ಕಳೆದ ಜೂನ್ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು. Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆಯಂತೆ 21 ಎಕರೆ ಭೂಮಿಯನ್ನು ನೀಡುತ್ತಿದ್ದರ ವಿರುದ್ದ ಭಾರೀ ಟೀಕೆಗಳು ಕೇಳಿಬಂದಿದ್ದವು.
20.79 ರೂಗಳಿಗೆ 21 ಎಕರೆ ಭೂಮಿಯನ್ನು ಆಂಧ್ರ ಪ್ರದೇಶದ ಚಂದ್ರು ಬಾಬು ನಾಯ್ಡು ನೇತೃತ್ವದ ಸರ್ಕಾರ ನೀಡಿದೆ. ಇಂದು (ಡಿ.12) cognizant ಕಂಪನಿಯ ತಾತ್ಕಾಲಿಕ ಕಛೇರಿ ಉದ್ಘಾಟನೆ ಮಾಡಲಾಗಿದೆ.
ಸರ್ಕಾರಗಳು ಖಾಸಗೀ ಕಂಪನಿಗಳಿಗೆ ಕೇವಲ ನೆಪಮಾತ್ರಕ್ಕೆ 99 ಪೈಸೆ ಹಣ ಪಡೆದು ಭೂಮಿಯನ್ನು ನೀಡುತ್ತಿರುವುದು ಕಾರ್ಪೋರೇಟ್ ಪರವಾದ ಸಡಿಲ ನೀತಿಗಳು ಮುಂದಿನ ದಿನಗಳಲ್ಲಿ ರಾಜ್ಯಗಳನ್ನು ಹಾಗೂ ಆರ್ಥಿಕ ಕ್ಷೇತ್ರವನ್ನು ಸಂಕಷ್ಟಕ್ಕೆ ದೂಡುತ್ತವೆ ಎಂದು ಹಲವು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಿಂದ ಐಟಿ ಕಂಪನಿಗಳನ್ನು ಆಂಧ್ರ ಪ್ರದೇಶಕ್ಕೆ ಸೆಳೆಯುವ ದೃಷ್ಠಿಯಿಂದಲೂ ಚಂದ್ರಬಾಬು ನಾಯ್ಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರವು ಈ ರೀತಿಯಲ್ಲಿ ಉಚಿತ ಭೂಮಿಯನ್ನು ನೀಡಬಾರದು ಎಂದು ಹೋರಾಟಗಾರರು ಪ್ರತಿಕ್ರಿಯಿಸಿದ್ದಾರೆ.
#Cognizant #Andrapradesh #ChandrababuNaidu
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


