“ನಾನು ಕೂಡ ಎಲ್ಲ ರೈತರಂತೆ ಹೊಲ ಮತ್ತು ದನಗಳ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ಆದರೆ ರೈತರು ದೆಹಲಿ ಚಲೋಗೆ ಕರೆ ನೀಡಿದರು. ಈ ಪ್ರತಿಭಟನೆ ಪ್ರಾರಂಭವಾದಾಗ ಇದು ಐತಿಹಾಸಿಕವಾಗಲಿದೆ ಎಂದು ಭಾವಿಸಿದೆ ಮತ್ತು ನಾನು ಅಲ್ಲಿರಬೇಕು ಎಂದು ನಿರ್ಧರಿಸಿದೆ”.. ಇವು ಕಳೆದ 86 ದಿನಗಳಿಂದ ಹಗಲು ರಾತ್ರಿ ಎನ್ನದೆ, ಒಂದು ದಿನವೂ ರಜೆ ತೆಗೆದುಕೊಳ್ಳದೆ ದೆಹಲಿ ಮತ್ತು ದೇಶದ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುವ ಸಂದೀಪ್ ಸಿಂಗ್ ಎಂಬ ಯುವಕ/ಪತ್ರಕರ್ತ/ಹೋರಾಟಗಾರನ ಮಾತುಗಳು…
ಪ್ರತಿಭಟನಾನಿರತ ರೈತರ ಮಧ್ಯೆ ಗ್ರೌಂಡ್ ರಿಪೋರ್ಟ್ ಮಾಡುತ್ತ ಅತ್ಯಂತ ವಸ್ತುನಿಷ್ಟ ಪತ್ರಕರ್ತರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಸಂದೀಪ್ ಸಿಂಗ್ “ದಯವಿಟ್ಟು ನನ್ನ ವರದಿಗಳಲ್ಲಿನ ಕಾಗುಣಿತ ತಪ್ಪುಗಳನ್ನು ಮರೆತುಬಿಡಿ, ಅದರ ಸಾರವನ್ನಷ್ಟೇ ಗಮನಿಸಿ. ಏಕೆಂದರೆ ಹೇಳಲು ಬಹಳಷ್ಟು ವಿಷಯಗಳಿವೆ, ಆದರೆ ಸಮಯ ಕಡಿಮೆಯಿದೆ” ಎನ್ನುತ್ತಾರೆ.
“Release our farmers and youngsters.” Women raise slogans at Singhu. pic.twitter.com/kOaSJGOXOl
— Sandeep Singh (@PunYaab) February 13, 2021
ಸಂದೀಪ್ ಸಿಂಗ್‌ರವರ ಟ್ವಿಟರ್ ಟೈಮ್‌ಲೈನ್ ಅನ್ನು ನೀವು ಗಮನಿಸಿದರೆ ತಿಳಿಯುತ್ತದೆ ಅವರೆಷ್ಟು ಆಳವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು. ಪ್ರತಿ ಗಂಟೆಗೂ ಮೂರು-ನಾಲ್ಕು ವಿಷಯಗಳ ಕುರಿತು ವರದಿ ನೀಡಿರುತ್ತಾರೆ. ಅವೆಲ್ಲವೂ ಬ್ರೇಕಿಂಗ್ ನ್ಯೂಸ್‌ಗಳ ರೂಪದಲ್ಲಿರುತ್ತವೆ. ಅದರೊಂದಿಗೆ ಫೋಟೊ, ವಿಡಿಯೋಗಳು ಇದ್ದು ರೈತ ಹೋರಾಟದ ಸಮರ್ಪಕ ಮಾಹಿತಿ ನೋಡುಗರಿಗೆ ದೊರೆಯುತ್ತದೆ.
ಕಳೆದ 84 ದಿನಗಳಿಂದಲೂ ರೈತ ಹೋರಾಟದ ಪ್ರತಿ ಮಾಹಿತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ತಲುಪಿಸಲು ಶ್ರಮಿಸುತ್ತಿರುವ ಸಂದೀಪ್ ಸಾವಿರಾರು ಟ್ವೀಟ್‌ಗಳನ್ನು ಮಾಡಿದ್ದಾರೆ. “ಈ ಮೊದಲು ಸಹ ಪಂಜಾಬಿ ಮಾಧ್ಯಮಗಳು ರೈತ ಹೋರಾಟದ ಪ್ರತಿಯೊಂದನ್ನು ವರದಿ ಮಾಡುತ್ತಿದ್ದವು. ಆದರೆ ಅದನ್ನು ದೇಶಕ್ಕೆ ಮತ್ತು ಪ್ರಪಂಚಕ್ಕೆ ತಿಳಿಸಬೇಕಾಗಿತ್ತು. ಅದಕ್ಕಾಗಿ ನಾನು ಪ್ರತಿಯೊಂದನ್ನು ವಿಡಿಯೋ ಮಾಡಿ ಟ್ವೀಟ್ ಮಾಡಲು ಆರಂಭಿಸಿದೆ. ಇದು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ತಲುಪಲು ಸಾಧ್ಯವಾಯಿತು. ಹಾಗಾಗಿ ಮತ್ತಷ್ಟು ತನ್ಮಯತೆಯೊಂದಿಗೆ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ” ಎನ್ನುತ್ತಾರೆ.
Nodeep Kaur got bail in two FIRs.
Nodeep Kaur’s advocate Jatinder Kumar said, today she has been granted bail in FIR No.26.She had already got bail in FIR no.649. Her bail application in FIR no.25 has been filed it will be soon listed for hearing in Punjab and Haryana high court. pic.twitter.com/rvXScgZoec— Sandeep Singh (@PunYaab) February 15, 2021
“ನವೆಂಬರ್ 24 ರಂದು ನಾನು ಪಂಜಾಬ್‌ನ ಹಳ್ಳಿಯಿಂದ ಇಲ್ಲಿಗೆ ಬಂದೆ. ನನ್ನ ಕೆಲವು ವಿಡಿಯೋಗಳು ವೈರಲ್ ಆಗಿವೆ. ನನ್ನ ಟ್ವಿಟರ್ ಫಾಲೋವರ್ಸ್‌ಗಳ ಸಂಖ್ಯೆ ದ್ವಿಗುಣವಾಗಿದೆ. ಅಂದಿನಿಂದ ಒಮ್ಮೆಯೂ ರಜೆ ತೆಗೆದುಕೊಂಡಿಲ್ಲ ಮಾತ್ರವಲ್ಲ ನಾನು ಊರಿಗೆ ಹೋಗಿಲ್ಲ. ದೆಹಲಿಯ ಗಡಿಗಳಲ್ಲಿಯೂ ತಿರುಗಾಡುತ್ತ ವರದಿ ಮಾಡುತ್ತಿದ್ದೇನೆ” ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.
ತಮ್ಮ ಮೊಬೈಲ್‌ನಲ್ಲಿಯೇ ಪ್ರತಿಭಟನೆಗಳ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ ಟ್ವೀಟ್ ಮಾಡುವ ಸಂದೀಪ್ ಸಿಂಗ್‌ರವರ ಕೆಲಸಕ್ಕೆ ಹಲವಾರು ಪತ್ರಕರ್ತರು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಅಲ್‌ಜಜೀರಾ ಟಿವಿ ಸಹ ಅವರ ಬಗ್ಗೆ ವರದಿ ಮಾಡಿದೆ. ಅವರ ಟ್ವೀಟ್‌ಗಳನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ. ಬಹಳಷ್ಟು ಮಾಧ್ಯಮಗಳು ರೈತ ಹೋರಾಟದ ವರದಿ ಮಾಡಲು ಸಂದೀಪ್ ಸಿಂಗ್‌ರವರನ್ನು ಸಂಪನ್ಮೂಲವನ್ನಾಗಿ ನೋಡುತ್ತಾರೆ.
"When this protest started…I thought this is going to be historic and I need to be there."
Sandeep Singh – @PunYaab – has emerged as one of the most prolific journalists working amidst the protesting farmers.
His tweets and videos are seen and shared by millions of Indians. pic.twitter.com/adQWnbil2S
— The Listening Post (@AJListeningPost) February 11, 2021
ಒಟ್ಟಿನಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದ ಸಂದೀಪ್ ಸಿಂಗ್ ರೈತ ಹೋರಾಟವನ್ನು ಸವಿವರವಾಗಿ ವರದಿ ಮಾಡಿದ ನಂತರ ಖ್ಯಾತರಾಗಿದ್ದಾರೆ. ಗೋದಿ ಮಾಧ್ಯಮಗಳಿಂದ ಬೇಸತ್ತಿರುವ ಸಾವಿರಾರು ರೈತರು ಸಂದೀಪ್‌ರನ್ನು ಅಭಿಮಾನದಿಂದ ನೋಡುತ್ತಾರೆ. ಹಲವಾರು ಪತ್ರಿಕೆಗಳು ಅವರಿಂದ ವರದಿ ಬಯಸಿವೆ ಅಷ್ಟೇ ಅಲ್ಲದೆ ಉದ್ಯೋಗದ ಆಫರ್ ಕೂಡ ನೀಡಿವೆ. ಅವರು ಶ್ರದ್ಧೆಯಿಂದ ಮಾಡಿದ ಕೆಲಸ ದೇಶದ ಹಲವರಿಗೆ ಮಾಹಿತಿ ನೀಡಿದ್ದಲ್ಲದೆ ಅವರಿಗೂ ಖ್ಯಾತಿ ತಂದುಕೊಟ್ಟಿದೆ.
ಸಂದೀಪ್ ಸಿಂಗ್‌ರವರ ಟ್ವಿಟರ್ ಫಾಲೋ ಮಾಡಲು ಇಲ್ಲಿ ಮತ್ತು ಯೂಟ್ಯೂಬ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಗೆಲ್ಲುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ: ಸಿಂಘು ಗಡಿಯಲ್ಲಿ ಗುರ್ತೇಜ್ ಸಿಂಗ್ ಗುಡುಗು


