Homeಮುಖಪುಟಗಡಿಯಾಚೆಗಿನ ಭಯೋತ್ಪಾದಕರು, ಗಡಿಯೊಳಗಿನ ಕೋಮುವಾದಿಗಳಿಗೆ ಉತ್ತರ ನೀಡಿದ 'ಆಪರೇಷನ್ ಸಿಂಧೂರ' ಪತ್ರಿಕಾಗೋಷ್ಠಿ!

ಗಡಿಯಾಚೆಗಿನ ಭಯೋತ್ಪಾದಕರು, ಗಡಿಯೊಳಗಿನ ಕೋಮುವಾದಿಗಳಿಗೆ ಉತ್ತರ ನೀಡಿದ ‘ಆಪರೇಷನ್ ಸಿಂಧೂರ’ ಪತ್ರಿಕಾಗೋಷ್ಠಿ!

- Advertisement -
- Advertisement -

ಪಹಲ್ಗಾಮ್ ದಾಳಿಯ ವಿರುದ್ಧ ನಡೆದ ಆಪರೇಷನ್ ಸಿಂಧೂರ ಬಗ್ಗೆ ವಿವರಣೆ ನೀಡಲು ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಭಾಗವಹಿಸಿದ್ದರು. ಆಪರೇಷನ್ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಭಾರತೀಯ ಸೇನೆ ಗಡಿಯಾಚೆಗಿನ ಭಯೋತ್ಪಾದಕರಿಗೂ, ಗಡಿಯೊಳಗಿನ ಕೋಮುವಾದಿಗಳಿಗೂ ಸರಿಯಾಗಿ ಉತ್ತರಿಸಿದೆ. ಗಡಿಯಾಚೆಗಿನ ಭಯೋತ್ಪಾದಕರು

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮೂಲಕ ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿ ಮತ್ತು ಕೋಮು ಸಾಮರಸ್ಯವನ್ನು ಭಂಗಗೊಳಲು ಬಯಸಿದ್ದರು ಎಂದು ಹೇಳಿದ್ದಾರೆ. ಅಂದರೆ, ಶಾಂತಿ, ಅಭಿವೃದ್ಧಿ ಜೊತೆಗೆ ಕೋಮು ಸಾಮರಸ್ಯವನ್ನು ಭಂಗಗೊಳಿಸಬೇಕು ಎಂಬುವುದು ಭಯೋತ್ಪಾದಕರ ಉದ್ದೇಶ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಒಂದು ಕ್ಷಣ ಆಲೋಚಿಸಿ, ಪಹಲ್ಗಾಮ್ ದಾಳಿಯ ನಂತರ ಈ ದೇಶದ ಕೋಮು ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸಿ ಭಯೋತ್ಪಾದಕರ ಉದ್ದೇಶವನ್ನು ಈಡೇರಿಸಲು ಪ್ರಯತ್ನಿಸಿದವರು ಯಾರು? ಅಭಿವೃದ್ಧಿ ಹೊಂದುತ್ತಿರುವ ಕಾಶ್ಮೀರದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಲು ಕರೆ ನೀಡದವರು ಯಾರು? ಅಲ್ಲಿಗೆ ಪ್ರವಾಸ ಹೋಗದಂತೆ ಕಾಶ್ಮೀರವನ್ನು ಬಹಿಷ್ಕರಿಸಲು ಕರೆ ನೀಡಿದವರು ಯಾರು? ದೇಶದ ಹಲವು ರಾಜ್ಯಗಳಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದವರು ಯಾರು?

ಮೇಲಿನ ನನ್ನ ”ಯಾರು” ಎಂಬ ಪ್ರಶ್ನೆಗೆ ಉತ್ತರ ”ಯಾರು” ಎಂಬುವುದು ಇಡೀ ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವ್ಯಕ್ತಿಗಳ ವಾರಗಳ ಹಿಂದಿನ ಪೋಸ್ಟ್‌ಗಳನ್ನು ಕೆದಕಿದರೆ, ಭಯೋತ್ಪಾದಕರ ಉದ್ದೇಶವನ್ನು ಸಫಲಗೊಳಿಸಲು ಪ್ರಯತ್ನಿಸಿದವರ ದುಷ್ಕರ್ಮಗಳು ನಮ್ಮ ಕಣ್ಣ ಮುಂದೆಯೆ ಬರುತ್ತದೆ.

