Homeಮುಖಪುಟರಾಜಸ್ಥಾನ ಬಿಕ್ಕಟ್ಟು: ಜನ ದಂಗೆ ಎದ್ದರೆ ನಾವು ಜವಾಬ್ದಾರರಲ್ಲವೆಂದ ಅಶೋಕ್ ಗೆಹ್ಲೋಟ್

ರಾಜಸ್ಥಾನ ಬಿಕ್ಕಟ್ಟು: ಜನ ದಂಗೆ ಎದ್ದರೆ ನಾವು ಜವಾಬ್ದಾರರಲ್ಲವೆಂದ ಅಶೋಕ್ ಗೆಹ್ಲೋಟ್

ಮುಖ್ಯಮಂತ್ರಿ ಗೆಹ್ಲೋಟ್ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ನಿರೀಕ್ಷೆಯಲ್ಲಿದ್ದಾರೆ.

- Advertisement -
- Advertisement -

ರಾಜಸ್ಥಾನ ರಾಜ್ಯಪಾಲ ಕಾಲ್‌ರಾಜ್‌ ಮಿಶ್ರ ಮೇಲಿನ ಒತ್ತಡದಿಂದ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲು ಹಿಂದೇಟು ಹಾಕುತ್ತಿದ್ದಾರೆ. ಜನರು ದಂಗೆ ಎದ್ದು ರಾಜಭವನಕ್ಕೆ ಮುತ್ತಿಗೆಹಾಕಿದರೆ ನಾನು ಜವಾಬ್ದಾರನಲ್ಲ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.

ರಾಜಧಾನಿ ಜಯಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸೋಮವಾರ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಲಾಗುವುದು ಎಂದರು.

ಮುಖ್ಯಮಂತ್ರಿ ಗೆಹ್ಲೋಟ್ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ನಿರೀಕ್ಷೆಯಲ್ಲಿದ್ದಾರೆ.

ರಾಜಸ್ಥಾನ ಹೈಕೋರ್ಟ್ ಶುಕ್ರವಾರ ಶಾಸಕರ ಅನರ್ಹತೆ ಪ್ರಕ್ರಿಯೆ ವಿಧಾನವನ್ನು ಯಥಾಸ್ಥಿತಿಯಲ್ಲಿಡಬೇಕು ಎಂದು ಆದೇಶಿಸಿದೆ. ಆದರೆ ರಾಜ್ಯಪಾಲರು ಸಂವಿಧಾನಿಕ ಹುದ್ದೆ ಹೊಂದಿದ್ದರೂ ಅಧಿವೇಶನ ಕರೆಯಲು ನಿರ್ಧಾರ ಕೈಗೊಳ್ಳುತ್ತಿಲ್ಲ. ಕೂಡಲೇ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಶಾಸಕರು ಸಾಮೂಹಿಕವಾಗಿ ರಾಜ್ಯಪಾಲರನ್ನು ಭೇಟಿಯಾಗಿ ವಿಶೇಷ ಅಧಿವೇಶನವನ್ನು ಕರೆಯುವಂತೆ ಮನವಿ ಮಾಡುತ್ತೇವೆ. ಆದರ ರಾಜ್ಯಪಾಲರು ಮೇಲಿನ ಒತ್ತಡಕ್ಕೆ ಒಳಗಾಗಿದ್ದಾರೆ. ಅಧಿಕಾರ ಬೆತ್ತಲಾಗಿದೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

ಸಚಿನ್ ಪೈಲಟ್ ಜೊತೆಯಲ್ಲಿರುವ ಶಾಸಕರು ಪಕ್ಷಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಹೊರಗೆ ಹೋಟೆಲ್‌ನಲ್ಲಿ ಕೂಡಿಡಲಾಗಿದೆ. ರಾಜಸ್ಥಾನ ಕಾಂಗ್ರೆಸ್ ಬಂಡಾಯ ಶಾಸಕರ ಜೊತೆ ಸಂಪರ್ಕದಲ್ಲಿದೆ ಎಂದು ತಿಳಿಸಿದರು.

ವಿಧಾನಸಭೆಯ ಅದಿವೇಶನದಲ್ಲಿ ನಾವು ಬಹುಮತ ಸಾಬೀತುಪಡಿಸುತ್ತೇವೆ. ನಮಗೆ ಅಗತ್ಯ ಶಾಸಕರ ಸಂಖ್ಯೆ ಇದೆ. ಬಹುಮತ ಸಾಬೀತುಪಡಿಸಲು ಏಲ್ಲಾ ಶಾಸಕರು ಬದ್ದರಾಗಿದ್ದಾರೆ. ನಮ್ಮ ಶಕ್ತಿಯನ್ನು ಸದನದಲ್ಲಿ ತೋರಿಸುತ್ತೇವೆ ಎಂದರು ವಿವರಿಸಿದರು.


ಓದಿ:

ರಾಜಸ್ಥಾನ: ಅಶೋಕ್ ಗೆಹ್ಲೋಟ್ ಸಹೋದರನ ಆಸ್ತಿಯ ಮೇಲೆ ’ಇಡಿ’ ದಾಳಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...