Homeಮುಖಪುಟಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನಟ ಚಿರಂಜೀವಿ ಸೇರಿದಂತೆ 132 ಜನರಿಗೆ ಪದ್ಮ ಪ್ರಶಸ್ತಿ

- Advertisement -
- Advertisement -

ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಈ ವರ್ಷದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಈ ವರ್ಷ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ 132 ಹೆಸರುಗಳಿವೆ. ಈ ಪಟ್ಟಿಯು 5 ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 110 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 30 ಮಹಿಳೆಯರು, ಅನಿವಾಸಿ ಭಾರತೀಯ (NRI), ಭಾರತೀಯ ಮೂಲದ ವ್ಯಕ್ತಿ (PIO), ಭಾರತದ ಸಾಗರೋತ್ತರ ಪೌರತ್ವ (OCI) ಮತ್ತು ಒಂಬತ್ತು ಮರಣೋತ್ತರ ಪ್ರಶಸ್ತಿ ಪುರಸ್ಕೃತರ ವಿಭಾಗಗಳಿಂದ 8 ವ್ಯಕ್ತಿಗಳನ್ನು ಒಳಗೊಂಡಿದೆ.

ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಹಿರಿಯ ನಟ ಚಿರಂಜೀವಿ, ಇತ್ತೀಚೆಗೆ ನಿಧನರಾದ ತಮಿಳು ನಟ ವಿಜಯಕಾಂತ್, ಗಾಯಕಿ ಉಷಾ ಉತ್ತುಪ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಪ್ರಮುಖರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಪದ್ಮ ಪ್ರಶಸ್ತಿಗಳನ್ನು ಪ್ರತಿ ವರ್ಷ ಪ್ರಧಾನ ಮಂತ್ರಿಗಳು ರಚಿಸುವ ಪದ್ಮ ಪ್ರಶಸ್ತಿ ಸಮಿತಿಯು ಮಾಡಿದ ಶಿಫಾರಸುಗಳ ಮೇಲೆ ನೀಡಲಾಗುತ್ತದೆ. ಪದ್ಮ ಪ್ರಶಸ್ತಿ ಸಮಿತಿಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ. ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ. ಸಮಿತಿಯ ಶಿಫಾರಸುಗಳನ್ನು ಅನುಮೋದನೆಗಾಗಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ.

ಪದ್ಮ ಪ್ರಶಸ್ತಿಗಳು 2024 ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ:

ಪದ್ಮವಿಭೂಷಣ

1. ವೈಜಯಂತಿಮಾಲಾ ಬಾಲಿ
2. ಕೊನಿಡೇಲ ಚಿರಂಜೀವಿ
3. ಎಂ ವೆಂಕಯ್ಯ ನಾಯ್ಡು
4. ಬಿಂದೇಶ್ವರ ಪಾಠಕ್ (ಮರಣೋತ್ತರ)
5. ಪದ್ಮಾ ಸುಬ್ರಹ್ಮಣ್ಯಂ

ಪದ್ಮಭೂಷಣ

1. ಎಂ ಫಾತಿಮಾ ಬೀವಿ (ಮರಣೋತ್ತರ)
2. ಹಾರ್ಮುಸ್ಜಿ ಎನ್ ಕಾಮಾ
3. ಮಿಥುನ್ ಚಕ್ರವರ್ತಿ
4. ಸೀತಾರಾಮ್ ಜಿಂದಾಲ್
5. ಯುವ ಲಿಯು
6. ಅಶ್ವಿನ್ ಬಾಲಚಂದ್ ಮೆಹ್ತಾ
7. ಸತ್ಯಬ್ರತ ಮುಖರ್ಜಿ (ಮರಣೋತ್ತರ)
8. ರಾಮ್ ನಾಯಕ್
9. ತೇಜಸ್ ಮಧುಸೂದನ್ ಪಟೇಲ್
10. ಓಲಂಚೇರಿ ರಾಜಗೋಪಾಲ್
11. ದತ್ತಾತ್ರೇ ಅಂಬಾದಾಸ್ ಮಾಯಾಲೂ ಅಲಿಯಾಸ್ ರಾಜ್ದತ್
12. ಟೋಗ್ಡಾನ್ ರಿಂಪೋಚೆ (ಮರಣೋತ್ತರ)
13. ಪ್ಯಾರೇಲಾಲ್ ಶರ್ಮಾ
14. ಚಂದ್ರೇಶ್ವರ ಪ್ರಸಾದ್ ಠಾಕೂರ್
15. ಉಷಾ ಉತ್ತುಪ್
16. ವಿಜಯಕಾಂತ್ (ಮರಣೋತ್ತರ)
17. ಕುಂದನ್ ವ್ಯಾಸ್

ಪದ್ಮಶ್ರೀ

1. ಖಲೀಲ್ ಅಹಮದ್
2. ಬದ್ರಪ್ಪನ ಎಂ
3. ಕಾಲೂರಮ್ ಬಮಾನಿಯಾ
4. ರೆಜ್ವಾನಾ ಚೌಧರಿ ಬನ್ಯಾ
5. ನಸೀಮ್ ಬಾನೋ
6. ರಾಮಲಾಲ್ ಬರೆತ್
7. ಗೀತಾ ರಾಯ್ ಬರ್ಮನ್
8. ಪರ್ಬತಿ ಬರುವಾ
9. ಸರ್ಬೇಶ್ವರ ಬಾಸುಮತರಿ
10. ಸೋಮ್ ದತ್ತ್ ಬಟ್ಟು
11. ತಕ್ದಿರಾ ಬೇಗಂ
12. ಸತ್ಯನಾರಾಯಣ ಬೇಲೇರಿ
13. ದ್ರೋಣ ಭೂಯಾನ್
14. ಅಶೋಕ್ ಕುಮಾರ್ ಬಿಸ್ವಾಸ್
15. ರೋಹನ್ ಮಚಂಡ ಬೋಪಣ್ಣ
16. ಸ್ಮೃತಿ ರೇಖಾ ಚಕ್ಮಾ
17. ನಾರಾಯಣ ಚಕ್ರವರ್ತಿ
18. ಎ ವೇಲು ಆನಂದ ಚಾರಿ
19. ರಾಮ್ ಚೇತ್ ಚೌಧರಿ
20. ಕೆ ಚೆಲ್ಲಮ್ಮಾಳ್
21. ಜೋಷ್ನಾ ಚಿನಪ್ಪ
22. ಷಾರ್ಲೆಟ್ ಚಾಪಿನ್
23. ರಘುವೀರ್ ಚೌಧರಿ
24. ಜೋ ಡಿ ಕ್ರೂಜ್
25. ಗುಲಾಂ ನಬಿ ದಾರ್
26. ಚಿತ್ತ ರಂಜನ್ ದೆಬ್ಬರ್ಮ
27. ಉದಯ್ ವಿಶ್ವನಾಥ್ ದೇಶಪಾಂಡೆ
28. ಪ್ರೇಮಾ ಧನರಾಜ್
29. ರಾಧಾ ಕ್ರಿಶನ್ ಧೀಮಾನ್
30. ಮನೋಹರ್ ಕೃಷ್ಣ ಡೋಲ್
31. ಪಿಯರೆ ಸಿಲ್ವೈನ್ ಫಿಲಿಯೋಜಾಟ್
32. ಮಹಾಬೀರ್ ಸಿಂಗ್ ಗುಡ್ಡು
33. ಅನುಪಮಾ ಹೊಸ್ಕೆರೆ
34. ಯಾಜ್ಡಿ ಮಾನೇಕ್ಷಾ ಇಟಾಲಿಯಾ
35. ರಾಜಾರಾಂ ಜೈನ್
36. ಜಾಂಕಿಲಾಲ್
37. ರತನ್ ಕಹಾರ್
38. ಯಶವಂತ್ ಸಿಂಗ್ ಕಥೋಚ್
39. ಜಹೀರ್ I ಕಾಜಿ
40. ಗೌರವ್ ಖನ್ನಾ
41. ಸುರೇಂದ್ರ ಕಿಶೋರ್
42. ದಾಸರಿ ಕೊಂಡಪ್ಪ
43. ಶ್ರೀಧರ್ ಮಾಕಂ ಕೃಷ್ಣಮೂರ್ತಿ
44. .ಯಾನುಂಗ್ ಜಮೋಹ್ ಲೆಗೊ
45. ಜೋರ್ಡಾನ್ ಲೆಪ್ಚಾ
46. ಸತೇಂದ್ರ ಸಿಂಗ್ ಲೋಹಿಯಾ
47. ಬಿನೋದ್ ಮಹಾರಾಣಾ
48. ಪೂರ್ಣಿಮಾ ಮಹತೋ
49. ಉಮಾ ಮಹೇಶ್ವರಿ ಡಿ
50. ದುಖು ಮಾಝಿ
51. ರಾಮ್ ಕುಮಾರ್ ಮಲ್ಲಿಕ್
52. ಹೇಮಚಂದ್ ಮಾಂಝಿ
53. ಚಂದ್ರಶೇಖರ್ ಮಹದೇವರಾವ್ ಮೇಶ್ರಮ್
54. ಸುರೇಂದ್ರ ಮೋಹನ್ ಮಿಶ್ರಾ (ಮರಣೋತ್ತರ)
55. ಅಲಿ ಮೊಹಮ್ಮದ್ ಮತ್ತು ಶ್ರೀ ಘನಿ ಮೊಹಮ್ಮದ್ (ಜೋಡಿ)
56. ಕಲ್ಪನಾ ಮೊರ್ಪಾರಿಯಾ
57. ಚಾಮಿ ಮುರ್ಮು
58. ಸಸಿಂದ್ರನ್ ಮುತ್ತುವೆಲ್
59. ಜಿ ನಾಚಿಯಾರ್
60. ಕಿರಣ್ ನಾಡರ್
61. ಪಕರವೂರ್ ಚಿತ್ರನ್ ನಂಬೂದಿರಿಪಾಡ್ (ಮರಣೋತ್ತರ)
62. ನಾರಾಯಣನ್ ಇ ಪಿ
63. ಶೈಲೇಶ್ ನಾಯಕ್
64. ಹರೀಶ್ ನಾಯಕ್ (ಮರಣೋತ್ತರ)
65. ಫ್ರೆಡ್ ನೆಗ್ರಿಟ್
66. ಹರಿ ಓಂ
67. ಭಗಬತ್ ಪಧಾನ್
68. ಸನಾತನ ರುದ್ರ ಪಾಲ್
69. ಶಂಕರ ಬಾಬಾ ಪುಂಡ್ಲಿಕರಾವ್ ಪಾಪಲ್ಕರ್
70. ರಾಧೆ ಶ್ಯಾಮ್ ಪರೀಕ್
71. ದಯಾಳ್ ಮಾವ್ಜಿಭಾಯಿ ಪರ್ಮಾರ್
72. ಬಿನೋದ್ ಕುಮಾರ್ ಪಸಾಯತ್
73. ಸಿಲ್ಬಿ ಪಾಸಾಹ್
74. ಶಾಂತಿ ದೇವಿ ಪಾಸ್ವಾನ್ ಮತ್ತು ಶ್ರೀ ಶಿವನ್ ಪಾಸ್ವಾನ್ (ಜೋಡಿ)
75. ಸಂಜಯ್ ಅನಂತ ಪಾಟೀಲ್
76. ಮುನಿ ನಾರಾಯಣ ಪ್ರಸಾದ್
77. ಕೆ ಎಸ್ ರಾಜಣ್ಣ
78. ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್
79. ಭಗವತಿಲಾಲ್ ರಾಜಪುರೋಹಿತ್
80. ರೊಮಾಲೋ ರಾಮ್
81. ನವಜೀವನ್ ರಸ್ತೋಗಿ
82. ನಿರ್ಮಲ್ ರಿಷಿ
83. ಪ್ರಾಣ್ ಸಬರ್ವಾಲ್
84. ಗದ್ದಂ ಸಮ್ಮಯ್ಯ
85. ಸಂಗತಂಕಿಮ
86. ಮಚಿಹನ್ ಸಸಾ
87. ಓಂಪ್ರಕಾಶ್ ಶರ್ಮಾ
88. ಏಕಲಬ್ಯ ಶರ್ಮಾ
89. ರಾಮ್ ಚಂದರ್ ಸಿಹಾಗ್
90. ಹರ್ಬಿಂದರ್ ಸಿಂಗ್
91. ಗುರ್ವಿಂದರ್ ಸಿಂಗ್
92. ಗೋದಾವರಿ ಸಿಂಗ್
93. ರವಿ ಪ್ರಕಾಶ್ ಸಿಂಗ್
94. ಶೇಷಂಪಟ್ಟಿ ಟಿ ಶಿವಲಿಂಗಂ
95. ಸೋಮಣ್ಣ
96. ಕೇತಾವತ್ ಸೋಮಲಾಲ್
97. ಶಶಿ ಸೋನಿ
98. ಊರ್ಮಿಳಾ ಶ್ರೀವಾಸ್ತವ
99. ನೇಪಾಳ ಚಂದ್ರ ಸೂತ್ರಧರ್ (ಮರಣೋತ್ತರ)
100. ಗೋಪಿನಾಥ್ ಸ್ವೈನ್
101. ಲಕ್ಷ್ಮಣ್ ಭಟ್ ತೈಲಂಗ್
102. ಮಾಯಾ ಟಂಡನ್
103. ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ ತಂಪುರಟ್ಟಿ
104. ಜಗದೀಶ್ ಲಾಭಶಂಕರ್ ತ್ರಿವೇದಿ
105. ಸಾನೋ ವಮುಜೊ
106. ಬಾಲಕೃಷ್ಣನ್ ಸದನಂ ಪುತಿಯ ವೀಟಿಲ್
107. ಕುರೆಲ್ಲ ವಿಟ್ಟಲಾಚಾರ್ಯ
108. ಕಿರಣ್ ವ್ಯಾಸ್
109. ಜಾಗೇಶ್ವರ್ ಯಾದವ್
110. ಬಾಬು ರಾಮ್ ಯಾದವ್

ಇದನ್ನೂ ಓದಿ; ಪಿ ಬಿ ವರಾಳೆ ಪ್ರಮಾಣ ವಚನ: ಸುಪ್ರೀಂನಲ್ಲಿ ಮೂರಕ್ಕೇರಿದ ದಲಿತ ಸಮುದಾಯದ ನ್ಯಾಯಮೂರ್ತಿಗಳ ಸಂಖ್ಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...