Homeಅಂತರಾಷ್ಟ್ರೀಯಕದನ ವಿರಾಮ| ಮನೆಗೆ ಮರಳುತ್ತಿರುವ ಗಾಝಾ ಜನತೆ; ಅವಶೇಷಗಳಡಿ ತಮ್ಮವರಿಗಾಗಿ ಹುಡುಕಾಟ

ಕದನ ವಿರಾಮ| ಮನೆಗೆ ಮರಳುತ್ತಿರುವ ಗಾಝಾ ಜನತೆ; ಅವಶೇಷಗಳಡಿ ತಮ್ಮವರಿಗಾಗಿ ಹುಡುಕಾಟ

- Advertisement -
- Advertisement -

ಕದನ ವಿರಾಮದ ಹಿನ್ನೆಲೆ, ಇಸ್ರೇಲ್ ಗಾಝಾ ಮೇಲಿನ ಬಾಂಬ್ ದಾಳಿಯನ್ನು ನಿಲ್ಲಿಸಿದ್ದು, ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಲ್ಪಟ್ಟಿದ್ದ ಸಾವಿರಾರು ಪ್ಯಾಲೆಸ್ತೀನಿಯರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.

ಪ್ರಮುಖವಾಗಿ ಉತ್ತರ ಗಾಝಾದತ್ತ ಜನರು ಆಗಮಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಇಸ್ರೇಲ್ ಆಕ್ರಮಣಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯ ಜನರು ವಾಸಿಸುತ್ತಿದ್ದರು. ಬಾಂಬ್ ದಾಳಿ ನಡೆಸಿ ಇಸ್ರೇಲಿ ಸೇನೆ ಅವರಲ್ಲಿ ಹಲವರನ್ನು ಸುಖಾಸುಮ್ಮನೆ ಹತ್ಯೆಗೈದಿದೆ. ಇನ್ನುಳಿದವರು ತಮ್ಮದೆಲ್ಲವನ್ನು ಬಿಟ್ಟು ಬೇರೆಡೆಗೆ ತೆರಳಿದ್ದರು.

ಕಳೆದ ತಿಂಗಳು ಇಸ್ರೇಲ್ ಸೇನೆ ಗಾಝಾ ಪಟ್ಟಿಯ ಗಾಝಾ ನಗರದಲ್ಲಿ ನೆಲದ ದಾಳಿಯನ್ನು ತೀವ್ರಗೊಳಿಸಿದಾಗ ಸಮುದ್ರ ತೀರದ ಅಲ್- ರಶೀದ್ ರಸ್ತೆಯ ಮೂಲಕ ಸಾವಿರಾರು ಅಮಾಯಕ, ಅಸಹಾಯ, ಜನರು ಪಲಾಯನ ಮಾಡಿದ್ದ ಫೋಟೋ, ವಿಡಿಯೋಗಳನ್ನು ಮಾಧ್ಯಮಗಳು ಪ್ರಕಟಿಸಿತ್ತು. ಇದೀಗ ಅದೇ ರಸ್ತೆಯ ಮೂಲಕ ಜನರು ಹಿಂದಿರುಗುವ ದೃಶ್ಯಗಳನ್ನು ತೋರಿಸುತ್ತಿವೆ.

ಗಾಝಾ ಪಟ್ಟಿಯ ನಗರಗಳಾದ ಗಾಝಾ, ರಫಾ, ಖಾನ್ ಯೂನಿಸ್, ಜಬಲಿಯಾ, ದೇರ್ ಅಲ್ ಬಲಾಹ್, ಬನೀ ಸುಹೈಲಾ, ಬೈತ್ ಹನೌನ್, ಬೈತ್ ಲಾಹಿಯಾ ಮತ್ತು ಅಬಾಸನ್ ಅಲ್-ಕಬೀರಾಗಳ ಪೈಕಿ ಗಾಝಾ, ರಫಾ, ಜಬಲಿಯಾ ಮತ್ತು ಖಾನ್ ಯೂನಿಸ್‌ಗಳಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದರು. ಗಾಝಾ ನಗರದಲ್ಲಿ ಅತೀ ಹೆಚ್ಚು, ಅಂದರೆ ಸುಮಾರು 6 ಲಕ್ಷ ಜನರಿದ್ದರು.

ಇಸ್ರೇಲ್ ಗಾಝಾ, ರಫಾ, ಖಾನ್ ಯೂನಿಸ್ ಮತ್ತು ಜಬಲಿಯಾದ ಮೇಲೆಯೇ ಹೆಚ್ಚಿನ ದಾಳಿ ನಡೆಸಿದೆ. ಪರಿಣಾಮ 70 ಸಾವಿರದಷ್ಟು ಜನರು ಸಾವನ್ನಪ್ಪಿರುವ ಲೆಕ್ಕ ಸಿಕ್ಕಿದೆ. ಈ ನಗರಗಳ ಬಹುತೇಕ ಕಟ್ಟಡಗಳನ್ನು ಇಸ್ರೇಲ್ ಧ್ವಂಸ ಮಾಡಿದೆ. ಈಗ ಎಲ್ಲಿ ನೋಡಿದರೂ ಬರೀ ಅವಶೇಷಗಳ ರಾಶಿ ಮಾತ್ರ ಕಾಣುತ್ತಿದೆ. ಈ ಅವಶೇಷಗಳ ಅಡಿಯಲ್ಲಿ ಇನ್ನೆಷ್ಟು ಸಾವಿರ ಜನರ ಮೃತ ದೇಹಗಳು ಇದೆ ಎಂದು ಗೊತ್ತಿಲ್ಲ.

ಇಸ್ರೇಲ್ ಬಾಂಬ್ ದಾಳಿ ನಿಲ್ಲಿಸಿರುವ ಹಿನ್ನೆಲೆ ಉತ್ತರ ಗಾಝಾದತ್ತ ಹಿಂದಿರುಗಿದ ಜನರು, ರಕ್ಷಣಾ ತಂಡಗಳ ಜೊತೆಗೂಡಿ ಅವಶೇಷಗಳ ಅಡಿಯಿಂದ ಮೃತದೇಹಗಳನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಗಾಝಾದ ಸುದ್ದಿ ಸಂಸ್ಥೆ ವಫಾದ ವರದಿ ಪ್ರಕಾರ, ಶನಿವಾರ ಒಂದೇ ದಿನ ಸುಮಾರು 135 ಮೃತದೇಹಗಳು ಅವಶೇಷಗಳಡಿ ಸಿಕ್ಕಿವೆ.

ಗಾಝಾದಾದ್ಯಂತ ಆಸ್ಪತ್ರೆಗಳಿಂದ ಹಲವಾರು ಶವಗಳನ್ನು ಹೊರ ತೆಗೆಯಲಾಗಿದೆ. ಈ ಪೈಕಿ 43 ಶವಗಳನ್ನು ಅಲ್-ಶಿಫಾ ಆಸ್ಪತ್ರೆಗೆ ಮತ್ತು 60 ಶವಗಳನ್ನು ಗಾಝಾ ನಗರದ ಅಲ್-ಅಹ್ಲಿ ಅರಬ್ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದವುಗಳನ್ನು ನುಸೈರಾತ್, ದೇರ್ ಅಲ್-ಬಲಾಹ್ ಮತ್ತು ಖಾನ್ ಯೂನಿಸ್ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ ಎಂದು ಅಲ್-ವಫಾ ವರದಿ ಹೇಳಿದೆ.

ಅಲ್-ರಶೀದ್ ರಸ್ತೆಯ ಮೂಲಕ ಮಕ್ಕಳು, ಮಹಿಳೆಯರು, ವೃದ್ಧರು, ಕಾರು, ವ್ಯಾನ್‌ ಮತ್ತು ಪೀಠೋಪಕರಣಗಳಿಂದ ತುಂಬಿದ ಕತ್ತೆ ಬಂಡಿಗಳ ಮೂಲಕ ಗಾಝಾ ನಗರದ ಕಡೆಗೆ ಸಾಗುತ್ತಿರುವ ದೃಶ್ಯಗಳನ್ನು ಅಲ್ ಜಝೀರಾ ಸುದ್ದಿ ಸಂಸ್ಥೆಯ ತಾರೀಖ್ ಅಬೂ ಅಝೂಮ್ ವಿವರಿಸಿದ್ದಾರೆ. ಜನರು ತಾತ್ಕಾಲಿಕ ಡೇರೆಗಳನ್ನು ತೆಗೆದು ತಮ್ಮ ನಾಶವಾದ ಮನೆಗಳ ಅವಶೇಷಗಳ ಮೇಲೆ ಹೊಸ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ತಿಂಗಳುಗಳ ಕಾಲ ನಿರಂತರವಾಗಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ ಹಿನ್ನೆಲೆ, ಗಾಝಾ ನಗರದಲ್ಲಿ ಬಹುತೇಕ ಏನೂ ಉಳಿದಿಲ್ಲ. ಸಂಪೂರ್ಣ ವಿನಾಶ ಉಂಟಾಗಿದೆ. ಅಲ್ಲಿ ಕಾರ್ಯನಿರ್ವಹಿಸುವ ಯಾವುದೇ ಮೂಲಸೌಕರ್ಯವಿಲ್ಲ, ಶುದ್ಧ ನೀರಿಲ್ಲ, ವಿದ್ಯುತ್ ಇಲ್ಲ. ಒಂದು ಕಾಲದಲ್ಲಿ ಮನೆಗಳಾಗಿದ್ದ ಕಟ್ಟಡಗಳ ಅವಶೇಷಗಳ ರಾಶಿ ಮಾತ್ರ ಇವೆ ಎಂದು ಅಬೂ ಅಝೂಮ್ ತಿಳಿಸಿದ್ದಾರೆ. 

ಹಿಂದಿರುಗುವ ಕುಟುಂಬಗಳಿಗೆ ತಾತ್ಕಾಲಿಕ ಡೇರೆಗಳು ಮತ್ತು ಮೊಬೈಲ್ ಆಶ್ರಯಗಳ ತುರ್ತು ಅವಶ್ಯಕತೆಯಿದೆ ಎಂದು ದೇರ್ ಅಲ್-ಬಲಾಹ್‌ನಿಂದ ವರದಿ ಮಾಡುತ್ತಿರುವ ಅಲ್ ಜಝೀರಾದ ಮೋತ್ ಕಹ್ಲೌಟ್ ಹೇಳಿದ್ದಾರೆ. ಇಲ್ಲಿನ ಜನರಲ್ಲಿ ಏನೂ ಉಳಿದಿಲ್ಲ. ಏನಿದೆಯೋ ಅದನ್ನು ಹೊತ್ತುಕೊಂಡು ಅಜ್ಞಾತದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಅಲ್- ರಶೀದ್ ರಸ್ತೆಯ ಮೂಲಕ ಹಾದು ಹೋಗುತ್ತಿರುವ ಅನೇಕ ಜನರನ್ನು ಅಲ್‌-ಜಝೀರಾದ ವರದಿಗಾರರು ಮಾತನಾಡಿಸಿದ್ದಾರೆ. ಈ ವೇಳೆ ಕೆಲವರು ನಮ್ಮ ಊರುಗಳತ್ತ ಹೋಗುತ್ತಿದ್ದೇವೆ. ಅಲ್ಲಿ ನಮ್ಮ ಮನೆ ಇದೆಯೋ, ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ. ಇನ್ನೂ ಹಲವರು, ಮಕ್ಕಳು, ಗಂಡ, ಹೆಂಡತಿ, ಸಹೋದರರನ್ನು ಕಳೆದುಕೊಂಡ ನೋವು ತೋಡಿಕೊಂಡಿದ್ದಾರೆ. ಈ ನಡುವೆಯೂ ನಾಶಗೊಂಡ ನಗರದಲ್ಲಿ ಅವಶೇಷಗಳ ನಡುವೆ ಹೊಸ ಬದುಕು ಕಟ್ಟಿಕೊಳ್ಳುವ ಉತ್ಸಾಹವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇಸ್ರೇಲ್-ಹಮಾಸ್ ಕದನ ವಿರಾಮ: ಗಾಝಾಗೆ ಮರಳುತ್ತಿರುವ ಸಾವಿರಾರು ಪ್ಯಾಲೆಸ್ತೀನಿಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೂತುಕುಡಿ ಸಾತನ್‌ಕುಳಂ ತಂದೆ-ಮಗನ ಕಸ್ಟಡಿ ಸಾವು ಪ್ರಕರಣ : ಅಪರಾಧಿಗಳಾದ ಎಲ್ಲಾ 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತನ್‌ಕುಳಂ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಭವಿಸಿದ, ವ್ಯಾಪಾರಿ ಪಿ. ಜಯರಾಜ್ (58) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರ ಕಸ್ಟಡಿ ಸಾವು ಪ್ರಕರಣದ...

ದಾವಣಗೆರೆ ದಕ್ಷಿಣ ಉಪ-ಸಮರ: ಶಾಮನೂರು ಸಾಮ್ರಾಜ್ಯದಲ್ಲಿ ಅಹಿಂದ ಬಂಡಾಯ!

ತುಂಗಭದ್ರಾ ನದಿ ಪರ‍್ವಕ್ಕೆ ಎತ್ತರದ ಪ್ರದೇಶದಲ್ಲಿರುವ ದಾವಣಗೆರೆ ಮಧ್ಯ ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿ. ಬೆಣ್ಣೆ ದೋಸೆಯ ಘಮಲಿನ ದಾವಣಗೆರೆಯ ರಾಜಕಾರಣ ಮಾತ್ರ ಮಿರ್ಚಿ-ಮಂಡಕ್ಕಿಯ ಖಡಕ್ ಖಾರಾ ಕುರುಕುಲಿನಂತೆ! ದಾವಣಗೆರೆ ಮತ್ತದರ ಸುತಮುತ್ತಲಿನ...

‘Dr. Nimo Yadav’, ‘Nehr Who’ ಎಕ್ಸ್‌ ಖಾತೆಗಳನ್ನು ತಕ್ಷಣ ಮರುಸ್ಥಾಪಿಸಲು ದೆಹಲಿ ಹೈಕೋರ್ಟ್ ಆದೇಶ

'Dr. Nimo Yadav' ಮತ್ತು 'Nehr Who' ಎಂಬ ಎರಡು ಪರೋಡಿ ಎಕ್ಸ್‌ ಖಾತೆಗಳನ್ನು ತಕ್ಷಣ ಮರು ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ (ಏ.6) ಎಕ್ಸ್ ಸಂಸ್ಥೆಗೆ (X Corp) ಆದೇಶಿಸಿದೆ. 'Dr....

ಬಂಗಾಳ| ಮತದಾರರ ಪಟ್ಟಿಯಿಂದ ಹೆಸರು ತೆಗೆದ ಬಳಿಕ ಸಾವಿಗೆ ಶರಣಾದ ಮುಸ್ಲಿಂ ವ್ಯಕ್ತಿ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದುಹಾಕಿದ್ದರಿಂದ ಮನನೊಂದ ಮುಸ್ಲಿಂ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೃತನನ್ನು ಬಿರ್ಭುಮ್...

‘ಯೋಜನೆಯು ಕೇರಳಕ್ಕೆ ಜೀವನಾಡಿಯಾಗಲಿದೆ’: ವಯನಾಡ್ ಸುರಂಗ ಮಾರ್ಗ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಕೇರಳದ ಕೋಝಿಕ್ಕೋಡ್-ವಯನಾಡ್ ಸುರಂಗ ಮಾರ್ಗ ನಿರ್ಮಾಣಕ್ಕೆ ನೀಡಲಾದ ಪರಿಸರ ಅನುಮತಿ (ಇಸಿ) ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಏ.6) ವಜಾಗೊಳಿಸಿದೆ. ಸುರಂಗ ನಿರ್ಮಾಣದ ಸಮಯದಲ್ಲಿ ಪರಿಸರ ಅನುಮತಿಯ ಷರತ್ತುಗಳ ಉಲ್ಲಂಘನೆಯಾದರೆ, ಅರ್ಜಿದಾರರು...

