Homeಅಂತರಾಷ್ಟ್ರೀಯಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

ಅಮೇರಿಕಾ: ಜೂನ್ ವೇಳೆಗೆ 2 ಲಕ್ಷ ಎಚ್ -1ಬಿ ವೀಸಾ ಉದ್ಯೋಗಿಗಳಿಗೆ ಅಪಾಯ

- Advertisement -
- Advertisement -

ಮಾನಸಿ ವಸವಡ ಅವರಿಗೆ ಅಮೇರಿಕಾದಲ್ಲಿ ಕಾನೂನುಬದ್ಧವಾಗಿ ಇರಲು ಇನ್ನು ಕೇವಲ ಮೂರು ವಾರಗಳಿಗಳಷ್ಟೇ ಇದೆ. 31 ವರ್ಷದ ಇವರು ನ್ಯೂಜೆರ್ಸಿಯ ಪ್ಯಾಸಾಯಿಕ್ ಕೌಂಟಿಯಲ್ಲಿ ಕಳೆದ ಎರಡು ವರ್ಷದಿಂದ ದಂತ ವೈದ್ಯರಾಗಿದ್ದಾರೆ. ಮಾರ್ಚ್ ತಿಂಗಳ ಮಧ್ಯದಿಂದ ಕೊರೊನಾ ಕಾರಣವಾಗಿ ಇವರ ದಂತಾಲಯ ಬಾಗಿಲು ಮುಚ್ಚಿದೆ. ಅಂದಿನಿಂದ ಅವರು ಯಾವುದೆ ಕೆಲಸ ಮಾಡದೇ ಪಾವತಿಯಿಲ್ಲದೇ ರಜೆಯಲ್ಲಿದ್ದಾರೆ.

ವಿಶೇಷ ಕೌಶಲ್ಯ ಹೊಂದಿರುವವರಿಗೆ ಅಮೇರಿಕ ನೀಡುವ ತಾತ್ಕಾಲಿಕ ವೀಸಾವಾದ ಎಚ್ -1ಬಿ ವೀಸಾದಲ್ಲಿ ಮಾನಸಿ ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಯ ಕಾನೂನಿನಂತೆ ಎಚ್ -1ಬಿ ವೀಸಾದಲ್ಲಿ ಇರುವವರು ಪಾವತಿಯಲ್ಲದೆ 60 ದಿನಗಳವರೆಗೆ ಮಾತ್ರ ದೇಶದಲ್ಲಿ ಉಳಿಯಬಹುದಾಗಿದೆ. ಮಾನಸಿ ಅವರ ಪತಿ ನಂದನ್ ಬುಚ್ ಕೂಡಾ ದಂತವೈದ್ಯರಾಗಿದ್ದು ಅವರು ಸಹ ಎಚ್ -1ಬಿ ವೀಸಾದಲ್ಲಿದ್ದಾರೆ. ಅವರ ವೀಸಾ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೆಚ್ಚುತ್ತಿರುವ ಆತಂಕಗಳ ನಡುವೆ ಈಗ ಇವರಿಬ್ಬರೂ ದಿನಕಳೆಯುತ್ತಿದ್ದಾರೆ.

