Homeಮುಖಪುಟಕರಾವಳಿಯ ಸಾರಾತಾಯಿ

ಕರಾವಳಿಯ ಸಾರಾತಾಯಿ

- Advertisement -
- Advertisement -

ಸಾರಾ ಅಬೂಬಕ್ಕರ್ ಅಂದರೆ ನನ್ನ ಮೊದಲ ನೆನಪು ಬಾಲ್ಯದಲ್ಲಿ ಕೇಳಿದ ರೇಡಿಯೊ ನಾಟಕ ’ಚಂದ್ರಗಿರಿಯ ತೀರದಲ್ಲಿ’. ಆ ದಿನಗಳಲ್ಲಿ ಅದು ಎಷ್ಟು ಅರ್ಥವಾಗಿತ್ತೀ ಬಿಟ್ಟಿತ್ತೋ, ಆದರೆ ತಟ್ಟಿತ್ತು. ಅಂದಿನಿಂದ ನಾನು ಸಾರಾ ಅಭಿಮಾನಿಯಾದೆ. ’ಚಂದ್ರಗಿರಿಯ ತೀರದಲ್ಲಿ’ ಮೂಲ ಕೃತಿ ಹಾಗು ಇತರ ಹಲವು ಕಥನಗಳನ್ನು ಓದಿದ್ದು ನಂತರದ ದಿನಗಳಲ್ಲಿ. ಆದರೆ, ’ಚಂದ್ರಗಿರಿಯ ತೀರದಲ್ಲಿ’ ಕೃತಿ ನನ್ನನ್ನು ಹಸಿ ಮಣ್ಣಿನಲ್ಲಿ ನೆಟ್ಟ ಗಿಡ ಎಂದೇ ಹೇಳಬೇಕು.

ಅದು 2013 ಜೂನ್ ತಿಂಗಳು. ನನ್ನ ಕಥಾಸಂಕಲನ ’ದೂರತೀರಕ್ಕೆ’ ಮಾಸ್ತಿ ಕಥಾ ಪುರಸ್ಕಾರ ಸಂದಿತ್ತು. ಆ ವರ್ಷದ ಜೀವಮಾನದ ಮಾಸ್ತಿ ಸಾಹಿತ್ಯ ಪ್ರಶಸ್ತಿಗೆ ಸಾರಾ ಅಬೂಬಕ್ಕರ್ ಆಯ್ಕೆ ಆಗಿದ್ದರು. ಸಮಾರಂಭಕ್ಕೆ ಅವರು ಮಂಗಳೂರಿಂದ ಬೆಂಗಳೂರಿಗೆ ಹೊರಟರು. ನಾನು ಕಾಸರಗೋಡಿಂದ ಬೆಂಗಳೂರಿಗೆ ಹೊರಟೆ. ಆಗ ನಮ್ಮಿಬ್ಬರ ನಡುವೆ ಮೊದಲ ಬಾರಿಗೆ ದೂರವಾಣಿ ಮಾತು ನಡೆಯಿತು. ’ಎಲ್ಲಿ ಉಳಕೊಳ್ಳುವ ವ್ಯವಸ್ಥೆ’ ಎಂಬ ಮಾತು ಸಹಜವಾಗಿಯೇ ಬಂತು. ನಾನು ’ಅಲ್ಲಿ ತಮ್ಮನ ಮನೆ ಇದೆ; ಉಳಕೊಳ್ಳುವ ವ್ಯವಸ್ಥೆ ಬೇಡ ಅಂದಿರುವೆ ಅಂದೆ. ಅಂದು ಸಾರಾ ಏನೂ ಹೇಳಿರಲಿಲ್ಲ. ಕಾರ್ಯಕ್ರಮ ಮುಗಿದ ನಂತರದ ಮಾತುಕತೆಯಲ್ಲಿ, ’ಇಂತಹ ಕಾರ್ಯಕ್ರಮಗಳಿಗೆ ಪರ ಊರಿಗೆ ಹೋಗುವಾಗ, ಎಷ್ಟೇ ಪ್ರಿಯರಾದರೂ ಯಾವುದೇ ಬಂಧುಗಳ ಮನೆ ನೆಚ್ಚಿಕೊಳ್ಳಬಾರದು. ಆಯೋಜಕರು ಮಾಡುವ ವ್ಯವಸ್ಥೆ ಪಡೆದುಕೊಳ್ಳಬೇಕು. ಅದು ನಮ್ಮ ಹಕ್ಕಿನದು. ಕೆಲವೊಮ್ಮೆ ನಮ್ಮ ಬರವಣಿಗೆ, ನಮ್ಮ ಬರಹದ ಮಹತ್ವ, ನಮಗಿರುವ ಗೌರವ ನಮ್ಮ ಆ ಬಂಧುಗಳಿಗೆ ಅರ್ಥವಾಗುವುದಿಲ್ಲ. ಇನ್ನು ಕೆಲವೊಮ್ಮೆ ಅರ್ಥ ಆದರೂ ಅವರಿಗದು ಬೇಕಿರುವುದಿಲ್ಲ. ಅದ್ಯಾವುದು ಅಲ್ಲದಿದ್ದರೆ ಕೆಲವೊಮ್ಮೆ ನಮ್ಮ ಸಮಯಕ್ಕೆ ಆವರ ಮನೆಯ ವ್ಯವಸ್ಥೆ ಇರುವುದಿಲ್ಲ.

ನಾವು ಏನೂ ಹೇಳಲಾಗುವುದಿಲ್ಲ. ಅಲ್ಲಿ ಹೊಂದಿಕೊಂಡಿರಬೇಕಷ್ಟೆ. ನಮ್ಮ ಮುಖ್ಯ ಕಾರ್ಯಕ್ರಮ ಅಸ್ತವ್ಯಸ್ತ ಆಗುವ ಸಾಧ್ಯತೆ ಇರುತ್ತದೆ. ಸಭೆಯಲ್ಲಿ ನಾವು ಮಾತಾಡುವುದಿರುತ್ತದೆ. ಅದಕ್ಕೂ ಮೊದಲು ನಮಗೊಂದಿಷ್ಟು ತಯಾರಿ, ಏಕಾಂತ ಬೇಕಾಗುತ್ತದೆ. ಇದನ್ನೆಲ್ಲ ನಮ್ಮ ಕುಟುಂಬದವರೇ ಆದರೂ, ನಮ್ಮ ಬಗ್ಗೆ ಅವರಿಗೆ ಎಷ್ಟೇ ಪ್ರೀತಿ ವಿಶ್ವಾಸ ಇದ್ದರೂ ನಾವು ಹೆಣ್ಣುಮಕ್ಕಳಾದ್ದರಿಂದ ಹಾಗೆಲ್ಲ ನಿರೀಕ್ಷೆ ಮಾಡಲಾಗುವುದಿಲ್ಲ. ಬಂಧುಗಳ ಮನೆಯ ಭೇಟಿ ನಮ್ಮ ಕಾರ್ಯಕ್ರಮ ಮುಗಿದ ಮೇಲೆ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿ ನನ್ನ ಪಾಲಿಗೆ ಸಾರಾ ತಾಯಿ ಆಗಿಬಿಟ್ಟರು. ಪರಿಚಯವಾದ ಆರಂಭದಲ್ಲೊಮ್ಮೆ, ಮಾತಿನ ನಡುವೆ ನಿಮ್ಮ ಬಗ್ಗೆ ಗೊತ್ತಿರಲಿಲ್ಲ ಎನ್ನುತ್ತಾ ಅವರು ಬೇಸರಿಸಿಕೊಂಡಿದ್ದರು. ಅವರ ನೇರ ನಡೆ, ಸರಳತೆ ನನಗಂತೂ ಖುಷಿಯಾಗಿತ್ತು. ನನ್ನ ಬರವಣಿಗೆ ನಿರಂತರವಾಗಿಲ್ಲದಿರುವುದರಿಂದ, ಗೊತ್ತಿಲ್ಲದಿರುವುದು ಸಹಜವೇ. ಅದನ್ನೇ ಅವರಿಗೆ ಹೇಳಿದಾಗ, “ಕಥೆಯನ್ನೆ ಬರಿಬೇಕು ಅಂತ ಅಂದುಕೊಳ್ಬೇಡಿ. ಏನಾದರೂ ಹೇಳಬೇಕಾದಾಗ ಲೇಖನವೊ, ಅಭಿಪ್ರಾಯವೋ ಯಾವುದಾದರೂ ಒಂದು ರೂಪದಲ್ಲಿ ಬರೆದುಬಿಡಿ ಅಷ್ಟೆ”

ಮುಂದೆ 2015ರಲ್ಲಿ ನನ್ನ ’ಜೋಗತಿ ಜೋಳಿಗೆ’ ಕಥಾ ಸಂಕಲನಕ್ಕೆ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಸಾರಾ ಅವರ ಹೆಸರಿನಲ್ಲಿ ಕೊಡುವ ಸಾರಾ ಅಬೂಬಕ್ಕರ್ ಸಾಹಿತ್ಯ ದತ್ತಿ ಪುರಸ್ಕಾರ ಬಂತು. ಅವರ ಸಮ್ಮುಖದಲ್ಲೇ ಸಮಾರಂಭ ನಡೆಯಿತು. ಅವರು ನನ್ನ ಕಥಾ ಸಂಕಲನ ತರಿಸಿ ಓದಿ ಬಹಳ ಇಷ್ಟಪಟ್ಟಿದ್ದರು. ಕಥೆಗಳ ಬಗ್ಗೆ ಮತ್ತೆಮತ್ತೆ ಫೋನಿನಲ್ಲಿ ಮಾತಾಡಿದರು. ’ಸೈತಾನನ ಬಲೆ’ ಕಥೆಯನ್ನು ಬಹಳ ಸೂಕ್ಷ್ಮವಾಗಿ ನಿಭಾಯಿಸಿದ್ದಿ ಎಂದಾಗ ಸಾರ್ಥಕವೆನಿಸಿತ್ತು. ಮುಂದೆ ಅದೇ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಾಗ ಬಹಳ ಖುಷಿ ಪಟ್ಟಿದ್ದರು. ಆಗಲೂ, “ಕಥೆ ಬರೆಯಲಾಗದಿದ್ದಾಗ ಬೇರೆ ಏನಾದರೂ ಬರೆಯಿರಿ” ಎನ್ನಲು ಮರೆತಿರಲಿಲ್ಲ. ಹೀಗೆ ಫೋನ್ ಸಂಭಾಷಣೆಯ ನೆನಪು ಎದೆಯೊಳಗೆ. 2018ರ ನಂತರ ನನಗೆ ಅವರನ್ನು ಭೇಟಿ ಮಾಡಲಾಗಲೇ ಇಲ್ಲ.

ಅನುಪಮಾ ಪ್ರಸಾದ್
ಬರಹಗಾರ್ತಿ


ಇದನ್ನೂ ಓದಿ: ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆಯ ಕನಸು ಕಂಡಿದ್ದ ಸಾರಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...