Homeಮುಖಪುಟಬಿಜೆಪಿಯ ದುರಹಂಕಾರಕ್ಕೆ ಜನ ಪಾಠ ಕಲಿಸಿದ್ದಾರೆ: ’ಸಾಮ್ನಾ’ದಲ್ಲಿ ಮಿತ್ರನಿಗೆ ತಿವಿದ ಶಿವಸೇನೆ

ಬಿಜೆಪಿಯ ದುರಹಂಕಾರಕ್ಕೆ ಜನ ಪಾಠ ಕಲಿಸಿದ್ದಾರೆ: ’ಸಾಮ್ನಾ’ದಲ್ಲಿ ಮಿತ್ರನಿಗೆ ತಿವಿದ ಶಿವಸೇನೆ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿ, ಶಿವಸೇನೆ ೧೫೮ ಸ್ಥಾನಗಳನ್ನು ಬಾಚಿಕೊಂಡಿವೆ. ಇತ್ತ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿ ೯೮ ಸ್ಥಾನಗಳನ್ನು ಗೆದ್ದಿದೆ. ಬಹುಮತ ಸಾಧಿಸಿರುವ ಬಿಜೆಪಿ ಮತ್ತು ಶಿವಸೇನೆಯಲ್ಲೀಗ ಸಿಎಂ ಹುದ್ದೆಗಾಗಿ ಜಟಾಪಟಿ ನಡೆದಿದೆ.

ಶಿವಸೇನೆ ತನ್ನ ಪತ್ರಿಕೆ ಸಾಮ್ನಾದಲ್ಲಿ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿದೆ. ಮಹಾರಾಷ್ಟ್ರದಲ್ಲಿ ಜನಾದೇಶ ಅಧಿಕಾರದ ದುರಹಂಕಾರದಲ್ಲಿದ್ದವರಿಗೆ ಸರಿಯಾಗಿ ಏಟು ಕೊಟ್ಟಿದೆ. ’ಮಹಾ’ ಜನಾದೇಶ, ಕಾಂಗ್ರೆಸ್‌ ಚೇತರಿಕೆ ಕಂಡಿದ್ದು, ಹೆಚ್ಚು ಸುಧಾರಿಸುತ್ತಿದೆ ಎಂದು ಹೇಳುತ್ತಿದೆ. ಸಮೀಕ್ಷೆಗಿಂತ ಮತದಾರರ ಉತ್ತರ ಮುಖ್ಯ ವಿರೋಧ ಪಕ್ಷಗಳಾದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ನತ್ತ ಒಲವು ತೋರಿದ್ದನ್ನು ಸ್ಪಷ್ಟಪಡಿಸಿವೆ. ವಿರೋಧ ಪಕ್ಷಗಳನ್ನು ರಾಜಕೀಯದಲ್ಲಿ ಸುಲಭಕ್ಕೆ ಮುಗಿಸಲು ಸಾಧ್ಯವಿಲ್ಲ ಎಂಬುದನ್ನು ಹೇಳಿವೆ ಎಂದು ಶಿವಸೇನೆ ತನ್ನ ಮಿತ್ರ ಬಿಜೆಪಿಯನ್ನು ಟೀಕಿಸಿದೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ೨೮೮ ಕ್ಷೇತ್ರಗಳ ಪೈಕಿ ೨೦೦ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ೨೦೦ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದರು. ಆದರೆ ಮಹಾರಾಷ್ಟ್ರ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಕೇವಲ ೧೫೮ ಕ್ಷೇತ್ರಗಳನ್ನು ಗೆದ್ದಿದೆ.

’೨೦೧೪ಕ್ಕಿಂತ ಈ ಬಾರಿಯ ಚುನಾವಣಾ ಫಲಿತಾಂಶ ಕಡಿಮೆ ಬಂದಿದೆ. ಇವಿಎಂ ಮತ್ತು ವಿಪಕ್ಷಗಳನ್ನು ವಿಭಜಿಸುವ ತಂತ್ರಗಳ ಮೂಲಕ ಗೆಲ್ಲುತ್ತೇವೆ ಎಂಬ ನಂಬಿಕೆಯನ್ನು, ೨೦೧೯ರ ವಿಧಾನಸಭಾ ಚುನವಣಾ ಫಲಿತಾಂಶ ಹುಸಿಗೊಳಿಸಿದೆ ಎಂಬುದಾಗಿ ಶಿವಸೇನೆ ಹೇಳಿದೆ.

’ಸರಾಸರಿ ಲೆಕ್ಕಾಚಾರ ಹಾಕಿದರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಹಿಂದೆಂದಿಗಿಂತ ಈ ಬಾರಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿವೆ. ಇದು ವಿರೋಧ ಪಕ್ಷಗಳನ್ನು ಅಷ್ಟು ಸುಲಭಕ್ಕೆ ಮುಗಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಎನ್‌ಸಿಪಿ 50 ಸ್ಥಾನಗಳ ಗಡಿ ದಾಟಿದರೆ, ನಾಯಕರಿಲ್ಲದ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಂಡಿದೆ. ಫಲಿತಾಂಶ ಅಧಿಕಾರದ ದುರಹಂಕಾರವನ್ನು ತೋರಿಸಿದರೆ ಸೋಲೊಂದೇ ಉತ್ತರ ಎಂಬುದನ್ನು ಮತದಾರರು ತೋರಿಸಿಕೊಟ್ಟಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಹೇಳಿದೆ.

೨೦೧೪ರಲ್ಲಿ ಬಿಜೆಪಿ ೧೨೨ ಸ್ಥಾನ ಗೆದ್ದಿತ್ತು. ಆದರೆ ೨೦೧೯ರ ವೇಳೆಗೆ ೧೦೫ಕ್ಕೆ ಇಳಿದಿದೆ. ಶಿವಸೇನೆ ೨೦೧೪ರಲ್ಲಿ ೬೩ ಸ್ಥಾನ ಗೆದ್ದುಕೊಂಡಿತ್ತು. ಆದರೆ ಈ ಬಾರಿ ೫೬ ಸ್ಥಾನ ಗೆದ್ದಿದ್ದು, ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆದ್ದಿರುವುದನ್ನು ತೋರಿಸುತ್ತಿದೆ. ೨೫ ಸ್ಥಾನಗಳನ್ನು ಇತರೆ ಪಕ್ಷದ ನಾಯಕರು ಗೆದ್ದಿದ್ದಾರೆ. ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ. ’ನೀವು ಅಧಿಕಾರದ ದುರಂಹಕಾರ ತೋರಿಸಿದರೆ, ಪಾಠ ಕಲಿಸುತ್ತೇವೆ ಎಂಬ ಎಚ್ಚರಿಕೆಯನ್ನು ಜನ ನೀಡಿದ್ದಾರೆ’ ಎಂದು ಹೇಳಿದೆ.

ಶಿವಾಜಿ ಮಹಾರಾಜರ ಸತಾರಾದಲ್ಲಿ ಬಿಜೆಪಿ ಅಭ್ಯರ್ಥಿ ಉದಯನ್‌ರಾಜೇ ಸೋತಿದ್ದಾರೆ. ಶಿವಾಜಿ ಮಹಾರಾಜರ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಜನ ಒಪ್ಪಿಲ್ಲ. ಶಿವಾಜಿ ಹೆಸರು ಹೇಳಿಕೊಂಡು ರಾಜಕೀಯ ಮಾಡುವುದು, ಅವಕಾಶ ತೆಗೆದುಕೊಳ್ಳುವುದನ್ನು ಜನ ವಿರೋಧಿಸಿದ್ದು, ಸೋಲಿನ ಕಹಿ ಉಣಿಸಿದ್ದಾರೆ.

ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಹೆಚ್ಚಿನ ಸೀಟು ಗೆಲ್ಲಲು ಹೇಗೆ ಸಾಧ್ಯವಾಯಿತು..? ಚುನಾವಣೆ ಪೂರ್ವ ಸಮೀಕ್ಷೆಗಳ ತೀರ್ಪಿಗೆ ಮತದಾರರ ತೀರ್ಪು ವಿರುದ್ಧವಾಗಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಾಕಷ್ಟು ರ್‍ಯಾಲಿಗಳನ್ನು ನಡೆಸಿದರೂ ಸತಾರಾದಲ್ಲಿ ಉದಯನ್‌ರಾಜೇ ಗೆಲ್ಲಲು ಸಾಧ್ಯವಾಗಿಲ್ಲ. ಸತಾರಾದ ಜನತೆ ಎನ್‌ಸಿಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಅಲ್ಲದೇ ಬಿಜೆಪಿ ಸಿಎಂಗಿಂತ ಶರದ್‌ ಪವಾರ್‌ ಜನಪ್ರಿಯತೆ ಹೆಚ್ಚಿದೆ ಎಂಬುದನ್ನು ಸತಾರಾ ಜನತೆ ಸಾಬೀತುಪಡಿಸಿದ್ದಾರೆ ಎಂದು ಬರೆದಿದೆ.

ಇತ್ತ ಮರಾಠಿ ಪತ್ರಿಕೆಯೊಂದು ಬಿಜೆಪಿ, ಎನ್‌ಸಿಪಿಯನ್ನು ಹಣಿಯಲು ಸಾಕಷ್ಟು ಕಸರತ್ತು ನಡೆಸಿತು. ಆದರೂ ಸಹ ಶರದ್‌ ಪವಾರ್‌ ಪಕ್ಷಕ್ಕೆ ಮುಂದೆ ಭವಿಷ್ಯವಿದೆ ಎಂಬುದನ್ನು ಮಹಾ ಜನಾದೇಶ ಎತ್ತಿ ಹಿಡಿದಿದೆ ಎಂದು ವಿಶ್ಲೇಷಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...