Homeಅಂಕಣಗಳುನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

ನೆಲದ ಜತೆ ಪಿಸು ಮಾತನಾಡುವ ಕವಿ ಚಂಸು ಪಾಟೀಲ

- Advertisement -
- Advertisement -

ಎಲೆಮರೆ- 14

`ಐದು ಎಕರೆ ಬಳ್ಳಿ ಶೇಂಗಾ ಹಾಕಿದ್ದೆ ಕಾಯಿ ಚಲೋ ಹಿಡದಾತಿ, ಬೇರೆಯವ್ರು ಸರಕಾರಿ ಗೊಬ್ಬರ ಹಾಕಿ, ಕಳೆನಾಶಕ ಸಿಂಪಡಿಸಿದ್ರು. ನಾನು ಸೆಗಣಿಗೊಬ್ಬರ ಹಾಕಿ ಕಳೆ ತಗಸಿದ್ದೆ. ಅದಕ್ಕ ನಲ್ವತ್ ಸಾವ್ರ ಖರ್ಚಾಗಿತ್ತು. ಇದನ್ನ ನೋಡಿ ಊರವರೆಲ್ಲ ನಕ್ಕಿದ್ರು. ಈತಗ ಹುಚ್ ಹಿಡದಿರಬೇಕು, ಎರಡು ಸಾವ್ರ ಕಳೆನಾಶಕ ಹೊಡದಿದ್ರ ಸಾಕಿತ್ತು ಅಂದಿದ್ರು. ನನ್ನ ಲೆಕ್ಕ ಹೆಂಗಂದ್ರ ಕಳೆ ತಗಿಯೋರು ಬದುಕಬೇಕು ನಾನು ಬದುಕಬೇಕು ಅನ್ನೋದು. ಸೆಗಣಿ ಹಾಕಿ, ಕಳೆ ತಗಸಿದ್ದಕ್ಕ ನೆಲ ಮಿದುವು ಆಗಿ ಕಾಯಿ ಬಾಳ ಹಿಡದಾತಿ. 60-70 ಚೀಲ ಆಗಬಹುದು. ಬೇರೆಯವ್ರದ್ದು ಸರಕಾರಿ ಗೊಬ್ಬರ, ಕಳೆನಾಶಕ ಬಳಸಿದ್ದಕ್ಕ ಮಳಿನೂ ಬಾಳ ಆಗಿ ನೆಲ ಬಿಗುವು ಆಗಿ ಕಾಯಿ ಹಿಡದಿಲ್ಲ. ಅಂತ ರೈತರೆಲ್ಲಾ ಈ ಸಲ ಲಾಸ್ ಆದ್ರು. ನೀರಾವರಿಗೆ ಒಂದೆಕರೆ ಬಾಳೆ ಹಾಕೀನಿ. ಒಬ್ಬಂಟಿಗರಾಗಿ ಬಾಳ ಹೊಲ ಮಾಡಕಾಗಲ್ಲ’ ಹೀಗೆ ತಣ್ಣಗೆ ನೆಲದ ಜತೆಗಿನ ಪಿಸುಮಾತುಗಳನ್ನು ಆಡುವ ಕವಿ ಚಂಸು ಪಾಟೀಲ.

ಚಂದ್ರಶೇಖರ ಸುಭಾಶಗೌಡ ಪಾಟೀಲ ಅಂದ್ರೆ ಯಾರೀತ, ಯಾವುದೋ ರಾಜಕಾರಣೀದೋ, ದೊಡ್ ಮನ್ಷನ ಹೆಸರಿದ್ದಂಗೈತಿ ಅಂತ ಅನ್ನಿಸುತ್ತದೆ. ಇದೇ ಹೆಸರನ್ನು ಸಂಕ್ಷಿಪ್ತಗೊಳಿಸಿ ಚಂಸು ಪಾಟೀಲ ಅಂದರೆ ಸಾಹಿತ್ಯ ವಲಯದ ಹೊಸ ತಲೆಮಾರನ್ನು ಸೂಕ್ಷ್ಮವಾಗಿ ಗಮನಿಸುವ ಕೆಲವರಿಗಾದರೂ, ಅದರಲ್ಲೂ ಪೇಸ್‍ಬುಕ್‍ನ್ನು ಆಕ್ಟಿವ್ ಆಗಿ ಬಳಸುವವರಿಗೆ ಈ ಹೆಸರಿನ ಜತೆ ರೈತಾಪಿ ಮುಖದ ಚಿತ್ರವೊಂದು ಕಣ್ಮುಂದೆ ಬರಬಹುದು. ನನಗೋ ಕಾಸ್ಟವೆ ಸಿನೆಮಾದ ಕೊನೆಯಲ್ಲಿ ರೂಪಾಂತರ ಹೊಂದಿದ ನಟ ಟಾಮ್ ಹ್ಯಾಂಕ್ಸ್ ತರವೂ, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹಾಗೆಯೂ ಚಂಸು ಕಾಣಿಸುತ್ತಾನೆ.