ಭಾರತ ಈಗಾಗಲೇ ತನ್ನ ಗಡಿಗಳನ್ನು ಅನಿರ್ದಿಷ್ಟವಾಗಿ ಮುಚ್ಚಿರುವುದರಿಂದ, ದಂಪತಿಗಳು ಅಮೆರಿಕಾದಲ್ಲಿ ಉಳಿಯಲು ಸಾಧ್ಯವಿಲ್ಲದೆ ಹಾಗೂ ಭಾರತಕ್ಕೆ ಬರಲು ಸಾಧ್ಯವಾಗದ ಪರಿಸ್ಥತಿ ಶೀಘ್ರದಲ್ಲೇ ಬರಬಹುದು. ಅವರು ಯು.ಎಸ್. ವಿಶ್ವವಿದ್ಯಾಲಯದಲ್ಲಿ ದಂತ ಪದವಿ ಪಡೆಯುವುದಕ್ಕಾಗಿ 5,20,000 ಡಾಲರ್‌ ವಿದ್ಯಾರ್ಥಿ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಮರುಪಾವತಿ ಮಾಡಲು ಭಾರತದಲ್ಲಿ ಗಳಿಸುವ ಸಂಬಳದಿಂದ ಅಸಾಧ್ಯವಾಗಿದೆ. ಇದೆ ಒತ್ತಡದಿಂದ 31 ವರ್ಷದ ಬುಚ್ ತನ್ನ ತಲೆ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇಬ್ಬರೂ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಮಾನಸಿ ಹೇಳುವಂತೆ “ಇದೀಗ ಎಲ್ಲವೂ ನಿಜವಾಗಿಯೂ ಗೊಂದಲಮಯವಾಗಿದೆ ಮತ್ತು ಕತ್ತಲೆಯಾಗಿದೆ, ನಾವು ಎಲ್ಲಿಗೆ ಹೋಗುತ್ತೇವೆ ಎಂದು ನಮಗೆ ತಿಳಿದಿಲ್ಲ.” ಎಂದು ಹೇಳುತ್ತಾರೆ.

ವಾಷಿಂಗ್ಟನ್ ಡಿ.ಸಿ. ಮೂಲದ ವಲಸೆ ನೀತಿ ವಿಶ್ಲೇಷಕ ಜೆರೆಮಿ ನ್ಯೂಫೆಲ್ಡ್ ಅವರ ಪ್ರಕಾರ, ಯು.ಎಸ್.ನಲ್ಲಿ ಗ್ರೀನ್ ಕಾರ್ಡ್ ಬಯಸುವ ಎರಡುವರೆ ಲಕ್ಷ ಅತಿಥಿ ಕಾರ್ಮಿಕರು ಜೂನ್ ಅಂತ್ಯದ ವೇಳೆಗೆ ತಮ್ಮ ಕಾನೂನು ಸ್ಥಾನಮಾನವನ್ನು ಕಳೆದುಕೊಳ್ಳಬಹುದು. ಇವರಲ್ಲಿ ಎರಡು ಲಕ್ಷ ಜನರು ಎಚ್-1ಬಿ ವೀಸಾದಲ್ಲಿರುವವರಾಗಿದ್ದಾರೆ. ನಿವಾಸಿಗಳಾಗದ ಇನ್ನೂ ಸಾವಿರಾರು ಜನರರನ್ನು ಅವರ ಮನೆಗೆ ಮರಳಲು ಒತ್ತಾಯಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ. ತಂತ್ರಜ್ಞಾನದ ಉದ್ಯಮದಲ್ಲಿ ಕೆಲಸ ಮಾಡುವ ಮುಕ್ಕಾಲು ಭಾಗದಷ್ಟು ಜನರು ಎಚ್-1ಬಿ ವೀಸಾವನ್ನು ಹೊಂದಿದ್ದಾರೆ. ಆದರೆ ಇದದ ನಿಖರವಾದ ಹಂತಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಇರುತ್ತವೆ.

ಕಳೆದ ಎರಡು ತಿಂಗಳಲ್ಲಿ ಒಂದು ಕೋಟಿ ಅಮೆರಿಕನ್ನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಎಚ್-1ಬಿ ವೀಸಾಗಳನ್ನು ನಿರ್ದಿಷ್ಟ ಸ್ಥಳಕ್ಕೆ ಮತ್ತು ಉದ್ಯೋಗದಾತರಿಗೆ ಸ್ವೀಕರಿಸಲಾಗುತ್ತದೆ, ಅವರು ಸ್ವೀಕರಿಸುವವರು ಕನಿಷ್ಠ ವೇತನವನ್ನು ಪಾವತಿಸಲು ಬದ್ಧರಾಗಿರುತ್ತಾರೆ. ಈ ವೀಸಾ ಸ್ವೀಕರಿಸುವವರನ್ನು ಅನುಪಸ್ಥಿತಿಯ ರಜೆ ನೀಡುವುದು, ಅವರ ವೇತನವನ್ನು ಕಡಿಮೆ ಮಾಡುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದು ವೀಸಾ ನಿಯಮಗಳನ್ನು ಉಲ್ಲಂಘಿಸುತ್ತದೆ.

ಕೆಲಸದಿಂದ ವಜಾಗೊಂಡ ಎಚ್-1ಬಿ ಕಾರ್ಮಿಕರಿಗೆ ಮತ್ತೊಂದು ಉದ್ಯೋಗ ಹುಡುಕಲು, ಬೇರೆ ವೀಸಾಕ್ಕೆ ವರ್ಗಾಯಿಸಲು ಅಥವಾ ದೇಶವನ್ನು ತೊರೆಯಲು 60 ದಿನಗಳ ಕಾಲಾ ಅವಕಾಶವಿದೆ. ಅವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳದಿದ್ದರೂ ಸಹ, ಈ ಅವಧಿಯಲ್ಲಿ ತಮ್ಮ ವೀಸಾಗಳನ್ನು ನವೀಕರಿಸಲು ಸಾಧ್ಯವಾಗದಿದ್ದರೆ ಕಾರ್ಮಿಕರು ಸಂದಿಗ್ಧತೆಗೆ ಸಿಲುಕುತ್ತಾರೆ.

ವೀಸಾ ಬಿಕ್ಕಟ್ಟು “ಮಾನವ ಮಟ್ಟದಲ್ಲಿ ಮತ್ತು ಆರ್ಥಿಕ ಮಟ್ಟದಲ್ಲಿ ದುರಂತವನ್ನು ಉಂಟುಮಾಡುತ್ತಿದೆ” ಎಂದು ಒಬಾಮಾ ಆಡಳಿತದಲ್ಲಿ ತಂತ್ರಜ್ಞಾನ ಮತ್ತು ವಲಸೆ ನೀತಿಯಲ್ಲಿ ಕೆಲಸ ಮಾಡಿದ ಡೌಗ್ ರಾಂಡ್ ಹೇಳುತ್ತಾರೆ. ಇವರು ಬೌಂಡ್ಲೆಸ್ ಇಮಿಗ್ರೇಷನ್ ಇಂಕ್ ಎಂಬ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಈ ಕಂಪೆನಿ ಜನರಿಗೆ ವಲಸೆ ಹೋಗಲು ಸಹಾಯ ಮಾಡುತ್ತದೆ. ಎಚ್-1ಬಿ ಕಾರ್ಮಿಕರು ಸಾಮಾನ್ಯವಾಗಿ ಕುಟುಂಬಗಳನ್ನು ಹೊಂದಿ, ತಮ್ಮ ಇಡೀ ಜೀವನವನ್ನು ಮಕ್ಕಳೊಂದಿಗೆ ಅಮೆರಿಕಾದಲ್ಲಿ ಕಳೆದಿರಬಹುದು ಆದರೆ ಅಮೇರಿಕಾದಲ್ಲಿ ಉಳಿಯುವಂತೆ ತಮ್ಮ ಉದ್ಯೋಗಗಳನ್ನಷ್ಟೇ ಅವಲಂಬಿಸಿರುತ್ತಾರೆ. ಇದನ್ನು ರಾಂಡ್ “ಕೇವಲ ಅವ್ಯವಸ್ಥೆ” ಎಂದು ಹೇಳುತ್ತಾರೆ.

ಆಪಲ್, ಅಮೆಜಾನ್, ಫೇಸ್ಬುಕ್, ಗೂಗಲ್ ಮತ್ತು ಮೈಕ್ರೋಸಾಫ್ಟ್ ಅನ್ನು ಒಳಗೊಂಡ ಟೆಕ್‌ನೆಟ್‌ ಒಕ್ಕೂಟ ವಿದೇಶಿ ಮೂಲದ ಕಾರ್ಮಿಕರಿಗೆ ಪರಿಹಾರ ಕೋರಿ ಏಪ್ರಿಲ್ 17 ರಂದು ರಾಜ್ಯ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳಿಗೆ ಪತ್ರ ಕಳುಹಿಸಿ, ಕನಿಷ್ಠ ಸೆಪ್ಟೆಂಬರ್ 10 ರವರೆಗೆ ಕೆಲಸದ ಮುಕ್ತಾಯ ದಿನಾಂಕಗಳನ್ನು ವಿಳಂಬಗೊಳಿಸುವಂತೆ ಕೋರಿದೆ. “ಈ ಸಮಸ್ಯೆಗಳು ಲಕ್ಷಾಂತರ ಅಪೂರ್ಣ ಉದ್ಯೋಗಗಳಿಗೆ ಕಾರಣವಾಗುತ್ತವೆ ಮತ್ತು ಭಾರೀ ಋಣಾತ್ಮಕ ಆರ್ಥಿಕ ಪರಿಣಾಮಗಳನ್ನು ಬೀರುತ್ತವೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ದೂರದಿಂದ ಕೆಲಸ ಮಾಡುವ ಕಚೇರಿಗಳನ್ನು ಬೆಂಬಲಿಸಲು, ಟೆಲಿಹೆಲ್ತ್ ಸೇವೆಗಳನ್ನು ಒದಗಿಸಿ ವೈದ್ಯರಿಗೆ ಸಹಾಯ ಮಾಡಲು ಮತ್ತು ವಿದ್ಯಾರ್ಥಿಗಳು ಮನೆಯಲ್ಲಿಯೇ ಕಲಿಯಲು ಟೆಕ್ ಉದ್ಯಮವು ನಿರ್ಣಾಯಕವಾಗಿದೆ ಎಂದು ಟೆಕ್‌ನೆಟ್‌ ಫೆಡರಲ್ ನೀತಿ ಮತ್ತು ಸರ್ಕಾರಿ ಸಂಬಂಧಗಳ ಹಿರಿಯ ಉಪಾಧ್ಯಕ್ಷ ಅಲೆಕ್ಸ್ ಬರ್ಗೋಸ್ ಹೇಳಿದ್ದಾರೆ. “ಆಡಳಿತವು ತೆರಿಗೆ ಸಲ್ಲಿಸುವ ಗಡುವನ್ನು ವಿಸ್ತರಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ, ಹಾಗೆಯೆ ವೀಸಾ ಕಾರ್ಯಕ್ರಮಗಳಲ್ಲಿ ಕೂಡಾ ಇದೇ ರೀತಿಯ ವಿಸ್ತರೆಣೆ ಅರ್ಥಪೂರ್ಣವಾಗಿದೆ, ಯಾಕೆಂದರೆ ಇಲ್ಲಿ ಯಾರದ್ದೂ ಯಾವುದೇ ರೀತಿಯಲ್ಲಿ ತಪ್ಪಿಲ್ಲ” ಎಂದು ಅಲೆಕ್ಸ್ ಹೇಳಿದ್ದಾರೆ.

ಟೆಕ್‌ನೆಟ್‌ ಪತ್ರಕ್ಕೆ ಟ್ರಂಪ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಮೆರಿಕಾದ ಪೌರತ್ವ ಹಾಗೂ ವಲಸೆ ಸೇವೆಗಳ ವಕ್ತಾರರು, ಏಜೆನ್ಸಿ ವೀಸಾ ಗಡುವನ್ನು ವಿಸ್ತರಿಸುತ್ತಾರೆಯೇ ಎಂಬ ಬಗ್ಗೆ ಹೇಳಲು ನಿರಾಕರಿಸಿದರಾದರೂ, ಈ ಸಂದರ್ಭಗಳಲ್ಲಿ ಸಮಸ್ಯೆಯಾಗಿರುವ ಜನರಿಗೆ ವಿಶೇಷ ಬೆಂಬಲವನ್ನು ನೀಡಬಹುದು ಎಂದು ಹೇಳಿದರು.

ಅಮರಿಕಾ ಆಡಳಿತವು ವಲಸೆ ಹಾಗೂ ವಿದೇಶಿ ಮೂಲದ ಕಾರ್ಮಿಕರ ಬಗ್ಗೆ ಸತತ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿವೆ. 2019 ರಲ್ಲಿ ವಲಸೆ ರಹಿತ ವೀಸಾಗಳ ಸಂಖ್ಯೆ ಸತತ ನಾಲ್ಕನೇ ವರ್ಷಕ್ಕೆ ಇಳಿದಿದ್ದು, 2015 ರಲ್ಲಿ ಒಂದು ಕೋಟಿ ಒಂಬತ್ತು ಲಕ್ಷದಿಂದ 87 ಲಕ್ಷಕ್ಕೆ ಇಳಿದಿದೆ ಎಂದು ರಾಜ್ಯ ಇಲಾಖೆ ತಿಳಿಸಿದೆ. ಅಕ್ರಮ ಸ್ಥಿತಿಗೆ ಸಿಲುಕುವವರಿಗೆ ಮಾರ್ಗದರ್ಶನ ನೀಡುವ ರಾಯಭಾರ ಕಚೇರಿ ಹಾಗೂ ಕಾನ್ಸುಲೇಟ್ ಕಾರ್ಯಾಚರಣೆಗಳನ್ನು ಇಲಾಖೆಯು ಕಳೆದ ತಿಂಗಳು ಮುಚ್ಚಿತು. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಘಟಕವಾದ ಅಮೇರಿಕಾದ ಪೌರತ್ವ ಮತ್ತು ವಲಸೆ ಸೇವೆಗಳಲ್ಲಿನ ವೈಯಕ್ತಿಕ ಸೇವೆಗಳನ್ನು ಮಾರ್ಚ್ 18 ರಿಂದ ಅಮಾನತುಗೊಳಿಸಲಾಗಿದೆ ಹಾಗೂ ಇದು ಜೂನ್ 4 ರವರೆಗೆ ಪ್ರಾರಂಭವಾಗುವುದಿಲ್ಲ.

ಏಪ್ರಿಲ್ 20 ರಂದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಉದ್ಯೋಗಗಳನ್ನು ರಕ್ಷಿಸಲು ಎಲ್ಲಾ ವಲಸೆಗಳ ಮೇಲೆ ತಾತ್ಕಾಲಿಕ ನಿಷೇಧವನ್ನು ಯೋಜಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ; ಮರುದಿನ ಅಮೇರಿಕಾದ ಹೊರಗಿನಿಂದ ಜನರಿಗೆ 60 ದಿನಗಳವರೆಗೆ ಹಸಿರು ಕಾರ್ಡ್‌ಗಳನ್ನು ಪಡೆಯದಂತೆ ತಡೆಯುವ ಕಾರ್ಯನಿರ್ವಾಹಕ ಆದೇಶವನ್ನು ಘೋಷಿಸಿದರು. ಇದು ವಿದೇಶಿ ಮೂಲದ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಮತ್ತಷ್ಟು ಅಡ್ಡಿಯಾಗಿದೆ.

ಇಂತಹ ಕಠಿಣ ನಿರ್ಧಾರಗಳಿಂದಾಗಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಕಂಪೆನಿಗಳು ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿವೆ.

ಕೃಪೆ: ಎನ್ಡಿಟಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...