ಕೇಂದ್ರ ಬಿಜೆಪಿ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಅತ್ತ ಸಂಸತ್‌ನಲ್ಲಿ ಬಜೆಟ್ ಮಂಡನೆಯಾಗುವಾಗ, ಇತ್ತ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್ ದರವನ್ನು ₹14 ಏರಿಕೆ ಮಾಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ ಇಂದಿನಿಂದಲೇ (ಫೆಬ್ರವರಿ 1) ಅನ್ವಯವಾಗಲಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಬೆಲೆ ಏರಿಕೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ₹1755.50 ರಿಂದ ₹1769.50ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ₹1708.50 ರಿಂದ ₹1723.50, ಕೋಲ್ಕತ್ತಾದಲ್ಲಿ ₹1869ರಿಂದ ₹1887ಮತ್ತು ಚೆನ್ನೈನಲ್ಲಿ ₹1924.50.ರಿಂದ ₹1937ಕ್ಕೆ ಬೆಲೆ ಏರಿಕೆಯಾಗಿದೆ.
ಜನವರಿ 2021 ರಿಂದ 50 ಸಲ ದರ ಬದಲಾವಣೆ
ಕಳೆದ ಮೂರು ವರ್ಷಗಳಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು ಬದಲಾಯಿಸುತ್ತಾ ಬರಲಾಗಿದೆ. ವರದಿಗಳ ಪ್ರಕಾರ, ವಾಣಿಜ್ಯ ಸಿಲಿಂಡರ್ ಬೆಲೆ 50 ಸಲ ಬದಲಾವಣೆ ಮಾಡಲಾಗಿದೆ. ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 17 ಬಾರಿ ಬದಲಾಯಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಾರ, ಜನವರಿ 1, 2021 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹1349 ಇತ್ತು. ಇಂದು ಅದು ₹1769.50 ಆಗಿದೆ.
ಇದನ್ನೂ ಓದಿ: ಹೇಮಂತ್ ಸೊರೆನ್ ಬಂಧನ: ಸೇಡಿನ ರಾಜಕೀಯ ಎಂದ ಪ್ರತಿಪಕ್ಷಗಳ ನಾಯಕರು



Nagaraj nagraj email
Nagaraj nagraj Kummathi @gmail.com