ನನಗೆ ಕಳೆದ ಒಂದೂವರೆ ದಶಕದಿಂದ ಚಂಸು ಪಾಟೀಲ ಪರಿಚಯ. ಆತ ಸಾದಾಸೀದಾ ಜವಾರಿ ಮನ್ಷ. ಒಮ್ಮೆ ಸೊಂಡೂರು ಭೂ ಹೋರಾಟ ಪುಸ್ತಕ ಬರೆಯುವಾಗ ದಾಖಲೆಗಳನ್ನು ಹುಡುಕಿಕೊಂಡು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಕಚೇರಿಗೆ ಹೋಗಿದ್ದೆ. ಆಗ ಸಂಯುಕ್ತ ಕರ್ನಾಟಕ ಕಚೇರಿಯಲ್ಲಿ ಐವತ್ತು ದಾಟಿದ ತಲೆ ಬಿಳಿಯಾದ ಹಿರಿಯರೇ ತುಂಬಿರುವಾಗ ಕರಿಕೂದಲಿನ ಕಡ್ಡಿಯಂಥ ಹುಡುಗ ಒಂದು ಮೂಲೆಯ ಹಳೇ ಕಂಪ್ಯೂಟರಿನಲ್ಲಿ ಕಣ್ಣು ನೆಟ್ಟು ಕೂತಿದ್ದ. ನಾನು ನನ್ನ ಹೆಸರೇಳಿ ಪರಿಚಯಿಸಿಕೊಂಡೆ, `ಹೇಯ್ ಬರ್ರಿ ಅರುಣ್ ನೀವು ನಮಗ ಗೊತ್ತು ನಿಮ್ಮ ಬರಹ ಓದೇನಿ’ ಎಂದು ಸಹಜವಾದ ಪ್ರೀತಿ ತೋರಿದ್ದ’ ಈ ಹುಡುಗನೆ ಚಂಸು ಪಾಟೀಲ. ಬಹುಶಃ ನನಗೆ ನೆನಪಿರುವಂತೆ ಅದುವೆ ಮೊದಲ ಭೇಟಿ ಇರಬೇಕು.

2002 ರಲ್ಲಿ ಬೆಂಗಳೂರಿನ `ನೋಟ’ ವಾರಪತ್ರಿಕೆಯಲ್ಲಿಯೂ, 2003 ರಲ್ಲಿ ಗುಲ್ಬರ್ಗಾದ ಕ್ರಾಂತಿ ದೈನಿಕದಲ್ಲಿಯೂ, 2003 ರಿಂದ 2006 ರ ತನಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಸಂಯುಕ್ತ ಕರ್ನಾಟಕದಲ್ಲಿಯೂ ಚಂಸು ಪತ್ರಕರ್ತನಾಗಿ ಕೆಲಸ ಮಾಡಿದ. ಈತನ ವ್ಯಕ್ತಿ ಸ್ವಭಾವಕ್ಕೆ ಈ ಪತ್ರಕರ್ತ ಹುದ್ದೆ ಉಸಿರುಕಟ್ಟಿಸಿತು, ಮನೆಯ ಘಟನೆಗಳೂ ಪತ್ರಕರ್ತನಾಗಿ ಮುಂದುವರಿಯಲು ತೊಡಕಾದವು. ಈ ಎಲ್ಲದರ ಕಾರಣ ಹುಟ್ಟೂರಿಗೆ ಬಂದು, ತಾನು ಓದಿದ್ದೆಲ್ಲವನ್ನೂ ಮರೆತು 2007 ರಿಂದ ಕಮ್ತಕ್ಕೆ ನಿಂತ. ಆರಂಭಕ್ಕೆ ರೈತಾಪಿ ಕೆಲಸ ಸುಲಭವೇನಾಗಿರಲಿಲ್ಲ. ಹೊಲವೇ ಕಡುಕಷ್ಟಗಳನ್ನೊಡ್ಡಿ ಚಂಸುವನ್ನು ಪರೀಕ್ಷಿಸಿತು. ಈ ಎಲ್ಲಾ ಕಷ್ಟಗಳಿಗೆ ಬಂಡೆಯಂತಾಗಿ ನೆಲದ ಜತೆಗಿನ ಸಾಂಗತ್ಯವನ್ನು ಮುಂದುವರಿಸಿದ. ಬರುಬರುತ್ತಾ ನೆಲ ಚಂಸುವನ್ನು ಕೈಹಿಡಿಯತೊಡಗಿತು. ಅಹರ್ನಿಶಿ ಮತ್ತು ನಾವುನಮ್ಮಲ್ಲಿ ಬಳಗ 2018 ರಲ್ಲಿ ಪ್ರಕಟಿಸಿದ `ಬೇಸಾಯದ ಕತಿ’ ಪುಸ್ತಕದಲ್ಲಿ ಈ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ಚಂಸು ಕಟ್ಟಿಕೊಟ್ಟಿದ್ದಾರೆ. ಹಳ್ಳಿಗಳಿಗೆ ಮರಳಿ ಕೃಷಿಯಲ್ಲಿ ತೊಡಗಬೇಕು ಅಂದುಕೊಂಡ ಯುವಜನತೆಗೆ ಇದೊಂದು ಅತ್ಯಂತ ಪ್ರಾಯೋಗಿಕ ಮಾರ್ಗದರ್ಶಿ. ಈ ಕೃತಿಯನ್ನು ಹಿರಿಯ ರೈತ ಹೋರಾಟಗಾರರಾದ ಶಾಮಣ್ಣನವರು ಅಕ್ಷತಾ ಅವರಿಂದ ಪುಸ್ತಕ ಪಡೆದು ರೈತ ಸಮಾವೇಶಗಳು ನಡೆವಲ್ಲಿ ಹೋಗಿ ಸ್ವತಃ ತಾವೇ ರೈತರಿಗೆ ಮಾರಾಟ ಮಾಡಿದ್ದಾರೆ. ಬಹುಶಃ ಈ ಕೃತಿಯ ಮಹತ್ವವನ್ನು ಇದಕ್ಕಿಂತ ಬೇರೆ ರೂಪದಲ್ಲಿ ಹೇಳಲಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೂನಬೇವು ಗ್ರಾಮದ ಚಂಸು ನಮ್ಮ ಗ್ರಾಮೀಣ ಕೃಷಿಕರು ಮಾಡುತ್ತಿದ್ದ ಸಹಜ ಸಾವಯವ ಬೇಸಾಯ ಮಾಡುತ್ತ ಗಮನ ಸೆಳೆಯುತ್ತಿದ್ದಾರೆ. ಚಂಸು ಪಾಟೀಲರು ಮೂಲತಃ ಕವಿ. ಈ ತನಕ `ಗೆಳೆಯನಿಗೆ’ (1995), `ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’ (2005) `ಅದಕ್ಕೇ ಇರಬೇಕು’ (2009) ಮೂರು ಕವಿತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
2007 ರ ನಂತರ ಕಮ್ತಕ್ಕೆ ಬಂದಾಗಿನಿಂದ ನೆಲದ ಜತೆಗಿನ ಪಿಸುಮಾತುಗಳ ಆಲಿಸಿಕೊಂಡು ರೈತರ ಕಣ್ಣೋಟದಲ್ಲಿ ಕವಿತೆ ಬರೆಯಲು ತೊಡಗಿದ್ದಾರೆ. ಈ ಕವಿತೆಗಳು ಚಂಸು ಅವರ ಮೊದಲ ಕವಿತೆಗಳಿಗಿಂತ ತೀರಾ ಭಿನ್ನವಾಗಿವೆ. ಈ ನೆಲದ ನಿಜದ ರೈತನ ನಾಡಿಮಿಡಿತದಂತೆ ಈ ಕವಿತೆಗಳು ಮಾತನಾಡುತ್ತವೆ. ಚಂಸು ಅವರಿಗಿರುವ ವಿಶಿಷ್ಟತೆ ಏನೆಂದರೆ ತನ್ನ ಹಳ್ಳಿ ಕೂನುಬೇವಿನ ಹೊಲದಲ್ಲಿ ಉಳುಮೆ ಮಾಡಿಕೊಂಡೇ ಪೇಸ್‍ಬುಕ್ ಮತ್ತು ಅಂತರ್ಜಾಲದಲ್ಲಿ ಲೋಕದ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ ಇದಕ್ಕೆಲ್ಲಾ ಪ್ರಖರವಾದ ವ್ಯಂಗ್ಯ ವಿಷಾದ ಸಿಟ್ಟು ತಣ್ಣನೆಯ ಪ್ರತಿರೋಧದ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಈ ಪ್ರತಿಕ್ರಿಯೆಯನ್ನು ದಾಟಿಸಲು ಚಂಸು ಕವಿತೆಯನ್ನು ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಟಿ.ಕೆ.ತ್ಯಾಗರಾಜ್ ಅವರು ಸಂಪಾದಕರಾಗಿರುವ `ದ ಡೆಕ್ಕನ್ ನ್ಯೂಸ್’ ಅಂತರ್ಜಾಲ ಪತ್ರಿಕೆಯಲ್ಲಿ ಚಂಸು `ಭಪ್ಪರೇ ಶವ್ವಾ’ ಎನ್ನುವ ಅಂಕಣ ಬರೆಯುತ್ತಾರೆ. ಬಯಲಾಟ ದೊಡ್ಡಾಟದಲ್ಲಿ ಪರಸ್ಪರ ಹೊಗಳುವ ಸಂದರ್ಭದಲ್ಲಿ ಅಲೆಲೆಲೆ ಭಪ್ಪರೇ ಶವ್ವಾ..! ಎನ್ನುವ ನುಡಿಗಟ್ಟನ್ನು ಬಳಸುತ್ತಾರೆ. ಹಾಗಾಗಿಯೇ ಚಂಸು ಸಾಮಾನ್ಯ ಜನರ ಬದುಕಿನ ಅಪರೂಪದ ಘಟನೆಗಳ ಕುರಿತು ಬರೆಯಲು `ಭಪ್ಪರೇ ಶವ್ವಾ..!’ ಎಂದು ಹೆಸರುಕೊಟ್ಟುಕೊಂಡಿದ್ದಾರೆ.

ಈ ಅಂಕಣವು ಲಘು ಹಾಸ್ಯಮಿಶ್ರಿತ ವ್ಯಂಗ್ಯ ನೋವು ಸಂಕಟ ಎಲ್ಲವನ್ನೂ ಬೆರೆಸಿದಂತಿದೆ. ಹೊಸ ತಲೆಮಾರು ಬರೆವ ಬರಹದಲ್ಲಿ ಇದು ವಿಶಿಷ್ಟವಾಗಿದೆ. ಗ್ರಾಮೀಣ ಚಿತ್ರಕಲಾವಿದ ಮುರಿಗೆಜ್ಜಪ್ಪ, ಅಪ್ಪಣ್ಣ, ಉಪ್ಪಾರ ಗುಡ್ಡಪ್ಪ, ಬಯಲಾಟದ ಅನುಭವ, ಶಿಶುನಾಳ ಶರೀಫರ ಹಾಡುಗಳು ನೆಲೆಗೊಂಡ ಬಗೆ, ರಂಗಭೂಮಿಯ ನಂಟು ಭಜನೆಯ ಒಡನಾಟ ಹೀಗೆ ಹಾವೇರಿ, ರಾಣೇಬೆನ್ನೂರು ಭಾಗದ ಸಾಂಸ್ಕøತಿಕ ಗುರುತುಗಳನ್ನು ಬೆರೆಸಿ ಅಲ್ಲಿಯದ್ದೇ ಆದ ಉಪಭಾಷೆಯ ನುಡಿಗಟ್ಟನ್ನು ಬಳಸಿ ವಿಶಿಷ್ಟ ಸಂಕಥನದಂತೆ ಈ ಅಂಕಣ ಬರೆಯುತ್ತಿದ್ದಾರೆ.

