Homeಚಳವಳಿನೂರು ದಿನ ಪೂರೈಸಿದ ಐತಿಹಾಸಿಕ ರೈತ ಹೋರಾಟ: ಶಾಂತಿಯುತ ನೆಲೆಯಿಂದ ಇಡೀ ವಿಶ್ವಕ್ಕೆ ಮಾದರಿ

ನೂರು ದಿನ ಪೂರೈಸಿದ ಐತಿಹಾಸಿಕ ರೈತ ಹೋರಾಟ: ಶಾಂತಿಯುತ ನೆಲೆಯಿಂದ ಇಡೀ ವಿಶ್ವಕ್ಕೆ ಮಾದರಿ

ದೆಹಲಿ ಪೊಲೀಸರು ಒಡ್ಡಿದ ಅಡೆತಡೆಗಳನ್ನು ದಾಟಿದ ರೈತರಿಗೆ ಪ್ರಕೃತಿ ಕೂಡ ತೀವ್ರ ಚಳಿ, ಮಳೆ, ಬಿಸಿಲಿನ ಸವಾಲೆಸೆದಿತ್ತು. ಆದರೆ ರೈತರು ಮಾತ್ರ ಯಾವುದಕ್ಕೂ ಎದೆಗುಂದಿಲ್ಲ.

- Advertisement -
- Advertisement -

ಐತಿಹಾಸಿಕ ರೈತ ಹೋರಾಟ… ಫಾರ್ಮಸ್ಸ್ ಪ್ರೋಟೆಸ್ಟ್, ಪಂಜಾಬ್-ಹರಿಯಾಣ ರೈತರ ಹೋರಾಟ, ಅನ್ನದಾತರ ಹೋರಾಟ, ಕಿಸಾನ್ ಆಂದೋಲನ ಹೀಗೆ ಒಂದಾ ಎರಡಾ.. ನೂರಾರು ಹೆಸರುಗಳಿಂದ ಕರೆಸಿಕೊಂಡ, ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿ ವಿಶ್ವದ ಗಮನ ಸೆಳೆದ ದೆಹಲಿಯ ರೈತ ಹೋರಾಟಕ್ಕೆ ಶುಕ್ರವಾರ (ಮಾರ್ಚ್ 5) 100 ದಿನ ತುಂಬಿದೆ.

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಚಲೋ ಆರಂಭಿಸಿ ಇಂದಿಗೆ 100 ದಿನಗಳಾಗಿವೆ. ಈ ಐತಿಹಾಸಿಕ ಹೋರಾಟ ನಡೆದುಬಂದ ದಾರಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಅಪಮಾನ, ಅವಮಾನ, ಬೆಂಬಲ, ಸ್ಪೂರ್ತಿ, ಧೈರ್ಯ, ಪಟ್ಟುಬಿಡದ ಛಲ ಎಲ್ಲವಕ್ಕೂ ಉದಾಹರಣೆಯಾಗಿ ಈ ಶತಮಾನದಲ್ಲಿ ನಮ್ಮ ಮುಂದಿದೆ ಈ ರೈತ ಹೋರಾಟ.

ದೆಹಲಿ ಪೊಲೀಸರು ಒಡ್ಡಿದ ಅಡೆತಡೆಗಳನ್ನು ದಾಟಿದ ರೈತರಿಗೆ ಪ್ರಕೃತಿ ಕೂಡ ತೀವ್ರ ಚಳಿ, ಮಳೆ ಮೂಲಕ ಸವಾಲೆಸೆದಿತ್ತು. ಈಗಲೂ ಬೇಸಿಗೆಯ ಬಿಸಿಲು ರೈತರನ್ನು ಸುಡುತ್ತಿದೆ. ಆದರೆ ರೈತರು ಮಾತ್ರ ಯಾವುದಕ್ಕೂ ಎದೆಗುಂದಿಲ್ಲ. ಅವರ ಧ್ಯೇಯವೊಂದೆ ಅದು ಮೂರು ಕಾನೂನುಗಳು ರದ್ದಾಗಬೇಕು ಮತ್ತು ಎಂಎಸ್‌ಪಿ ಖಾತ್ರಿಗಾಗಿ ಕಾನೂನು ಬರಬೇಕು. 100 ದಿನಗಳನ್ನೂ ಪೂರೈಸಿರುವ ಈ ಹೋರಾಟ ಮೊದಲ ದಿನದ ಉತ್ಸಾಹವನ್ನು ಇನ್ನು ಹಾಗೆ ಉಳಿಸಿಕೊಂಡಿರುವುದು ಆಶ್ಚರ್ಯವೇ ಸರಿ.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಬಿಜೆಪಿ ವಿರುದ್ಧ ಅಭಿಯಾನಕ್ಕೆ ಮುಂದಾದ ದೆಹಲಿ ರೈತ ಮುಖಂಡರು

