Homeದಿಟನಾಗರಫ್ಯಾಕ್ಟ್‌ಚೆಕ್: ರಿಹಾನ್ನ ಹಿಡಿದಿದ್ದು ಪಾಕ್ ಧ್ವಜವಲ್ಲ, ವೆಸ್ಟ್ಇಂಡೀಸ್ ಕ್ರಿಕೆಟ್ ಧ್ವಜವನ್ನು

ಫ್ಯಾಕ್ಟ್‌ಚೆಕ್: ರಿಹಾನ್ನ ಹಿಡಿದಿದ್ದು ಪಾಕ್ ಧ್ವಜವಲ್ಲ, ವೆಸ್ಟ್ಇಂಡೀಸ್ ಕ್ರಿಕೆಟ್ ಧ್ವಜವನ್ನು

- Advertisement -
- Advertisement -

ಭಾರತದಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಾಪ್ ಗಾಯಕಿ ರಿಹಾನ್ನ ಟ್ವೀಟ್ ಮಾಡಿದ ನಂತರ, ಆಕೆ ಪಾಕಿಸ್ತಾನದ ಧ್ವಜವನ್ನು ಹಿಡಿದಿರುವುದನ್ನು ತೋರಿಸುವ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಗೂಗಲ್ ಇಂಡಿಯಾ ಸರ್ಚ್ ಪ್ರವೃತ್ತಿಗಳನ್ನು ಗಮನಿಸಿದಾಗ, ‘ರಿಹಾನ್ನಾ ಮುಸ್ಲಿಂ’ ಮತ್ತು ‘ರಿಹಾನ್ನ ಪಾಕಿಸ್ತಾನಿ’ ಎಂಬ ಶೋಧ ಪದಗಳಲ್ಲಿ ಭಾರಿ ಏರಿಕೆ ಕಂಡಿದೆ.

ಪಾಕಿಸ್ತಾನದ ಧ್ವಜವನ್ನು ಹಿಡಿದಿರುವ ಪಾಪ್ ಐಕಾನ್ ಚಿತ್ರವನ್ನು ಹರಡಿದವರಲ್ಲಿ ಬಿಜೆಪಿ ಉತ್ತರ ಪ್ರದೇಶದ ವಕ್ತಾರ ಶಲಾಭ್ ಮಣಿ ತ್ರಿಪಾಠಿ ಸೇರಿದ್ದಾರೆ. ತ್ರಿಪಾಠಿ ಬಿಜೆಪಿ ಯುಪಿ ಯುವ ಮೋರ್ಚಾ ಕಾರ್ಯಕರ್ತ ಅಭಿಷೇಕ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.
ಲ್ಯಾಪ್‌ಡಾಗ್‌ಗಳ ಹೊಸ ರಾಣಿ ರಿಹಾನ್ನಾ, ಫೋಟೊ ನೋಡಿ, ನಿಮಗೇ ಗೊತ್ತಾಗುತ್ತೆ ಎಂದು ಒಕ್ಕಣಿಕೆ ನೀಡಲಾಗಿದೆ.

ವಿಭಜಕ ಸುಳ್ ಸುದ್ದಿ ಹರಡುವ, ಬಲಪಂಥೀಯ ನಿಲುವುಗಳ ‘ಶಂಖನಾದ’ ಎಂಬ ಫೇಸ್‌ಬುಕ್ ಪೇಜ್ ಕೂಡಾ ಈ ನಕಲಿ ಫೋಟೊ ಹಾಕಿ ರಿಹಾನ್ನಾ ಪಾಕ್ ಏಜೆಂಟ್ ಎಂಬಂತೆ ಬರೆದಿದೆ.

ಫ್ಯಾಕ್ಟ್‌ಚೆಕ್: ತಿರುಚಿದ ಚಿತ್ರ!

ಸರಳ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಿಂದ ತಿಳಿಯುವುದು ಏನೆಂದರೆ, ಈ ಚಿತ್ರವನ್ನು ತಿರುಚಲಾಗಿದೆ ಅಂದರೆ ಎಡಿಟ್ ಮಾಡಲಾಗಿದೆ. ವಾಸ್ತವದಲ್ಲಿ, ರಿಹಾನ್ನಾ ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಮಂಡಳಿಯ ಧ್ವಜವನ್ನು ಹಿಡಿದಿದ್ದರು.

ಡರ್ಹಾಮ್‌ನ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಐಸಿಸಿ 2019 ರ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಪಂದ್ಯದ ಸಮಯದಲ್ಲಿ ರಿಹಾನ್ನಾ ವೆಸ್ಟ್ ಇಂಡೀಸ್ ತಂಡದ ಈ ಧ್ವಜವನ್ನು ಹಿಡಿದು, ಆ ತಂಡವನ್ನು ಬೆಂಬಲಿಸಿದ್ದರು. ಅಂದಂತೆ, ಆಗ ಪಾಕಿಸ್ತಾನವು ಆಟ ಆಡುವ ತಂಡಗಳಲ್ಲಿ ಒಂದಾಗಿರಲಿಲ್ಲ.

ಅದೇ ವಿಂಡೀಸ್ ಧ್ವಜವನ್ನು ಹಿಡಿದ ಗಾಯಕಿಯ ಇನ್ನೂ ಹಲವಾರು ಚಿತ್ರಗಳಿವೆ. ಪಂದ್ಯದ ದಿನದಂದು ರಿಹಾನ್ನಾ ಅವರು ಒಂದು ಫೋಟೊ ಅಪ್‌ಲೋಡ್ ಮಾಡಿದ್ದರು, ಅಲ್ಲಿ ಅವರು ವೆಸ್ಟ್ ಇಂಡೀಸ್ ತಂಡದ ಆಟಗಾರರು ಧರಿಸುವ ಕ್ಯಾಪ್ ಧರಿಸಿದ್ದಾರೆ.

ಗಾಯಕಿ ರಿಹಾನ್ನಾ ‘ಕ್ರಿಕೆಟ್ ವೆಸ್ಟ್ ಇಂಡೀಸ್’ ಧ್ವಜವನ್ನು ಹಿಡಿದಿರುವ ಚಿತ್ರವನ್ನು ಪಾಕಿಸ್ತಾನದ ಧ್ವಜವನ್ನು ಹಿಡಿದಿದ್ದಾರೆ ಎಂದು ತಪ್ಪಾಗಿ ಚಿತ್ರಿಸಲು ಎಡಿಟ್ ಮಾಡಲಾಗಿದೆ. ಭಾರತದಲ್ಲಿ ರೈತರ ಆಂದೋಲನವನ್ನು ಬೆಂಬಲಿಸುವ ರಿಹಾನ್ನಾ ಅವರ ಟ್ವೀಟ್‌ನಿಂದ ಗಲಿಬಿಲಿಗೊಂಡ ಬಿಜೆಪಿಯ ಸದಸ್ಯರು ಗಾಯಕಿಗೆ ಪಾಕಿಸ್ತಾನಿ ಸಂಪರ್ಕವಿದೆ ಎಂದು ತಪ್ಪಾಗಿ ಸೂಚಿಸಲು ಪ್ರಯತ್ನಿಸಿದ್ದಾರೆ.

(ಕೃಪೆ: ಆಲ್ಟ್ ನ್ಯೂಸ್)


ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಕೇಜ್ರಿವಾಲ್ ಕೃಷಿ ಕಾಯ್ದೆ ಪರ ಮಾತನಾಡಿದರೆಂದು ಎಡಿಟ್ ವಿಡಿಯೋ ಹಂಚಿಕೊಂಡ ಬಿಜೆಪಿಗರುಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ಪ್ರಣಾಳಿಕೆಯಲ್ಲಿ ‘ಅಲ್ಪಸಂಖ್ಯಾತರು’ ಎಂಬ ಪದ ಕೂಡ ಬಳಸಿಲ್ಲ: ಓವೈಸಿ ವಾಗ್ಧಾಳಿ

0
ಬಿಜೆಪಿ ಅಲ್ಪಸಂಖ್ಯಾತರನ್ನು ದ್ವೇಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಬಿಜೆಪಿ 'ಅಲ್ಪಸಂಖ್ಯಾತರು' ಎಂಬ ಪದವನ್ನು ಕೂಡ ಬಳಸಿಲ್ಲ ಎಂದು ಸಂಸದ ಅಸಾದುದ್ದೀನ್ ಓವೈಸಿ ಬಿಜೆಪಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಮುಸ್ಲಿಮರನ್ನು ಅಂಚಿಗೆ ತಳ್ಳಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ...