ದೇಶದಾದ್ಯಂತ ಪ್ರತಿ ತಿಂಗಳು ಚುನಾವಣೆಗಳು ನಡೆಯುತ್ತಿರುವುದರಿಂದ ಸಮಯ, ಹಣ ಎರಡು ವ್ಯರ್ಥವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. ಹಾಗಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಭಾರತದ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 80ನೇ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನ ಉದ್ದೇಶಿಸಿ ಮಾತನಾಡುವ ವೇಳೆ, 26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು. ಜೊತೆಗೆ ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯೊಂದಿಗೆ ಭಾರತ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ, “ಪ್ರತಿ ಕೆಲವು ತಿಂಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ಚುನಾವಣೆಗಳು ನಡೆಯುತ್ತವೆ, ಇದು ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆ ನಡೆಸುವುದು ಅತ್ಯಗತ್ಯ”ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ಒಂದು ದೇಶ ಒಂದು ಚುನಾವಣೆ’ ಎನ್ನುವ ಅಪಾಯಕಾರಿ ರಣತಂತ್ರ
ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಮಾಡುವುದು ಉತ್ತಮ, ಪ್ರತ್ಯೇಕ ಮತದಾರರ ಪಟ್ಟಿಗಳಿಂದ ಸಂಪನ್ಮೂಲಗಳ ವ್ಯರ್ಥ ಎಂದು ಪ್ರಧಾನಿ ಸೂಚಿಸಿದ್ದಾರೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಚಿಂತನೆ ಬಗ್ಗೆ ತಿಳಿಸಿದ್ದರು.
ಪ್ರಧಾನ ಮಂತ್ರಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) “ಒಂದು ರಾಷ್ಟ್ರ, ಒಂದು ಚುನಾವಣೆ” ಬಗ್ಗೆ ಮಾತನಾಡುತ್ತಿವೆ. ಅದು ಒಂದೇ ರೀತಿಯ ಸಂಪನ್ಮೂಲಗಳನ್ನು ಎಲ್ಲರಿಗೂ ನೀಡುವುದು ಮತ್ತು ಯಾವಾಗಲೂ ಚುನಾವಣಾ ವಿಚಾರಗಳಲ್ಲಿ ಸರ್ಕಾರಗಳು ತೊಡಗಿಕೊಳ್ಳುವ ಬದಲು ಆಡಳಿತಕ್ಕೆ ಹೆಚ್ಚಿನ ಸಮಯ ನೀಡುಲಾಗುತ್ತದೆ ಎಂದು ವಾದಿಸಿವೆ.
ಪ್ರತಿಪಕ್ಷಗಳು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿವೆ, ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕ, ಇದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನದ ವಿರುದ್ಧ ಮತ್ತು ಅಪ್ರಾಯೋಗಿಕ ಎಂದು ವಾದಿಸಿದ್ದವು. ’ಈ ಯೋಜನೆ ಮೂಲಕ ಸಂಸತ್ತಿನ ಪ್ರಜಾಪ್ರಭುತ್ವವನ್ನು ಬದಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸಿಪಿಎಂ ಆರೋಪಿಸಿತ್ತು.
ಇದನ್ನೂ ಓದಿ: ಬೀಫ್ ಬಿರಿಯಾನಿ ತಿನ್ನಿ ಎಂದ ಒವೈಸಿ; ಹಂದಿಮಾಂಸದ ಬಿರಿಯಾನಿ ಆಫರ್ ನೀಡಿದ ಬಿಜೆಪಿ ನಾಯಕ!
ನಮ್ಮ ಸಂವಿಧಾನ ಭಾರತ ಎಂಬ ಗಣರಾಜ್ಯಕ್ಕೆ ಕೊಡುವ ಸಾರ್ವಭೌಮತೆಯನ್ನು ಪ್ರತಿ ರಾಜ್ಯಕ್ಕೂ ನೀಡಿದೆ. ಆದುದರಿಂದ ಪ್ರತಿ ರಾಜ್ಯವು ವಿಶಿಷ್ಟ. ಪ್ರತಿ ರಾಜ್ಯದ ಅನನ್ಯತೆಯಂತೆ ಪ್ರತಿ ರಾಜ್ಯದ ಸಮಸ್ಯೆಗಳು ಬೇರೆ ಬೇರೆ. ಆ ಅನನ್ಯತೆ ಕಾಯ್ದುಕೊಳ್ಳುವುದು ಮತ್ತು ನಮಗೆ ಹತ್ತಿರವಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು, ಅಂತಾದಕ್ಕೆ ಒತ್ತುನೀಡುವ ಜನಪ್ರತಿನಿಧಿಗಳನ್ನು, ಅಂತಹ ಪಕ್ಷಗಳನ್ನು ಆಯ್ಕೆ ಮಾಡುವ ಮತ್ತು ಬೇಕಿದ್ದಲ್ಲಿ ಬದಲಿಸುವ ಅವಕಾಶ ರಾಜ್ಯಕ್ಕೆ ರಾಜ್ಯದ ಜನತೆಗೆ ಇರಬೇಕು, ಮತ್ತು ಆ ಕೆಲಸಕ್ಕೆ ಅಗತ್ಯವಾದ ಸಮಯ ಮತ್ತು ಕಾಲವೂ ಅಗತ್ಯ. ಇದನ್ನು ಕಸಿಯುವ ಹುನ್ನಾರವೇ ಒಂದು ದೇಶ – ಒಂದು ಚುನಾವಣೆಯ ರಣತಂತ್ರ. – ಗುರುಪ್ರಸಾದ್ ಡಿ.ಎನ್
ಈಗ ಮತ್ತೆ ಪ್ರಧಾನ ಮಂತ್ರಿ ಮೋದಿ ’ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬ ತಮ್ಮ ಹಳೆಯ ಯೋಜನೆಯನ್ನು ಮುಂಡಿಟ್ಟುಕೊಂಡು ಬಂದಿದ್ದಾರೆ. ದೇಶದ ಸಂಪತ್ತು, ಸಮಯ ಉಳಿಸಲು ಈ ಯೋಜನೆ ಮುಖ್ಯ ಎನ್ನುತ್ತಿದ್ದಾರೆ. ಆದರೆ, ಇದು ಒಕ್ಕೂಟ ವ್ಯವಸ್ಥೆಯಲ್ಲಿರುವ ರಾಜ್ಯಗಳ ಅಧಿಕಾರವನ್ನು -ಬಲವನ್ನು ಕುಂದಿಸುವ ಕೆಲಸ ಎಂದು ಚಿಂತಕರು ಆರೋಪಿಸಿದ್ದಾರೆ.
ಅಧ್ಯಕ್ಷೀಯ ಮಾದರಿಯ ಎರಡು ನಾಯಕರ ನಡುವಿನ ಮಹಾಸಮರ ಎಂಬಂತೆ ಬಿಂಬಿಸುವಂತಹ ಚುನಾವಣಾ ಮಾದರಿಯನ್ನು ರಾಜ್ಯ ಸರ್ಕಾರಗಳ ಚುನಾವಣೆಯ ಜೊತೆಗೆ ತಳುಕು ಹಾಕುವ ಈ ರಣತಂತ್ರ ಎಂದು ಆರೋಪಿಸಲಾಗಿದೆ.



Declare emergency, ban Your EVM’s n bring BALLOT PAPERS for election… Than you taste what’s good to the country..