Homeಚಳವಳಿಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ..

- Advertisement -
- Advertisement -

ಯುಗಧರ್ಮದ ಸಮಸ್ಯೆಗಳಿಗೆ ಸ್ಪಂದಿಸುವ, ಸಂವಾದಕ್ಕೆ ತೆರೆದುಕೊಂಡು, ಅದನ್ನು ಬೆಳೆಸಿ ತನ್ನ ಸಹನಾಗರಿಕರ ಜಾಗೃತಿಗಾಗಿ ತಮ್ಮ ಕಲೆಯನ್ನು ದುಡಿಸಿಕೊಳ್ಫ್ಳುವ ಕಲಾವಿದರು ವಿರಳವಾಗುತ್ತಿದ್ದರೂ ಅಂತವರು ನಮ್ಮ ನಡುವೆ ಉಳಿದಿರುವುದಕ್ಕೆ ಹಲವು ಉದಾಹಣೆಗಳಿವೆ. ಅಂತಹ ಕಲಾವಿದರ ಪ್ರತಿಭೆಯನ್ನು ಜನರು ಗೌರವಿಸುವ ಕಾರಣ್ಕಕ್ಕಾಗಿಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ, ಫ್ಯಾಸಿಸ್ಟ್ ಶಕ್ತಿಗಳು ಅಂತಹ ಕಲಾವಿದರಿಗೆ ನಿರ್ಬಂಧಗಳನ್ನು ಹೇರುವ ಮಾರ್ಗಗಳನ್ನು ಹುಡುಕುತ್ತಿರುತ್ತವೆ. ಹಾಸ್ಯ ಕಲಾವಿದರಾದ ಮನಾವರ್ ಫಾರೂಖಿ, ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವುದರ ಹಿಂದೆ ಕಲಾವಿದನ ಮೇಲೆ ಪ್ರಭುತ್ವಕ್ಕಿರುವ ಭಯವನ್ನು ಕಾಣಬಹುದು. ಇಂತಹ ಸಂದರ್ಭಗಳಲ್ಲಿ ಬಹುಸಂಖ್ಯೆಯ ಜನರು ಕಲಾವಿದನ ಬೆನ್ನಿಗೆ ನಿಂತರೆ, ಆತನ ಪ್ರತಿರೋಧದ ನೆಲೆಗಳು ಮತ್ತಷ್ಟು ದಿಟ್ಟವಾಗಿ ಮೂಡಿಬರುತ್ತವೆ. ನಾಡಿನ ಪ್ರಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿಚಾರದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದೆ.

