ಕೆಂಪು ಕೋಟೆಯಲ್ಲಿ ನಡೆಯುವ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕೇವಲ 250 ಗಣ್ಯರಿಗೆ ಮಾತ್ರ ಭಾಗವಹಿಸಿವ ಅವಕಾಶವಿದ್ದು, ಇದುವರೆಗೆ ಆಹ್ವಾನಿತರ ಪಟ್ಟಿಯಲ್ಲಿ 900-1,000 ಜನ ಇರುತ್ತಿದ್ದರು.
ಕೊರೊನಾ ಸಾಂಕ್ರಾಮಿಕದಿಂದಾಗಿ ಈ ಬದಲಾವಣೆಯಾಗಿದೆ ಎನ್ನಲಾಗಿದೆ.
ಇಂತಹ ಹಲವು ನಿಬಂಧನೆಗಳ ಮೇರೆಗೆ 74 ನೇ ಸ್ವಾತಂತ್ರೋತ್ಸವ ನಡೆಯಲಿದೆ. ಜಗತ್ತಿಗೆ ಆವರಿಸಿರುವ ಕೊರೊನ ಸಾಂಕ್ರಾಮಿಕವೇ ಇದಕ್ಕೆ ಪ್ರಮುಖ ಕಾರಣವಾಗಿದ್ದು. ಹಾಗಾಗಿ ಈ ಉತ್ಸವದಲ್ಲಿ ಶಾಲಾಮಕ್ಕಳು ಭಾಗವಹಿಸಲು ಅವಕಾಶವಿಲ್ಲ. ಪೋಲೀಸ್ ಮತ್ತು ಇತರೆ ಸಿಬ್ಬಂದಿಗಳು ಪಿಪಿಇ ಧರಿಸಿರಬೇಕು. ಅಲ್ಲದೆ ಗಣ್ಯರು ಕೂರುವ ಆಸನಗಳನ್ನು ಸಾಮಾಜಿಕ ಅಂತರದೊಟ್ಟಿಗೆ ಬೇರೆ ಬೇರೆ ಸ್ಥಳಗಳಲ್ಲಿ ಹಾಕಲು ನಿಯೋಜಿಸಲಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಭೆಯಲ್ಲಿ, ಆಚರಣೆಗೆ ಕೊರೊನಾ ವಾರಿಯರ್‍ಸ್ ಗಳನ್ನು ಗಮನದಲ್ಲಿಟ್ಟುಕೊಂಡು, ಅವರನ್ನೇ ಅತಿಥಿಗಳಾಗಿ ಆಹ್ವಾನಿಸುವ ಸಾದ್ಯತೆಯಿದೆ ಎಂದು ತಿಳಿದು ಬಂದಿದೆ.
ಪ್ರತಿ ವರ್ಷವೂ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡುವಾಗ 900-1,000 ಜನ ಇರುತ್ತಿದ್ದರು. ಆದರೆ ಈ ವರ್ಷ ಕೇವಲ 250 ಜನರಷ್ಟೇ ಇರಲಿದ್ದಾರೆ ಎಂದು ಭಾರತೀಯ ಪುರಾತತ್ವ ಇಲಾಖೆ ಹೇಳಿದೆ. ಹಾಗೆಯೇ ಈ ವರ್ಷದ ಅತಿಥಿಗಳ ಪಟ್ಟಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸುತ್ತದೆ ಎಂದು ತಿಳಿಸಿದರು.
“ಈ ವರ್ಷ, ಎನ್‌ಸಿಸಿ ಕೆಡೆಟ್‌ಗಳನ್ನು ಹೊರತುಪಡಿಸಿ ಮಕ್ಕಳು ಭಾಗವಹಿಸುವುದಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುವುದು. ಸಿಬ್ಬಂದಿಗಳು ಪಿಪಿಇ ಕಿಟ್‌ಗಳಲ್ಲಿರುತ್ತಾರೆ. ಹಾಗೆಯೇ ಹಲವಾರು ನೈರ್ಮಲ್ಯೀಕರಣ ಕೇಂದ್ರಗಳು ಇರುತ್ತವೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಮೋನಿಕಾ ಭರದ್ವಾಜ್ ಹೇಳಿದರು.
ಇದರ ಕಾರ್ಯರೂಪವನ್ನು ಅಂತಿಮಗೊಳಿಸಲಾಗುವುದು. ಆದರೆ ಇದು ಆಗಸ್ಟ್ ಮಧ್ಯದಲ್ಲಿ ಕೊರೊನಾ ಮತ್ತು ಸ್ಥಳದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
ದಿನಾಚರಣೆಯ ಕಾರಣದಿಂದ ಆಗಸ್ಟ್ 1 ರಿಂದ ಕೆಂಪು ಕೋಟೆಯನ್ನು ಸಾರ್ವಜನಿಕರಿಗೆ ನಿರ್ಭಂದಿಸಲಾಗುತ್ತದೆ. ಇದಕ್ಕೂ ಮೊದಲು ಆಗಸ್ಟ್ 7 ರವರೆಗೆ ಇದು ತೆರೆದಿರುತ್ತಿತ್ತು ಎಂದು ಸಭೆಯಲ್ಲಿ ಭಾಗಿಯಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸ್ಯಚಕ್ರವರ್ತಿ ನರಸಿಂಹರಾಜು ಜನ್ಮದಿನ; ಒಂದು ನೆನಪು


