Homeಮುಖಪುಟಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

ಕಂಗೆಡುತ್ತಿರುವ ಪ್ರಜಾಪ್ರಭುತ್ವ ಮತ್ತು ಬೆದರಿದ ರಾಜಕೀಯಕ್ಕೆ ಬಲಿಪಶುಗಳಾದ ಪಠ್ಯಪುಸ್ತಕಗಳು

- Advertisement -
- Advertisement -

ಇತ್ತೀಚಿಗೆ ಎನ್‌ಸಿಇಆರ್‌ಟಿಯ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳಿಂದ ಸೃಷ್ಟಿಯಾದ ವಿವಾದವು ಒಂದು ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಭಾರತವನ್ನು ಪ್ರಜಾಪ್ರಭುತ್ವದ ಜನನಿ ಎಂದು ಸಾಬೀತುಪಡಿಸುವ ಅತ್ಯುತ್ಸಾಹದಲ್ಲಿ, ಈ ಸರಕಾರ, ಪ್ರಜಾಪ್ರಭುತ್ವವನ್ನು ಕೊಲೆಗೈದ ಹೊಸ ಮಾದರಿಯ ಜನನಿ ಭಾರತ ಎಂದು ಸಾಬೀತುಪಡಿಸುತ್ತಿದೆಯೇ? ಪಠ್ಯಪುಸ್ತಕಗಳಲ್ಲಿ ಯಾವ ರೀತಿಯಲ್ಲಿ ಯಾವ ಪ್ರಕಾರ ಹಾಗೂ ಯಾವ ನೀತಿಯಿಂದ ಕತ್ತರಿ ಹಾಕಲಾಗಿದೆಯೆಂದರೆ ಈ ಕತ್ತರಿ ಪ್ರಯೋಗಗಳು ಮೇಲೆ ಹೇಳಿದ ಅನುಮಾನವನ್ನು ಗಟ್ಟಿಗೊಳಿಸುತ್ತವೆ. ರಾಜಕೀಯ ಶಾಸ್ತ್ರದ ಪುಸ್ತಕಗಳಲ್ಲಿ ಮಾಡಲಾದ ಬದಲಾವಣೆಗಳು ಭಾರತೀಯ ಪ್ರಜಾಪ್ರಭುತ್ವ ಕುಸಿಯುತ್ತಿರುವ ಬಗ್ಗೆ ಆತ್ಮವಿಶ್ವಾಸದ ಚಿಹ್ನೆಯಾಗಿವೆ.

ಇಲ್ಲಿ ನಾನು ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳ ಮೇಲೆ ವಿಶೇಷ ಲಕ್ಷ್ಯ ನೀಡುತ್ತಿದ್ದೇನೆ. ಇತಿಹಾಸ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳು ಎಲ್ಲರ ಗಮನ ಸೆಳೆದಿವೆ ಹಾಗೂ ಇತಿಹಾಸಕಾರರು ವಿಸ್ತಾರವಾಗಿ ಚರ್ಚೆ ನಡೆಸಿದ್ದಾರೆ. ಎನ್‌ಸಿಇಆರ್‌ಟಿಯದ್ದೇ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳ ಬಗ್ಗೆ ಅಷ್ಟೊಂದು ಚರ್ಚೆ ಆಗಿಲ್ಲ. ನನಗೆ ಇದರಲ್ಲಿ ವಿಶೇಷ ಆಸಕ್ತಿ ಹೊಂದಿರಲು ಇನ್ನೊಂದು ಕಾರಣ, ಪ್ರೊ ಸುಹಾಸ್ ಪಳಶೀಕರ್ ಮತ್ತು ನನಗೆ 9, 10, 11 ಹಾಗೂ 12ನೆಯ ತರಗತಿಯ ರಾಜಕೀಯ ಶಾಸ್ತ್ರದ ಪುಸ್ತಕಗಳ ಮುಖ್ಯ ಸಲಹಾಕಾರರ ಹೊಣೆಗಾರಿಕೆ ನೀಡಲಾಗಿದೆ. ಭಾರತೀಯ ಪ್ರಜಾಪ್ರಭುತ್ವದಲ್ಲಿ ಮುಂಬರುವ ತಲೆಮಾರಿಗೆ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯ ಬಗ್ಗೆ ಎಂತಹ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳಿಗೆ ರಾಜಕೀಯದಲ್ಲಿ ಹೇಗೆ ಆಸಕ್ತಿ ಕೆರಳಿಸಬೇಕು, ಹೇಗೆ ನಮ್ಮ ಪಠ್ಯಪುಸ್ತಕಗಳು ಆಡಳಿತದಲ್ಲಿರುವ ಪಕ್ಷದ ಅಥವಾ ಅದರ ವಿಚಾರಧಾರೆಯ ವಾಹಕವಾಗದೇ, ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ಮೌಲ್ಯಗಳ ವಾಹಕಗಳಾಗಬಲ್ಲವು ಎಂಬುದರ ಬಗ್ಗೆ ಯೋಚಿಸುವುದರಲ್ಲಿಯೇ ನನ್ನ ಜೀವನದ ಎರಡು ವರ್ಷಗಳನ್ನು ನಾನು ಕಳೆದಿದ್ದೇನೆ.

ರಾಜಕೀಯ ಶಾಸ್ತ್ರದ ಬಗ್ಗೆಯಂತೂ, ಈ ಪಠ್ಯಪುಸ್ತಕಗಳಲ್ಲಿ ರಾಜಕೀಯ ನಿಷ್ಪಕ್ಷಪಾತದ ನಿಯಮ ಪಾಲಿಸುತ್ತ, ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗುವಂತಹ ಅನೇಕ ಸತ್ಯಗಳನ್ನು ಹೇಳಿದ್ದೇವೆ ಎಂದು ನಾನು ವಿಶ್ವಾಸದಿಂದ ನುಡಿಯಬಲ್ಲೆ. 12ನೆಯ ತರಗತಿಯ ಪಠ್ಯಪುಸ್ತಕದಲ್ಲಂತೂ ಇಡೀ ಒಂದು ಅಧ್ಯಾಯದಲ್ಲಿ ತುರ್ತು ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೇರ ಪದಗಳಲ್ಲಿ ನೀಡಲಾಗಿತ್ತು. ಮೊದಲ ಬಾರಿ ಭಾರತೀಯ ಜನಸಂಘಕ್ಕೆ ಪಠ್ಯಪುಸ್ತಕದಲ್ಲಿ ಜಾಗ ಸಿಕ್ಕಿತು, ಅದರೊಂದಿಗೆ ನಕ್ಸಲ್ ಚಳವಳಿ ಬಗ್ಗೆಯೂ ಪಠ್ಯಪುಸ್ತಕಗಳಲ್ಲಿ ಉಲ್ಲೇಖ ಕಾಣಿಸಿಕೊಂಡಿತು. ಗುಜರಾತಿನ ದಂಗೆಗಳಲ್ಲಿ ಆದ ಮುಸ್ಲಿಂ ವಿರೋಧಿ ಹಿಂಸೆಯ ಬಗ್ಗೆ ಉಲ್ಲೇಖವಿದ್ದರೆ, 1984ರಲ್ಲಿ ದೆಹಲಿಯಲ್ಲಿ ಸಿಖ್ಖರ ಮಾರಣಹೋಮದ ಉಲ್ಲೇಖವೂ ಇತ್ತು. ಒಂದು ಆರೋಗ್ಯವಂತ ಮತ್ತು ಆತ್ಮವಿಶ್ವಾಸದಿಂದ ಕೂಡಿದ ಪ್ರಜಾಪ್ರಭುತ್ವವು, ಬೆಳಕಿನಿಂದ ಕೂಡಿದ ಮತ್ತು ಕತ್ತಲೆಯಾವರಿಸಿದ ತನ್ನ ಬಗೆಗಿನ ಎರಡೂ ಅಂಶಗಳ ಬಗ್ಗೆ ಮಾತನಾಡಬಲ್ಲದು; ಆಡಳಿತದಲ್ಲಿರುವ ಶಕ್ತಿಗಳನ್ನು ಮತ್ತು ವಿಚಾರಗಳನ್ನು ಹೊರತುಪಡಿಸಿ ವಿರೋಧಿ ಶಕ್ತಿಗಳ ಬಗ್ಗೆಯೂ ಮಾತನಾಡಬಲ್ಲದು ಎಂಬ ವಿಶ್ವಾಸದೊಂದಿಗೆ ಈ ಪಠ್ಯಪುಸ್ತಕಗಳನ್ನು ರೂಪಿಸಲಾಗಿತ್ತು.

ಇದನ್ನೂ ಓದಿ: ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಈ ಪಠ್ಯಪುಸ್ತಕಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಕತ್ತರಿ ಪ್ರಯೋಗದಿಂದ, ಇವುಗಳಲ್ಲಿದ್ದ ಆತ್ಮವಿಶ್ವಾಸದ ಚಹರೆಯನ್ನು ತಿರುಚಲಾಗಿದೆ. ಕಳೆದ ವಾರ ಎನ್‌ಸಿಇಆರ್‌ಟಿಯು ಮೊದಲು ಘೋಷಿಸಿದ ಬದಲಾವಣೆಗಳಷ್ಟೇ ಅಲ್ಲದೆ, ಇನ್ನೂ ಅನೇಕ ಅಘೋಷಿತ ರೂಪದಲ್ಲಿ ಈ ಪುಸ್ತಕಗಳಲ್ಲಿ ಹತ್ತುಹಲವು ಬದಲಾವಣೆಗಳನ್ನು ಮಾಡಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಉದಾಹರಣೆಗೆ ಮಹಾತ್ಮ ಗಾಂಧಿಯ ಹತ್ಯೆಯ ನಂತರ ಆಗಿನ ಗೃಹ ಸಚಿವ ಸರದಾರ್ ಪಟೇಲರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿರ್ಬಂಧ ಹೇರಿದ್ದರು ಎಂಬ ತಥ್ಯವು ಕಾಣೆಯಾಗಿದೆ. ಒಂದು ವೇಳೆ ಈ ಪುಟ್ಟ ದ್ರೋಹವನ್ನು ನಿರ್ಲಕ್ಷಿಸಿದರೂ, ಪಠ್ಯಪುಸ್ತಕಗಳ ಬದಲಾವಣೆಗಳ ಬಗ್ಗೆ ಒಂದು ಗಂಭೀರವಾದ ಪ್ರಶ್ನೆ ಉದ್ಭವಿಸುತ್ತದೆ; ಈ ಪಠ್ಯಪುಸ್ತಕಗಳ ಲೇಖಕರ ಅಭಿಪ್ರಾಯ ತೆಗೆದುಕೊಳ್ಳದೇ ಅವುಗಳಲ್ಲಿ ಬದಲಾವಣೆ ಮಾಡುವುದು ನ್ಯಾಯೋಚಿತವೇ? ಅಂದಹಾಗೆ ಇಂದಿಗೂ ಈ ಪಠ್ಯಪುಸ್ತಕಗಳಲ್ಲಿ ನನ್ನ ಹೆಸರು ಮುಖ್ಯ ಸಲಹಾಕಾರರು ಎಂಬ ರೂಪದಲ್ಲಿ ಪ್ರಕಟವಾಗುತ್ತಿದೆ; ಕಳೆದ ಒಂಬತ್ತು ವರ್ಷಗಳಲ್ಲಿ ನನ್ನ ಅಥವಾ ಪಠ್ಯಪುಸ್ತಕ ಸಮಿತಿಯ ಇತರ ಸದಸ್ಯರು ಅಥವಾ ಸಲಹಾಕಾರರಿಂದ ಪಠ್ಯಗಳಲ್ಲಿ ಮಾಡುತ್ತಿರುವ ಬದಲಾವಣೆಗಳ ಬಗ್ಗೆ ಎಂದೂ ಅಭಿಪ್ರಾಯ ಪಡೆದುಕೊಂಡಿಲ್ಲ. ಯಾವ ಪುಸ್ತಕಗಳನ್ನು ಬರೆಯುವುದರಲ್ಲಿ, ದೇಶದ ಹಲವಾರು ಅಗ್ರಗಣ್ಯ ರಾಜಕೀಯಶಾಸ್ತ್ರಜ್ಞರು ಆಳವಾದ ಪರಾಮರ್ಶೆ ಮಾಡಿ, ಪ್ರತಿಯೊಂದು ವಿಷಯ, ಪ್ರತಿಯೊಂದು ಅಂಶ, ಪ್ರತಿಯೊಂದು ಕಾಗುಣಿತವನ್ನು ಅನೇಕ ಬಾರಿ ಪರಿಶೀಲಿಸಿ ರಚಿಸಲಾಗಿದೆಯೋ, ಇಂತಹ ಪುಸ್ತಕಗಳನ್ನು ಒಂದೇ ಏಟಿನಲ್ಲಿ ಕೆಲವು ಅಜ್ಞಾತ ಜನರ ಸಮಿತಿಯ ಮೂಲಕ, ಯಾವುದೇ ಕಾರಣ ನೀಡದೇ ಬದಲಾವಣೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಯಾವ ಸೂಚನೆ ನೀಡುತ್ತದೆ?

