Homeಕರೋನಾ ತಲ್ಲಣಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್‌ಡೌನ್: ರಾಜ್ಯ ಲಾಕ್‌ಡೌನ್‌ಗೆ ಅರ್ಥವೇನು?

ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್‌ಡೌನ್: ರಾಜ್ಯ ಲಾಕ್‌ಡೌನ್‌ಗೆ ಅರ್ಥವೇನು?

- Advertisement -
- Advertisement -

ದೇಶದ ರಾಜಧಾನಿ ದೆಹಲಿಯಿಂದ ಹಿಡಿದು ಜಿಲ್ಲಾಮಟ್ಟದವರೆಗೆ ಒಂದು ಸುಸೂತ್ರ ಸಾಂಕ್ರಾಮಿಕ ನಿರ್ವಹಣಾ ನೀತಿಯೇ ಇಲ್ಲ ಎಂಬುದಕ್ಕೆ, ಇಂದು ಕೊಪ್ಪಳದಲ್ಲಿ ಕೃಷಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿಸಿ.ಪಾಟೀಲರು ಸುದ್ದಿಗೋಷ್ಠಿ ನಡೆಸಿ ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್‌ಡೌನ್ ಎಂದು ಹೇಳಿರುವುದು ಒಂದು ಉದಾಹರಣೆಯಾಗಿದೆ.

ಅವರ ಬಲಕ್ಕೆ ಡಿಸಿ ಮತ್ತು ಎಡಕ್ಕೆ ಸಂಸದ ಕರಡಿ ಸಂಗಣ್ಣ ಕೂತಿದ್ದಾರೆ. ಆರೋಗ್ಯ ಮತ್ತು ಕೃಷಿಗೆ ಸಂಬಂಧಿಸಿದ ಚಟುವವಟಿಕೆ ಬಿಟ್ಟರೆ, ಬೇರೆ ಎಲ್ಲವೂ ನಿರ್ಬಂಧವಂತೆ. ನಾಳೆ ಮೇ 17 ರಿಂದ 5 ದಿನ ಈ ‘ತುರ್ತು ಪರಿಸ್ಥಿತಿ’ ಜಾರಿಯಂತೆ! ಇವರ ಈ ‘ಅಪೂರ್ವ ಸಲಹೆ’ಯನ್ನು ಮೆಚ್ಚಿಕೊಂಡ ರಾಯಚೂರು ಜಿಲ್ಲಾಧಿಕಾರಿ ಕೂಡ ಇಂಥದ್ದೇ ಆದೇಶ ಮಾಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಇಡೀ ರಾಜ್ಯದೆಲ್ಲಡೆ ಲಾಕ್‌ಡೌನ್ ಜಾರಿಯಲ್ಲಿದೆ. ಅದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಹಾಗಿದ್ದ ಮೇಲೆ ಇದು ಯಾವುದು ಜಿಲ್ಲೆಗಳ ಲಾಕ್‌ಡೌನ್? ಇದರ ಮಾರ್ಗಸೂಚಿಗಳೇನು? ಇದಕ್ಕೂ ರಾಜ್ಯದ ಮಾರ್ಗಸೂಚಿಗಳಿಗೂ ವ್ಯತ್ಯಾಸವೇನು ಎಂಬು ಪ್ರಶ್ನೆ ಜನರಲ್ಲಿ ಗೊಂದಲ ಮೂಡಿಸಿದೆ.

ಇದು ಕೊರೊನಾ ಎದುರಿಸುವ ವಿಕೇಂದ್ರೀಕರಣ ನೀತಿಯೇ? ಬಿ.ಸಿ ಪಾಟೀಲರ ನಿರ್ಧಾರವೇ ಸರಿ ಅನ್ನುವುದಾದರೆ, ಅದನ್ನು ಇಡೀ ರಾಜ್ಯಕ್ಕೆ ಅನ್ವಯ ಮಾಡಬೇಕು ಅಲ್ಲವೇ? ಪ್ರಕರಣಗಳು ಹೆಚ್ಚಿರುವ ಬೆಂಗಳೂರಲ್ಲಾದರೂ ಇದನ್ನು ಅನ್ವಯ ಮಾಡಬೇಕಲ್ಲವೇ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ.

ಮೇ 31 ರವರೆಗೆ ಜಿಲ್ಲೆಯಲ್ಲಿ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ಆದೇಶ ಹೊರಡಿಸಲಾಗಿದೆ. ಒಟ್ಟಿನಲ್ಲಿ ಈ ನಿರ್ಧಾರಗಳು ಫಲಕೊಡುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ


ಇದನ್ನೂ ಓದಿ : ಪಶ್ಚಿಮ ಬಂಗಾಳ: ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಮೂವರು ಬಿಜೆಪಿ ಶಾಸಕರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇಡೀ ದೇಶದಲ್ಲಿ ಮನುವಾದಿಗಳು ತುಘಲಕ್ ದರ್ಬಾರು ನಡೆಸುತ್ತಿದ್ದಾರೆ. ಈ ಬೂಸಿ ಪಾಟೀಲ ತನ್ನನ್ನು “ಕೊಪ್ಪಳದ ತುಂಡರಸ” ಎಂದು ತಿಳಿದಿರುವಂತಿದೆ.

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...