Homeಮುಖಪುಟತುಮಕೂರು: ಕೊರೊನಾದಿಂದ ವ್ಯಕ್ತಿ ಮೃತ, ಮತ್ತೊಂದು ಪ್ರದೇಶ ಸೀಲ್ ಡೌನ್

ತುಮಕೂರು: ಕೊರೊನಾದಿಂದ ವ್ಯಕ್ತಿ ಮೃತ, ಮತ್ತೊಂದು ಪ್ರದೇಶ ಸೀಲ್ ಡೌನ್

- Advertisement -
- Advertisement -

ವ್ಯಕ್ತಿಯೊಬ್ಬ ಮೃತಪಟ್ಟು ಮೂರು ದಿನಗಳ ನಂತರ ಶವಸಂಸ್ಕಾರ ನಡೆಸಿರುವ ಪ್ರಕರಣವೊಂದು ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯಲ್ಲಿ ಕೊರೊನ ವೈರಸ್ ಇರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಇದರಿಂದಾಗಿ ತುಮಕೂರು ನಗರದ ಮತ್ತೊಂದು ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕಳೆದ ವಾರ ಪಿ.ಎಚ್. ಕಾಲೋನಿ ಸೀಲ್ ಡೌನ್ ಮಾಡಿದ್ದರೆ ಇಂದು ಜಯಪುರದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಗೆ ಒಳಪಡಿಸಲಾಗಿದೆ.

ತುಮಕೂರಿನ ಜಯಪುರದಲ್ಲಿ ವ್ಯಕ್ತಿಯೊಬ್ಬ ಮೂರು ದಿನದ ಹಿಂದಯೇ ಮೃತಪಟ್ಟಿದ್ದು, ಮೃತ ವ್ಯಕ್ತಿ ಹೌಸಿಂಗ್ ಬೋರ್ಡ್‌ನಲ್ಲಿ ವಾಸವಿದ್ದರು. ಅವರಿಗೆ ಕೊರೊನ ಸೋಂಕು ಇರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಮೃತದೇಹದ ಸಂಸ್ಕಾರ ನಡೆಸದೆ ಇರಿಸಿಕೊಳ್ಳಲಾಗಿತ್ತು. ಇಂದು ಕೊರೊನಾ ಸೋಂಕು ಇರುವುದು ದೃಡಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೌಸಿಂಗ್ ಬೋರ್ಡ್ ಮತ್ತು ಜಯಪುರವನ್ನು ಸೀಲ್ ಡೌನ್ ಮಾಡಲಾಗಿದೆ.

ಸ್ಥಳಕ್ಕೆ ತೆರಳಿದ ಪೊಲೀಸರು ಜಯಪುರಕ್ಕೆ ಪ್ರವೇಶಿಸುವ ಪ್ರಮುಖ ರಸ್ತೆಯನ್ನು ಬ್ಯಾರಿಕೇಡ್‌ಗಳನ್ನು ಹಾಕಿ ಸೀಲ್ ಡೌನ್ ಮಾಡಿದ್ದಾರೆ. ಹೌಸಿಂಗ್ ಬೋರ್ಡ್‌‌‌‌ನಲ್ಲಿ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ಕುಟುಂಬಗಳ ಸದಸ್ಯರ ರಕ್ತ, ಗಂಟಲುದ್ರವ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಶಿರಾ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.

ತುಮಕೂರು ನಗರದಲ್ಲಿ ಇದುವರೆಗೆ ಮೂರು ಕೊರೊನಾ ಸೋಂಕಿತರು ಕಂಡುಬಂದಿದ್ದು, ಅವರ ಪೈಕಿ ಒಬ್ಬರು ಮೃತರಾಗಿದ್ದರು. ಇನ್ನೊಬ್ಬರು ಗುಣಮುಖನಾಗಿದ್ದರು. ಪಿ.ಎಚ್.ಕಾಲೋನಿಯಲ್ಲಿ ವಶಕ್ಕೆ ಪಡೆದಿರುವ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ನಲ್ಲಿ ಇರಿಸಿದ್ದು ತೀವ್ರ ನಿವಾವಹಿಸಲಾಗಿದೆ. ತುಮಕೂರು ನಗರದಲ್ಲಿ ಇಬ್ಬರು ಮೃತಪಟ್ಟಿದ್ದು ಆರಂಜ್ ವಲಯ ಇದ್ದುದು ಇದೀಗ ಹಳದಿ ವಲಯವೆಂದು ಗುರುತಿಸಲಾಗಿದೆ.


ಇದನ್ನೂ ಓದಿ: ತುಮಕೂರು: ಗ್ಯಾಸ್ ಸೋರಿಕೆ ಭಯದಿಂದ ಗ್ರಾಮ ತೊರೆಯುತ್ತಿರುವ ಜನರು


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...