ಬದಲಾವಣೆಯ ಪ್ರಕ್ರಿಯೆಯನ್ನು ಹೊರತುಪಡಿಸಿ, ಪಠ್ಯಗಳಲ್ಲಿ ಆದ ಬದಲಾವಣೆಯ ವಿವರಗಳನ್ನು ನೋಡಿದರೆ ಅದು ಕೂಡ ಪ್ರಜಾಪ್ರಭುತ್ವದ ಬಗ್ಗೆ ಇನ್ನೂ ಆಳವಾದ ಮತ್ತು ಗಂಭೀರವಾದ ಆತಂಕ ಸೃಷ್ಟಿಸುತ್ತದೆ. ರಾಜಕೀಯ ಶಾಸ್ತ್ರದಲ್ಲಿ ಯಾವ ಅಂಶಗಳನ್ನು ತೆಗೆದುಹಾಕಲಾಗಿದೆಯೋ, ಅವುಗಳು ನೇರಾನೇರ ಆಡಳಿತಾರೂಢ ಪಕ್ಷ ಮತ್ತು ಅದರ ವಿಚಾರಧಾರೆಯ ಪ್ರತಿಬಿಂಬವಾಗಿವೆ. ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡುವುದು ಯಾವುದಾದರೂ ದೇಶಕ್ಕೆ ಎಷ್ಟು ಘಾತಕವಾಗಬಲ್ಲದು ಎಂಬುದನ್ನು ಹೇಳಲು ಶ್ರೀಲಂಕಾ ಮತ್ತು ಬೆಲ್ಜಿಯಮ್ ದೇಶಗಳ ಉದಾಹರಣೆ ನೀಡಿದ್ದ, ಲೋಕತಂತ್ರ ಮತ್ತು ವೈವಿಧ್ಯದ ಬಗ್ಗೆ 10ನೆಯ ತರಗತಿಗೆ ಇದ್ದ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳನ್ನು ಹೊರತುಪಡಿಸಿ ಆಗುವ ಬದಲಾವಣೆಗಳ ಬಗ್ಗೆ ಒತ್ತು ನೀಡುವ 10 ಮತ್ತು 12ನೆಯ ಪಠ್ಯಪುಸ್ತಕಗಳಲ್ಲಿ ಇದ್ದ ಜನಾಂದೋಲನಗಳ ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಗುಜರಾತಿನ ದಂಗೆಗಳ ಬಗ್ಗೆ ಇದ್ದ ಉಲ್ಲೇಖವನ್ನು ತೆಗೆದುಹಾಕಲಾಗಿದೆ ಆದರೆ ಸಿಕ್ಖರ ಮಾರಣಹೋಮದ ಭಾಗವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ ತುರ್ತು ಪರಿಸ್ಥಿತಿಯ ಔಪಚಾರಿಕ ವರ್ಣನೆ ಇದೆ ಆದರೆ ಆ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ನ್ಯಾಯಾಂಗ ಮತ್ತು ಮಾಧ್ಯಮದ ನಾಚಿಕೆಗೇಡಿನ ಪಾತ್ರದ ಬಗ್ಗೆ ಇದ್ದ ಭಾಗವನ್ನು ತೆಗೆದುಹಾಕಲಾಗಿದೆ. ಹಾಗಾಗಿ ಇಂದಿನ ಸರಕಾರ ಯಾವ ಪ್ರಶ್ನೆಗಳಿಂದ ಹೆದರಿಕೊಂಡಿದೆ, ಯಾವ ವಿಷಯಗಳ ಬಗ್ಗೆ ಮೌನವಾಗಿರಲು ಬಯಸುತ್ತದೆ ಎಂಬುದು ಈ ಕತ್ತರಿ ಪ್ರಯೋಗದಿಂದ ಸ್ಪಷ್ಟವಾಗುತ್ತದೆ.

ಯಾವ ವಿಷಯಗಳ ಬಗ್ಗೆ ಪಠ್ಯಪುಸ್ತಕಗಳು ಮೌನವಾಗಿರುತ್ತವೋ, ಆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಮರೆತುಬಿಡುತ್ತಾರೆ ಅಂತೇನಿಲ್ಲ. ಯಾವುದೇ ಪ್ರಜಾಪ್ರಭುತ್ವದಲ್ಲಿ ಜನರ ರಾಜಕೀಯ ಚಿಂತನೆ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕಗಳ ಆಧಾರದ ಮೇಲೆ ಸೃಷ್ಟಿಯಾಗುವುದಿಲ್ಲ; ವಿಶೇಷವಾಗಿ ಎಲ್ಲಿ ಪ್ರಜಾಪ್ರಭುತ್ವವನ್ನು ಮುಗಿಸುವ ಪ್ರಯತ್ನ ನಡೆದಿದೆಯೋ, ಎಲ್ಲಿ ಆಡಳಿತದಲ್ಲಿರುವ ಶಕ್ತಿಗಳು ಹೆದರಿಕೊಂಡಿರುತ್ತವೋ ಅಲ್ಲಂತೂ ಖಂಡಿತ ಇದು ಸಾಧ್ಯವಾಗುವುದಿಲ್ಲ. ಇಂತಹ ದೇಶಗಳಲ್ಲಿ ಆಡಳಿತವರ್ಗ ಸುಳ್ಳು ಹೇಳುತ್ತಿದೆ ಎಂದು ಜನರಿಗೆ ತಿಳಿದಿರುತ್ತದೆ ಹಾಗೂ ಸತ್ಯವನ್ನು ಅರಿಯಲು ತನ್ನದೇ ಆದ ರೀತಿಗಳನ್ನು ಹುಡುಕಿಕೊಳ್ಳುತ್ತಾರೆ. ಹಾಗಾಗಿಯೇ ರಾಜಕೀಯ ಶಾಸ್ತ್ರದಲ್ಲಿ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆಗಳಿಂದ ಆಡಳಿತದಲ್ಲಿರುವ ಪಕ್ಷ ಮತ್ತು ವಿಚಾರಧಾರೆಗೆ ಲಾಭವಾಗುತ್ತದೆ ಎಂಬುದು ಸತ್ಯವಲ್ಲ. ಆದರೆ ಈ ಕಸರತ್ತಿನಿಂದ ಭಾರತೀಯ ಪ್ರಜಾಪ್ರಭುತ್ವ ತನ್ನ ಹಾಗೂ ವಿಶ್ವದ ದೃಷ್ಟಿಯಲ್ಲಿ ಒಂದೆರಡು ಮೆಟ್ಟಿಲು ಕೆಳಗೆ ಕುಸಿದಿರುವುದಂತೂ ಖಂಡಿತ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...