Homeಅಂತರಾಷ್ಟ್ರೀಯಪ್ಯಾಲೆಸ್ಟೈನ್ v/s ಇಸ್ರೇಲ್ ಸಂಘರ್ಷ: ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಹೀಗಿದೆ..

ಪ್ಯಾಲೆಸ್ಟೈನ್ v/s ಇಸ್ರೇಲ್ ಸಂಘರ್ಷ: ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆ ಹೀಗಿದೆ..

ಇಸ್ರೇಲ್ ಪ್ರಧಾನಿ ತಮ್ಮನ್ನು ಬೆಂಬಲಿಸಿದ ರಾಷ್ಟ್ರಗಳ ಧ್ವಜಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಭಾರತದ ಧ್ವಜ ಇಲ್ಲ....

- Advertisement -
- Advertisement -

ಇಸ್ರೇಲ್ ತನ್ನ ಮತ್ತೆ ಪ್ಯಾಲೆಸ್ಟೈನ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಭಾರತದ ಬಲಪಂಥೀಯರು ಇಸ್ರೇಲ್‌ನ ಕ್ರೂರತೆಯನ್ನು ಸಮರ್ಥಿಸಿಕೊಂಡು ಅದರ ಪರ ಹ್ಯಾಷ್‌ಟ್ಯಾಗ್ ಅಭಿಯಾನ ಮಾಡುತ್ತಾರೆ. (ಬಿಜೆಪಿ ಯುವ ವಿಭಾಗದ ಅಧ್ಯಕ್ಷ ತೇಜಸ್ವಿ ಸೂರ್ಯ ಇದರ ಮುಂಚೂಣಿಯಲ್ಲಿ ಇದ್ದಾರೆ). ಪ್ಯಾಲೆಸ್ಟೈನ್‌ ನಾಗರಿಕರ ಮೇಲಿನ ಕ್ರೂರ ದಾಳಿ, ಕಟ್ಟಡಗಳ ಧ್ವಂಸವನ್ನು ಸಂಭ್ರಮಿಸುತ್ತಿದ್ದಾರೆ.

ಅನಿವಾರ್ಯ ಎಂಬಂತೆ, ಸರ್ಕಾರ ಭಾರತದ ಪರಂಪರಾಗತ ಧೋರಣೆಯನ್ನು ಹೇಳಿ ಪ್ಯಾಲೆಸ್ಟೈನ್ ಪರ ನಿಲುವು ವ್ಯಕ್ತಪಡಿಸಿದೆ. ಇಸ್ರೇಲಿ ಆಡಳಿತ ತಮ್ಮ ಪರ ಹ್ಯಾಷ್‌ಟ್ಯಾಗ್ ಅಭಿಯಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳುತ್ತದೆ. ಇಸ್ರೇಲ್ ಪ್ರಧಾನಿ ತಮ್ಮನ್ನು ಬೆಂಬಲಿಸಿದ ರಾಷ್ಟ್ರಗಳ ಧ್ವಜಗಳ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಭಾರತದ ಧ್ವಜ ಇಲ್ಲ. ಸದಾ ಇಸ್ರೇಲ್ ಪರವೇ ಅಮೆರಿಕ ಇದೆ. ಆದರೆ ಡೆಮೊಕ್ರಾಟ್ ಜೋ ಬೈಡನ್ ಇಸ್ರೇಲ್ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಯಹೂದಿಗಳ ಮೇಲೆ ಮಾರಣಹೋಮ ನಡೆಸಿದ ಜರ್ಮನಿಯ ಹಿಟ್ಲರ್ ಆರಾಧನೆ ಮಾಡುವ ಸಂಘ ಪರಿವಾರ, ಈಗ ಯಹೂದಿಗಳ ರಕ್ಷಣೆಯ ಹೆಸರಲ್ಲಿ ಇಸ್ರೇಲ್ ಆಡಳಿತ ಪ್ಯಾಲೆಸ್ಟಿಯನಿಯನ್ನರ ಮೇಲೆ ನಡೆಸುತ್ತಿರುವ ಭಯೋತ್ಪಾದಕ ಕೃತ್ಯದ ಪರ ನಿಲ್ಲುತ್ತದೆ.
ಈ ಸಾಂಕ್ರಾಮಿಕದ ಬಿಕ್ಕಟ್ಟಿನ ಸಂದರ್ಭದಲ್ಲೂ ದೇಶದ ಪರಿಸ್ಥಿತಿಗಿಂತ ಇಸ್ರೇಲ್ ರೀತಿಯ ಆಡಳಿತ ನಮ್ಮಲ್ಲಿಯೂ ಬರಬೇಕೆಂದು ಆಶಿಸುತ್ತಿದ್ದಾರೆ.

ಇಸ್ರೇಲ್ ಮತ್ತು ಗಾಜಾದಲ್ಲಿನ ಹಿಂಸಾಚಾರದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬಿಡನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಶನಿವಾರ ದೂರವಾಣಿ ಕರೆಯಲ್ಲಿ ಮಾತನಾಡಿ ಕಳವಳ ವ್ಯಕ್ತಪಡಿಸಿದ್ದಾರೆ. ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಜೊತೆಗೂ ಮಾತನಾಡಿ, ಎರಡು ರಾಷ್ಟ್ರದ ಸಿದ್ದಾಂತಕ್ಕೆ ಬದ್ಧರಾಗುವುದಾಗಿ ತಿಳಿಸಿದ್ದಾರೆ. ಹಮಾಸ್ “ರಾಕೆಟ್ ಹಾರಿಸುವುದನ್ನು ನಿಲ್ಲಿಸಬೇಕು” ಎಂದು ಪ್ರತ್ಯೇಕವಾಗಿ ಹೇಳಿದ್ದಾರೆ.

ಇದನ್ನೂ ಓದಿ; ಪ್ಯಾಲಿಸ್ಟೀನಿಯಲ್ಲಿ ನಡೆಯುತ್ತಿರುವುದೇನು? ನಿಮಗಿದು ತಿಳಿದಿರಬೇಕಾದ ವಿಷಯ

“ಹಮಾಸ್ ಮತ್ತು ಇತರ ಭಯೋತ್ಪಾದಕ ಗುಂಪುಗಳು” ನಡೆಸಿದ ರಾಕೆಟ್ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕಿಗೆ ಬಿಡೆನ್ ತಮ್ಮ “ಬಲವಾದ ಬೆಂಬಲ”ವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಅದೇ ಸಂದರ್ಭದಲ್ಲಿ ಎರಡೂ ಕಡೆಯ ಹಿಂಸಾಚಾರ ನಿಲ್ಲಬೇಕೆಂದು ಪ್ರತಿಪಾದಿಸಿದ್ದಾರೆ.

ಇಸ್ರೇಲ್ ನಡೆಸುತ್ತಿರುವ ಪತ್ರಿಕಾ ಕಚೇರಿಗಳು ಮತ್ತು ಪತ್ರಕರ್ತರ ಮೇಲಿನ ದಾಳಿಯನ್ನು ನಿಲ್ಲಿಸಬೇಕೆಂದು ಬೈಡನ್ ಒತ್ತಾಯಿಸಿದ್ದಾರೆ. ಅಸೋಷಿಯೆಟ್ ಪ್ರೆಸ್ ಮತ್ತು ಅಲ್‌ಜಜೀರಾ ಕಚೇರಿ ಮೇಲೆ ಬಾಂಬ್‌ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಅಮೆರಿಕದ ಆರ್ಥಿಕತೆಯನ್ನು ಯಹೂದಿಗಳೇ ಬಹುಪಾಲು ನಿಯಂತ್ರಣ ಮಾಡುತ್ತಿರುಗವ ಕಾರಣಕ್ಕೆ ಅಮೆರಿಕ ಆಡಳಿತ ಇಸ್ರೇಲ್ ಪರವೇ ಇರಲಿದೆ. ತಮ್ಮ ತಾಯ್ನಾಡಿನ ರಕ್ಷಣೆಗೆ ಹೋರಾಡುವ ಎಲ್ಲ ಪ್ಯಾಲೆಸ್ಟಿಯನ್ ಸಮೂಹವನ್ನು ಬಹುಪಾಲು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಈ ದೇಶದ ಮುಖ್ಯವಾಹಿನಿಗಳು ಟೆರರಿಸ್ಟ್ ಎಂದೇ ಹಣೆಪಟ್ಟಿ ಹಚ್ಚಲು ಯತ್ನಿಸುತ್ತ ಬಂದಿವೆ.

ಹಮಾಸ್ ಸಂಘಟನೆಯನ್ನು ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾಗಳೆಂದೂ ಟೆರರಿಸ್ಟ್ ಎಂದು ಪರಿಗಣಿಸಿಲ್ಲ. ಫ್ರಾನ್ಸ್ ಮತ್ತು ಇತರ ಕೆಲವು ಯುರೋಪಿಯನ್ ದೇಶಗಳು ಹಮಾಸ್‌ನ ಒಂದು ಅಂಗವನ್ನಷ್ಟೇ ಟೆರರಿಸ್ಟ್ ಎಂದು ಘೋಷಿಸಿವೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಪ್ಯಾಲೆಸ್ತೀನ್ ಸಂಘರ್ಷ ಕೊನೆಗೊಳಿಸಲು ’ದ್ವಿರಾಷ್ಟ್ರ’ ಪರಿಹಾರವನ್ನು ಬೆಂಬಲಿಸಿದ ಭಾರತ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇಸ್ರೇಲ್ ಮತ್ತು ಪ್ಯಾಲಸ್ಟೀನ್ ವಿಲೀನವಾಗಿ, ಒಂದು ದೇಶವಾಗಿ ರೂಪುಗೊಂಡರೆ ಅನೇಕ ಅಮೂಲ್ಯ ಜೀವಿಗಳನ್ನು ಉಳಿಸಬಹುದು. ಇದಕ್ಕೆ ಮನುಷ್ಯ, ತನ್ನ ಮನಸ್ಸಿನಲ್ಲಿ ಇರುವ ದುರಾಸೆಯನ್ನು ಬಿಡಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...