651 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ವಸ್ತು ವಶಪಡಿಸಿಕೊಂಡ ಚುನಾವಣಾ ಆಯೋಗ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು 651.51 ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಗದು, ಮದ್ಯ, ಮಾದಕ ವಸ್ತುಗಳು ಮತ್ತು ಇತರ ಉಚಿತ ವಸ್ತುಗಳನ್ನು...

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ಬಾಲಕಿಯನ್ನು ಸರಪಳಿಯಿಂದ ಕಟ್ಟಿ ಥಳಿಸಿದ ಮಾಜಿ ಸೇನಾಧಿಕಾರಿ

ಪೇರಳೆ ಹಣ್ಣು ಕದ್ದಿದ್ದಾಳೆಂದು ಆರೋಪಿಸಿ ನಾಲ್ಕು ವರ್ಷದ ಬಾಲಕಿಯನ್ನು ನಿವೃತ್ತ ಸೇನಾಧಿಕಾರಿಯೊಬ್ಬರು ಸರಪಳಿಯಿಂದ ಕಟ್ಟಿಹಾಕಿ ಕ್ರೂರವಾಗಿ ಥಳಿಸಿರುವ ಆಘಾತಕಾರಿ ಘಟನೆ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಬೆಹಡಾಲ ಗ್ರಾಮದಲ್ಲಿ ನಡೆದಿದೆ. ಬಾಲಕಿಯು ನಿವೃತ್ತ ಸೇನಾಧಿಕಾರಿಯ ತೋಟದ...

ಆಂಧ್ರ ವಿಧಾನಸಭಾ ಸ್ಪೀಕರ್ ಅಯ್ಯಣ್ಣ ಪಾತ್ರುಡು ಅವರಿಂದ ದಲಿತ ವ್ಯಕ್ತಿಗೆ ಕಪಾಳಮೋಕ್ಷ: ವೈಎಸ್‌ಆರ್‌ಸಿಪಿ ವಾಗ್ದಾಳಿ

ಏಪ್ರಿಲ್ 3 ರ ಗುರುವಾರ ನರಸಿಪಟ್ಟಣದಲ್ಲಿ ದಲಿತ ವ್ಯಕ್ತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ವಿಧಾನಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಅಯ್ಯಣ್ಣ ಪಾತ್ರುಡು ಅವರ ವಿರುದ್ಧ ವೈಎಸ್‌ಆರ್ ಕಾಂಗ್ರೆಸ್...

ಪ. ಬಂಗಾಳ | ಬಿಜೆಪಿ ಪ್ರಚಾರ ಸಾಮಗ್ರಿ ಸಜ್ಜುಗೊಳಿಸಿದ ವಿಡಿಯೋ ವೈರಲ್ : ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿ ಅಮಾನತು

ಬಿಜೆಪಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸಲು ಸಹಾಯ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾಣಿಹಟಿ ವಿಧಾನಸಭಾ ಕ್ಷೇತ್ರದ ಅಧಿಕಾರಿಯೊಬ್ಬರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್...

ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಅಸ್ಸಾಂ ಸಿಎಂ ಪತ್ನಿ ಬಳಿ 2 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್ ಇದೆ : ಕಾಂಗ್ರೆಸ್ ಆರೋಪ

ಮತದಾನಕ್ಕೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗ, ಅಸ್ಸಾಂನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ವೈಯಕ್ತಿಕ ವಿಚಾರಗಳ ಕುರಿತ ವಾಗ್ಯುದ್ಧ ತಾರಕಕ್ಕೇರಿದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ...