕಳೆದ ಸಲ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಉತ್ತರ ಭಾರತದ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಅದ್ಭುತ ವಿಜಯ ಸಾಧಿಸುವುದರ ಮೂಲಕ. ಈ ಸಲ ಉತ್ತರ ಭಾರತದಲ್ಲಿ ಅದರ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನುತ್ತಾರೆ ಖ್ಯಾತ ವಿಶ್ಲೇಷಕ ದೀಪಂಕರ್ ಬಸು ನತ್ತು ಅವರ ತಂಡದ ಸದಸ್ಯರು. ವಿವಿಧ ಚುನಾವಣಾ ಶಾಸ್ತ್ರಗಳನ್ನು ಬಲ್ಲ ಈ ತಂಡ, ಎರಡು-ಮೂರು ಮಾನದಂಡಗಳಲ್ಲಿ ವಿಶ್ಲೇಷಣೆ ಮಾಡಿದಾಗಲೂ, ಅಂತಿಮ ಫಲಿತಾಂಶ: ಉತ್ತರ ಭಾರತದಲ್ಲಿ ಬಿಜೆಪಿ ಪಾತಾಳಕ್ಕೆ ಎಂಬುದೇ ಆಗಿದೆ….. ಪಶ್ಚಿಮ ಬಂಗಾಳದಲ್ಲೂ ಅದಕ್ಕೆ ಸಿಗುವ ಲಾಭ ಅಷ್ಟಕ್ಕಷ್ಟೇ …ಈ ಅಧ್ಯಯನವನ್ನು ಓದಿ ಅದರ ಸಂಕ್ಷಿಪ್ತ ರೂಪವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ…

ಹಿಂದಿ ಬೆಲ್ಟ್: ಬಿಜೆಪಿಗೆ 75 ಸೀಟು ನಷ್ಟ
ಕಳೆದ ಸಲ 2014ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದೇ ಹಿಂದಿ ಬೆಲ್ಟ್ ಎಂದು ಕರೆಯಲ್ಪಡುವ 10 ರಾಜ್ಯಗಳಾದ ಬಿಹಾರ್, ಛತ್ತೀಸ್‍ಘಡ್, ದೆಹಲಿ, ಹಿಮಾಚಲ ಪ್ರದೇಶ, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ್, ಉತ್ತರಾಖಂಡ, ಮತ್ತು ಉತ್ತರ ಪ್ರದೇಶಗಳಲ್ಲಿ ಅದು ಸಾಧಿಸಿದ ಅಭೂತಪೂರ್ವ ಗೆಲುವು. ಈ 10 ರಾಜ್ಯಗಳ ಒಟ್ಟು 225 ಸೀಟುಗಳಲ್ಲಿ ಬಿಜೆಪಿ 190 ಸೀಟುಗಳನ್ನು ಗೆದ್ದಿತ್ತು!
2019ರಲ್ಲಿ ಅದರ ಭವಿಷ್ಯವನ್ನು ಇದೇ ರಾಜ್ಯಗಳು ಬರೆಯಲಿವೆ. ಅದರಲ್ಲೂ ಉತ್ತರ ಪ್ರದೇಶ ರಾಜ್ಯದ ಫಲಿತಾಂಶವೇ ಈ ಇತರ ಹಿಂದಿ ರಾಜ್ಯಗಳ ಮೇಲೂ ಪ್ರಭಾವ ಹೊಂದಿರುತ್ತದೆ.

ಮೊದಲ ಏಟೇ ಯು.ಪಿ.ಯಿಂದ!
ಇಲ್ಲಿ ಈ ಅಧ್ಯಯನದಲ್ಲಿ ಎರಡು ವಿಧಾನ ಆಯ್ದು ಕೊಳ್ಳಲಾಗಿದೆ. ಮೊದಲ ವಿಧಾನದಲ್ಲಿ 2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳನ್ನು ಮತ್ತು ಎರಡನೇ ವಿಧಾನದಲ್ಲಿ 2014ರ ಸಂಸತ್ ಚುನಾವಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಮೊದಲ ವಿಧಾನದ ಪ್ರಕಾರ, ಅದರ ಶೇಕಡಾವಾರು ಮತಗಳಿಕೆ ಶೇ.42.3ರಿಂದ 39.3ಕ್ಕೆ ಇಳಿಯಲಿದೆ. ಅಂದರೆ, ಈಗಿರುವ ಅದರ 71 ಸಂಸದರ ಸಂಖ್ಯೆ 27ಕ್ಕೆ ಕುಸಿಯಲಿದೆ. ಇದರರ್ಥ 44 ಸೀಟುಗಳ ನಷ್ಟ.

ಎರಡನೆ ವಿಧಾನದಲ್ಲಿ, ಅದರ ಶೇಕಡಾವಾರು ಮತಗಳಿಕೆ ಹೆಚ್ಚೂಕಡಿಮೆ 2014ರಲ್ಲಿ ಇದ್ದಷ್ಟೇ ಇರಲಿದ್ದು, ಸೀಟುಗಳ ಸಂಖ್ಯೆಯಲ್ಲಿ 71ರಿಂದ 30ಕ್ಕೆ ಇಳಿಯಲಿದೆ. ಅಂದರೆ 41 ಸೀಟುಗಳ ನಷ್ಟ.

40ರ ಕೊರತೆ ಎಲ್ಲಿ ತುಂಬುವುದು?
2014ರಲ್ಲಿ ಬಿಜೆಪಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಸ್ವೀಪ್ ಎನ್ನುವ ಮಟ್ಟಿಗೆ ವಿಜಯ ಸಾಧಿಸಿತ್ತು. ಇದರರ್ಥ ಈಗದು ಉತ್ತರ ಪ್ರದೇಶದ 40 ಸೀಟುಗಳ ಕೊರತೆಯನ್ನು ಈ ಭಾಗದಿಂದಲೇ ತುಂಬಿಕೊಳ್ಳಬೇಕು. ಏಕೆಂದರೆ, ಉಳಿದೆಡೆ ಅಂತಹ ವಾತಾವರಣ ಇಲ್ಲ. ಪೂರ್ವ ಮತ್ತು ದಕ್ಷಿಣದಲ್ಲಿ ಅದಕ್ಕೆ ಗಮನಾರ್ಹ ಲಾಭ ತಂದುಕೊಡುವ ಪರಿಸ್ಥಿತಿ ಇಲ್ಲವೇ ಇಲ್ಲ.
ಅಂತಿಮವಾಗಿ ಉತ್ತರಪ್ರದೇಶದ ನಷ್ಟ ಅಂದರೆ, ಅಧಿಕಾರದ ನಷ್ಟವೆಂದೇ ಅರ್ಥ.

ಇದನ್ನು ಓದಿ: ಡಾಟಾ ಅನಾಲಿಕಲ್ ವರದಿ ಹೇಳುತ್ತಿವೆ ಬಿಜೆಪಿಗೆ ಸೋಲು ಖಚಿತ

ಮಮತಾ ಮುಂದೆ ಮಂಡಿಯೂರಿತೇ?
ಪೂರ್ವ ಭಾರತದ ಪ್ರಮುಖ ರಾಜ್ಯವಾದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಸಲ ಪುಶ್ ಪಡೆಯಲಿದೆ ಎನ್ನುವ ಲೆಕ್ಕಾಚಾರಗಳೂ ಉಲ್ಟಾ ಆಗತೊಡಗಿವೆ. ಇಲ್ಲಿ ಒಟ್ಟು 42 ಸೀಟುಗಳಿದ್ದು 2014ರಲ್ಲಿ ಬಿಜೆಪಿ 2 ಸೀಟು ಗೆದ್ದಿತ್ತು. ಈ ಸಲ 8 ಗೆಲ್ಲಲಿದೆ ಎಂಬ ಲೆಕ್ಕಾಚಾರವನ್ನು ಮಮತಾ ದೀದಿ ಹೊಡೆದು ಹಾಕಿದ್ದಾರೆ. ಇಲ್ಲಿ ಬಿಜೆಪಿ ತನ್ನ ಸಂಖ್ಯೆಯನ್ನು 2ರಿಂದ 6ಕ್ಕೆ ಹೆಚ್ಚಿಸಕೊಳ್ಳಬಹುದು. ಅಂದರೆ 4 ಸೀಟು ಲಾಭ. ಇನ್ನೊಂದು ಲೆಕ್ಕದಲ್ಲಿ ಅದು 2ರಿಂದ ಒಂದಕ್ಕೂ ಕುಸಿಯಬಹುದು….

75 ಸೀಟು ಕೊರತೆಯೇ ಹೊಡೆತ!
ಉತ್ತರದಲ್ಲಿ ಬಿಜೆಪಿಗೆ ಕಳೆದ ಸಲಕ್ಕಿಂತ ಈ ಸಲ 75 ಸೀಟು ಕಡಿಮೆ ಬರಲಿವೆ. ಇದನ್ನು ತುಂಬಿಕೊಂಡರಷ್ಟೇ ಅದು ಮೊದಲಿನ ಸ್ಥಾನಕ್ಕೆ ಬರಬಹುದು. ಎಲ್ಲಿಂದ ತುಂಬಿಕೊಳ್ಳಲಿದೆ? ಪಶ್ಚಿಮದಲ್ಲಿಯಾ? ಅಷ್ಟು ಸುಲಭವಲ್ಲ… ದಕ್ಷಿಣದಲ್ಲಿ? ಬಿಜೆಪಿಗೇ ಗೊತ್ತಿರುವಂತೆ ಇದೂ ಅಸಾಧ್ಯ….
(ಆಧಾರ: ದೀಪಂಕರ್ ಬಸು ಮತ್ತು ತಂಡ, ದಿ ವೈರ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...