Homeಪುಸ್ತಕ ವಿಮರ್ಶೆಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ

ಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ

- Advertisement -
- Advertisement -

ಆತ್ಮಕಥೆಯನ್ನು ಏಕೆ ಬರೆಯುತ್ತಾರೆ ಎಂಬ ಪ್ರಶ್ನೆ ಯಾರದ್ದಾದರೂ ಆತ್ಮಕಥೆಯನ್ನು ಓದಿದಾಗಲೆಲ್ಲಾ ಸಾಮಾನ್ಯವಾಗಿ ಕಾಡುತ್ತದೆ. ತನ್ನ ಜೀವನ ತನಗೇ ಆಸಕ್ತಿದಾಯಕವಾಗಿ ಕಂಡು, ಅದರ ವಿವರಗಳನ್ನು ಮತ್ತೊಮ್ಮೆ ಜೀವಿಸುವ, ಅವುಗಳ ಬಗ್ಗೆ ಮಾತನಾಡುವ ತವಕ, ಅವುಗಳನ್ನು ಅಕ್ಷರ ರೂಪದಲ್ಲಿ ನಿರೂಪಿಸಿ ನೋಡುವ ಕುತೂಹಲ ಅಥವಾ ತನ್ನಂಥವರ ಜೀವನದ ವಿವರಗಳ ಜೊತೆಗೆ ಓದುಗರು ಅನುಸಂಧಾನ ಮಾಡಿ ಹೊಸ ತಿಳಿವಳಿಕೆ ಏನಾದರೂ ಹುಟ್ಟಬಹುದೇನೋ ಎಂಬ ಯೋಚನೆ, ತನ್ನ ಕಥೆಯನ್ನು ಹೇಳುವುದರ ಮೂಲಕ ಹಾಗೂ ಅದರಲ್ಲಿನ ಕೆಲವು ಪ್ರಮುಖ ಘಟನೆಗಳನ್ನು ದಾಖಲಿಸಿ ಅವುಗಳಿಗೆ ಚಾರಿತ್ರಿಕ ಮಹತ್ವವನ್ನು ತಂದುಕೊಡುವ ಇಚ್ಛೆ, ಹೀಗೆ ಕಾರಣ ಯಾವುದೇ ಇರಲಿ ಜಗತ್ತಿನ ಬೇರೆಬೇರೆ ಭಾಷೆಗಳಲ್ಲಿ ಪ್ರಕಟವಾಗಿರುವ ಅಸಂಖ್ಯಾತ ಆತ್ಮಕಥೆಗಳು ನಮ್ಮ ಮುಂದಿವೆ. ಅವುಗಳಲ್ಲಿ ಕೆಲವು ಸಾರ್ವಕಾಲಿಕ ಕೃತಿಗಳಾಗಿ ಉಳಿದಿದ್ದರೆ, ಹೆಚ್ಚಿನ ಸಂಖ್ಯೆಯ ’ಕಥೆಗಳು’ ಜನರ ಅರಿವಿಗೇ ಬಾರದೇ ಹೋಗಿವೆ ಅಥವಾ ಅವರ ನೆನಪಿನಿಂದ ಮರೆಯಾಗಿವೆ.

ಸಾಹಿತ್ಯದ ಒಂದು ಪ್ರಕಾರವೆಂದೇ ಪರಿಗಣಿತವಾದ ಆತ್ಮಕಥೆಯ ಬಗ್ಗೆ ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಕಳೆದ ಒಂದು ತಿಂಗಳ ಅವಧಿಯಲ್ಲಿ ನಾನು ಓದಿದ ಮೂರು ಆತ್ಮಕಥೆಗಳು; ಅವುಗಳ ನಡುವಿನ ಸಾಮ್ಯತೆಗಳು ಮತ್ತು ಅವುಗಳ ನಡುವೆಯೇ ಎದ್ದು ಕಾಣುವ ವ್ಯತ್ಯಾಸಗಳು ಆಸಕ್ತಿದಾಯಕವಾಗಿದ್ದವು. ಎರಡು ಆತ್ಮಕಥೆಗಳು ಇಂಗ್ಲಿಷ್‌ನಲ್ಲಿದ್ದರೆ ಒಂದು ತೆಲುಗಿನಲ್ಲಿ ಬರೆಯಲಾಗಿದೆ. ಮೂರು ಕೃತಿಗಳ ಲೇಖಕರು ಸಮಕಾಲೀನರು. ಇಂದಿನ ತೆಲಂಗಾಣ ಅವರ ಕಾರ್ಯಕ್ಷೇತ್ರ. ಸಾಮಾಜಿಕವಾಗಿ ಮೂವರೂ ಮೇಲ್‌ಸ್ತರಕ್ಕೆ ಸೇರಿದವರೇ ಆಗಿದ್ದಾರೆ. ತಮ್ಮ ಸುತ್ತಲಿನ ಬದುಕಿಗೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸಿದವರು ಮತ್ತು ತಮ್ಮ ಛಾಪನ್ನೊತ್ತಿದವರು. ಗೀತಾ ರಾಮಸ್ವಾಮಿಯವ ‘Land, Guns, Caste, Woman’ ಡಾ. ಎಂ ವನಮೂಲ ಅವರ ’ಅಸ್ತಿತ್ವ ಅನ್ವೇಷಣ’, ಎಂ. ಮದನಗೋಪಾಲ್ ಅವರ ‘Rainbow Years’ ಆ ಮೂರು ಕೃತಿಗಳು.

ಹೈದರಾಬಾದಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಯಾದ ಹೈದರಾಬಾದ್ ಬುಕ್ ಟ್ರಸ್ಟ್‌ನ (ಹೆಚ್.ಬಿ.ಟಿ) ಸ್ಥಾಪಕರಲ್ಲೊಬ್ಬರಾದ ಗೀತಾ ರಾಮಸ್ವಾಮಿಯವರು ಇಂದಿಗೂ ಸಾರ್ವಜನಿಕವಾಗಿ ಕ್ರಿಯಾಶೀಲರಾಗಿರುವವರು. 1953ರಲ್ಲಿ ಜನನವಾದಂದಿನಿಂದ ಅವರ ಆತ್ಮಕಥೆ ಪ್ರಕಟವಾದ 2022ರವರೆಗಿನ ಅವರ ಜೀವನವನ್ನು, ಅದರೊಳಗಿನ ಎಲ್ಲ ಸಂತೋಷದ ಕ್ಷಣಗಳು, ಜಗಳಗಳು, ಬಂಡಾಯಗಳು, ಸೋಲುಗೆಲುವುಗಳ ಸಮೇತ ನಮ್ಮ ಮುಂದೆ ತೆರೆದಿಡುತ್ತಾರೆ. ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಬೇರುಗಳನ್ನು ಹೊಂದಿರುವ ಸಂಪ್ರದಾಯಸ್ಥ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಐವರು ಹೆಣ್ಣು ಮಕ್ಕಳಲ್ಲಿ ನಾಲ್ಕನೆಯವರಾಗಿ ಜನಿಸಿದ ಗೀತಾ ಪ್ರಾರಂಭದಲ್ಲಿ ಎಲ್ಲ ಮಧ್ಯಮ ವರ್ಗದ ಹುಡುಗಿಯರಂತೆ ಒಳ್ಳೆಯ ಶಿಕ್ಷಣವನ್ನು ಪಡೆದರು. ವಿಜ್ಞಾನದ ಕ್ಷೇತ್ರದಲ್ಲಿಯೇ ಮುಂದುವರೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಗೀತಾ ಚಿಕ್ಕಂದಿನಿಂದಲೂ ಪ್ರಶ್ನಿಸುವ ಮನೋಭಾವದವರೇ ಆಗಿದ್ದರು. ತನ್ನ ಕುಟುಂಬದಲ್ಲಿನ ಕಂದಾಚಾರಗಳನ್ನು ಸುಲಭವಾಗಿ ಒಪ್ಪುತ್ತಿರಲಿಲ್ಲ. ಆದರೆ ತಂದೆಯ ಮುಂದೆ ನಿಂತು ತನ್ನ ಅಭಿಪ್ರಾಯಗಳನ್ನು ಹೊರಹಾಕುವ ಧೈರ್ಯವಿರಲಿಲ್ಲ. ಬಹುಶಃ ಇದೇ ಮನೋಭಾವವೇ ಮುಂದಿನ ದಿನಗಳಲ್ಲಿ ಅವರನ್ನು ಒಬ್ಬ ಬಂಡಾಯಗಾರಳನ್ನಾಗಿ ಮಾತ್ರವಲ್ಲ, ಒಬ್ಬ ಹೋರಾಟಗಾರಳನ್ನಾಗಿಯೂ ರೂಪಿಸಿತು ಅನ್ನಿಸುತ್ತದೆ. ಹೊಸ ಚಿಂತನೆಗಳಿಗೆ ತೆರೆದುಕೊಂಡ ಅವರು ಸಾಮಾಜಿಕ ಅನಿಷ್ಟಗಳು, ಅನ್ಯಾಯಗಳ ವಿರುದ್ಧ ಹೋರಾಡುತ್ತಿದ್ದ ಸಂಘಟನೆಗಳ ಕಡೆ ಒಲವು ತೋರಿದ್ದು ಅವುಗಳ ಭಾಗವಾಗಿದ್ದು ತುಂಬ ಸಹಜ ಬೆಳವಣಿಗೆ. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಆಂಧ್ರದಲ್ಲಿ ತೀವ್ರವಾಗಿ ಹರಡುತ್ತಿದ್ದ ನಕ್ಸಲೀಯ ಚಳವಳಿಯಲ್ಲಿ ಸಶಸ್ತ್ರ ಹೋರಾಟವೊಂದನ್ನು ಬಿಟ್ಟು ಇತರೆ ವಿಭಾಗಗಳಲ್ಲಿ ಸಕ್ರಿಯರಾದರು. ಆದರೆ ತುರ್ತು ಪರಿಸ್ಥಿತಿ ಮುಗಿದ ನಂತರ ಆ ಸಂಘಟನೆಯಲ್ಲಿನ ಕೆಲವು ವಿದ್ಯಮಾನಗಳ ಕುರಿತಾದ ಅಸಮಾಧಾನದಿಂದಾಗಿ ಅದರಿಂದ ಆಚೆ ನಡೆದರು. ಆದರೆ ಅದರ ವಿರುದ್ಧವಂತೂ ಎಂದೂ ಕೆಲಸ ಮಾಡಲಿಲ್ಲ.

ನಂತರ ಎಂಭತ್ತರ ಶತಕದಲ್ಲಿ ಇಂದಿನ ತೆಲಂಗಾಣದ ಅಂದಿನ ಅವಿಭಕ್ತ ಆಂಧ್ರಪ್ರದೇಶದ ಇಬ್ರಹೀಂಪಟ್ನಂ ಅನ್ನುವ ತಾಲೂಕಿನಲ್ಲಿ ಅವರು ಸಾಮಾಜಿಕ ಕಾರ್ಯದಲ್ಲಿ ಮಗ್ನರಾದರು. ಅವರ ಈ ಅನುಭವ ಸಾಮಾಜಿಕವಾಗಿ ತುಳಿತಕ್ಕೊಳಗಾದವರ ಪರವಾಗಿ ಕೆಲಸ ಮಾಡಬೇಕೆಂಬ ಉದ್ದೇಶವಿರುವ ಯಾರಿಗೇ
ಆಗಲಿ ಒಂದು ಮಾದರಿ. ಸುಮಾರು ಎಂಟು ವರ್ಷಗಳ ಕಾಲ ಅಲ್ಲಿನ ದಲಿತರ ಜತೆಯೇ ನಿಂತು ಅವರ ಬದುಕಿನ ಒಂದು ಭಾಗವಾಗಿ ಅವರಲ್ಲಿ ಸ್ವಾಭಿಮಾನ ಘನತೆಗಳ ಕಿಚ್ಚನ್ನು ಹೊತ್ತಿಸಿದರು. ಊಳಿಗಮಾನ್ಯ ವ್ಯವಸ್ಥೆಯೇ ಬಲವಾಗಿ ಬೇರೂರಿದ್ದ ಆ ಪ್ರದೇಶದಲ್ಲಿ ಭೂಮಾಲೀಕ ರೆಡ್ಡಿಗಳನ್ನು ಎದುರಿಸಲು ’ಇಬ್ರಹೀಂಪಟ್ನಂ ತಾಲೂಕು ವ್ಯವಸಾಯ ಕೂಲಿಗಳ ಸಂಘ’ವನ್ನು ಸ್ಥಾಪಿಸಿ ಐಕ್ಯಹೋರಾಟವನ್ನು ಅಲ್ಲಿನ ದಲಿತರ ಜತೆಗೂಡಿ ಮಾಡಿದರು. ಈ ಅವಧಿಯ ಜೀವನದ ವಿವರಣೆಗಳನ್ನು ನೀಡುವಾಗ ಅವರು ಯಾವ ಮುಚ್ಚುಮರೆಯಿಲ್ಲದೆ ಅಂದಿನ ವ್ಯಕ್ತಿಗಳ ಹೆಸರುಗಳ ಸಮೇತ ಎಲ್ಲ ಘಟನೆಗಳನ್ನು ವಿವರಿಸುತ್ತಾರೆ. ಅವರು ಶತ್ರುಗಳಾಗಲಿ, ಮಿತ್ರರು ಅಥವಾ ಬೆಂಬಲಿಗರೇ ಆಗಲಿ ಅವರೆಲ್ಲರೂ ಇಂದಿಗೂ ಆ ಪ್ರದೇಶದಲ್ಲಿರುವಂಥವರೇ. ಕೆಲವು ಘಟನೆಗಳಂತೂ, ಒಬ್ಬ ಕ್ರೂರ ಭೂಮಾಲೀಕನ ಕಥೆ ಹೇಳುವ ತೆಲುಗು ಸಿನಿಮಾದಂತೆ ಭಾಸವಾಗುತ್ತದೆ.

1992ರ ನಂತರ ಇಬ್ರಹೀಂಪಟ್ನಂನ ತನ್ನ ಕ್ರಿಯಾಶೀಲ ಜೀವನದಿಂದ ದೂರಸರಿದರೂ ಇಂದಿಗೂ ಆ ಪ್ರದೇಶದ ಜನರ, ಮುಖ್ಯವಾಗಿ ದಲಿತರ ಜತೆಗಿನ ಅವರ ಆತ್ಮೀಯ ನಂಟು ಮುಂದುವರೆದಿದೆ. ಅಲ್ಲಿನ ಜನ ಹಿಂದಿನಂತೆ ’ಕಾಲ್ತೊಕ್ತ’ (ಕಾಲಿಗೆ ಮುಗಿಯುತ್ತೇನೆ) ಬಾಂಚನು (ನಾನು ನಿನ್ನ ಆಳು) ಎಂದು ತಮ್ಮ ಯಜಮಾನರೆನಿಸಿಕೊಂಡವರ ಮುಂದೆ ಕೈ ಕಟ್ಟಿಕೊಂಡು ಹೇಳುವ ಸ್ಥಿತಿಯಿಂದ ಆಚೆ ಬಂದಿದ್ದಾರೆ.

ಈ ಮಹಾ ಕಥನದ ನಡುವೆ ಎದ್ದು ಕಾಣುವ ಅಂಶವೆಂದರೆ ಲೇಖಕಿಯ ನಿಷ್ಠುತರೆ, ಕಟುವಾದ ಪ್ರಾಮಾಣಿಕತೆ. ತನ್ನನ್ನೂ ಒಳಗೊಂಡಂತೆ ಎಲ್ಲರನ್ನೂ ಅಂದರೆ ತನ್ನ ಕುಟುಂಬ, ರಾಜಕಾರಣಿಗಳು, ಸ್ನೇಹಿತರನ್ನೂ ಗೀತಾ ನಿಶಿತ ವಿಮರ್ಶೆಗೆ ಒಳಪಡಿಸುತ್ತಾರೆ. ತಾವು ಮಾಡಿದ್ದು ತಪ್ಪು ಎಂದೆನಿಸಿದಾಗ ನೇರವಾಗಿ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಸಮಕಾಲೀನ ರಾಜಕೀಯ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಬೇಕು ಅಥವಾ ಅವುಗಳ ಭಾಗವಾಗಬೇಕು ಅನ್ನುವ ಉದ್ದೇಶವಿರುವ ಯಾರಾದರೂ ಓದಲೇಬೇಕಾದ ಆತ್ಮಕಥೆ ಇದು.

ಎಂ.ಮದನಗೋಪಾಲ್ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ ಮತ್ತು ತಮ್ಮ ಅತ್ಯಂತ ಜನಪರ ಪ್ರಾಮಾಣಿಕ ಕಾರ್ಯ ವೈಖರಿಯಿಂದಾಗಿ ಹೋದಲೆಲ್ಲಾ ಜನರಿಗೆ ಹತ್ತಿರವಾದವರು. ಅವರ ಕೃತಿಯ ಮುಖ್ಯಪಾತ್ರ ರಾಜನ್ ಕೃತಿಕಾರರ ಪ್ರತಿರೂಪವಾಗಿರುವುದರಿಂದ ಮತ್ತು ಇತರ ಹಲವು ಪಾತ್ರಗಳೂ ಸಹ ನಿಜ ಜೀವನದ ಹಲವರು ವ್ಯಕ್ತಿಗಳ ಪ್ರತಿ ಸೃಷ್ಟಿಗಳೇ ಆಗಿರುವುದರಿಂದಲೇ Rainbow Years ಒಂದು ಆತ್ಮಕಥಾನಕ ಕಾದಂಬರಿಯಾಗಿದೆ.

ರಾಜನ್‌ನ ವಿದ್ಯಾರ್ಥಿ ಜೀವನ ನಡೆಯುವುದು ಹೈದರಾಬಾದಿನಲ್ಲಿ; ಸರಿಸುಮಾರು ಅದೇ ಅವಧಿಯಲ್ಲಿಯೇ ಗೀತಾರಾಮಸ್ವಾಮಿಯವರೂ ಸಹ ಹೈದರಾಬಾದಿನಲ್ಲಿ ವಿದ್ಯಾರ್ಥಿನಿಯಾಗಿದ್ದದ್ದು ವಿಶೇಷ.

ರಾಜನ್‌ನ (ಮದನಗೋಪಾಲ್) ಬಾಲ್ಯದ ವಿವರಗಳು ಹೆಚ್ಚೇನೂ ಈ ಕೃತಿಯಿಂದ ಲಭ್ಯವಾಗುವುದಿಲ್ಲ. ಮಹಾನಗರವೊಂದರ ಸಮೀಪದ ಪಟ್ಟಣದಿಂದ ಬಂದ ರಾಜನ್ ಹೇಗೆ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಗತಿಪರ ವಿದ್ಯಾರ್ಥಿ, ಯುವಜನರ ಸಂಘಟನೆಯ ಭಾಗವಾಗುತ್ತಾನೆ ಅನ್ನುವ ವಿವರಗಳು ಸಿಗುತ್ತವೆ. ಕಳೆದ ಶತಮಾನದ ಎಪ್ಪತ್ತು, ಎಂಭತ್ತರ ದಶಕಗಳಲ್ಲಿ ಗೀತಾ ಅವರಂತೆಯೇ ರಾಜನ್ ಸಹ ನಕ್ಸಲ್ ಚಳವಳಿಯ ಸೆಳೆತಕ್ಕೊಳಗಾಗುತ್ತಾನೆ. ತನ್ನ ಇನ್ನಿಬ್ಬರು ಗೆಳೆಯರ ಸಮೇತ (ಅವರ ಇಂದಿನ ಗುರುತುಗಳು ಹೈದರಾಬಾದಿನವರಿಗೆ ತಿಳಿದದ್ದೇ ಆಗಿವೆ) ಆ ಚಳವಳಿಯ ಚಟುವಟಿಕೆಗಳಲ್ಲಿ (ಸಶಸ್ತ್ರರಾಗುವುದನ್ನು ಬಿಟ್ಟು) ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಪರಿಣಾಮವಾಗಿ ತುರ್ತು ಪರಿಸ್ಥಿತಿಯ ಕಾಲದಲ್ಲಿ ಸಮಸ್ಯೆಗಳನ್ನು
ಎದುರಿಸಬೇಕಾಗುತ್ತದೆ.

ದೇಶದಲ್ಲಿ ಮತ್ತೆ ಪ್ರಜಾತಾಂತ್ರಿಕ ಪ್ರಕ್ರಿಯೆ ಆರಂಭವಾದ ನಂತರ ರಾಜನ್ ತನ್ನ ಶಿಕ್ಷಣವನ್ನು ಮುಂದುವರೆಸಿ ಐ.ಎ.ಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಆಯಾ ಜಾಗಗಳ ಹುದ್ದೆಗಳ ಹೆಸರುಗಳು ನೇರವಾಗಿ ಪ್ರಸ್ತಾಪಗೊಳ್ಳದಿದ್ದರೂ ಅವುಗಳ ಸುತ್ತಲಿನ ವಿವರಗಳು ಎಲ್ಲವನ್ನೂ ಪರೋಕ್ಷವಾಗಿಯೇ ಹೇಳುತ್ತವೆ. ಯಾರಿಗೂ ಅಂಜದೆ ನಿಯಮಗಳಿಗನುಸಾರವಾಗಿ ಬಡವರಪರ ಕೆಲಸ ಮಾಡುವ ಅಧಿಕಾರಿ ಎಂದೇ ಹೆಸರಗಳಿಸುತ್ತಾನೆ.

ವಿಚಿತ್ರವೆಂದರೆ ತೀವ್ರ ಎಡಪಂಥೀಯ ಚಿಂತನೆಗೆ ಮಾರುಹೋಗಿದ್ದ ರಾಜನ್ ನಿಧಾನವಾಗಿ ಆಧ್ಯಾತ್ಮಿಕ ಒಲವನ್ನು ಬೆಳೆಸಿಕೊಳ್ಳುತ್ತಾನೆ; ರಮಣ ಮಹರ್ಷಿಯ ಅನುಯಾಯಿಯಾಗುತ್ತಾನೆ. ಈ ಬೌದ್ಧಿಕ ಪರಿವರ್ತನೆ ಹಠಾತ್ತನೆ ಆಗುವಂಥದೇನೂ ಅಲ್ಲ. ಆದರೂ ಒಂದು ಬಾರಿ ರಮಣ ಮಹರ್ಷಿಯ ಚಿತ್ರವನ್ನು ನೋಡಿ, ನಂತರ ಆ ವ್ಯಕ್ತಿಯ ಕಡೆಗೆ ಸೆಳೆತವನ್ನು ಅನುಭವಿಸುತ್ತಲೇ, ಅಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ. ನಿವೃತ್ತನಾದ ನಂತರ ತಿರುವಣ್ಣಾಮಲೈಯಲ್ಲಿನ ರಮಣಾಶ್ರಮದಲ್ಲಿ ಸಾಕಷ್ಟು ಕಾಲ ಕಳೆಯುತ್ತಾನೆ. ಮದನಗೋಪಾಲ್ ಅವರು ತಿಂಗಳಿನಲ್ಲಿ ಎರಡು ಸಲವಾದರೂ ಆಶ್ರಮಕ್ಕೆ ಭೇಟಿ ಕೊಟ್ಟು ಅಲ್ಲಿನ ತಮ್ಮ ಮನೆಯಲ್ಲಿ ವಾಸ ಮಾಡುತ್ತಾ ಆಶ್ರಮದ ಕಾರ್ಯಕಲಾಪಗಳಲ್ಲಿ ಭಾಗಿಯಾಗುತ್ತಾರೆ.

ಗಮನಾರ್ಹ ಸಂಗತಿ ಎಂದರೆ ಗೀತಾರಾಮಸ್ವಾಮಿಯವರು ನಕ್ಸಲೀಯ ಗುಂಪಿನಿಂದ ಆಚೆ ನಡೆದ ನಂತರ ಜನರ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸಿ ಅವರ ಸ್ವಾಭಿಮಾನ, ಘನತೆಗಳ ಪರವಾಗಿ ಹೋರಾಟ ನಡೆಸಿದವರು. ರಾಜನ್ ಸಹ ನಕ್ಸಲೀಯ ಚಳವಳಿಯಿಂದ ದೂರ ಸರಿದರಾದರೂ ಅಲ್ಲಿ ತಾನು ಮೈಗೂಡಿಸಿಕೊಂಡ ಜನಪರತೆ, ನಿಸ್ವಾರ್ಥ ಮನೋಭಾವಗಳೊಂದಿಗೆ ವ್ಯವಸ್ಥೆಯನ್ನು ಒಗಿಸಿಕೊಂಡು ಸಾಮಾನ್ಯ ಜನರ ಬದುಕನ್ನು ಹಸನುಗೊಳಿಸುವ ಯತ್ನ ಮಾಡಿದನು. ಪ್ರಸ್ತುತದಲ್ಲಿ ಆಧ್ಯಾತ್ಮವಾದಿಯಾಗಿ ಜೀವನವನ್ನು ಮತ್ತೊಂದು ರೀತಿಯಲ್ಲಿ ಪ್ರಾಮಾಣಿಕನಾಗಿಯೇ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾನೆ.

ಡಾ. ಎಂ. ವನಮಾಲರವರು ತೆಲುಗಿನಲ್ಲಿ ಬರೆದಿರುವ ’ಅಸ್ತಿತ್ವ ಅನ್ವೇಷಣ’ ಸಹ ಕೆಲವು ಕಾರಣಗಳಿಂದಾಗಿ ಗಮನಾರ್ಹ ಕೃತಿಯಾಗಿದೆ. ಕರ್ನಾಟಕದ ಬೌದ್ಧಿಕ ವಲಯದಲ್ಲಿ ಚಿರಪರಿಚಿತರು, ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ ಚಿಂತಕರು ಹಾಗೂ ಮಾನವಹಕ್ಕು ಹೋರಾಟಗಾರರೆಂದು ಹೆಸರುವಾಸಿಯಾಗಿರುವ ಡಾ.ಜಿ.ಹರಗೊಪಾಲ್ ಅವರ ಹೆಂಡತಿ. ಹೈದರಾಬಾದ್ ಮತ್ತು ಇತರ ಕೆಲವೆಡೆ ಸಾಕಷ್ಟು ಅರ್ಥಪೂರ್ಣ ಕೊಡುಗೆಗಳನ್ನು ಕೊಟ್ಟಿರುವ ವನಮಾಲ ತಮ್ಮ ಬಾಲ್ಯದಿಂದ ಇತ್ತೀಚಿನವರೆಗಿನ ಅನುಭವಗಳನ್ನು ತೆರೆದಿಟ್ಟಿದ್ದಾರೆ.

ಅವರ ಆತ್ಮಕಥೆ ಅವರು ತಮ್ಮ ಅಸ್ಮಿತೆಗಾಗಿ ನಡೆಸಿದ ಹುಡುಕಾಟದ ಅಕ್ಷರ ರೂಪ. ಅವರೂ ಸಹ ಗೀತಾ ಅವರಂತೆ ಒಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಮಧ್ಯಮ ವರ್ಗದ ನೋವು ನಲಿವುಗಳಿಗಿಂತಲೂ ಮುಖ್ಯವಾಗಿ ಅಲ್ಲಿನ ಪುರುಷ ಪ್ರಾಧಾನ್ಯತೆಯ ಕಹಿಯನ್ನು ಅನುಭವಿಸುತ್ತಲೇ ಬೆಳೆಯುತ್ತಾರೆ. ಕುಟುಂಬದ ಕೆಲವರ ಫ್ಯೂಡಲ್ ಮನೋಭಾವದಿಂದಾಗಿ ತಮ್ಮ ಓದನ್ನು ಮುಂದುವರೆಸುವುದಕ್ಕೂ ಹೋರಾಟವನ್ನೇ ನಡೆಸಬೇಕಾಗುತ್ತದೆ. ಈ ಹೋರಾಟಗಳ ನಡುವೆಯೂ ಅರ್ಥಶಾಸ್ತ್ರದಲ್ಲಿ ಎಂ.ಎ, ಆ ನಂತರ ಪಿ.ಎಚ್.ಡಿ ಪದವಿಗಳನ್ನು ಪಡೆಯುತ್ತಾರೆ. ಅವರೇ ಹೇಳುವಂತೆ ಈ ’ಗಂಡಸುತನ’ ತವರುಮನೆಯಲ್ಲಿ ಮಾತ್ರವಲ್ಲದೆ, ಮದುವೆಯಾದ ನಂತರವೂ ಕಾಡುತ್ತದೆ. ತಮ್ಮದೇ ಆದ ರೀತಿಯಲ್ಲಿ ಜಾತಿಯ ಕಟ್ಟುಪಾಡುಗಳನ್ನು ಮೀರಿ ಸಾರ್ವಜನಿಕ ಜೀವನದ ಭಾಗವಾಗುತ್ತಾರೆ. ಗೀತಾ ಅವರು ತಮ್ಮ ಈ ಹಿನ್ನೆಲೆಯಿಂದ ತುಂಬ ದೂರ ಬಂದವರಾದರೆ, ಉಳಿದ ಇಬ್ಬರು ತಮ್ಮ ಜಾತಿಗೆ ಯಾವುದೇ ಪ್ರಾಮುಖ್ಯತೆಯನ್ನು ಕೊಟ್ಟವರಲ್ಲ.

ಈ ಮೂರು ಕೃತಿಗಳ, ಕೃತಿಕಾರರ ನಡುವಿನ ಇಂಥ ಸಾಮ್ಯತೆಗಳು ಹಾಗೂ ವ್ಯತ್ಯಾಸಗಳು ಯಾವುದೇ ಓದುಗನನ್ನು ಸೆಳೆಯುತ್ತವೆ.

(ವಿಶೇಷ ಸೂಚನೆ: ಮದನಗೋಪಾಲ್ ಅವರು ಇತ್ತಿಚಿನ ದಿನಗಳಲ್ಲಿ ಬಿಜೆಪಿಗೆ ತುಂಬ ಹತ್ತಿರದವರಾಗಿದ್ದಾರೆ.)

ಪ್ರೊ. ನಗರಗೆರೆ ರಮೇಶ್

ಪ್ರೊ. ನಗರಗೆರೆ ರಮೇಶ್
ನಗರಗೆರೆ ರಮೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆಯವರು. ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದು ನಂತರ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಮಾನವ ಹಕ್ಕು ಸಂಘಟನೆಯಾದ ಪ್ರಜಾತಾಂತ್ರಿಕ ಜನರ ವೇದಿಕೆ ಮೊದಲಾದವುಗಳ ಭಾಗವಾಗಿದ್ದಾರೆ. ಎಲ್ಲ ಜನಪರ ಚಳವಳಿಗಳ ದೀರ್ಘಕಾಲದ ಒಡನಾಡಿ.


ಇದನ್ನೂ ಓದಿ: ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...