Homeಮುಖಪುಟಸರ್ವಾಧಿಕಾರಿ ಸರ್ಕಾರ ಭಯಭೀತವಾಗಿದೆ: ಮಹುವಾ ಮೊಯಿತ್ರಾರನ್ನು ಬೆಂಬಲಿಸಿದ ಶಿವಸೇನೆ

ಸರ್ವಾಧಿಕಾರಿ ಸರ್ಕಾರ ಭಯಭೀತವಾಗಿದೆ: ಮಹುವಾ ಮೊಯಿತ್ರಾರನ್ನು ಬೆಂಬಲಿಸಿದ ಶಿವಸೇನೆ

- Advertisement -
- Advertisement -

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸತ್ ಸದಸ್ಯೆ ಮಹುವಾ ಮೊಯಿತ್ರಾ ಅವರನ್ನು ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂಬ ಆರೋಪದ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಪ್ರಮುಖ ಪಕ್ಷವಾದ ಶಿವಸೇನೆ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯದಲ್ಲಿ, “ಇಂತಹ ಕ್ರಮಗಳು ಸರ್ವಾಧಿಕಾರಿ ಸರ್ಕಾರವು ಹೆಚ್ಚು ಭಯಭೀತವಾಗಿದೆ ಮತ್ತು ತನ್ನ ದೌರ್ಬಲ್ಯವನ್ನು ಎತ್ತಿ ತೋರಿಸಿ ಸಾಬೀತುಪಡಿಸುತ್ತಿದೆ” ಎಂದು  ಹೇಳಿದೆ.

ಅದು ತನ್ನ ಸಂಪಾದಕೀಯದಲ್ಲಿ ಮೊಯಿತ್ರಾ ಅವರನ್ನು ಪ್ರಶಂಸಿದ್ದು, ಅವರು ಸರ್ಕಾರವನ್ನು ಬೆವರುವಂತೆ ಮಾಡಿದ್ದಾರೆ ಮತ್ತು ಕೇಂದ್ರ ಸರ್ಕಾರವು “ಮಹಿಳೆಗೆ ಹೆದರುತ್ತಿದೆ” ಎಂದು ಅದು ಹೇಳಿದೆ.

ಮಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡು ದೇಶವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ ಎಂದು ಆರೋಪಿಸಿದ್ದರು. ಇದರ ನಂತರ ಅವರ ದೆಹಲಿಯ ನಿವಾಸದ ಹೊರಗೆ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಹುವಾ ಮೊಯಿತ್ರ ಈ ಭದ್ರತೆಯನ್ನು ತೆಗೆದು ಹಾಕಬೇಕು ಎಂದು ಹೇಳಿದ್ದರು ಜೊತೆಗೆ, ಈ ಭದ್ರತೆಯಿಂದಾಗಿ ನಾನು ಕಣ್ಗಾವಲಿನಲ್ಲಿದ್ದೇವೆ ಎಂದು ನನಗೆ ತೋರುತ್ತದೆ ಎಂದು ಪತ್ರ ಬರೆದಿದ್ದರು. ತನ್ನನ್ನು ತಾನು ಸಾಮಾನ್ಯ ಪ್ರಜೆ ಎಂದು ಕರೆದಿದ್ದ ಅವರು ತನಗೆ ಭದ್ರತಾ ರಕ್ಷಣೆಯ ಅಗತ್ಯವಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: ಶಾಸಕರ ರಾಜೀನಾಮೆ: ಬಹುಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರ್ಕಾರ

ಭಾರತೀಯ ಜನತಾ ಪಕ್ಷವು ಯಾವ ರೀತಿಯ ಸಂಸ್ಕೃತಿಯನ್ನು ರಾಜಕೀಯಕ್ಕೆ ತರಲು ಬಯಸಿದೆ ಎಂದರೆ, ಅವರು ಹೊರತುಪಡಿಸಿ ಬೇರೆ ಯಾರೂ ಉಳಿಯಬಾರದು ಎಂಬ ಹಾದಿಯಲ್ಲಿ ಅವರು ನಡೆದುಕೊಳ್ಳುತ್ತಿದ್ದಾರೆ. ಅವರು ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಂಡಿಲ್ಲ ಎಂದು ಶಿವಸೇನೆ ಹೇಳಿದೆ.

ಇಂದಿನ ಈ ಕಷ್ಟದ ಸಂದರ್ಭಗಳಲ್ಲೂ ನಿರ್ಭಯವಾಗಿ ಹೋರಾಡುವ ಜನರಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖಂಡ ಶರದ್ ಪವಾರ್, ಪಂಜಾಬ್‌ನ ಬಾದಲ್‌ ಕುಟುಂಬ ಮತ್ತು ರೈತ ಮುಖಂಡ ರಾಜೇಶ್ ಟಿಕಾಯತ್‌ ಅವರಂತಹ ಅನೇಕ ಜನರು ಸರ್ಕಾರವು ಮೇಲ್ವಿಚಾರಣೆ ಮಾಡುವ ಎಲ್ಲಾ ವ್ಯವಸ್ಥೆಯನ್ನು ಹೊಂದಿದ್ದರೂ ಕೂಡಾ ನಿರ್ಭಯವಾಗಿ ಹೋರಾಡುತ್ತಿದ್ದಾರೆ ಎಂದು ಶಿವಸೇನೆ ಹೇಳಿದೆ.

ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ ಕೇಂದ್ರವು ಮೊಯಿತ್ರಾ ಮೇಲೆ ಕಣ್ಣಿಟ್ಟಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಅವರು ಮಯಿತ್ರ ಅವರ ಗೌಪ್ಯತೆಯ ಹಕ್ಕಿನ ಬಗ್ಗೆ ಬೆಂಬಲಿಸಿದ್ದು, ಅವರು ಕೇಳದೆ ದೆಹಲಿ ಪೊಲೀಸರು ಯಾಕೆ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪಕ್ಷದ ಅಭ್ಯರ್ಥಿಗಳಾಗಲು ಬಯಸುವವರು ₹ 25 ಸಾವಿರ ಪಾವತಿಸಿ: ಕಮಲ್ ಹಾಸನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...