`ಪ್ರತಿದಿನವೂ/ವಲಸೆ ಬರುವ/ ಸೂರ್ಯ ಚಂದ್ರರಿಗೆ/ ಸಿಕ್ಕಬಹುದೇ? ಪೌರತ್ವದ ಕೊಡುಗೆ ! ಆದರೂ ನಿತ್ಯ/ ಈ ಅತಿಕ್ರಮಣವನ್ನು ಸಹಿಸುವುದು ಹೇಗೆ?/ ಕೊರಳುಪಟ್ಟಿ/ ಹಿಡಿದು ದಬ್ಬಿರವರನು/ಹೊರಗೆ’ ಎಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಹೀಗೆ ಕವಿತೆ ಬರೆವ ಚಂಸು, ಸಾಸಿವೆ ಕಾಳಿನಷ್ಟು ಬರೆದು ಬೆಟ್ಟದಷ್ಟು ಪ್ರಚಾರ ಬಯಸುವ ಈ ಕಾಲದ ಹೊಸತಲೆಮಾರಿನ ಕವಯಿತ್ರಿ ಕವಿಗಳಿಗಿಂತ ನೂರುಪಾಲು ಎತ್ತರದಲ್ಲಿದ್ದಾರೆ. ರೈತರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾಯಕದಲ್ಲಿ ತೊಡಗಿ ಬೇಸಾಯದ ಕತಿ ಹೇಳುವ ಚಂಸುಗೆ ಒಳಿತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದ ಭಿವಾಡಿಯಲ್ಲಿ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ಘರ್ಷಣೆ: ಯುವಕ ಸಾವು

ಜೈಪುರ: ರಾಜಸ್ಥಾನದ ಭಿವಾಡಿಯಲ್ಲಿ ಸೋಮವಾರ ಬೆಳಗಿನ ಜಾವ ಗೋ ಕಳ್ಳಸಾಗಣೆದಾರರು ಮತ್ತು ಗೋರಕ್ಷಕರ ನಡುವೆ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದಾಗಿ ಮೃತನ ಕುಟುಂಬ ಪ್ರತಿಭಟನೆ ನಡೆಸಿದ್ದು, ಆತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು...

ಖಮೇನಿ ಹತ್ಯೆ ಬಗ್ಗೆ ಪ್ರಧಾನಿ ಮೋದಿ ತಮ್ಮ ನಿಲುವು ತಿಳಿಸಬೇಕು: ರಾಹುಲ್ ಗಾಂಧಿ ಒತ್ತಾಯ

ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿದ್ದಾರೆ. ಅಮೆರಿಕ ಮತ್ತು...

ಇರಾನ್‌ ಮೇಲೆ ಇಸ್ರೇಲ್ ದಾಳಿ: ಟೆಹ್ರಾನ್‌ನಿಂದ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕೋಮ್‌ಗೆ ಸ್ಥಳಾಂತರ

ನವದೆಹಲಿ: ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಗಳು ತೀವ್ರಗೊಳ್ಳುತ್ತಿರುವ ಮಧ್ಯೆ, ಟೆಹ್ರಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ, ಆದರೆ ಭಾರತೀಯ ರಾಯಭಾರ ಕಚೇರಿಯು ಮುನ್ನೆಚ್ಚರಿಕೆ ಕ್ರಮವಾಗಿ ತನ್ನ ಪ್ರಜೆಗಳನ್ನು ಮನೆಯೊಳಗೆ ಇರುವಂತೆ...

‘ಪಿಟಿಸಿಎಲ್‌ ಕಾಯ್ದೆ’ ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ

'ಪಿಟಿಸಿಎಲ್‌ (PTCL) ಕಾಯ್ದೆ' ಸಮರ್ಪಕ ಜಾರಿಗೆ ಆಗ್ರಹಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು 'ಪಿಟಿಸಿಎಲ್‌ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ' ಮುಖಂಡರು ಘೋಷಿಸಿದರು. ಬೆಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ...

