ಇಂದು (ಶುಕ್ರವಾರ) ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಬಳಿಕ ಕಾಂಗ್ರೆಸ್ ಪಕ್ಷ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ”40% ಕಮಿಷನ್ ಬೇಡಿಕೆಯ ಆರೋಪ ಹೊತ್ತಿರುವ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿರುವವರಿಗೆ ಕರೆ ಮಾಡಿ ನಿಮ್ಮ ಜೊತೆ ಸದಾ ಬೆಂಬಲವಾಗಿರುತ್ತೇವೆ” ಎಂದು ಹೇಳುವುದು ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ ಸ್ಪರ್ಧಿಸುವುದಿಲ್ಲ ಎಂದು ಚುನಾವಣಾ ರಾಜಕೀಯದ ನಿವೃತ್ತಿ ಘೋಷಿಸಿದ್ದರು. ತಮ್ಮ ಮಗನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು, ಆದರೆ ಮಗನಿಗೂ ಟಿಕೆಟ್ ಕೈ ತಪ್ಪಿತು. ಇದೀಗ ಈಶ್ವರಪ್ಪ ಅವರಿಗೆ ಮೋದಿ ಕರೆ ಬಂದಿದೆ. ಈ ದೂರವಾಣಿ ಸಂಭಾಷಣೆಯಲ್ಲಿ ಮೋದಿ ಅವರು ಈಶ್ವರಪ್ಪರನ್ನು ಹೊಗಳಿದ ಮೋದಿ, ಪಕ್ಷ ಸದಾ ಜೊತೆಗಿರುತ್ತದೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ”ಬಿಜೆಪಿ ಟಿಕೆಟ್ ನಿರಾಕರಿಸಿದರೂ ಬಂಡಾಯವೆದ್ದ ಬಿಜೆಪಿ ನಾಯಕ ಈಶ್ವರಪ್ಪ ಅವರನ್ನು ಪ್ರಧಾನಿ ಮೋದಿ ಅಭಿನಂದಿಸುವುದು ಸ್ವೀಕಾರಾರ್ಹವಲ್ಲ! ಈ ವ್ಯಕ್ತಿ 40% ಕಮಿಷನ್ ಬೇಡಿಕೆಯ ಆರೋಪ ಹೊತ್ತಿದ್ದು, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ನಂತರ ಭ್ರಷ್ಟಾಚಾರ ಆರೋಪದ ಮೇಲೆ ರಾಜೀನಾಮೆ ನೀಡಬೇಕಾಯಿತು. ಇಂತಹ ಭ್ರಷ್ಟ ನಾಯಕರನ್ನು ಹೊಗಳುವ ಮೂಲಕ ಬಿಜೆಪಿ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬೆಂಬಲಿಸುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ.” ಎಂದು ಹೇಳಿದೆ.
ಇದನ್ನೂ ಓದಿ: ಗುಜರಾತ್ ಹತ್ಯಾಕಾಂಡದ 67 ಆರೋಪಿಗಳ ಖುಲಾಸೆ: ಭಾರತದ ಪ್ರಜಾಪ್ರಭುತ್ವದ ಬಗ್ಗೆ ವಿದೇಶಿ ಪತ್ರಿಕೆಗಳ ಕಳವಳ
”ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ. ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ. ಪ್ರಧಾನಿ ಮೋದಿ ‘ಭ್ರಷ್ಟಾಚಾರ’ದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂದ ಸಾಕ್ಷಿ ಬೇಕೆ?” ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಒಂದು ಕಡೆ ಈಶ್ವರಪ್ಪ ಮೇಲೆ ಕಮಿಷನ್ ಆರೋಪ. ಡೆತ್ ನೋಟ್ ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ.
ಇನ್ನೊಂದೆಡೆ ಸ್ವತಃ ಕರೆ ಮಾಡಿ ಈಶ್ವರಪ್ಪರನ್ನು ಶ್ಲಾಘಿಸಿದ ಪ್ರಧಾನಿ ಮೋದಿ.
ಪ್ರಧಾನಿ ಮೋದಿ 'ಭ್ರಷ್ಟಾಚಾರ'ದ ಪರ ನಿಂತಿದ್ದಾರೆ ಎನ್ನುವುದಕ್ಕೆ ಇದಕ್ಕಿಂದ ಸಾಕ್ಷಿ ಬೇಕೆ?#ModiAashirvadFor40Percent pic.twitter.com/oa20LA7OVk
— Karnataka Congress (@INCKarnataka) April 21, 2023
”ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ಈ ಶ್ಲಾಘನೆ ಏಕೆ? 40% ಕಮಿಷನ್ ಲೂಟಿ ಮಾಡಿದ್ದಕ್ಕಾ? ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ? ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ? ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ” ಎಂದು ಟ್ವೀಟ್ ಮಾಡಿದೆ.
'@narendramodi ಅವರು
ಈಶ್ವರಪ್ಪನವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ.ಈ ಶ್ಲಾಘನೆ ಏಕೆ?
40% ಕಮಿಷನ್ ಲೂಟಿ ಮಾಡಿದ್ದಕ್ಕಾ?
ಸಂತೋಷ್ ಪಾಟೀಲರ ಜೀವ ತೆಗೆದಿದ್ದಕ್ಕಾ?
ಭ್ರಷ್ಟಾಚಾರದ ಪೋಷಣೆ ಮಾಡಿದ್ದಕ್ಕಾ?ಕಮಿಷನ್ ಬಗ್ಗೆ ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಮೋದಿ ಕಮಿಷನ್ ಲೂಟಿಕೋರನಿಗೆ ಬೆಂಬಲಿಸಿದ್ದಾರೆ.#ModiAashirvadFor40Percent
— Karnataka Congress (@INCKarnataka) April 21, 2023
”ರೌಡಿಗಳಿಗೆ ಕೈ ಮುಗಿಯುತ್ತಾರೆ. ಭ್ರಷ್ಟಾಚಾರಿಗಳಿಗೆ ಕರೆ ಮಾಡಿ ಪ್ರೋತ್ಸಾಹಿಸುತ್ತಾರೆ. ಆದರೆ ಭ್ರಷ್ಟಾಚಾರದ ದೂರುಗಳ ಪತ್ರಗಳಿಗೆ ಮಾತ್ರ ಮೌನವಹಿಸುತ್ತಾರೆ. ನೆರೆ ಸಂತ್ರಸ್ತರ ಗೋಳುಗಳನ್ನು ನಿರ್ಲಕ್ಷಿಸುತ್ತಾರೆ. ಇಂತಹ ಅಪರೂಪದ ಪ್ರಧಾನಿ ನರೇಂದ್ರ ಮೋದಿ. ಭ್ರಷ್ಟಾಚಾರಕ್ಕೆ ಮೋದಿಯೇ ಮಹಾಪೋಷಕರು” ಎಂದು ಟೀಕಿಸಿದ್ದಾರೆ.
ರೌಡಿಗಳಿಗೆ ಕೈ ಮುಗಿಯುತ್ತಾರೆ.
ಭ್ರಷ್ಟಾಚಾರಿಗಳಿಗೆ ಕರೆ ಮಾಡಿ ಪ್ರೋತ್ಸಾಹಿಸುತ್ತಾರೆ.ಆದರೆ ಭ್ರಷ್ಟಾಚಾರದ ದೂರುಗಳ ಪತ್ರಗಳಿಗೆ ಮಾತ್ರ ಮೌನವಹಿಸುತ್ತಾರೆ.
ನೆರೆ ಸಂತ್ರಸ್ತರ ಗೋಳುಗಳನ್ನು ನಿರ್ಲಕ್ಷಿಸುತ್ತಾರೆ.ಇಂತಹ ಅಪರೂಪದ ಪ್ರಧಾನಿ @narendramodi.
