ಆಹಾರ ಸಂಸ್ಕೃತಿಯನ್ನು ವಚನಚಳುವಳಿಗೆ ಬೆಸೆದು ಹುಟ್ಟಿಕೊಂಡಿರುವ ಇಡೀ ಚರ್ಚೆಯೇ ಅನಗತ್ಯವಾದುದು. ಯಾವೆಲ್ಲ ಪ್ರಸ್ತುತ ತಲ್ಲಣಗಳ ಕಡೆ ನಾವು ಕೇಂದ್ರೀ ಕರಿಸಿಕೊಳ್ಳಬೇಕೊ ಅವುಗಳಿಂದ ನಮ್ಮನ್ನು ಡೀವಿಯೇಟ್ ಮಾಡುವಂತ ಪ್ರಯತ್ನಗಳು ಇವು.
ನಮ್ಮ ಕಣ್ಮುಂದೆ ನೂರಾರು ಜ್ವಲಂತ ಸಮಸ್ಯೆಗಳಿವೆ, ಅವುಗಳಿಗೆ ಉತ್ತರ ಕಂಡುಕೊಳ್ಳುವುದು, ಅವುಗಳ ವಿರುದ್ಧ ಸಂಘಟಿತರಾಗುವುದು ನಮ್ಮ ಆದ್ಯತೆಯಾಗಬೇಕು. ಆದರೆ ಆ ದಿಕ್ಕಿನ ದಾರಿ ತಪ್ಪಿಸುವ ಇಂತಹ ಚರ್ಚೆಗಳಿಂದ ನಯಾಪೈಸೆಯ ಪ್ರಯೋಜನವಿಲ್ಲ. ಇದು ಸಂಪೂರ್ಣ ಅನಗತ್ಯ ಮತ್ತು ಅಪ್ರಸ್ತುತ ಚರ್ಚೆ.
ಲಕ್ಷ್ಮೀಪತಿ ಕೋಲಾರ, ಸಾಹಿತಿಗಳು
(ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.)


