ಫಿರೋಜ್ ಖಾನ್ ಅವರನ್ನು ಸಂಸ್ಕೃತ ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು, 12 ದಿನಗಳಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪಕುಲಪತಿ ಕಚೇರಿ ಹೊರಗೆ ಪ್ರತಿಭಟನೆ ನಡೆಸುತ್ತಿದೆ.

ಸಂಸ್ಕೃತ ಪ್ರಾಧ್ಯಾಪಕ ಫಿರೋಜ್ ಖಾನ್ ಅವರ ನೇಮಕವನ್ನು ವಿರೋಧಿಸಿ, ವಿದ್ಯಾರ್ಥಿಗಳ ಗುಂಪು ನಡೆಸುತ್ತಿರುವ ಪ್ರತಿಭಟನೆಯನ್ನು ನಟ ಮತ್ತು ಬಿಜೆಪಿಯ ಮಾಜಿ ಸಂಸದ ಪರೇಶ್ ರಾವಲ್ ಖಂಡಿಸಿದ್ದಾರೆ. ಫಿರೋಜ್ ಖಾನ್ ವಿರುದ್ಧ ವಿದ್ಯಾರ್ಥಿಗಳ ಗುಂಪಿನ ವಿರೋಧದಿಂದ ದಿಗ್ಭ್ರಮೆಗೊಂಡಿದ್ದೇನೆ. ಧರ್ಮಕ್ಕೂ, ಭಾಷೆಗೆ ಏನು ಸಂಬಂಧ..? ಪ್ರಾಧ್ಯಾಪಕ ಫಿರೋಜ್ ಖಾನ್, ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿಯನ್ನು ಸಂಸ್ಕೃತದಲ್ಲೇ ಮಾಡಿದ್ದಾರೆ ಎಂದು ಪರೇಶ್ ರಾವಲ್ ಟ್ವೀಟ್ ಮಾಡಿದ್ದಾರೆ.
Stunned by the protest against professor Feroz Khan !what language has to do with Religion!?!?!? Irony is professor Feroz has done his masters and PhD in Sanskrit !!! For Heavens sake stop this god damn idiocy !
— Paresh Rawal (@SirPareshRawal) November 19, 2019
ಮತ್ತೊಂದು ಟ್ವೀಟ್ ಮಾಡಿರುವ ಪರೇಶ್ ರಾವಲ್, ಇದೇ ತರ್ಕವನ್ನು ಸಂಗೀತದಲ್ಲೂ ಅಳವಡಿಸಿದ್ದಿದ್ದರೆ, ಶ್ರೇಷ್ಠ ಗಾಯಕ ದಿ. ಮೊಹಮ್ಮದ್ ರಫಿ ಅವರು ಯಾವುದೇ ಭಜನೆಗಳನ್ನು ಹಾಡಬಾರದು ಮತ್ತು ನೌಶಾದ್ ಸಾಬ್ ಗೀತೆ ರಚಿಸಬಾರದು ಎಂದಾಗಿರುತ್ತಿದ್ದರೆ ಹೇಗಿರುತ್ತಿತ್ತು..? ಎಂದು ಬರೆದಿದ್ದಾರೆ.
Stunned by the protest against professor Feroz Khan !what language has to do with Religion!?!?!? Irony is professor Feroz has done his masters and PhD in Sanskrit !!! For Heavens sake stop this god damn idiocy !
— Paresh Rawal (@SirPareshRawal) November 19, 2019
ಇನ್ನು ಉಪ ಪ್ರಾಧ್ಯಾಪಕ ಫಿರೋಜ್ ಖಾನ್ ಬೆನ್ನಿಗೆ ವಿಶ್ವವಿದ್ಯಾನಿಲಯದ ಆಡಳಿತ ವರ್ಗವೇ ನಿಂತಿದೆ. ಸಂಸ್ಕೃತದಲ್ಲಿ ಫಿರೋಜ್‌ಗೆ ಒಳ್ಳೆಯ ಜ್ಞಾನವಿದೆ. ಪಾಂಡಿತ್ಯ ಪಡೆದಿದ್ದಾರೆ. ಈ ಕೆಲಸಕ್ಕೆ ಫಿರೋಜ್ ಸೂಕ್ತ ಅಭ್ಯರ್ಥಿ. ನೇಮಕಾತಿ ವೇಳೆ ಎಲ್ಲಾ ಕಾರ್ಯ ವಿಧಾನಗಳನ್ನು ಅಚ್ಚುಕಟ್ಟಾಗಿ ಅನುಸರಿಸಿದ್ದಾರೆ ಎಂದು ಆಡಳಿತ ವರ್ಗ ಹೇಳಿದೆ.
ಆದರೆ ಇದ್ಯಾವುದನ್ನೂ ಗಮನಿಸದೇ, ಕೇವಲ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳು ಫಿರೋಜ್ ಖಾನ್ ಅವರನ್ನು ವಿರೋಧಿಸುತ್ತಿದೆ. ಅಲ್ಲದೇ ವಿಶ್ವವಿದ್ಯಾನಿಲಯವು ಕಳೆದ ವಾರದಲ್ಲಿ ಎರಡು ಹೇಳಿಕೆಗಳನ್ನು ಬಿಡುಗಡೆ ಮಾಡಿದೆ. ಶೈಕ್ಷಣಿಕ ವಿಚಾರದಲ್ಲಿ ಧರ್ಮವನ್ನು ಬದಿಗಿಟ್ಟು ನೋಡಬೇಕು. ಶಿಕ್ಷಣ ಮತ್ತು ಸಮಾನ ಶಿಕ್ಷಣದಲ್ಲಿ ಎಲ್ಲರಿಗೂ ಹಕ್ಕಿದೆ. ಸಮಾನ ಬೋಧನಾ ಅವಕಾಶಗಳಿವೆ ಎಂದು ಹೇಳಿದೆ. ಇನ್ನು ಫಿರೋಜ್ ನೇಮಕಾತಿ ನಂತರ ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಅವರ ಮೊಬೈಲ್‌ಗೆ ಅನೇಕ ಬಾರಿ ಕರೆ ಮಾಡಿದ್ರೂ, ಸಂದೇಶ ಕಳುಹಿಸಿದ್ರೂ ಉತ್ತರಿಸಿಲ್ಲ.
ಇತ್ತ ಫಿರೋಜ್ ಖಾನ್ ವಿರುದ್ಧ ಸಂಸ್ಕೃತ ವಿಷಯದ 30 ವಿದ್ಯಾರ್ಥಿಗಳ ಗುಂಪು 12 ದಿನಗಳಿಂದ ಉಪಕುಲಪತಿ ರಾಕೇಶ್ ಭಟ್ನಾಗರ್ ಅವರ ಕಚೇರಿಯ ಹೊರಗೆ ಕುಳಿತು ಪ್ರತಿಭಟನೆ ನಡೆಸುತ್ತಿದೆ. ತಮ್ಮ ಬೇಡಿಕೆ ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳಿಗೆ ಒಬ್ಬ ಪ್ರಾಧ್ಯಾಪಕರು ಪ್ರಚೋದನೆ ನೀಡುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಎಬಿವಿಪಿ, ಹಿಂದೂ ಮಹಾಸಭಾ, ಹಿಂದೂ ಮುಖ್ಯವಾಹಿನಿಯೊಂದಿಗೆ ಸಂಬಂಧಪಟ್ಟವರು. ಇವರಿಗೆ ಪ್ರಚೋದನೆ ನೀಡಲಾಗ್ತಿದೆ ಅಂತಾ ಪ್ರೊಫೆಸರ್ ಅಹಿರ್ವಾರ್ ಹೇಳಿದ್ದಾರೆ.
ಅಂದಹಾಗೆ, ಪ್ರೊಫೆಸರ್ ಖಾನ್ ಮೂಲತಃ ರಾಜಸ್ಥಾನ ಮೂಲದವರು. ಅವರ ತಂದೆ ಸಂಸ್ಕೃತ ಅಧ್ಯಯನ ಮಾಡಿದವರು. ಅವರ ಮನೆಗೆ ಹತ್ತಿರವಿರುವ ದೇವಾಲಯದಲ್ಲಿ ಭಜನೆಯನ್ನು ಹಾಡಿದ್ದಾರೆ ಎಂದಯ ಟೈಮ್ಸ್ ಆಫ್ ಇಂಡಿಯಾದ ವರದಿಯಲ್ಲಿ ತಿಳಿಸಿದೆ.