ಹಂಸಲೇಖ ಅವರು ಮೈಸೂರಿನಲ್ಲಿ ಮಾತನಾಡುತ್ತಾ ಮಾಂಸಾಹಾರದ ಕುರಿತು, ಪೇಜಾವರ ಮಠದ ದಿವಂಗತ ವಿಶ್ವೇಶ ತೀರ್ಥ ಸ್ವಾಮೀಜಿಯವರ ಕುರಿತು ಆಡಿದ ಮಾತುಗಳು ವಿವಾದಕ್ಕೆ ಕಾರಣವಾದವು. “ಅಸ್ಪೃಶ್ಯತೆ ನಿವಾರಣೆ ಕಾರ್ಯಕ್ರಮವು ಮೇಲ್ಜಾತಿಗಳ ದೊಡ್ಡಸ್ತಿಕೆ ಪ್ರದರ್ಶನ ಆಗಬಾರದು” ಎಂಬುದು ಹಂಸಲೇಖ ಅವರ ಮಾತಿನ ಆಶಯವಾಗಿತ್ತು. “ದಲಿತರ ಮನೆಗೆ ಬಲಿತರು ಬರುವುದಲ್ಲ. ಬಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಅದು ನಿಜವಾದ ಸಮಾನತೆ” ಎಂದಿದ್ದ ಹಂಸಲೇಖರು ಪೇಜಾವರ ಶ್ರೀಗಳು ದಲಿತ ಕೇರಿಗಳಿಗೆ ಭೇಟಿ ನೀಡುತ್ತಿದ್ದನ್ನು ಉಲ್ಲೇಖಿಸಿದ್ದರು. ಈ ಕುರಿತು ಮಾತನಾಡುತ್ತಾ ಪ್ರಾಸಂಗಿಕವಾಗಿ, “ದಲಿತರು ಕೊಡುವ ಆಹಾರವನ್ನು ತಿನ್ನುತ್ತಾರಾ, ಕುರಿ ಕೋಳಿ ರಕ್ತವನ್ನು ಫ್ರೈ ಮಾಡಿಕೊಟ್ಟರೆ ತಿನ್ನುತ್ತಾರಾ?” ಎಂದು ಹೇಳಿಕೆ ನೀಡಿದರು. ಇದು ವಿವಾದಕ್ಕೆ ಕಾರಣವಾಯಿತು. ಸ್ವಾಮೀಜಿಯವರಿಗೆ ಅವಮಾನಿಸಲಾಗಿದೆ ಎಂದು ಬಿಂಬಿಸಲಾಯಿತು. ವಿವಾದ ಭುಗಿಲೆದ್ದ ಬಳಿಕ ಹಂಸಲೇಖ ಅವರು ಕ್ಷಮೆಯನ್ನೂ ಯಾಚಿಸಿದರು. ಈ ನಡುವೆ ಮಾಂಸಾಹಾರದ ಕುರಿತು ಮಹಿಳೆಯೊಬ್ಬರು ತೋರಿದ ಅಸಹನೆ, ‘ಮಾಂಸಾಹಾರ-ಸಸ್ಯಾಹಾರ’ದ ಚರ್ಚೆಗೆ ನಾಂದಿಯಾಯಿತು. ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ಅವರನ್ನು ಪೀಡಿಸುವ ಕೆಲಸ ಮುಂದುವರಿಯಿತು. “ಬೃಂದಾವನಕ್ಕೆ ಬಂದು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದು, ಬ್ರಾಹ್ಮಣ್ಯದ, ಒಂದು ವರ್ಗದ ಸವರ್ಣೀಯರ ಅಹಂಕಾರದ ಪ್ರತಿರೂಪದಂತೆ ನಾಡಿನ ಜನತೆಗೆ ಭಾಸವಾಯಿತು. ದೊಡ್ಡ ಮಟ್ಟದಲ್ಲಿ ಜನರು ಹಂಸಲೇಖರ ಪರ ನಿಂತರು. ಈ ನಡುವೆ ಪ್ರಕರಣವೂ ದಾಖಲಾಗಿ, ಹಂಸಲೇಖರು ಬಸವನಗುಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಹೇಳಿಕೆಯನ್ನು ನೀಡಿಬಂದರು. ನವೆಂಬರ್ 26ರ ಸಂವಿಧಾನ ದಿನದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಸೇರಿದ ಜನರು ಹಂಸಲೇಖರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಬಸವನಗುಡಿ ಪೊಲೀಸರ ವರ್ತನೆಯನ್ನು ಖಂಡಿಸಿದರು.

ಪ್ರಕರಣ ಇಷ್ಟು ಚರ್ಚೆಯಾದ ನಂತರದಲ್ಲಿ ಹಂಸಲೇಖ ಅವರು ನೀಡಿರುತ್ತಿರುವ ಪ್ರತಿಮಾತ್ಮಕ ಪ್ರತಿಕ್ರಿಯೆಗಳು ಕೋಮು ವಿಷಮತೆ ಬಿತ್ತುವ ರಾಜಕಾರಣವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಸುಳ್ಳಲ್ಲ. “ಸುಧಾರಣೆಯ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ” ಎಂದು ತಿಳಿಸಿದ ಅವರು ‘ಹಿಟ್ ರನ್ ಕೇಸ್’ ಆಗಲಿಲ್ಲ. ಸಂವಿಧಾನ ಆಶಯಗಳನ್ನು ಸ್ಮರಿಸಿದರು. “ಪೂಜ್ಯ ಕನ್ನಡಿಗರೇ, ನಿಮ್ಮ ಪ್ರೀತಿ ನನಗೆ ತಲುಪಿದೆ” ಎಂದು ಪತ್ರ ಬರೆದರು. ಪ್ರೀತಿ ಆವೇಶಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು. ತನ್ನ ಬೆನ್ನ ಹಿಂದೆ ನಿಂತ ಬಹುದೊಡ್ಡ ಜನಸಮೂಹವನ್ನು ನೆನೆದರು. ಮುಂದುವರಿದ ಹಂಸಲೇಖರು, ಸಂವಿಧಾನ ಗೀತೆಯನ್ನು ಹಂಚಿಕೊಂಡರು.

“ನಾನು, ನೀನು, ನಮಗಾಗಿರೋದೇ ಕಾನೂನು,
ನಾವೂನು, ನೀವೂನು ಕಾನೂನಡಿಯಲಿ ಬಾಳೋಣು”
ಬಾಳೋಣು, ಬೆಳೆಯೋಣು, ಬಾಂಧವ್ಯವನೇ ಕಣ್ಣೋಣು
ಜೀವನ ವಿಧಾನಯಾನ, ಸಮತಾ ಪ್ರಧಾನ ಗಾನ
ಬಹುತ್‌ ಭಾರತದ ಬೃಹತ್ ಸಂವಿಧಾನ
ಓ ಬಡವರ ಗೀತೆ, ಓ ಬಹುಜನ ಮಾತೆ
ಓ ಬಡವರ ಗೀತೆ, ಓ ಬಹುಜನ ಮಾತೆ
ಅಕ್ಷರ ರೂಪದ ಶಾಂತಿಯ ದನಿಯ
ಪ್ರಜಾಪ್ರಭುತ್ವದ ಇನ್‌ಸ್ಟಿಟ್ಯೂಷನ್‌
“ವಂದೇ ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”
“ವಂದೇ ಇಂಡಿಯನ್‌ ಕಾನ್‌ಸ್ಟಿಟ್ಯೂಷನ್‌”
– ಎಂದು ಹಂಸಲೇಖರು ಬರೆದರು. ವಿವಾದದ ಬಳಿಕ ಸರಿಗಮಪ ಕಾರ್ಯಕ್ರಮಕ್ಕೆ ತೆರಳಿದ ಅವರು, ಶಾಂತಿ, ಸಹಬಾಳ್ವೆ, ಸಹೋದರತೆ, ಪ್ರೀತಿಯ ಸಂದೇಶಗಳನ್ನು ಸಾರಿದ ಬೌದ್ಧತ್ವವನ್ನು ತಮ್ಮ ವಸ್ತ್ರಾಲಂಕಾರದಲ್ಲಿ ಢಾಳಾಗಿ ತೋರಿಸಿಕೊಂಡರು.

ಲೇಖಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅವರ ಆತ್ಮ ಕಥನ ‘ಯರೆಬೇವು’ ಪುಸ್ತಕ ಬಿಡುಗಡೆ ಹಾಗೂ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಾ, “ಧರ್ಮೋಕ್ರಸಿಯನ್ನು ಬದಿಗೆ ಸರಿಸಿ ಡೆಮಾಕ್ರಸಿ ಉಳಿಸೋಣ” ಎಂದು ಪುನರುಚ್ಚರಿಸಿದರು. ಹಂಸಲೇಖರ ಜೊತೆ ನಾಡಿನ ಜನರು ನಿಂತು, ಒಬ್ಬ ಕಲಾವಿದನ ನೋವಿಗೆ ಸ್ಪಂದಿಸಿದ್ದೇ ಇದಕ್ಕೆಲ್ಲ ಕಾರಣ.

ಹಂಸಲೇಖರು ಬುದ್ಧ, ಬಸವ, ಅಂಬೇಡ್ಕರ್‌, ಗಾಂಧಿಯ ಬಗ್ಗೆ ಮಾತನಾಡುತ್ತಾರೆ. ಬುದ್ಧ, ಬಸವ, ಭೀಮ ಅನುಯಾಯಿಗಳ ಜೊತೆಯಲ್ಲಿ, ಬುದ್ಧ ಮತ್ತು ಅಂಬೇಡ್ಕರ್‌ ಪ್ರತಿಮೆಯ ಮುಂದೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರ ರಚನಾತ್ಮಕ ಸಾಂಸ್ಕೃತಿಕ ಪ್ರತಿರೋಧವು ಆಪ್ತವಾಗುತ್ತದೆ. ಹಿಂಸೆಯನ್ನು ಎಂದಿಗೂ ಪ್ರಚೋದಿಸದ ಅವರು ‘ನೆಲದ ಪದ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, “ನಾವು ನೇಯುವ ಕೆಲಸ ಮಾಡೋಣ. ಹರಿಯುವುದು ಬೇಡ. ಮನಸ್ಸುಗಳನ್ನು, ಹೃದಯಗಳನ್ನು ಬೆಸೆಯೋಣ” ಎಂದು ನುಡಿದಿದ್ದಾರೆ. ರಾಷ್ಟ್ರಪಿತ ಗಾಂಧೀಜಿಯವರನ್ನು ‘ಹರಾಮಿ’ ಎನ್ನುವ, ಅಂತಹ ಹೇಳಿಕೆಗಳಿಗೆ ಶಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಹಿಂಸಾ ಪ್ರವೃತ್ತಿ, ಒಡೆದು ಆಳುವ ನೀತಿ ರಾರಾಜಿಸುತ್ತಿರುವ ಕಾಲಘಟ್ಟದಲ್ಲಿ ಹಂಸಲೇಖ ಅವರು, “ನೇಯುವ, ಬೆಸೆಯುವ” ಪರಿಭಾಷೆಯನ್ನು ಬಳಸುತ್ತಿದ್ದಾರೆ ಎಂಬುದು ಮುಖ್ಯ. ಸಂವಿಧಾನ ವಿರೋಧಿ ಕೃತ್ಯಗಳನ್ನು ಪ್ರಭುತ್ವವೇ ಸಮರ್ಥಿಸುವ ಕಾಲಘಟ್ಟದಲ್ಲಿ ಈ ಮಾತುಗಳನ್ನು ಹಂಸಲೇಖ ಅವರು ಆಡುತ್ತಿದ್ದಾರೆಂಬುದು ಮುಖ್ಯ.

ಹಿಂಸೆಯನ್ನು ಅಹಿಂಸೆಯಿಂದಷ್ಟೇ ಮಣಿಸಬಹುದು ಎಂಬ ಬಹುದೊಡ್ಡ ಸಂದೇಶವನ್ನು ಸಾರಿದ ಗಾಂಧಿ ಮಾರ್ಗವನ್ನು ತುಳಿದು ರೈತರು ಗೆದ್ದಂತೆ, ‘ನೇಯುವ’ ಕೆಲಸದಿಂದ ಜನಮಾನಸವನ್ನು ಹಂಸಲೇಖರು ಗೆಲ್ಲುತ್ತಿದ್ದಾರೆ. ಸಾಂಸ್ಕೃತಿಕ ಪ್ರತಿರೋಧವನ್ನು ಸೃಜನಾತ್ಮಕವಾಗಿ ದಾಖಸುತ್ತಿದ್ದಾರೆ. ಹಂಸಲೇಖ ಅವರು ಒಂದು ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಅದೇ ಮಾರ್ಗದಲ್ಲಿ ಕನ್ನಡ ಚಿತ್ರರಂಗದ ಸಂವೇದನಾಶೀಲ ಮನಸ್ಸುಗಳೂ ಚಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ.


ಇದನ್ನೂ ಓದಿರಿ: ಜೇನು ಕುರುಬರ ಕಲೆಯನ್ನು ಝೀ ವಾಹಿನಿಯಲ್ಲಿ ಪ್ರದರ್ಶಿಸೋಣ: ಹಂಸಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...