ಭ್ರಷ್ಟಾಚಾರಕ್ಕೆ ಮೋದಿಯೇ ಮಹಾಪೋಷಕರು.#ModiAashirvadFor40Percent pic.twitter.com/souXfWEYFN
— Karnataka Congress (@INCKarnataka) April 21, 2023
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಕೂಡ ಟ್ವಿಟ್ಟರ್ ನಲ್ಲಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
”ಕರ್ನಾಟಕ ಬಿಜೆಪಿಯಲ್ಲಿ ಎಲ್ಲರೂ ಪಕ್ಷ ಬಿಟ್ಟು ಓಡಿ ಹೋಗುತ್ತಿದ್ದಾರೆ. ಈ ನಡುವೆ ಇದೀಗ ಖುದ್ದು ಪ್ರಧಾನಿ ಮೋದಿಯೇ ಈಶ್ವರಪ್ಪ ಅವರಿಗೆ ಕರೆ ಮಾಡಿ ಬೇಡಿಕೊಳ್ಳಬೇಕಾಗಿದೆ. 40% ಕಮಿಷನ್ ಆರೋಪ ಮಾಡಿ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಈಶ್ವರಪ್ಪ ಅವರ ಕಾರಣಕ್ಕೆ ಎಂಬುದನ್ನು ದಯವಿಟ್ಟು ತಿಳಿಸಿ. ಇದಾದ ಬಳಿಕ ಕರ್ನಾಟಕ ಗುತ್ತಿಗೆದಾರರ ಸಂಘ ಶೇ.40 ಕಮಿಷನ್ ಕುರಿತು ಪ್ರಧಾನಿಗೆ ಪತ್ರ ಬರೆದಿತ್ತು. ಆದರೆ ಪ್ರಧಾನಿಯವರಿಗೆ ಭ್ರಷ್ಟಾಚಾರ ಎನ್ನುವುದು ಅವರಿಗೆ ಸಮಸ್ಯೆಯೇನೂ ಇಲ್ಲ, ಹಾಗಾಗಿಯೇ ಅವರು ತಲೆಕೆಡಿಸಿಕೊಳ್ಳಲಿಲ್ಲ. ಈ ಕರ್ನಾಟಕದ ಭ್ರಷ್ಟಾಚಾರದಲ್ಲಿ ಇಡಿ, ಸಿಬಿಐ, ಆದಾಯ ತೆರಿಗೆ ಯಾರೂ ತಮ್ಮ ಸಮಯವನ್ನು ವ್ಯರ್ಥ ಮಾಡಲಿಲ್ಲ” ಎಂದು ಸುಪ್ರಿಯಾ ಶ್ರೀನಾಟೆ ಟ್ವೀಟ್ ಮಾಡಿದ್ದಾರೆ.
ऐसी भगदड़ मची है कर्नाटक भाजपा में कि सब छोड़ छोड़ कर भाग रहे हैं – और अब ख़ुद प्रधानमंत्री मोदी को ईश्वरप्पा को फ़ोन करके ना छोड़ने के लिए गिड़गिड़ाना पड़ रहा है.
लगे हाथ यह भी बता दें यह वही ईश्वरप्पा हैं जिनपर 40% कमीशन का आरोप लगा कर भाजपा के कार्यकर्ता संतोष पाटिल ने… pic.twitter.com/9eROrzeQ2C
— Supriya Shrinate (@SupriyaShrinate) April 21, 2023
”ಕರ್ನಾಟಕದಲ್ಲಿ ಬಂಡಾಯದ ಧ್ವನಿ ಎಷ್ಟು ಪ್ರಬಲವಾಗಿದೆ ಎಂದರೆ ಬಿಜೆಪಿಯ ಮುಂದೆ 40ಕ್ಕೂ ಹೆಚ್ಚು ಬಂಡಾಯಗಾರರು ಕಣದಲ್ಲಿದ್ದಾರೆ. ಈಗ ಈ ಭ್ರಷ್ಟರನ್ನು ಕರೆಸಿ ಸಮಾಧಾನ ಪಡಿಸಲಾಗುತ್ತಿದೆ. ಹಿಮಾಚಲದಲ್ಲಿಯೂ ಅದೇ ಕೆಲಸ ಮಾಡಿದೆ – ಫಲಿತಾಂಶ ನೆನಪಿದೆ, ಅಲ್ಲವೇ? ಈ 40% ಕಮಿಷನೇರ್‌ಗಳು 40 ಕ್ಕಿಂತ ಕಡಿಮೆ ಇರುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.
PM मोदी,
आपने भ्रष्ट ईश्वरप्पा को फ़ोन करके बाग़ी ना होने के लिए कहा.
लेकिन क्या अपने कार्यकर्ता संतोष पाटिल के परिवार से बात की? जिसने 40% कमीशन के चलते आत्महत्या कर ली.
आपको भ्रष्टाचार से कोई विशेष नफ़रत नहीं है – बल्कि 40% को आपका आशीर्वाद है #ModiAashirvadFor40Percent pic.twitter.com/rKBnHgMCmy
— Supriya Shrinate (@SupriyaShrinate) April 21, 2023
”ಪ್ರಧಾನಿ ಮೋದಿ, ಭ್ರಷ್ಟ ಈಶ್ವರಪ್ಪಗೆ ಕರೆ ಮಾಡಿ ಬಂಡಾಯ ಏಳಬೇಡಿ ಎಂದು ಹೇಳಿದ್ದೀರಿ. ಆದರೆ ನಿಮ್ಮ ಕೆಲಸಗಾರ ಸಂತೋಷ್ ಪಾಟೀಲ್ ಕುಟುಂಬದೊಂದಿಗೆ ಮಾತನಾಡಿದ್ದೀರಾ? 40% ಕಮಿಷನ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡವರು ಯಾರು? ನೀವು ನಿರ್ದಿಷ್ಟವಾಗಿ ಭ್ರಷ್ಟಾಚಾರವನ್ನು ದ್ವೇಷಿಸುವುದಿಲ್ಲ. ವಾಸ್ತವವಾಗಿ 40% ಜನರು ನಿಮ್ಮ ಆಶೀರ್ವಾದವನ್ನು ಹೊಂದಿದ್ದಾರೆ. ಮೋದಿ ಆಶೀರ್ವಾದ್ ಶೇ.40 ಕಮೀಷನ್‌ಗೆ” ಎಂದು ಸುಪ್ರಿಯಾ ಶ್ರಿನೇಟ್ ರೀಟ್ವೀಟ್ ಮಾಡಿದ್ದಾರೆ.
ಮೋದಿ ಕರೆ ಬಳಿಕ ಈಶ್ವರಪ್ಪ ಹೇಳಿದ್ದೇನು?
”ಪ್ರಧಾನಿ ಮೋದಿ ಅವರ ಕರೆಯನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗ ನಗರವನ್ನು ಗೆಲ್ಲಲು ಇದು ನನಗೆ ಸ್ಫೂರ್ತಿ ನೀಡುತ್ತದೆ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಮರಳಿ ತರಲು ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ನಾನು ಮಾಡಿದ್ದು ವಿಶೇಷವೇನಲ್ಲ. ನಾನು ಪ್ರಧಾನಿ ಮೋದಿಯವರಿಗೂ ಅದನ್ನೇ ಹೇಳಿದ್ದೇನೆ” ಎಂದು ಈಶ್ವರಪ್ಪ ಹೇಳಿದರು.
”ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ತಮ್ಮ ನಿರ್ಧಾರವನ್ನು ಪಕ್ಷದ ಕೇಂದ್ರ ನಾಯಕತ್ವಕ್ಕೆ ಇತ್ತೀಚೆಗೆ ತಿಳಿಸಿದ್ದರು. ಟಿಕೆಟ್ ಘೋಷಣೆಗೂ ಮುನ್ನವೇ ಹೈಕಮಾಂಡ್ ಟಿಕಟ್ ನೀಡದಿರುವ ಬಗ್ಗೆ ಈಶ್ವರಪ್ಪ ಅವರಿಗೆ ತಿಳಿಸಿದ್ದರು ಮತ್ತು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡಬೇಕು ಎಂದು ಹೇಳಿದ್ದರು” ಅದರಂತೆ ಅವರು ನಿವೃತ್ತಿ ಘೋಷಿಸಿದ್ದರು.