ಮೊದ ಮೊದಲು ಬಯಲಿನಲ್ಲಿ ಆರಂಭವಾದ ವೇದಿಕೆಗಳು, ನಂತರ ದೊಡ್ಡ ದೊಡ್ಡ ವೇದಿಕೆಗಳಾಗಿ ಮಾರ್ಪಾಡಾದವು. ಎಲ್ಲಾ ರೀತಿಯ ವ್ಯವಸ್ಥೆ ಒದಗಿಸಲು ಸಂಘ ಸಂಸ್ಥೆಗಳು, ಗ್ರಾಮಗಳ ಜನರು ಮುಂದಾದರು. ಲಂಗರ್‌ಗಳ ಪಾತ್ರ ಪ್ರಮುಖವಾಯಿತು. ದೆಹಲಿಯ ಸಿಂಘು, ಟಿಕ್ರಿ, ಶಹಾಜಾನ್‌ಪುರ, ಗಾಝೀಪುರ, ಚಿಲ್ಲಾ, ಪಲ್ವಾಲ, ದಾರೂಹೇರ ಗಡಿಗಳಿಗೆ ಸೀಮಿತವಾಗಿದ್ದ ಈ ಹೋರಾಟ ಇಂದು ದೇಶಾದ್ಯಂತ ತನ್ನ ಬಾಹುಗಳನ್ನು ಚಾಚಿದೆ.

ಜಾತಿ, ಧರ್ಮ, ಲಿಂಗ, ಮೇಲು-ಕೀಳು, ಬಡವ-ಬಲ್ಲಿದ ಎಂಬ ಎಲ್ಲಾ ಭಾವನೆಗಳನ್ನು ಬದಿಗಿರಿಸಿ ಎಲ್ಲರನ್ನೂ ಒಂದು ಬೇಡಿಕೆಯಡಿಯಲ್ಲಿ ಹಿಡಿದಿಟ್ಟ ದಿಟ್ಟ ಹೋರಾಟವೆಂಬ ಖ್ಯಾತಿಗೆ ಸಾಕ್ಷಿಯಾಗಿದೆ. ತನ್ನ ಶಾಂತಿಯುತ ಪ್ರತಿಭಟನೆಯ ನೆಲೆಯಿಂದ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಭ್ರಾತೃತ್ವ-ಸೇವೆಗೆ ಹೊಸ ಅರ್ಥವನ್ನು ಈ ರೈತ ಹೋರಾಟ ನೀಡಿದೆ.

ದೆಹಲಿಯಲ್ಲಿ ಈ ಹೋರಾಟಕ್ಕೆ 100 ದಿನಗಳು ತುಂಬಿದ್ದರೇ, ಇತ್ತ ಪಂಜಾಬಿನಲ್ಲಿ ಈ ಹೋರಾಟಕ್ಕೆ 155 ದಿನಗಳು ತುಂಬಿವೆ. ಇದರ ಜೊತೆಗೆ ದೇಶದ ಹಲವು ರಾಜ್ಯಗಳಲ್ಲಿ ಈ ಹೋರಾಟ ಕಳೆಗಟ್ಟಿದೆ. ಮಹಾಪಂಚಾಯತ್‌ಗಳೆಂಬ ಹೊಸ ಕಲ್ಪನೆ ಇತರ ರಾಜ್ಯಗಳಲ್ಲೂ ಹರಿದಾಡುತ್ತಿದೆ. ತೆಲಂಗಾಣ, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಗುಜರಾತ್, ಬಿಹಾರ ಸೇರಿದಂತೆ ಹಲವು ಕಡೆ ಮಹಾಪಂಚಾಯತ್ ಮೂಲಕ ರೈತ ಹೋರಾಟಕ್ಕೆ ಹುಮ್ಮಸ್ಸು ತುಂಬಲಾಗುತ್ತಿದೆ.

ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!

ಕರ್ನಾಟಕದಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಎಂಎಸ್‌ಪಿ ದಿಲಾವೋ ಆಂದೋಲನ ಆರಂಭಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ರಾಜ್ಯಗಳಲ್ಲಿ ಎಂಎಸ್‌ಪಿಗಾಗಿ ಆಗ್ರಹಿಸಲಾಗುತ್ತದೆ. ಈ ಆಂದೋಲನಕ್ಕೆ ಕರ್ನಾಟಕದಿಂದ ಚಾಲನೆ ನೀಡಲಾಗಿದೆ.

