Homeಮುಖಪುಟ3000km ಶವ ಸಾಗಿಸಿದ ತಮಿಳುನಾಡಿನ ಆಂಬುಲೆನ್ಸ್ ಚಾಲಕರಿಗೆ ಅಭಿನಂದನೆ ಸಲ್ಲಿಸಿದ ಮಿಜೋರಾಂ ಜನತೆ.

3000km ಶವ ಸಾಗಿಸಿದ ತಮಿಳುನಾಡಿನ ಆಂಬುಲೆನ್ಸ್ ಚಾಲಕರಿಗೆ ಅಭಿನಂದನೆ ಸಲ್ಲಿಸಿದ ಮಿಜೋರಾಂ ಜನತೆ.

- Advertisement -
- Advertisement -

ಮಿಜೋರಾಂ ಜನತೆ ತಮಿಳುನಾಡಿನ ಇಬ್ಬರು ಆಂಬ್ಯುಲೆನ್ಸ್ ಚಾಲಕರಿಗೆ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲಾಗಿದೆ.

ಖಾಸಗಿ ಸಂಸ್ಥೆಯ ಉದ್ಯೋಗಿಯಾದ ಮಿಜೋರಾಂನ ವಿವಿಯನ್ ಲಾಲ್ರೆಮ್‌ಸಂಗಾ (28) ಏಪ್ರಿಲ್ 23 ರಂದು ಚೆನ್ನೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತದೇಹವನ್ನು ತಮಿಳುನಾಡಿನಿಂದ 3,000 ಕಿಲೋಮೀಟರ್ ದೂರದ ಮಿಜೋರಾಂಗೆ ತಲುಪಿಸಿದ್ದಕ್ಕಾಗಿ ಮಿಜೋ ಜನತೆ ತಮಿಳುನಾಡಿನ ಚಾಲಕರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಮಿಜೋರಾಂ ಮುಖ್ಯಮಂತ್ರಿ ಟ್ವೀಟ್ ಮಾಡಿ “ನಿಜ ಜೀವನದ ಹೀರೋಗಳನ್ನು ಮಿಜೋರಾಂ ಸ್ವಾಗತಿಸಿದ್ದು ನೋಡಿ, ಯಾಕೆಂದರೆ ನಾವು ಮಾನವೀಯತೆ ಹಾಗೂ ರಾಷ್ಟ್ರೀಯತೆಯಲ್ಲಿ ನಂಬಿಕೆ ಹೊಂದಿದ್ದೇವೆ, ತಮಿಳುನಾಡು ಮುಖ್ಯಮಂತ್ರಿಗಳಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಮಿಜೋ ಮುಖ್ಯಮಂತ್ರಿ “3000 ಮೈಲುಗಳಷ್ಟು ಕಷ್ಟಗಳನ್ನು ಸಹಿಸಿ ಹಾಗೂ ಯಾವುದೇ ವಿಶ್ರಾಂತಿ ಪಡೆಯದೆ ಶವವನ್ನು ತಲುಪಿಸಿದ ತಮಿಳುನಾಡಿನ ಜಯಂತ್‌ಜಿರನ್ ಮತ್ತು ಚಿನ್ನಥಂಬಿಯವರಿಗೆ ಮಿಜೋರಾಂ ಸೆಲ್ಯೂಟ್ ಮಾಡುತ್ತದೆ” ಎಂದು ಮಿಜೋರಾಂ ಮುಖ್ಯಮಂತ್ರಿ ಟ್ವೀಟಿಸಿದ್ದಾರೆ.

ಇಬ್ಬರು ಆಂಬ್ಯುಲೆನ್ಸ್ ಚಾಲಕರಾದ, ಜಯಂತ್‌ಜಿರನ್ ಮತ್ತು ಚಿನ್ನಥಂಬಿ ಮೃತನ ಸ್ನೇಹಿತ ರಾಫೆಲ್ ಎವಿಎಲ್ ಮಲ್ಚನ್‌ಹಿಮಾ ಇದ್ದರು ಇಡೀ ಯಾತ್ರೆಯಲ್ಲಿ ಇದ್ದರು.

ಮೂವರು ಚೆನ್ನೈನಿಂದ ಹೊರಟು ಮೂರು ದಿನಗಳ ನಂತರ ಮಿಜೋರಾಂಗೆ ತಲುಪಿದರು. ಸುಮಾರು 84 ಗಂಟೆಗಳ ಚಾಲನೆಯ ನಂತರ ಮಿಜೊ ರಾಜಧಾನಿಯನ್ನು ತಲುಪಿದ್ದರು.

ಆಂಬ್ಯುಲೆನ್ಸ್ ವೆಚ್ಚಗಳು ಹಾಗೂ ಸಾಂಪ್ರದಾಯಿಕ ಮಿಜೊ ಬಟ್ಟೆಗಳ ಜೊತೆಗಳನ್ನು ರಾಜ್ಯ ಸಚಿವರಾದ ಡಾ. ಕೆ. ಬೀಚುವಾ ಚಾಲಕರಿಗೆ ನೀಡಿದರು.

ಮಿಜೋರಾಂನಲ್ಲಿ ಇದುವರೆಗೆ ಕೇವಲ ಒಂದು ಕೊರೊನಾ ವೈರಸ್ ಪ್ರಕರಣ ವರದಿಯಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಟ್ಟು ಐದು ರಾಜ್ಯಗಳು ಕೊರೊನಾ ವೈರಸ್ ಮುಕ್ತವಾಗಿದೆ. ಸಿಕ್ಕಿಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರದ ನಂತರ ಇಂದು ತ್ರಿಪುರ ಕೊರೊನಾ ಮುಕ್ತ ರಾಜ್ಯವಾಗಿ ಈ ಪ್ರದೇಶದ ಐದನೇ ರಾಜ್ಯವಾಗಿ ಘೋಷಿಸಲಾಯಿತು.


ಇದನ್ನೂ ಓದಿ: ಕೊರೊನಾ ಮುಕ್ತ ರಾಜ್ಯವಾಗಿ ಗೋವಾ ಘೋಷಣೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ನೆರವಿಗೆ ನಿಲ್ಲುವಂತೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ...