ಉತ್ತರ ಪ್ರದೇಶದ ಮಥುರಾದಲ್ಲಿ ಕೃಷ್ಣ ಜನ್ಮಭೂಮಿ ಬಳಿಯ ಮತ್ತೊಂದು ಮಸೀದಿಯನ್ನು ತೆಗೆದುಹಾಕುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ‘ಮಿನಾ ಮಸೀದಿ’ ಎಂದು ಕರೆಯಲಾಗುವ ಈ ಧಾರ್ಮಿಕ ಕೇಂದ್ರ ಮೊಘಲರ ಕಾಲಕ್ಕೆ ಸೇರಿದ್ದು ಎಂದು ವರದಿಯಾಗಿದೆ. ಕೃಷ್ಣ ಜನ್ಮಭೂಮಿ ಸಂಕೀರ್ಣದ ಪೂರ್ವ ಭಾಗದಲ್ಲಿರುವ ಠಾಕೂರ್ ಕೇಶವ್ ದೇವ್ ಜಿ ದೇವಸ್ಥಾನದ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭಾದ (ಎಬಿಎಚ್‌ಎಂ) ರಾಷ್ಟ್ರೀಯ ಖಜಾಂಚಿ ದಿನೇಶ್ ಶರ್ಮಾ ಅವರು ಕೃಷ್ಣನ ಭಕ್ತ ಮತ್ತು ಅವರ ‘ವಾದ್ ಮಿತ್ರ’ ಎಂದು ಮೊಕದ್ದಮೆ ಹೂಡಿದ್ದಾರೆ. ಮಥುರಾ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾದ ಜ್ಯೋತಿ ಸಿಂಗ್ ಅವರ ನ್ಯಾಯಾಲಯದಲ್ಲಿ ಈ ಮೊಕದ್ದಮೆ ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದೇ ಪ್ರದೇಶದ ಮತ್ತೊಂದು ಪ್ರಮುಖ ಮಸೀದಿಯಾದ ಶಾಹಿ ಈದ್ಗಾ ಮಸೀದಿಯನ್ನು ಸಂಕೀರ್ಣದಿಂದ ಸ್ಥಳಾಂತರಿಸುವಂತೆ ಕೋರಿ ಈಗಾಗಲೇ ವಿವಿಧ ಮಥುರಾ ನ್ಯಾಯಾಲಯಗಳಲ್ಲಿ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಮಸೀದಿಯು ‘ಕೃಷ್ಣನ ಜನ್ಮಸ್ಥಳ’ದ ಪ್ರಮುಖ ಸ್ಥಳವಾದ ದೇವಾಲಯದ ಆವರಣದ 13.37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ ಎಂದು ಅರ್ಜಿದಾರರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ದುಷ್ಕರ್ಮಿಗಳ ಬೆದರಿಕೆ: ಮಸೀದಿ ವೀಕ್ಷಣೆ ಪ್ರವಾಸ ರದ್ದು ಮಾಡಿದ ಶಿಶುವಿಹಾರ
ಹೊಸದಾಗಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ದಿನೇಶ್ ಶರ್ಮಾ ಅವರು ಪ್ರಕರಣದಲ್ಲಿ ‘ಅರ್ಜಿದಾರರ ಸಂಖ್ಯೆ 1’ ಆಗಿರುವ ಠಾಕೂರ್ ಕೇಶವ್ ದೇವ್ ಜಿ ಮಹಾರಾಜ್ (ಶ್ರೀಕೃಷ್ಣನ ಇನ್ನೊಂದು ಹೆಸರು) ಅವರ ಭಕ್ತ ಅನುಯಾಯಿ ಎಂದು ಹೇಳಿಕೊಂಡಿದ್ದಾರೆ.
ದಿನೇಶ್ ಶರ್ಮಾ ಈ ಹಿಂದೆ ಕೃಷ್ಣ ಜನ್ಮಭೂಮಿ ಪಕ್ಕದಲ್ಲಿರುವ ಶಾಹಿ ಮಸೀದಿ ಈದ್ಗಾವನ್ನು ತೆಗೆಯುವಂತೆ ಕೋರಿ ಪ್ರಕರಣ ದಾಖಲಿಸಿದ್ದರು.
“ಕೃಷ್ಣ ಜನ್ಮಭೂಮಿ ಇರುವ ಮಥುರಾ ನಗರದಲ್ಲಿ 13.37 ಎಕರೆ ಜಮೀನು ಹೊಂದಿರುವ ಠಾಕೂರ್ ಕೇಶವ್ ದೇವ್ ಜಿ ಮಹಾರಾಜ್ ಅವರ ಆಸ್ತಿಯನ್ನು ರಕ್ಷಿಸುವುದು ಮೊಕದ್ದಮೆಯ ಮೂಲ ಉದ್ದೇಶವಾಗಿದೆ. ನಾವು ಈಗ ವೃಂದಾವನ ರೈಲುಮಾರ್ಗದ ಬಳಿ ದೀಗ್ ಗೇಟ್‌ನಲ್ಲಿ ದೇವರ ಒಡೆತನದ ಜಮೀನಿನಲ್ಲಿ ಇರುವ ಮಿನಾ ಮಸೀದಿಯ ಹೆಸರಿನಲ್ಲಿ ನಿರ್ಮಿಸಿರುವ ನಿರ್ಮಾಣವನ್ನು ತೆಗೆದುಹಾಕಲು ಕೋರಿದ್ದೇವೆ.” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣದ ತೀರ್ಪು: ‘ಹೈಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ’ಎಂದ ಮುಸ್ಲಿಂ ಅರ್ಜಿದಾರರು
ಹೊಸ ಮೊಕದ್ದಮೆಯ ಪ್ರತಿವಾದಿಗಳಾಗಿ ಲಕ್ನೋದ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯ ಅಧ್ಯಕ್ಷರು ಮತ್ತು ಮಥುರಾದ ಮಿನಾ ಮಸೀದಿ (ಡೀಗ್ ಗೇಟ್)ಯ ಇಂಟೆಝಾಮಿಯಾ ಸಮಿತಿಯ ಕಾರ್ಯದರ್ಶಿಯಾಗಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ ಎಂದು ಅರ್ಜಿದಾರರ ಪರ ವಕೀಲ ದೀಪಕ್ ಶರ್ಮಾ ತಿಳಿಸಿದ್ದಾರೆ.