ರಾಜಸ್ಥಾನ| ‘ನೀವು ಕೆಳಜಾತಿಯವರು, ಎಲ್‌ಎಲ್‌ಬಿ ನಿಮಗೆ ಸೂಕ್ತವಲ್ಲ..’; ದಲಿತ ವಿದ್ಯಾರ್ಥಿನಿಗೆ ಪ್ರಾಧ್ಯಾಪಕರಿಂದ ಜಾತಿ ನಿಂದನೆ

ರಾಜಸ್ಥಾನದ ಚುರುವಿನ ಸರ್ಕಾರಿ ಕಾನೂನು ಕಾಲೇಜಿನ ಮೂರನೇ ಸೆಮಿಸ್ಟರ್ ದಲಿತ ಎಲ್‌ಎಲ್‌ಬಿ ವಿದ್ಯಾರ್ಥಿನಿಯೊಬ್ಬರು, ಇಬ್ಬರು ಪ್ರಾಧ್ಯಾಪಕರಿಂದ ಜಾತಿ ಆಧಾರಿತ ನಿಂದನೆ, ಬೆದರಿಕೆ ಮತ್ತು ತಾರತಮ್ಯ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಿದ್ದಾರೆ. ಎಸ್‌ಸಿ...

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ: ಮಹಿಳೆ ಸಾವು, ಮೂವರ ರಕ್ಷಣೆ

ಬೆಂಗಳೂರು: ಸೋಮವಾರ ರಾತ್ರಿ ಉತ್ತರ ಬೆಂಗಳೂರಿನಲ್ಲಿರುವ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತರನ್ನು 55 ವರ್ಷದ ಸವಿತಾ ಎಂದು ಗುರುತಿಸಲಾಗಿದೆ. ಅವರ ಪತಿ ಗುತ್ತಿಗೆದಾರ ರಮೇಶ್...

ಲಕ್ನೋ | 12 ವರ್ಷದ ಬಾಲಕ ಉನೈಝ್ ಗುಂಡೇಟಿಗೆ ಬಲಿ : ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದ ಕುಟುಂಬ

ಉತ್ತರ ಪ್ರದೇಶದ ಲಕ್ನೋದಲ್ಲಿ 12 ವರ್ಷದ ಬಾಲಕನೊಬ್ಬ ಗುಂಡೇಟಿನಿಂದ ಮೃತಪಟ್ಟಿದ್ದು, ಆತನನ್ನು ಕೊಲೆ ಮಾಡಲಾಗಿದೆ. ಕೃತ್ಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ದೇಶದ ಗಮನ ಸೆಳೆದಿದ್ದು, ಸಾಮಾಜಿಕ...

ಕೇರಳ: ಪೊಲೀಸರ ‘ದುರುದ್ದೇಶಪೂರಿತ ಮೊಕದ್ದಮೆ’ಗಾಗಿ ನಿವೃತ್ತ ಸೇನಾ ಅಧಿಕಾರಿಗೆ ಕೇರಳ ನ್ಯಾಯಾಲಯದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಕೊಲ್ಲಂ, ಕೇರಳ: ಪೊಲೀಸರ "ದುರುದ್ದೇಶಪೂರಿತ ಮೊಕದ್ದಮೆ"ಗಾಗಿ ನಿವೃತ್ತ ಸೇನಾ ಅಧಿಕಾರಿಯೊಬ್ಬರಿಗೆ ಕೇರಳ ನ್ಯಾಯಾಲಯವು 5 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ.  ಪ್ರಿನ್ಸಿಪಲ್ ಮುನ್ಸಿಫ್ ರಾಗಿ ಎಸ್. ಅವರು, 54 ವರ್ಷದ ನಿವೃತ್ತ ನಾಯಕ್ ಸುಬೇದಾರ್...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಒಳಚರಂಡಿಗೆ ಇಳಿದು ಇಬ್ಬರು ಪೌರ ಕಾರ್ಮಿಕರು ಸಾವು: ವಿಷಕಾರಿ ಅನಿಲ ಶಂಕೆ

ಇಂದೋರ್‌ನ ಚೋಯಿತ್ರಮ್ ಆಸ್ಪತ್ರೆ ಬಳಿ ಸೋಮವಾರ ಒಳಚರಂಡಿ ಒಳಗೆ ಇಳಿದ ಕಾರಣ ಕರಣ್ ಮತ್ತು ಅಜಯ್ ಎಂದು ಗುರುತಿಸಲಾದ ಇಂದೋರ್ ಮಹಾನಗರ ಪಾಲಿಕೆಯ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.  ವಲಯ 13ರ...

‘ಅತೃಪ್ತ ಆತ್ಮಗಳ ಹತಾಶ ಹೇಳಿಕೆ’ : ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ....