Homeಅಂತರಾಷ್ಟ್ರೀಯಪಾಕಿಸ್ತಾನ: ಕರಾಚಿಯ ಕಟ್ಟಡದಲ್ಲಿ ಸ್ಫೋಟ, 3 ಸಾವು, 15 ಮಂದಿಗೆ ಗಾಯ

ಪಾಕಿಸ್ತಾನ: ಕರಾಚಿಯ ಕಟ್ಟಡದಲ್ಲಿ ಸ್ಫೋಟ, 3 ಸಾವು, 15 ಮಂದಿಗೆ ಗಾಯ

ಸ್ಫೋಟದ ಕಾರಣವನ್ನು ಪೊಲೀಸರು ನಿಖರವಾಗಿ ಪತ್ತೆ ಮಾಡಿಲ್ಲ ಆದರೆ "ಸಿಲಿಂಡರ್ ಸ್ಫೋಟದಂತೆ ಇದೆ" ಎಂದು ಮುಬಿನಾ ಟೌನ್ ಪೊಲೀಸರು ಶಂಕಿಸಿರುವುದಾಗಿ ವರದಿ ಉಲ್ಲೇಖಿಸಿದೆ. 

- Advertisement -
- Advertisement -

ಪಾಕಿಸ್ತಾನದ ಕರಾಚಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಪಟೇಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಗುಲ್ಶನ್-ಇ-ಇಕ್ಬಾಲ್‌ನ ಕರಾಚಿ ವಿಶ್ವವಿದ್ಯಾಲಯ ಮಸ್ಕನ್ ಗೇಟ್ ಎದುರಿನ ಕಟ್ಟಡವೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸುತ್ತಮುತ್ತ ಪ್ರದೇಶವನ್ನ ಸುತ್ತವರಿದು ತೀವ್ರ ತಪಾಸಣೆ ನಡೆಸುತ್ತಿದ್ದಾರೆ ಅಂತಾ ವರದಿಯಾಗಿದೆ.

ಸ್ಫೋಟದ ಕಾರಣವನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ ಆದರೆ “ಸಿಲಿಂಡರ್ ಸ್ಫೋಟದಂತೆ ಇದೆ” ಎಂದು ಮುಬಿನಾ ಟೌನ್ ಪೊಲೀಸರು ಶಂಕಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಎರಡನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ನಾಲ್ಕು ಅಂತಸ್ತಿನ  ಕಟ್ಟಡದಲ್ಲಿ ಮಾತ್ರವಲ್ಲ, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ಅಲ್ಲದೇ ಛಿದ್ರಗೊಂಡ ಅವಶೇಷಗಳು ಅಕ್ಕ- ಪಕ್ಕದ ರಸ್ತೆಗಳಿಗೆ ಬಂದು ಬಿದ್ದಿದ್ದು, ರಸ್ತೆಯಲ್ಲಿದ್ದ ಹಲವು ವಾಹನಗಳಿಗೂ ಹಾನಿಯಾಗಿದೆ ಎಂದಿದ್ದಾರೆ.

ಮಂಗಳವಾರ ಕೂಡ ಕರಾಚಿಯ ಶರೀನ್ ಜಿನ್ನಾ ಕಾಲೊನಿಯ ಬಸ್‌ ಟರ್ಮಿನಲ್‌ ಪ್ರವೇಶ ದ್ವಾರದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು.‌ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದರು.


ಇದನ್ನೂ ಓದಿ: ಕೊರೊನಾ ನಿರ್ವಹಣೆಯಲ್ಲಿ ಭಾರತಕ್ಕಿಂತ ಪಾಕ್, ಅಫ್ಘಾನಿಸ್ತಾನ ಉತ್ತಮ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...