Homeಮುಖಪುಟಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!

ಕೃಷಿ ಕಾಯ್ದೆಗಳಿಗೆ ವಿರೋಧ: ಟಿಕ್ರಿ ಗಡಿಯಲ್ಲಿ ಪ್ರಾಣಬಿಟ್ಟ ಮತ್ತೊಬ್ಬ ರೈತ!

"ಶಾಸನಗಳನ್ನು ರದ್ದುಗೊಳಿಸುವ ಮೂಲಕ ಕೇಂದ್ರವು ತನ್ನ ಕೊನೆಯ ಆಸೆಯನ್ನು ಪೂರೈಸಬೇಕು ಎಂದು ಅವರು ಬರೆದಿದ್ದಾರೆ" ಎಂದು ಪೊಲೀಸರು ಪಿಟಿಐಗೆ ತಿಳಿಸಿದರು.

- Advertisement -
- Advertisement -

ಟಿಕ್ರಿ ಗಡಿ ಪ್ರತಿಭಟನಾ ಸ್ಥಳದಿಂದ ಏಳು ಕಿಲೋಮೀಟರ್ ದೂರದಲ್ಲಿ ಹರಿಯಾಣದ ಹಿಸಾರ್ ಜಿಲ್ಲೆಯ 49 ವರ್ಷದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಕಳೆದ 100 ದಿನಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್‌ಬೀರ್ ಎಂಬ ರೈತ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರು ಒಂದು ಟಿಪ್ಪಣಿ ಬರೆದಿದ್ದಾರೆ ಎಂದು ಬಹದ್ದೂರ್ ಘಡ್‌ ಪೊಲೀಸ್ ಠಾಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಮೃತ ರಾಜಬೀರ್ ರೈತರ ಆಂದೋಲನಕ್ಕೆ ಬೆಂಬಲಿಗನಾಗಿದ್ದು, ನೇಣು ಬಿಗಿದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 26 ರಿಂದ ಕೇಂದ್ರ ಮತ್ತು ಪ್ರತಿಭಟನಾನಿರತ ರೈತರ ನಡುವಿನ ಮಾತುಕತೆ ಸ್ಥಗಿತಗೊಂಡಿದೆ. ರಾಜ್‌ಬೀರ್ ಅವರು ಬಿಟ್ಟು ಹೋಗಿದ್ದಾರೆಂದು ಭಾವಿಸಲಾದ ಟಿಪ್ಪಣಿಯಲ್ಲಿ, ಮೂರು ಕೃಷಿ ಕಾನೂನುಗಳು ತಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೆಂದು ಹೇಳಿದ್ದಾರೆ. “ಶಾಸನಗಳನ್ನು ರದ್ದುಗೊಳಿಸುವ ಮೂಲಕ ಕೇಂದ್ರವು ತನ್ನ ಕೊನೆಯ ಆಸೆಯನ್ನು ಪೂರೈಸಬೇಕು ಎಂದು ಅವರು ಬರೆದಿದ್ದಾರೆ” ಎಂದು ಪೊಲೀಸರು ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: ನೂರು ದಿನ ಪೂರೈಸಿದ ಐತಿಹಾಸಿಕ ರೈತ ಹೋರಾಟ: ಶಾಂತಿಯುತ ನೆಲೆಯಿಂದ ಇಡೀ ವಿಶ್ವಕ್ಕೆ ಮಾದರಿ

ಕಾನೂನುಗಳನ್ನು ವಿರೋಧಿಸಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ತಿಂಗಳು, ಟಿಕ್ರಿ ಪ್ರತಿಭಟನಾ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲಿ ಹರಿಯಾಣದ ಜಿಂದ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಹಿಂದೆ, ಹರಿಯಾಣದ ಮತ್ತೊಬ್ಬ ರೈತ ಟಿಕ್ರಿ ಗಡಿಯಲ್ಲಿ ವಿಷ ಸೇವಿಸಿದ್ದರು. ನಂತರ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಟಿಕ್ರಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಪಂಜಾಬ್‌ನ ವಕೀಲರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಿಖ್ ಧರ್ಮಗುರು ಸಂತ ರಾಮ್ ಸಿಂಗ್ ಅವರು ಸಿಂಗು ಗಡಿ ಪ್ರತಿಭಟನಾ ಸ್ಥಳದ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು “ರೈತರ ನೋವನ್ನು ಸಹಿಸಲಾಗುತ್ತಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: ರೈತ ಹೋರಾಟ: ಬಿಜೆಪಿಗೆ ಮತ ನೀಡದಂತೆ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡಲಿರುವ ಟಿಕಾಯತ್‌‌

39 ವರ್ಷದ ಮತ್ತೊಬ್ಬ ರೈತ ಕೂಡ ಜನವರಿಯಲ್ಲಿ ಸಿಂಘು ಪ್ರತಿಭಟನಾ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

“ದೆಹಲಿ ಗಡಿಯಲ್ಲಿ ಪ್ರತಿಭಟನೆಯ ವೇಳೆ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ” ಎಂದು ಫೆಬ್ರವರಿಯಲ್ಲಿ ಕೇಂದ್ರವು ಲೋಕಸಭೆಗೆ ತಿಳಿಸಿದೆ. ಆದರೆ, ಸಂಯುಕ್ತ್ ಕಿಸಾನ್ ಮೋರ್ಚಾ ಟಿಕ್ರಿ, ಗಾಜಿಪುರ ಮತ್ತು ಸಿಂಗು ಗಡಿಗಳಲ್ಲಿ 10 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.

ಜೀವ ಅಮೂಲ್ಯವಾಗಿದೆ. ಮಾನಸಿಕ ಒತ್ತಡಗಳಿದ್ದರೆ ಇಲ್ಲಿ ಸಂಪರ್ಕಿಸಿ:

ಬೆಂಗಳೂರು ಸಹಾಯವಾಣಿ – 080-25497777, ಬೆಳಿಗ್ಗೆ 10 ರಿಂದ ಸಂಜೆ 8 ರವರೆಗೆ

ಕರ್ನಾಟಕ ಆರೋಗ್ಯ ಸಹಾಯವಾಣಿ: 104


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...