Homeಮುಖಪುಟಶಾಸಕರ ರಾಜೀನಾಮೆ: ಬಹುಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರ್ಕಾರ

ಶಾಸಕರ ರಾಜೀನಾಮೆ: ಬಹುಮತ ಕಳೆದುಕೊಂಡ ಪುದುಚೇರಿ ಕಾಂಗ್ರೆಸ್ ಸರ್ಕಾರ

- Advertisement -
- Advertisement -

ಶಾಸಕ ಎ. ಜಾನ್ ಕುಮಾರ್ ಅವರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ವಿ.ಪಿ. ಶಿವಕೋಲುಂಟು ಅವರಿಗೆ ಸಲ್ಲಿಸುವುದರೊಂದಿಗೆ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಬಹುಮತ ಕಳೆದುಕೊಂಡಿದೆ. ಈ ಹಿಂದೆಯೆ ಆಡಳಿತ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದರು. ಅಲ್ಲಿ ಚುನಾವಣೆಗೆ ಇನ್ನೇನು ಕೆಲವೆ ತಿಂಗಳುಗಳು ಉಳಿದಿರುವಾಗ ಈ ರಾಜಕೀಯ ಬೆಳವಣಿಗೆ ಭಾರಿ ಅಚ್ಚರಿ ಮೂಡಿಸಿದೆ.

ಇತ್ತೀಚಿನ ಬೆಳವಣಿಗೆಯಿಂದಾಗಿ, 33 ಸದಸ್ಯ ಬಲವಿರುವ ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್-ಡಿಎಂಕೆ ಮೈತ್ರಿ ಮತ್ತು ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವು ತಲಾ 14 ಶಾಸಕರನ್ನು ಹೊಂದಿದೆ. ಮೂರು ನಾಮನಿರ್ದೇಶಿತ ಶಾಸಕರನ್ನು ಒಳಗೊಂಡಿರುವ ಅಸೆಂಬ್ಲಿಯಲ್ಲಿ ಪ್ರಸ್ತುತ 28 ಸಕ್ರಿಯ ಶಾಸಕರು ಇದ್ದಾರೆ.

ಇದನ್ನೂ ಓದಿ: ಕೋಮುವಾದ ಮತ್ತು ಜನದ್ರೋಹಿ ಮೀಡಿಯಾವನ್ನು ಬೆತ್ತಲು ಮಾಡಿದ ರೈತ ಚಳವಳಿ: ಡಿ. ಉಮಾಪತಿ

ಕಾಂಗ್ರೆಸ್‌ ತನ್ನ 10 ಶಾಸಕರು, ಮೂವರು ಡಿಎಂಕೆ ಶಾಸಕರು ಮತ್ತು ಆಡಳಿತಾರೂಢ ಒಕ್ಕೂಟವನ್ನು ಬೆಂಬಲಿಸುವ ಒಬ್ಬ ಪಕ್ಷೇತರ ಶಾಸಕನನ್ನು ಹೊಂದಿದೆ. ಪ್ರತಿಪಕ್ಷದಲ್ಲಿ ಬಿಜೆಪಿಯ ಮೂವರು ನಾಮನಿರ್ದೇಶಿತ ಶಾಸಕರು, ಎನ್‌ಆರ್ ಕಾಂಗ್ರೆಸ್‌ನ ಏಳು ಶಾಸಕರು ಮತ್ತು ಎಐಎಡಿಎಂಕೆ ನಾಲ್ವರು ಶಾಸಕರಿದ್ದಾರೆ. ಮುಖ್ಯಮಂತ್ರಿ ನಾರಾಯಣಸಾಮಿ ಅವರ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಆರೋಪಿಸಿರುವ ಪ್ರತಿಪಕ್ಷಗಳು ವಿಶ್ವಾಸ ಮತ ಯಾಚನೆಗೆ ಒತ್ತಾಯಿಸಿವೆ.

ನವದೆಹಲಿಯಲ್ಲಿ ಬಿಜೆಪಿ ನಾಯಕರೊಂದಿಗೆ ಇತ್ತೀಚೆಗೆ ನಡೆದ ಸಭೆಗಳ ನಂತರ ಜಾನ್ ಕುಮಾರ್ ಆಡಳಿತ ಒಕ್ಕೂಟವನ್ನು ತೊರೆಯುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು.

ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ಶಾಸಕ ಎ. ಜಾನ್ ಕುಮಾರ್ ಅವರನ್ನು ಮುಖ್ಯಮಂತ್ರಿ ವಿ. ನಾರಾಯಣಸಾಮಿ ಅವರ ಆಪ್ತ ವಲಯದವರು ಎಂದು ಪರಿಗಣಿಸಲಾಗಿತ್ತು. ಅವರು ನೆಲ್ಲಿಥೋಪ್ ಕ್ಷೇತ್ರದಿಂದ 2016 ರ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ನಂತರ ಈ ಕ್ಷೇತ್ರವನ್ನು ನಾರಾಯಣಸಾಮಿ ಅವರಿಗೆ ಬಿಟ್ಟುಕೊಟ್ಟು 2019 ರಲ್ಲಿ ಕಾಮರಾಜ್ ನಗರ ಉಪಚುನಾವಣೆಯಲ್ಲಿ ಗೆದ್ದಿದ್ದರು.

ಇವರ ರಾಜೀನಾಮೆಗೂ ಮುಂಚೆ ಸರ್ಕಾರದ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣ ರಾವ್‌ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಾಗಿ ಒಂದೇ ದಿನದಲ್ಲಿ ಜಾನ್ ಕುಮಾರ್ ಅವರ ರಾಜೀನಾಮೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರವನ್ನು ರೂಪಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಪುದುಚೇರಿಗೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ ಇದು ನಡೆದಿದ್ದು, ರಾಜೀನಾಮೆಗಳು ರಾಜಕೀಯ ತಲ್ಲಣಗಳನ್ನು ಉಂಟು ಮಾಡಿದೆ. ರಾಹುಲ್ ಗಾಂಧಿಯವರ ಈ ಭೇಟಿಯು ಪುದುಚೇರಿಯಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಾಡುತ್ತಿರುವ ಮೊದಲನೇ ಭೇಟಿಯಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಿಹಾನ್ನ ಹಿಡಿದಿದ್ದು ಪಾಕ್ ಧ್ವಜವಲ್ಲ, ವೆಸ್ಟ್ಇಂಡೀಸ್ ಕ್ರಿಕೆಟ್ ಧ್ವಜವನ್ನು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...