ಇತ್ತ ತೀವ್ರ ಚಳಿಯನ್ನು ಕಂಡಿರುವ ರೈತರು ಈಗ ಬಿರು ಬೇಸಿಗೆಗೆ ಸಜ್ಜಾಗುತ್ತಿದ್ದಾರೆ. ತಮ್ಮ ಸುರಕ್ಷತೆಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಪ್ರಿಡ್ಜ್, ಕೂಲರ್‌ಗಳು, ಟ್ಯ್ರಾಲಿಯಲ್ಲಿ ಅಳವಡಿಸಲಾಗುವ ಫ್ಯಾನ್‌ಗಳು, ಟೇಬಲ್ ಫ್ಯಾನ್‌ಗಳು, ಎಸಿಗಳನ್ನು ಹಾಕಿಕೊಳ್ಳಲಾಗಿದೆ. ಕುಡಿಯುವ ನೀರು, ದಿನ ನಿತ್ಯದ ಬಳಕೆಯ ನೀರಿನ ಬವಣೆ ತಪ್ಪಿಸಲು ಪ್ರತಿಭಟನಾ ಸ್ಥಳದಲ್ಲಿ ಬೋರ್‌ವೇಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಟೆಂಟ್‌ಗಳು ಮತ್ತು ಶೆಡ್‌ಗಳಲ್ಲಿ 5 ನಿಮಿಷವೂ ಕೂರಲು ಸಾಧ್ಯವಿಲ್ಲದಂತಹ ಬಿಸಿಲು ಪ್ರತಿಭಟನಾಕಾರರನ್ನು ಕಾಡುತ್ತಿದ್ದು, ಬೇಸಿಗೆಯಲ್ಲಿ ಕುಳಿತುಕೊಳ್ಳಲು, ಮಲಗಲು ತಾತ್ಕಾಲಿಕ ವಸತಿಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.  ಟ್ಯ್ರಾಲಿಗಳಿಗೆ ಹೋಲಿಸಿದರೇ, ಈ ಚಪ್ಪರದ ವ್ಯವಸ್ಥೆ ಹೆಚ್ಚು ತಂಪಾಗಿರುತ್ತವೆ. ಈ ಮೂಲಕ ಸರ್ಕಾರಕ್ಕೆ ತಾವು ಇಲ್ಲಿಮದ ಎಂತಹ ಪರಿಸ್ಥಿತಿಯಲ್ಲು ವಾಪಸ್ ಹೋಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ರೈತರು ದೇಶದ್ರೋಹಿಗಳಲ್ಲ, ಕೆಂಪು ಕೋಟೆ ಘರ್ಷಣೆಗೆ ಕೇಂದ್ರದ ಪಿತೂರಿಯೇ ಕಾರಣ: ಕೇಜ್ರಿವಾಲ್

ರೈತ ಹೋರಾಟದಲ್ಲಿರುವವರು, ಹೋರಾಟವನ್ನು ಬೆಂಬಲಿಸುವವರು, ಪ್ರತಿಭಟನಾ ಸ್ಥಳದಲ್ಲಿರುವವರು ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳದೆ ಇಲ್ಲಿಂದ ನಾವು ಮನೆಗೆ ಹಿಂತಿರುಗುವುದಿಲ್ಲ ಎಂದಿದ್ದಾರೆ. ತಮಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವತ್ತ ಗಮನ ಹರಿಸಿರುವ ಇವರು ಯಾರು ಕೂಡ ವಾಪಸ್ ಹೋಗುವ ಬಗ್ಗೆ ಚಿಂತಿಸುತ್ತಿಲ್ಲ.

ಇಂದು ರೈತ ಹೋರಾಟಕ್ಕೆ 100 ದಿನ ತುಂಬಿದೆ. ಈ 100 ದಿನ 1,000 ದಿನವಾದರೂ ಇಲ್ಲಿಯೇ ಇದ್ದು ಹೋರಾಟ ಮುಂದುವರೆಸುವಂತಹ ಛಲ, ಉತ್ಸಾಹ ಎಲ್ಲಾ ಪ್ರತಿಭಟನಾ ನಿರತರಲ್ಲೂ ಕಂಡು ಬರುವುದು ಸಾಮಾನ್ಯ ಅಂಶವಾಗಿದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದು ಮತ್ತಷ್ಟು ಗಮನಾರ್ಹ ವಿಚಾರ.

ಇನ್ನು, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಮಾರ್ಚ್ 6 ಕ್ಕೆ 100 ದಿನ ತುಂಬಿದ ದಿನವನ್ನು ಆಚರಿಸುತ್ತಾರೆ. ಮಾರ್ಚ್ 6ರ ದಿನ ರೈತರು ಕುಂಡ್ಲಿ-ಮಾನೇಸರ್-ಪಾಲ್ವಾಲ್ ಎಕ್ಸ್‌ಪ್ರೆಸ್ ವೇಯನ್ನು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ವಿವಿಧ ಸ್ಥಳಗಳಲ್ಲಿ ನಿರ್ಬಂಧಿಸುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಯೋಗೇಂದ್ರ ಯಾದವ್ ಮಾಹಿತಿ ತಿಳಿಸಿದ್ದಾರೆ.


ಇದನ್ನೂ ಓದಿ: ಪ್ರಧಾನಿಗಳೇ ಎಂಎಸ್‌ಪಿ ಎಲ್ಲಿದೆ ತೋರಿಸಿ?: ಇಂದಿನಿಂದ ರಾಜ್ಯದಲ್ಲಿ ಆಂದೋಲನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...