ಪಹಲ್ಗಾಮ್ ದಾಳಿ ನಡೆದಾಗ ದೇಶ ಒಗ್ಗಟ್ಟಾಗಿರಬೇಕು ಎಂದು, ಅದು ಭಯೋತ್ಪಾದಕರ ಉದ್ದೇಶ ಇಲ್ಲಿನ ಸೌಹಾರ್ದ ಹಾಳು ಮಾಡುವುದೆ ಆಗಿದೆ ಎಂದು ಸಾರಿ ಸಾರಿ ಹೇಳಿದವರ ಮೇಲೆ ದಾಳಿ ಮಾಡಲಾಯಿತು. ಸ್ವತಃ ಸಂತ್ರಸ್ತ ಸೈನಿಕರೊಬ್ಬರ ಪತ್ನಿಯ ಮೇಲೆ ಕೂಡಾ ಅಶ್ಲೀಲವಾಗಿ ದಾಳಿ ಮಾಡಲಾಯಿತು. ನಮ್ಮ ಸರ್ಕಾರ ಅದರ ಬಗ್ಗೆ ಇನ್ನೂ ಚಕಾರ ಎತ್ತದೆ ಮೌನಪಾಲಿಸಿದೆ.

ಆದರೆ, ಇಂದು ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆ ಈ ಎಲ್ಲಾ ದುಷ್ಕರ್ಮಿಗಳಿಗೆ ಸರಿಯಾಗಿ ಉತ್ತರಿಸಿದೆ.

ಯಾವುದೇ ಮಿಲಿಟರಿ ಕಾರ್ಯಾಚರಣೆಗಳು ನಡೆದರೆ ಅವುಗಳ ಸುದ್ದಿಗಳನ್ನು ಸಾಂಪ್ರದಾಯಿಕವಾಗಿ ನೀಡುತ್ತಾ ಬಂದಿರುವುದು ಭಾರತ ಸರ್ಕಾರದ ರಕ್ಷಣಾ ಇಲಾಖೆ (MoD) ಮತ್ತು ಸೇನೆಯ ವಕ್ತಾರರು. ಆದರೆ, ಭಾರತೀಯ ಸೇನೆ ಈ ಬಾರಿ, ಬದಲಾವಣೆ ಮಾಡಿ, ಗಡಿಯಾಚೆಗಿನ ಭಯೋತ್ಪಾದಕರಿಗೆ ಮತ್ತು ಗಡಿಯೊಳಗಿನ ಕೋಮುವಾದಿಗಳಿಗೆ ಉತ್ತರ ನೀಡಿದೆ.

ಪಹಲ್ಗಾಮ್ ದಾಳಿಯ ನಂತರ ಅದರ ಪಾಪವನ್ನು ಭಾರತ ಸರ್ವ ಮುಸ್ಲಿಮರು ಹೊರಬೇಕು ಎಂಬಂತೆ ಪ್ರಚಾರ ಮಾಡಿದ ಕೋಮುವಾದಿಗಳಿಗೆ ಉತ್ತರವಾಗಿ ಸೇನೆ ಒಬ್ಬ ಮುಸ್ಲಿಂ ಮಹಿಳಾ ಸೇನಾಧಿಕಾರಿಯ ಕೈಯಲ್ಲೆ ಘಟನೆಯ ಬಗ್ಗೆ ವಿವರಗಳನ್ನು ನೀಡುವಂತೆ ಮಾಡಿತು. ಇದೀಗ ಇಡೀ ದೇಶ ಈ ಮಹಿಳೆ ಯಾರು, ಅವರು ಏನಾಗಿದ್ದರು ಎಂದು ಹುಡುಕುತ್ತಾ, ಅವರ ಸಾಧನೆ, ಧೈರ್ಯ ಮತ್ತು ಅವರ ದೇಶಪ್ರೇಮವನ್ನು ಕೊಂಡಾಡುವಂತೆ ಭಾರತೀಯ ಸೇನೆ ಮಾಡಿದೆ. ಗಡಿಯೊಳಗಿನ ಕೋಮುವಾದಿಗಳಿಗೆ ಇದಕ್ಕಿಂತ ಹೆಚ್ಚಿನ ಉತ್ತರ ಏನು ಬೇಕು ಹೇಳಿ.

ಅಷ್ಟೆ ಅಲ್ಲದೆ, ನಮ್ಮ ಗಡಿ ಪ್ರವೇಶಿಸಿ, ತಮ್ಮ ಕುಟುಂಬದೊಂದಿಗೆ ವಿಹರಿಸುತ್ತಿದ್ದ ಪ್ರವಾಸಿಗರನ್ನು, ಮಹಿಳೆಯರ ಕಣ್ಣು ಮುಂದೆಯೆ ಅವರ ಪತಿಯರನ್ನು ಕೊಂದ ಭಯೋತ್ಪಾದರ ಕೇಂದ್ರಗಳನ್ನು ನಾಶ ಮಾಡಿ, ಆ ಸಾಧನೆಯನ್ನು ಇಬ್ಬರು ಮಹಿಳೆಯರು ವಿವರಿಸುವಂತೆ ಮಾಡಿ, ಭಾರತೀಯ ಸೇನೆ ಭಯೋತ್ಪಾದರಿಗೆ ನಾವು ಹೆದರಿಲ್ಲ, ನಾವು ಗಟ್ಟಿಯಾಗಿದ್ದೇವೆ ಎಂಬ ಸಂದೇಶ ರವಾನಿಸಿದೆ.

ಅಷ್ಟಾಗಿಯೂ, ಪಹಲ್ಗಾಮ್ ದಾಳಿ ನಡೆಯಲು ಕಾರಣವಾದ ಭದ್ರತಾ ಲೋಪಕ್ಕೆ ಯಾರು ಕಾರಣ? ಅದಕ್ಕೆ ಹೊಣೆ ಯಾರು? ಸೇನೆಯಲ್ಲಿ ನೇಮಕಾತಿ ಯಾಕೆ ಆಗುತ್ತಿಲ್ಲ? ಎಂಬ ಪ್ರಶ್ನೆಯನ್ನು ನಾವು ಕೇಳುತ್ತಲೆ ಇರಬೇಕು. ಜೊತೆಗೆ ಈ ದೇಶದ ಬ್ರಾತೃತ್ವದ ಪರಂಪರೆಯನ್ನು ಒಡೆಯಲು ಬರುವವರ ಹುನ್ನಾರವನ್ನು ನಾವು ಒಡೆಯುತ್ತಲೆ ಇರಬೇಕು. ಯಾಕೆಂದರೆ ಈ ದೇಶ ಎಲ್ಲರದೂ. ಅಲ್ಲವೆ? ಗಡಿಯಾಚೆಗಿನ ಭಯೋತ್ಪಾದಕರು

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಆಪರೇಷನ್ ಸಿಂಧೂರ | ಭಯೋತ್ಪಾದಕ ಗುಂಪುಗಳ ನಿರ್ಮೂಲನೆಗೆ ಭಾರತದ ಎಡಪಕ್ಷಗಳ ಒತ್ತಾಯ

ಆಪರೇಷನ್ ಸಿಂಧೂರ | ಭಯೋತ್ಪಾದಕ ಗುಂಪುಗಳ ನಿರ್ಮೂಲನೆಗೆ ಭಾರತದ ಎಡಪಕ್ಷಗಳ ಒತ್ತಾಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶಾರದಾ ಚಿಟ್ ಫಂಡ್ ಹಗರಣ: 13 ವರ್ಷಗಳ ನಂತರ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಜಾಮೀನು ಮಂಜೂರು ಮಾಡಿದ ಕೊಲ್ಕತ್ತಾ ಹೈಕೋರ್ಟ್

ಕೊಲ್ಕತ್ತಾ ಹೈಕೋರ್ಟ್ ಬುಧವಾರ ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣದ ಪ್ರಮುಖ ಆರೋಪಿ ಸುದೀಪ್ತ ಸೇನ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, 13 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾಗಲು ದಾರಿ ಸುಗಮವಾಗಿದೆ. ಪಶ್ಚಿಮ...

ಇಂದೋರ್: ಪೊಲೀಸರಿಂದ ಹಣಕ್ಕಾಗಿ ಬೇಡಿಕೆ, ಹಲ್ಲೆ ಆರೋಪ; 25 ವರ್ಷದ ಟ್ಯಾಕ್ಸಿ ಚಾಲಕ ಆತ್ಮಹತ್ಯೆ: ಪೊಲೀಸ್ ಅಮಾನತು

ಇಂದೋರ್: ಪೊಲೀಸರ ಹಲ್ಲೆ ಮತ್ತು ಭ್ರಷ್ಟಾಚಾರವನ್ನು ಆರೋಪಿಸಿ ವೀಡಿಯೊ ರೆಕಾರ್ಡ್ ಮಾಡಿದ ನಂತರ 25 ವರ್ಷದ ಟ್ಯಾಕ್ಸಿ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅಧಿಕಾರಿಗಳು ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಅಭಿಷೇಕ್...

ಅಮೆರಿಕ ಕೋರ್ಟ್ ಮೆಟ್ಟಿಲೇರಿದ ಅದಾನಿ : ಎಸ್‌ಇಸಿ ವಂಚನೆ ಪ್ರಕರಣ ವಜಾಗೊಳಿಸುವಂತೆ ಮನವಿ

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಅವರ ಸೋದರಸಂಬಂಧಿ ಸಾಗರ್ ಅದಾನಿ ಅವರು ತಮ್ಮ ವಿರುದ್ಧದ ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಮೆರಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕದ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್...

ಜಮ್ಮು-ಕಾಶ್ಮೀರ: ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಆರೋಪ; ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಮನೋಜ್ ಸಿನ್ಹಾ

ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಬುಧವಾರ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ್ದಾರೆ ಎಂದು...

ಭಾರಿ ಜನ ಬೆಂಬಲದ ನಡುವೆ ಭವಾನಿಪುರದಲ್ಲಿ ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ: ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟ ಮೆರವಣಿಗೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ತಮ್ಮ ಕಾಲಿಘಾಟ್ಕಾಲ್ ನಿವಾಸದಿಂದ ಹೊರಬಂದು ಭಬಾನಿಪುರ ವಿಧಾನಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಕಾಲ್ನಡಿಗೆಯಲ್ಲಿ ತೆರಳಿದರು, ಆ ಸಮಯದಲ್ಲಿ ಬೆಂಬಲಿಗರ ದೊಡ್ಡ ಗುಂಪೊಂದು ತೃಣಮೂಲ ಕಾಂಗ್ರೆಸ್...

‘ಜ್ಞಾನೇಶ್ ಕುಮಾರ್ ನಮಗೆ ‘ಗೆಟ್ ಲಾಸ್ಟ್’ ಅಂದ್ರು’ : ಮುಖ್ಯ ಚುನಾವಣಾ ಆಯುಕ್ತರೊಂದಿಗಿನ ಸಭೆ ಬಳಿಕ ಟಿಎಂಸಿ ನಾಯಕರಿಂದ ಆರೋಪ

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರೊಂದಿಗೆ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ನಾಲ್ವರು ಸದಸ್ಯರ ನಿಯೋಗ ನಡೆಸಿದ ಸಭೆಯು ಬುಧವಾರ ಕಾವೇರಿದ ಚರ್ಚೆಗೆ ಸಾಕ್ಷಿಯಾಯಿತು. ಈ ವೇಳೆ ಚುನಾವಣಾ ಆಯುಕ್ತರು ನಮಗೆ...

ಅಸ್ಸಾಂ ಸಿಎಂ ಪತ್ನಿ ದೂರಿನ ಮೇರೆಗೆ ಪವನ್ ಖೇರಾ ವಿರುದ್ಧ ಮಾನನಷ್ಟ, ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಮಾನನಷ್ಟ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ...

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಬೆತ್ತಲಾದ ವಿಶ್ವಗುರು : ಕಾಂಗ್ರೆಸ್

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರ 'ಅತ್ಯಂತ ವೈಯಕ್ತಿಕ ರಾಜತಾಂತ್ರಿಕತೆಗೆ' ಉಂಟಾದ...

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ನಿಂದನೀಯ ಪದ ಬಳಕೆ; ‘ಸಂಪೂರ್ಣ ನಾಚಿಕೆಗೇಡಿನ ಸಂಗತಿ’ ಎಂದ ಪ್ರಿಯಾಂಕಾ ಗಾಂಧಿ 

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಅವಾಚ್ಯ" ಭಾಷೆ ಬಳಸಿರುವುದು "ಸಂಪೂರ್ಣವಾಗಿ ನಾಚಿಕೆಗೇಡಿನ" ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ...

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...