Homeಕರ್ನಾಟಕಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

- Advertisement -
- Advertisement -

ಅವಕಾಶವಾದವು ನಮ್ಮ ಸಿದ್ಧಾಂತದ ಭಾಗ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಪಕ್ಷ ಬಹುಜನ ಸಮಾಜ ಪಕ್ಷ. ಆ ಪಕ್ಷದ ಸಿದ್ಧಾಂತದ ಕುರಿತು ಸಾವಿರಾರು ಯುವಜನರಿಗೆ ಪಾಠ ಹೇಳಿದವರು ಎನ್.ಮಹೇಶ್. ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ತಮ್ಮ ಪಕ್ಷದ ಅಧಿನಾಯಕಿ ಮಾಯಾವತಿಯವರ ಸೂಚನೆಯನ್ನೂ ಧಿಕ್ಕರಿಸಿ ಗೈರು ಹಾಜರಾಗಿದ್ದಾರೆ. ಇದು ಹಲವರಿಗೆ ಶಾಕಿಂಗ್ ಇರಬಹುದು; ಆದರೆ ಆಶ್ಚರ್ಯಕರವಲ್ಲ. ಏಕೆಂದರೆ ಅವಕಾಶವಾದವು ಸಿದ್ಧಾಂತದ ಭಾಗ.

ಇನ್ನು ಕೆಲವರಿಗೆ ಶಾಕ್ ಅನಿಸಿರುವುದು ಎಚ್.ವಿಶ್ವನಾಥ್ ಅವರ ನಡವಳಿಕೆ. ಅವರು ಪುಸ್ತಕವೊಂದರಲ್ಲಿ ಬರೆದ ಕೆಲವು ಭಾಗಗಳನ್ನು ಡಿ.ಕೆ.ಶಿವಕುಮಾರ್ ಸದನದಲ್ಲಿ ಓದಿ ಹೇಳಿದರು. ಪಕ್ಷಾಂತರಿಗಳ ಯಾವುದೇ ವಾದವು ನಂಬಲರ್ಹವಲ್ಲ ಎಂದು ಸ್ವತಃ ವಿಶ್ವನಾಥ್ ಬರೆದಿರುವ ಮಾತುಗಳವು. ದೀರ್ಘಕಾಲದ ತಮ್ಮ ರಾಜಕೀಯ ವಿರೋಧಿ ಸಾ.ರಾ.ಮಹೇಶ್ ಸದನದಲ್ಲಿ ಹೇಳಿದ ನೈತಿಕತೆಯ ಪಾಠವನ್ನು ಮುಂಬೈನ ಹೋಟೆಲ್ ರೂಂನ ಟಿವಿಯಲ್ಲಿ ಎಚ್.ವಿಶ್ವನಾಥ್ ಕೇಳಿಸಿಕೊಂಡಿರುತ್ತಾರೆ. ‘ಇಂಥವರಿಂದ ತಾನು ಬುದ್ಧಿವಾದ ಕೇಳಬೇಕಾಯಿತು’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿರದಿದ್ದರೆ ಅದು ಆಶ್ಚರ್ಯ. ಆದರೆ, ವಿಶ್ವನಾಥ್ ಇಂದು ಗಟಾರದ ರಾಜಕಾರಣದ ಭಾಗವಾಗಿರುವುದರಲ್ಲಿ ಸಂಶಯವೇ ಇಲ್ಲ.

ಸದನದಲ್ಲಿ ಶಿವಲಿಂಗೇಗೌಡ ಮತ್ತು ಬಿ.ನಾರಾಯಣರಾವ್‍ರ ಮಾತುಗಳು ಒಳಗಿನಿಂದ ಬಂದ ಮಾತುಗಳು ಎಂದು ಅನಿಸಿದ್ದರಿಂದ ಅವುಗಳು ಎಲ್ಲರ ಹೃದಯಕ್ಕೆ ತಟ್ಟಿದವು. ಕೃಷ್ಣಭೈರೇಗೌಡರ ಪ್ರಾಮಾಣಿಕತೆಯನ್ನು ಅನುಮಾನಿಸಲೂ ಕಾರಣಗಳಿಲ್ಲ.
ಆದರೆ, ಇಂಥದೇ ಮಾತನ್ನು ಸ್ವತಃ ಸ್ಪೀಕರ್ ರಮೇಶ್‍ಕುಮಾರ್‍ರ ಕುರಿತು ಹೇಳುವುದು ಸಾಧ್ಯವಿಲ್ಲ. ಅಪಾರ ಅನುಭವ, ಬುದ್ಧಿವಂತಿಕೆ ಮತ್ತು ಹಣಕಾಸಿನ ವಿಚಾರದಲ್ಲಿ ಎಂದೂ ಭ್ರಷ್ಟರಾಗದ ಮತ್ತು ಜಾತಿವಾದಿಯಾಗದ ರಮೇಶ್‍ಕುಮಾರ್ ಪಕ್ಷಾಂತರ ಮಾಡದೇ ತಮ್ಮ ಪಕ್ಷದ (ಸ್ಪೀಕರ್‍ಗೆ ಪಕ್ಷ ಇರುವುದಿಲ್ಲ ಎಂಬುದು ತಾಂತ್ರಿಕವಾದ ಸಂಗತಿಯಷ್ಟೇ) ಅಭ್ಯರ್ಥಿ ಸೋಲಲು ಮೊನ್ನೆಯ ಚುನಾವಣೆಯಲ್ಲಿ ತಮ್ಮ ಕೊಡುಗೆಯನ್ನೂ ಸಲ್ಲಿಸಿದ್ದರು. ಮಿಕ್ಕಂತೆ ಸ್ವಚ್ಛ ರಾಜಕಾರಣದ ಹಾಗೂ ತತ್ವನಿಷ್ಠೆಯ ಕುರಿತು ಅವರಾಡುವ ಮಾತುಗಳಲ್ಲಿ ಇಂತಹ ದ್ವಂದ್ವಗಳು ಇದ್ದೇ ಇವೆ.

ಮುಂದೊಂದು ದಿನ ತಾನು ಮುಖ್ಯಮಂತ್ರಿಯಾಗಲೇಬೇಕು, ಬಿಜೆಪಿಗೆ ಹೋದರೆ ಅದು ಸಾಧ್ಯವೇ ಇಲ್ಲ ಎಂದು ಖಚಿತವಾಗಿ ಗೊತ್ತಿರುವ ಡಿ.ಕೆ.ಶಿವಕುಮಾರ್ ಅದಕ್ಕಾಗಿ ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆದರೆ, ಇದೇ ಯಡಿಯೂರಪ್ಪನವರ ಜೊತೆಗಿನ ಅವರ ಸಖ್ಯ ಮತ್ತು ಇಂಧನ ಇಲಾಖೆಯ ಅವ್ಯವಹಾರದಲ್ಲಿ ಯಡಿಯೂರಪ್ಪನವರಿಗೆ ಮಾಡಿದ ಉಪಕಾರವನ್ನು ಪಕ್ಷಾಂತರ ಎಂದು ಕರೆಯಲಾಗದು. ಆದರೆ, ಪಕ್ಷ ಮೀರಿದ ಸಖ್ಯ ಕೇವಲ ಮನುಷ್ಯ ಸಂಬಂಧವಲ್ಲ. ಅದರಲ್ಲಿ ವ್ಯವಹಾರಿಕ ಮತ್ತು ಸ್ವಾರ್ಥದ ಲೆಕ್ಕಾಚಾರಗಳಿವೆ.

ದೇವೇಗೌಡರ ಕುಟುಂಬದ ಅವಕಾಶವಾದಕ್ಕೆ ಎಣೆಯೇ ಇಲ್ಲ. ಅವರಾಡುವ ಯಾವ ಮಾತುಗಳನ್ನೂ ನಂಬಬಹುದು ಎನಿಸುವುದಿಲ್ಲ. ನಿಖಿಲ್‍ನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿಸಿದ್ದೇಕೆ ಎಂಬ ಕುರಿತು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ದೇವೇಗೌಡರು ವಿವರಿಸಿದ್ದನ್ನು ಸ್ವತಃ ನಿಖಿಲ್ ನಂಬಿರುವುದಿಲ್ಲ.

ಪಕ್ಷ ಸಿದ್ಧಾಂತ, ಭಾರತೀಯ ಸಂಸ್ಕøತಿ, ಭ್ರಷ್ಟಾಚಾರಕ್ಕೆ ವಿರೋಧ, ಕಾಂಗ್ರೆಸ್ ಸಂಸ್ಕøತಿಗೆ ಪ್ರತಿರೋಧ, ಪಕ್ಷಕ್ಕೆ ಬದ್ಧರಾಗಿ ದುಡಿವ ಕಾರ್ಯಕರ್ತರಿಗೆ ಮನ್ನಣೆ ಇತ್ಯಾದಿಗಳನ್ನು ಹೇಳುತ್ತಾ ಬಂದಿರುವ ಬಿಜೆಪಿ ಈಗಲೂ ಆ ಮಾತುಗಳನ್ನು ಹೇಳಲು ಹಿಂಜರಿಯುವುದಿಲ್ಲ. ಅದೇ ಸೋಜಿಗದ ಸಂಗತಿ. ಆ ಹಿಂಜರಿಕೆಯೂ ಏಕಿಲ್ಲವೆಂದರೆ ಅದರಷ್ಟೇ ಅವಕಾಶವಾದಿಯಾದ ಮಾಧ್ಯಮ ಸಮೂಹ ಅಂತಹ ಪ್ರಶ್ನೆಗಳು ವಿರೋಧ ಪಕ್ಷಗಳಿಗೆ ಕೇಳಲು ಮಾತ್ರ ಇವೆಯೆಂದು ಭಾವಿಸಿವೆ. ಮಾಧ್ಯಮಗಳು ಮತ್ತು ಬಿಜೆಪಿ ಪಕ್ಷ ಎನ್ನುವುದು ಒಂದೇ ಪ್ಯಾಕೇಜ್‍ನ ಭಾಗ.
ಬಿಜೆಪಿ ಪಕ್ಷದಲ್ಲಿ ಸಜ್ಜನರೆಂದು ತೋರಿಸಿಕೊಳ್ಳಲು ಹಾತೊರೆಯುವ ಶಾಸಕರೊಬ್ಬರಿದ್ದಾರೆ. ರಾಜಾಜಿನಗರದ ಸುರೇಶ್‍ಕುಮಾರ್. ಅವರು ‘ವಿಶ್ವಾಸಮತ ಯಾಚನೆಗೆ ಮುಂದಾದ ಮೇಲೂ ವರ್ಗಾವಣೆಗಳನ್ನು ಮಾಡುತ್ತಿರುವ ಕುಮಾರಸ್ವಾಮಿ ಸರ್ಕಾರವನ್ನು’ ಸಕಾರಣವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಮಾಡಲು ಹೊರಟಿರುವ ಯಡಿಯೂರಪ್ಪನವರು ಈ ಹಿಂದೆ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತ ಯಾಚನೆ ಮಾಡುವುದಕ್ಕೆ ಮುಂಚೆಯೇ ವರ್ಗಾವಣೆ ಮಾಡಿದ್ದನ್ನು ಮರೆಯುತ್ತಾರೆ. ಇಂತಹವರ ಅವಕಾಶವಾದಕ್ಕೆ ಸಾವಿರಾರು ಉದಾಹರಣೆಗಳು ಸಿಗುತ್ತವೆ.

ಈಗಾಗಲೇ ಹೇಳಿರುವಂತೆ ಅವಕಾಶವಾದಕ್ಕೆ ಮತ್ತೊಂದು ಹೆಸರೇ ಮಾಧ್ಯಮವಾಗಿದೆ. ಒಂದೇ ಬಗೆಯ ಎರಡು ಪ್ರಕರಣಗಳಲ್ಲಿ ಬಿಜೆಪಿ ಅಥವಾ ವಿರೋಧ ಪಕ್ಷಗಳಲ್ಲಿ ಯಾರು ಇದ್ದಾರೆ ಎಂಬುದರ ಮೇಲೆ ಅವರ ನಿಲುವೇ ಬದಲಾಗುತ್ತದೆ. ಪಕ್ಷವೊಂದರ ಪರವಾಗಿ ಪ್ರಚಾರಕ್ಕೇ ನಿಂತಿರುವ ಉಪಕರಣ ಅದು.

ಈ ರೀತಿಯಾಗಿ ಅವಕಾಶವಾದವನ್ನೇ ಬಿತ್ತಿ ಬೆಳೆದಿರುವ ಇಂದಿನ ರಾಜಕಾರಣದಲ್ಲಿ ಯಾವ ವಿಶ್ವಾಸ ಉಳಿದಿದೆ. ಕೆಲವು ಅತ್ಯುತ್ತಮ ಭಾಷಣಗಳನ್ನೂ, ಸಾಂವಿಧಾನಿಕ ನಡಾವಳಿಗಳನ್ನೂ ಕಂಡ ವಿಶ್ವಾಸಮತ ಯಾಚನೆಯ ಅಧಿವೇಶನದಲ್ಲಿ ಒಂದೆರಡು ಉತ್ತಮ ಅಂಶಗಳು ಇದ್ದವು. ಆದರೆ, ಅದಕ್ಕಿಂತ ನೂರು ಪಟ್ಟು ಕೊಳಕು ಎದ್ದು ಕಾಣುತ್ತಿತ್ತು. ತಮ್ಮನ್ನು, ತಮ್ಮ ಪಕ್ಷವನ್ನು ವಾಚಾಮಗೋಚರವಾಗಿ ಬಯ್ಯುತ್ತಿದ್ದಾಗ ಅದಕ್ಕೆ ಪ್ರತ್ಯುತ್ತರವನ್ನು ಕೊಡದೇ ವಿರೋಧ ಪಕ್ಷ ಕೂತಿದ್ದು ಇತಿಹಾಸದಲ್ಲಿ ದಾಖಲಾಗಿ ನಿಲ್ಲುತ್ತದೆ. ಹಾಗಾಗಿ ರಾಜಕೀಯ ವ್ಯವಸ್ಥೆಯ ವಿರುದ್ಧವೇ ಅವಿಶ್ವಾಸವು ಮೂಡುವಂತಹ ವಾತಾವರಣ ಇಂದು ಮೇಲುಗೈ ಸಾಧಿಸಿದೆ.

ಅವಕಾಶವಾದ ಹಾಗೂ ಅನೈತಿಕ ರಾಜಕಾರಣದ ಮೂಲಕ್ಕೆ ಹೋಗಿ ಅದಕ್ಕೆ ಮದ್ದು ಕಂಡುಹಿಡಿದಾಗ ಮಾತ್ರ ವಿಶ್ವಾಸ ಹುಟ್ಟುತ್ತದೆ. ಆ ನಿಟ್ಟಿನಲ್ಲಿ ಮಾನ-ಮರ್ಯಾದೆ ಇರುವ ಎಲ್ಲರೂ ಪ್ರಯತ್ನಿಸುವ ಅಗತ್ಯ ಎದುರಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...