Homeಮುಖಪುಟ‘ಪೆಯ್ಡ್‌ ನ್ಯೂಸ್ ಅಲ್ಲ’: ದೆಹಲಿ ಶಾಲೆಗಳ ವರದಿ ಬಗ್ಗೆ ಬಿಜೆಪಿ ಆರೋಪ ತಳ್ಳಿಹಾಕಿದ ನ್ಯೂಯಾರ್ಕ್ ಟೈಮ್ಸ್

‘ಪೆಯ್ಡ್‌ ನ್ಯೂಸ್ ಅಲ್ಲ’: ದೆಹಲಿ ಶಾಲೆಗಳ ವರದಿ ಬಗ್ಗೆ ಬಿಜೆಪಿ ಆರೋಪ ತಳ್ಳಿಹಾಕಿದ ನ್ಯೂಯಾರ್ಕ್ ಟೈಮ್ಸ್

- Advertisement -
- Advertisement -

ದೆಹಲಿಯ ಶಿಕ್ಷಣ ವ್ಯವಸ್ಥೆಯ ಕುರಿತು ಅಮೆರಿಕದ ಖ್ಯಾತ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್‌’ ಮುಖಪುಟದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಾಗಿರುವ ಮನೀಶ್ ಸಿಸೋಡಿಯಾ ಅವರ ಚಿತ್ರ ಸಮೇತ ವರದಿಯೊಂದನ್ನು ಪ್ರಕಟಿಸಿತ್ತು. ಆದರೆ ಈ ವರದಿಯನ್ನು ಆಮ್‌ ಆದ್ಮಿ ಪಕ್ಷವೂ ಪತ್ರಿಕೆಗೆ ಹಣ ನೀಡಿ ಸುದ್ದಿ (ಪೆಯ್ಡ್‌ ನ್ಯೂಸ್ ನ್ಯೂಸ್) ಮಾಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು. ಬಿಜೆಪಿಯ ಈ ಆರೋಪವನ್ನು ಪತ್ರಿಕೆ ನಿರಾಕರಿಸಿದ್ದು, ‘ವರದಿಯನ್ನು ಯಾವುದೆ ಪಕ್ಷಪಾತವಿಲ್ಲದೆ ಗ್ರೌಂಡ್‌ ರಿಪೋರ್ಟ್ ಆಧಾರದಲ್ಲಿ ಮಾಡಲಾಗಿದೆ’ ಎಂದು ಹೇಳಿದೆ.

ನ್ಯೂಯಾರ್ಕ್ ಟೈಮ್ಸ್‌ನ ಸಂವಹನ ನಿರ್ದೇಶಕ ನಿಕೋಲ್ ಟೈಲರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ದೆಹಲಿಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಪ್ರಯತ್ನಗಳ ಕುರಿತ ನಮ್ಮ ವರದಿಯು ನಿಷ್ಪಕ್ಷಪಾತ, ಗೌಂಡ್‌ ರಿಪೋರ್ಟ್‌ ಅನ್ನು ಆಧರಿಸಿ ಬರೆಯಲಾಗಿದೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಶಿಕ್ಷಣದ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್‌‌ ಹಲವು ವರ್ಷಗಳಿಂದ ವರದಿ ಮಾಡಲುತ್ತಲೆ ಬಂದಿದೆ. ನಮ್ಮ ಪತ್ರಿಕೋದ್ಯಮ ಯಾವಾಗಲೂ ಸ್ವತಂತ್ರವಾಗಿದ್ದು, ರಾಜಕೀಯ ಅಥವಾ ಜಾಹೀರಾತುದಾರರ ಪ್ರಭಾವದಿಂದ ಮುಕ್ತವಾಗಿದೆ” ಎಂದು ನಿಕೋಲ್ ಟೈಲರ್ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಮೋದಿ ಕೊನೆಯ ಭರವಸೆಯೆಂದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿಲ್ಲ, ಇದು ಎಡಿಟ್ ಫೋಟೊ

ದೆಹಲಿ ಶಿಕ್ಷಣ ಮಾದರಿಯ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯನ್ನು ಮೊದಲು ಆನ್‌ಲೈನ್‌ನಲ್ಲಿ ಆಗಸ್ಟ್ 16 ರಂದು ಮತ್ತು ಅದರ ಅಂತರ್‌‌ರಾಷ್ಟ್ರೀಯ ಆವೃತ್ತಿಯ ಮೊದಲ ಪುಟದಲ್ಲಿ ಆಗಸ್ಟ್ 18 ರಂದು ಪ್ರಕಟಿಸಿತ್ತು. ಶಿಕ್ಷಣದ ಸುಧಾರಣೆಗಾಗಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ವರದಿಯು ಶ್ಲಾಘಿಸಿತ್ತು. ವಿಶೇಷವಾಗಿ 2015 ರಿಂದ ಸರ್ಕಾರಿ ಶಾಲೆಗಳನ್ನು ಅಮೂಲಾಗ್ರವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಉಲ್ಲೇಖಿಸಿತ್ತು.

ಈ ನಡುವೆ ಶುಕ್ರವಾರದಂದು ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಸಿಸೋಡಿಯಾ ಅವರ ಮನೆ ಮತ್ತು ಇತರ 20 ಸ್ಥಳಗಳನ್ನು ಶೋಧಿಸಿದೆ.

ದಿ ನ್ಯೂಯಾರ್ಕ್ ಟೈಮ್ಸ್ ಲೇಖನವನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ದೊಡ್ಡ ಪತ್ರಿಕೆಯೊಂದು ದೆಹಲಿಯ ಶಿಕ್ಷಣ ಕ್ರಾಂತಿಯ ಬಗ್ಗೆ ಬರೆದಿದ್ದು, ಸಿಸೋಡಿಯಾ ಅವರ ಫೋಟೋಗಳನ್ನು ಕೂಡಾ ಪ್ರಕಟಿಸಿದೆ” ಎಂದು ಕೇಜ್ರಿವಾಲ್ ಅವರು ಆನ್‌ಲೈನ್‌ ಭಾಷಣವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

ಆದಾಗ್ಯೂ, ಈ ಲೇಖನವು ಆಮ್‌ ಆದ್ಮಿ ಪಕ್ಷ ಹಣ ಪಾವತಿಸಿ ಬರೆಸಿದ ವರದಿ ಎಂದು ಬಿಜೆಪಿ ಹೇಳಿಕೊಂಡಿದೆ.

“ದೆಹಲಿಯಲ್ಲಿ ಅಸ್ತಿತ್ವದಲ್ಲಿಲ್ಲದ ಶಿಕ್ಷಣ ಮಾದರಿಯ ಒಂದೇ ರೀತಿಯ ಲೇಖನವನ್ನು ನ್ಯೂಯಾರ್ಕ್ ಟೈಮ್ಸ್ ಮತ್ತು ಖಲೀಜ್ ಟೈಮ್ಸ್ ಪ್ರಕಟಿಸಿದೆ. ಅದರ ಎಲ್ಲಾ ಪದಗಳೂ ಒಂದೇ ರೀತಿ ಇದ್ದು, ಒಂದೇ ವ್ಯಕ್ತಿ ಬರೆದಿದ್ದಾರೆ. ಒಂದೇ ರೀತಿಯ ಅದರಲ್ಲೂ ಒಂದು ಖಾಸಗಿ ಶಾಲೆಯ ಚಿತ್ರವನ್ನು ಬಳಸಲಾಗಿದೆ. ಇದು ಹೇಗೆ ಸಾಧ್ಯ” ಎಂದು ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. “ಅರವಿಂದ್ ಕೇಜ್ರಿವಾಲ್ ಅವರು ಹಣ ನೀಡಿ ಪ್ರಚಾರ ಮಾಡುತ್ತಾರೆಯೆ ವಿನಃ ಬೇರೇನು ಅಲ್ಲ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡ ಪರ್ವೇಶ್ ವರ್ಮಾ ಅವರು ಎರಡೂ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನದ ಪ್ರತಿಗಳನ್ನು ತೋರಿಸಿದ್ದಾರೆ. “ಇದು ಎರಡೂ ಪತ್ರಿಕೆಗಳ ಫೋಟೋ. ಎರಡೂ ಪತ್ರಿಕೆಗಳಲ್ಲಿ ಒಬ್ಬರೇ ವರದಿಗಾರ, ಒಂದೇ ರೀತಿಯ ಲೇಖನ, ಪದಗಳೂ ಒಂದೇ ರೀತಿಯಿದೆ, ಒಂದೇ ರೀತಿಯ ಆರು ಚಿತ್ರಗಳು ಎರಡರಲ್ಲೂ ಇವೆ. ಈ ರೀತಿ ಎಂದಾದರೂ ಸಂಭವಿಸುತ್ತದೆಯೇ?” ಎಂದು ಪ್ರಶ್ನಿಸಿದ್ದರು.

ಆದರೆ ಬಿಜೆಪಿಯ ಈ ಆರೋಪಕ್ಕೆ ನ್ಯೂಯಾರ್ಕ್‌ ಟೈಮ್ಸ್‌ ಪ್ರತಿಕ್ರಿಯಿಸಿದೆ. ಇತರ ಪತ್ರಿಕೆಗಳು ವಾಡಿಕೆಯಂತೆ ನಮ್ಮ ಬರಹಗಳನ್ನು ಮರುಪ್ರಕಟನೆ ಮಾಡುವ ಪರವಾನಿಗೆಯನ್ನು ನ್ಯೂಯಾರ್ಕ್ ಟೈಮ್ಸ್ ನೀಡಿದೆ ಎಂದು ನಿಕೋಲ್ ಟೈಲರ್ ಹೇಳಿದ್ದಾರೆ.

ಇದನ್ನೂ ಓದಿ: ‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

ಖಲೀಜ್ ಟೈಮ್ಸ್ ಲೇಖನವು ಸಿಂಡಿಕೇಟೆಡ್ ಆಗಿದ್ದು ಅದರ ಬರಹವು ನ್ಯೂಯಾರ್ಕ್ ಟೈಮ್ಸ್‌ಗೆ ಸಲ್ಲುತ್ತದೆ ಎಂದು ಆಮ್ ಆದ್ಮಿ ಪಕ್ಷವೂ ಸ್ಪಷ್ಟಪಡಿಸಿದೆ. ಸುದ್ದಿ ಸಿಂಡಿಕೇಶನ್ ಸೇವೆಗಳ ಅಡಿಯಲ್ಲಿ ಪತ್ರಿಕೆಗಳು ತಮ್ಮ ಚಂದಾದಾರಿಕೆಯ ಮೂಲಕ ಮತ್ತೊಂದು ಪತ್ರಿಕೆಯ ಬರಹಗಳನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿದೆ.

ಲೇಖನವನ್ನು ಹಣ ನೀಡಿ ಬರೆಸಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ, “ಬಿಜೆಪಿ ನಗೆಪಾಟಲಿಗೀಡಾಗಿದೆ. ಪತ್ರಿಕೆಯಲ್ಲಿ ಯಾವುದೇ ಬಿಜೆಪಿ ನಾಯಕರ ಸುದ್ದಿಯನ್ನು ಮುದ್ರಿಸಲಾಗಿಲ್ಲ. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ ಎಂದು ಕರೆದುಕೊಳ್ಳುತ್ತಿದ್ದು, ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ. ಯಾರಾದರೂ ಪತ್ರಿಕೆಯನ್ನು ಖರೀದಿಸಲು ಸಾಧ್ಯವಾದರೆ ಅವರು ಪ್ರತಿದಿನ ನ್ಯೂಯಾರ್ಕ್ ಟೈಮ್ಸ್‌ನ ಮೊದಲ ಪುಟದಲ್ಲಿ ಕಾಣಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಅವರು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಲೇಖನ ಪ್ರಕಟಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ. “ನಾನು ಅವರಿಗೆ ಸವಾಲು ಹಾಕುತ್ತೇನೆ, ನಿಮ್ಮ ಬಳಿ ಇರುವ ಹಣ, ನಿಮ್ಮ ಬಳಿ ಇರುವ ಅಧಿಕಾರವನ್ನು ಬಳಸಿ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?

ಆಮ್ ಆದ್ಮಿ ಪಕ್ಷದ ಶಾಸಕಿ ಅತಿಶಿ ಅವರು “ಸುಳ್ಳು ಆರೋಪಗಳನ್ನು ಮಾಡುವ ಮೊದಲು ಸ್ವಲ್ಪ ಹೋಂವರ್ಕ್‌ ಮಾಡಿಕೊಳ್ಳಿ” ಎಂದು ಹೇಳಿದ್ದಾರೆ.

ಇಷ್ಟೆ ಅಲ್ಲದೆ ಹಲವು ಪತ್ರಕರ್ತರು ಕೂಡ ಟ್ವಿಟ್ಟರ್ ಮೂಲಕ ಬಿಜೆಪಿಗೆ ಸಿಂಡಿಕೇಶನ್ ಎಂದರೆ ಏನು ಎಂದು ತಿಳಿಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...