Homeಅಂತರಾಷ್ಟ್ರೀಯಸ್ಪೇನ್ ಪಾರ್ಲಿಮೆಂಟಿನಲ್ಲಿನ ಧ್ರುವೀಕರಣ; ಸಾರ್ವತ್ರಿಕ ಚುನಾವಣೆಯಲ್ಲಿ ಉಂಟಾದ ನೂತನ ಸಮತೋಲನ

ಸ್ಪೇನ್ ಪಾರ್ಲಿಮೆಂಟಿನಲ್ಲಿನ ಧ್ರುವೀಕರಣ; ಸಾರ್ವತ್ರಿಕ ಚುನಾವಣೆಯಲ್ಲಿ ಉಂಟಾದ ನೂತನ ಸಮತೋಲನ

- Advertisement -
- Advertisement -

23ಜುಲೈ 2023ರಂದು ಸ್ಪೇನ್‌ನಲ್ಲಿ ದಿಢೀರ್ ಚುನಾವಣೆಗಳನ್ನು ನಡೆಸಲಾಯಿತು. ಎಲ್ಲರೂ ಈ ಚುನಾವಣೆಯ ಕಾರಣದಿಂದ ಒಂದು ಸದೃಢ ಸರ್ಕಾರ ಸ್ಥಾಪಿತವಾಗುತ್ತದೆ ಎಂದು ಅಂದುಕೊಂಡಿದ್ದರೂ ಸಹ, ಒಂದು ಅತಂತ್ರ ಮತ್ತು ಅನಿಶ್ಚಿತ ಪ್ರಭುತ್ವಕ್ಕೆ ಈ ಚುನಾವಣೆ ನಾಂದಿ ಹಾಡಿತು.

ಯಾವುದೇ ಪಕ್ಷವೂ ಬಹುಮತವನ್ನು ಗಳಿಸಲಿಲ್ಲ. ಚುನಾವಣೆಗೆ ಮುಂಚೆ ಪೆದ್ರೊ ಸಾಂಚೆಜ್‌ನ ಸ್ಪಾನಿಷ್ ಸೋಶಿಯಲಿಸ್ಟ್ ವರ್ಕರ್ಸ್ ಪಕ್ಷ (PSOE) ಅಧಿಕಾರದಲ್ಲಿತ್ತು. ಆಲ್ಬರ್ಟೊ ನ್ಯೂನೆಜ್ ಫೈಜೂ ಅವರ ಪೀಪಲ್ಸ್ ಪಾರ್ಟಿ (PP) ಈ ಚುನಾವಣೆಯಲ್ಲಿ 48ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅತ್ಯಧಿಕ ಲಾಭವನ್ನು ಪಡೆಯಿತು ಮತ್ತು ಅದು ಗಳಿಸಿದ ಒಟ್ಟು ಸ್ಥಾನಗಳ ಸಂಖ್ಯೆ 137. PP ಒಂದು ಬಲಪಂಥೀಯ (ಸೆಂಟರ್-ರೈಟ್) ಸಾಂಪ್ರದಾಯಿಕ ಪಕ್ಷ. PSOE ಒಂದೇ ಒಂದು ಹೆಚ್ಚಿಗೆ ಸ್ಥಾನವನ್ನು ಪಡೆಯಿತು ಮತ್ತು ಈಗ ಅದರ ಬಲ 121 ಸ್ಥಾನಗಳು.

ಅಂತಾರಾಷ್ಟ್ರೀಯವಾಗಿ ಈ ಚುನಾವಣೆಯು ಬಹಳ ಮಹತ್ವಪೂರ್ಣದ್ದಾಗಿದೆ, ಕಾರಣ ಯೂರೋಪಿಯನ್ ಯೂನಿಯನ್‌ನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವ ಸರದಿ ಈಗ ಸ್ಪೇನ್ ಬಳಿಗೆ ಬರುತ್ತಿದೆ. ಈ ಚುನಾವಣೆಗಳಿಂದ ಯೂರೋಪಿಯನ್ ಯೂನಿಯನ್‌ನ ಅಧಿಕಾರದ ಚುಕ್ಕಾಣಿಯನ್ನು ಬಲಪಂಥೀಯ ಸಂಪ್ರದಾಯವಾದೀ ಶಕ್ತಿಗಳು ಹಿಡಿಯುವ ಸಾಧ್ಯತೆಗಳಿವೆ. ಇದು ಫ್ರಾಂಕೊ ನಂತರದಲ್ಲಿ ಸ್ಪೇನ್‌ನಲ್ಲಿ ಮೊದಲನೇ ಬಲಪಂಥೀಯ ಸರ್ಕಾರವಾಗಲಿದೆ.

ಆಲ್ಬರ್ಟೊ ನ್ಯೂನೆಜ್ ಫೈಜೂ

ಎಲ್ಲಾ ಸಣ್ಣಪುಟ್ಟ ಪಕ್ಷಗಳೂ ಗಣನೀಯವಾಗಿ ಸೋಲುಂಡವು, ಆದರೆ ಅದೇ ಸಮಯದಲ್ಲಿ ರಾಜಕೀಯವಾಗಿ ಅವುಗಳು ಲಾಭವನ್ನೂ ಪಡೆದವು. ಯಾವುದೇ ಒಂದು ಪಕ್ಷವೂ ಬಹುಮತವನ್ನು ಗಳಿಸದೇ ಇದ್ದ ಕಾರಣಕ್ಕೆ, PSOE ಮತ್ತು PP ಪಕ್ಷಗಳೀಗ ಈ ಸಣ್ಣಪುಟ್ಟ ಪಕ್ಷಗಳ ಬೆಂಬಲವನ್ನು ಪಡೆದು ಸರ್ಕಾರವನ್ನು ರಚಿಸಬೇಕಾಗಿದೆ. ಈ ಸಂದರ್ಭದಲ್ಲಿ ಒಟ್ಟುಗೂಡಿರುವ ಬಲಪಂಥೀಯ ಕೂಟ, ಮೈತ್ರಿ ಸಾಧಿಸಿರುವ ಕಟು ಎಡಪಂಥೀಯ ಪಕ್ಷಗಳ ಕೂಟಕ್ಕಿಂತ ಸ್ವಲ್ಪಮಟ್ಟಿಗೆ ಬಹುಮತ ಹೊಂದಿವೆ. ಪ್ರತ್ಯೇಕತಾವಾದಿಗಳ ಪರ ವಹಿಸಿರುವ ಪಕ್ಷಗಳು ಅಂದರೆ ಕೆಟಲೋನಿಯ ಪಕ್ಷದವರ (ಜಂಟ್ಸ್) ಬಗ್ಗೆ ವ್ಯಾಖ್ಯಾನಕಾರರುಗಳು ಹೇಳಿರುವುದೇನೆಂದರೆ, ಅವರು ಚುನಾವಣೆಯಲ್ಲಿ ಗಣನೀಯವಾದಂತಹ ಯಶಸ್ಸನ್ನು ಪಡೆಯದೇ ಇದ್ದರೂ ಕೂಡ ರಾಜಕೀಯವಾಗಿ ಸಾಕಷ್ಟು ಲಾಭವನ್ನು ಗಳಿಸಿದ್ದಾರೆ ಎಂದು.

ನೂತನ ರಾಜಕೀಯ ಒಕ್ಕೂಟದ ರಚನೆ ಸ್ಪೇನ್‌ಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. PP ಪಕ್ಷ ಸರ್ಕಾರವನ್ನು ರಚಿಸಬೇಕಾದರೆ ಅದು ವಿಪರೀತವಾಗಿ ಬಲಪಂಥೀಯ ಧೋರಣೆ ಹೊಂದಿರುವ ವಾಕ್ಸ್ (vox) ಪಕ್ಷದ ಜೊತೆಗೆ ಸೇರಬೇಕಾಗುತ್ತದೆ. ವಾಕ್ಸ್ ಜೊತೆ ಸೇರಿದರೂ ಕೂಡ PPಗೆ ಬಹುಮತ ಗಳಿಸಲು ಐದು ಸ್ಥಾನಗಳ ಕೊರತೆ ಉಂಟಾಗುತ್ತದೆ. ಅವರಿಗೆ ಅಗತ್ಯವಿರುವುದು ಇನ್ನೊಂದು ಪಕ್ಷದ ಬೆಂಬಲ. ಬಲಪಂಥೀಯ ಧೋರಣೆ ಹೊಂದಿರುವ ಪಕ್ಷಗಳಲ್ಲಿಯೇ, ಇರುವುದರಲ್ಲಿ ಜಂಟ್ಸ್ ಬಲಪಂಥೀಯ ಆರ್ಥಿಕ ನಿಲುವುಗಳನ್ನು ಸಹಮತಿಸುತ್ತದೆ, ಆದರೆ ಅವರ ಕೆಟಲಾನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಬಗ್ಗೆಗಿನ ನಿಲುವು, ಬಲಪಂಥೀಯ ಮೈತ್ರಿಕೂಟದ ಜೊತೆ ಸೇರುವ ವಿಷಯದಲ್ಲಿ ಅವರಿಗೆ ಇರಸುಮುರುಸನ್ನು ಉಂಟುಮಾಡುತ್ತದೆ. ಜಂಟ್ಸ್‌ಗಳೇನಾದರೂ ಸರ್ಕಾರಕ್ಕೆ ಸೇರಿಕೊಂಡು ಸರ್ಕಾರ ರಚನೆಯಾದರೆ ಅವರು ರಾಜಕೀಯವಾಗಿ ಮೇಲುಗೈಅನ್ನು ಸಾಧಿಸಬಹುದು. ಜಂಟ್ಸ್‌ನ ಅನೇಕ ನಾಯಕರುಗಳು ಈ ಮೈತ್ರಿಯನ್ನು ಅರ್ಥವಿಲ್ಲದ್ದು ಎಂದು ವ್ಯಾಖ್ಯಾನಿಸುತ್ತಾರೆ, ಕಾರಣ ಅದು ಅವರನ್ನು ಕೆಟಲಾನ್ ರಾಷ್ಟ್ರವಾದದ ಬಗೆಗಿನ ಬದ್ಧತೆಯಿಂದ ಚಂಚಲಗೊಳಿಸಬಹುದು ಎಂದು. ಒಂದು ಸದೃಢ ಸ್ಪಾನಿಷ್ ಸರ್ಕಾರವನ್ನು ರಚಿಸುವುದಕ್ಕಿಂತ ಹೆಚ್ಚಾಗಿ ಕೆಟಲಾನ್ ಬಗ್ಗೆಗಿನ ಸಮಸ್ಯೆಗಳಿಗೆ ಆದ್ಯತೆ ನೀಡುತ್ತೇವೆ ಎಂದು ಜಂಟ್ಸ್ ಸದ್ಯಕ್ಕೆ ಸ್ಪಷ್ಟಪಡಸಿದ್ದಾರೆ.

ಬಹುಮತಕ್ಕೆ ಈ ಕೂದಲೆಳೆಯಷ್ಟಿನ ಅಂತರದ ಪರಿಣಾಮವಾಗಿ ಸ್ಪೇನಿನ ರಾಜಕೀಯ ಈಗ ಧ್ರುವೀಕರಣಗೊಂಡಿದೆ. ಉಳಿದ ಎಡಪಂಥೀಯ (ಸೆಂಟರ್ ಆಫ್ ಲೆಫ್ಟ್) ಪಕ್ಷಗಳೂ ಕೂಡ ಈಗ ಒಟ್ಟುಗೂಡಿವೆ. ಲೆಫ್ಟ್ ಆಫ್ ಸೆಂಟರ್‌ನ ಎಡಪಂಥೀಯ ಪಕ್ಷಗಳ ಮೈತ್ರಿಯಿಂದ PSOE ಪಕ್ಷಕ್ಕೆ ಈಗ ಲಾಭ ಉಂಟಾಗಿದೆ. ಇದು ತೀವ್ರವಾದೀ ಎಡಪಂಥೀಯ ಪಕ್ಷಗಳೂ ಕೂಡ ಮೃದು ಧೋರಣೆಯ ಎಡ ಪಕ್ಷಗಳತ್ತ ವಾಲಿದಂತಾಗಿದೆ.

ಈ ಚುನಾವಣೆಗೆ ಆರಿಸಿಕೊಂಡ ಸಮಯ ಕೂಡ ವಿಚಿತ್ರವಾಗಿತ್ತು. ಚುನಾವಣಾ ಸಮೀಕ್ಷೆಗಳು PP ಮತ್ತು ವಾಕ್ಸ್ ಪಕ್ಷಗಳ ಮೈತ್ರಿಕೂಟ ಬಹುಮತದ ಸರ್ಕಾರವನ್ನು ರಚಿಸುತ್ತದೆ ಎಂದು ಭವಿಷ್ಯ ನುಡಿದಿದ್ದವು. ಸ್ಥಳೀಯ ಚುನಾವಣೆಗಳಲ್ಲಿನ PSOE ಪಕ್ಷದ ನಿರಾಶಾದಾಯಕ ಫಲಿತಾಂಶವನ್ನು ಆಧರಿಸಿ ಅವುಗಳು ಭವಿಷ್ಯ ನುಡಿದಿದ್ದವು. ಸ್ಥಳೀಯ ಚುನಾವಣೆಯಲ್ಲಿನ ವಾಕ್ಸ್ ಪಕ್ಷದ ಉತ್ತಮ ಫಲಿತಾಂಶಗಳು ರಾಷ್ಟ್ರೀಯ ಚುನಾವಣೆಯಲ್ಲಿಯೂ ಪುನರಾವರ್ತಿಸಬಹುದು ಎಂಬ ಆತಂಕ ಉಂಟಾಗಿತ್ತು. ಹಾಗಾಗಿದ್ದರೆ ಅದು ವಲಸಿಗರ ವಿರುದ್ಧದ ಅಭಿಯಾನಕ್ಕೆ ಪುಷ್ಟಿದಾಯಕವಾಗಿಬಿಡುತ್ತಿತ್ತು.

ಯಾರಿದು ತೀವ್ರ ಬಲಪಂಥೀಯ ವಾಕ್ಸ್ (vox)?

ವಾಕ್ಸ್ ತನ್ನ 52 ಸ್ಥಾನಗಳಲ್ಲಿ 19 ಸ್ಥಾನಗಳನ್ನು ಕಳೆದುಕೊಂಡಿರುವುದರಿಂದ ಅದರ ಬಲ 33ಕ್ಕೆ ಇಳಿಸಿದೆ. ಅವರು ತೀವ್ರ ಎಡಪಂಥೀಯ ಗುಂಪಿನ ಚುನಾವಣಾ ಮುಖವಾಗಿದ್ದ ಸುಮಾರ್ ಪಕ್ಷಕ್ಕಿಂತ ಸ್ವಲ್ಪವೇ ಸ್ವಲ್ಪ ಮುಂದಿದ್ದಾರೆ.

ವಾಕ್ಸ್ ಸ್ಥಾಪಿತವಾಗಿದ್ದು 2013ರಲ್ಲಿ, ಅದೊಂದು PP ಪಕ್ಷದಿಂದ ಹೊರಬಿದ್ದ ತುಂಡರಿಸಿದ ಗುಂಪಾಗಿತ್ತು. ಅವರು PP ಪಕ್ಷದಲ್ಲಿನ ಭ್ರಷ್ಟಾಚಾರದ ಕಾರಣದಿಂದ ಬೇಸತ್ತವರಾಗಿದ್ದರು. ಅವರು ಸ್ಪಾನಿಷ್ ಸಂವಿಧಾನದ ಸಂಪೂರ್ಣ ಮತ್ತು ಕೂಲಂಕಷವಾದ ಬದಲಾವಣೆಯ ಬೇಡಿಕೆಯನ್ನು ಮುಂದಿಟ್ಟರು. ಅವರ ಉದ್ದೇಶ ಪ್ರಾಂತೀಯ ಸ್ವಾಯತ್ತತೆಯನ್ನು ನಿಗ್ರಹಿಸುವುದು ಮತ್ತು ಪ್ರಾಂತೀಯ ಪಾರ್ಲಿಮೆಂಟನ್ನು ತೊಡೆದುಹಾಕುವುದಾಗಿತ್ತು, ಮತ್ತು ಅದರ ಬದಲು ಹೆಚ್ಚು ಕೇಂದ್ರೀಕರಣಗೊಳಿಸುವುದನ್ನು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ: ಬೆಂಕಿಯ ಜೊತೆಗೆ ಸರಸ; ರಷ್ಯಾದಲ್ಲಿ ಖಾಸಗಿ ಸೈನ್ಯದ ತುಕಡಿಗಳ ಬಂಡಾಯ

ವಾಕ್ಸ್ 2015 ಮತ್ತು 2016ರ ಸ್ಪಾನಿಷ್ ಚುನಾವಣೆಯಲ್ಲಿ ಭಾಗವಹಿಸಿತ್ತು; ಆದರೆ ಗಣನೀಯವಾದ ಬೆಂಬಲವನ್ನು ಪಡೆಯುವುದಕ್ಕೋಸ್ಕರ ಹೆಣಗಾಡಿತು. ಕೆಟಲನ್‌ನ ಸ್ವಾತಂತ್ರ್ಯ ಹೋರಾಟದ ಬಗೆಗಿನ ಪ್ರಜಾಭಿಪ್ರಾಯದ ನಂತರ ಅದು ಬೆಳೆಯತೊಡಗಿತು. 2017ರಲ್ಲಿ ಈ ಪಕ್ಷ ಕೆಟಲನ್‌ನ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿತು ಆದರೆ ಕೆಟಲನ್ ಪಾರ್ಲಿಮೆಂಟ್ ವಿರುದ್ಧ ಮತ್ತು ಕೆಟಲನ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಹಲವು ರಾಜಕಾರಿಣಿಗಳ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಯಿತು.

ಸ್ಪಾನಿಷ್‌ನ ಪ್ರಾಂತೀಯತೆ

ಭಾರತದಿಂದ ನೋಡಿದರೆ ಸ್ಪೇನ್ ಒಂದೇ ದೇಶದಂತೆ ಕಾಣಿಸಬಹುದು, ಆದರೆ ಅದೊಂದು ವಿಭಿನ್ನವಾದ ಭಾಷೆ ಮತ್ತು ಸಂಸ್ಕೃತಿಗಳ ಒಕ್ಕೂಟ. ಆ ದೇಶದೊಳಗಡೆಯೇ ಗುರುತಿಸಿ ಅಂಗೀಕರಿಸಲ್ಪಟ್ಟ ಐದು ಭಾಷೆಗಳಿವೆ; ಅವುಗಳು ಕಾಸ್ಟೀಲಿಯನ್, ಕೆಟಲಾನ್, ಗಾಲೀಸಿಯನ್, ಬಾಸ್ಕ್ ಮತ್ತು ಅರಾನೀಸ್.

PP ಪಕ್ಷದ ಮುಖಂಡ ಆಲ್ಬರ್ಟೊ ನ್ಯೂನೆಜ್ ಫೈಜೂ, ಗಾಲಿಸಿಯಾದ ವಾಯುವ್ಯ ಪ್ರದೇಶದಿಂದ ಬಂದವರು; ಅಲ್ಲಿಯ ಪ್ರಮುಖವಾದ ಭಾಷೆ ಗಾಲೀಸಿಯನ್. ಗಾಲೀಸಿಯನ್ ಪೋರ್ಚುಗೀಸ್ ಭಾಷೆಯ ಜೊತೆ ಭಾಷಾ ಸಾಮ್ಯತೆಯನ್ನು ಹೊಂದಿದೆ. ಕೆಲವು ಭಾಷಾವಿಜ್ಞಾನಿಗಳು ಹೇಳುವ ಪ್ರಕಾರ ಪೋರ್ಚುಗೀಸ್ ಭಾಷೆಯ ಒಂದು ಉಪಭಾಷೆ ಅಥವಾ ಡಯಲೆಕ್ಟ್ ಗಾಲೀಸಿಯನ್ ಎಂದು; ಇದು ಸ್ವಲ್ಪ ವಿವಾದಾತ್ಮಕವಾದದ್ದಾದರೂ ಕೂಡ.

ಕೆಟೊಲೋನಿಯದಲ್ಲಿ ಮಾತನಾಡುವ ಪ್ರಮುಖ ಭಾಷೆ ಎಂದರೆ ಕೆಟಲಾನ್. ಕೆಟಲಾನ್ ಫ್ರೆಂಚ್ ಭಾಷೆಗೆ ಹತ್ತಿರವಾಗಿದೆ, ಮತ್ತು ಬಾಸ್ಕ್- ಈ ಒಂದು ಪುರಾತನ ಭಾಷೆಯನ್ನು ಫ್ರಾನ್ಸ್‌ನ ಗಡಿ ಪ್ರದೇಶದಲ್ಲಿ ಮಾತನಾಡುತ್ತಾರೆ. ಅದು ಫ್ರೆಂಚ್ ಮತ್ತು ಸ್ಪಾನಿಷ್ ಭಾಷೆಗಳಿಗಿಂತಲೂ ವಿಭಿನ್ನವಾಗಿದೆ. ಅದು ನೂರಾರು ವರ್ಷಗಳಿಂದ ತಾನಾಗಿಯೇ ಬೆಳೆದು ಬಂದ ಭಾಷೆ. ಅರಾನೀಸ್ ಭಾಷೆಯನ್ನು ಕೆಟಲೋನಿಯಾದಲ್ಲಿ ಮಾತನಾಡುತ್ತಾರೆ ಮತ್ತು ಕೆಟಲಾನ್ ಭಾಷೆಯಲ್ಲಿ ಮಾತನಾಡುವವರಿಗೆ ಅದು ಪರಸ್ಪರವಾಗಿ ಅರ್ಥವಾಗುವಂತಹ ಭಾಷೆ.

2

ಕುತೂಹಲಕಾರಿ ಅಂಶವೆಂದರೆ, ಸಾಮಾನ್ಯವಾಗಿ ಸ್ಪಾನಿಷ್ ಅಂತ ಕರೆಯುವ ಭಾಷೆಯೇ ಸ್ಥಳೀಯವಾಗಿ ಕರೆಯುವಂತಹ ಕಾಸ್ಟೀಲಿಯನ್ ಭಾಷೆ. ಅದು ಸ್ಪೇನ್‌ನ ರಾಷ್ಟ್ರೀಯ ಭಾಷೆ ಎಂದು ಪರಿಗಣಿತವಾಗಿದೆ, ಮತ್ತು ಅದನ್ನು ದೇಶದಾದ್ಯಂತ ಆಡಳಿತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲಾಗಿದೆ.

ಕೆಟಲೋನಿಯ ಪ್ರಾಂತ್ಯ

ಕೆಟಲೋನಿಯ ಸಮೃದ್ಧವಾದ ಚರಿತ್ರೆಯನ್ನು ಹೊಂದಿದೆ ಮತ್ತು ಎರಡನೇ ಮಹಾಯುದ್ಧದ ಮುಂಚಿನ ತೀವ್ರಗಾಮೀ ಸಮಾಜವಾದೀ ಚಳವಳಿಯಿಂದ ಗುರುತಿಸಲ್ಪಡುತ್ತದೆ. 1939ರಲ್ಲಿ ಫ್ರಾನ್ಸಿಸ್ಕೊ ಫ್ರಾಂಕೋನ ಫಾಸಿಸ್ಟ್ ಆಡಳಿತ ಸ್ಪೇನ್‌ನನ್ನು ತನ್ನ ವಶಕ್ಕೆ ತೆಗೆದುಕೊಂಡಿತು ಮತ್ತು ಎಲ್ಲ ರೀತಿಯ ತೀವ್ರಗಾಮೀ ಚಟುವಟಿಕೆಗಳನ್ನೂ ದಮನಮಾಡಿತು. ಆಡಳಿತ ಭಾಷೆಯನ್ನಾಗಿ ಕೆಟಲಾನ್ ಭಾಷೆಯನ್ನು ಉಪಯೋಗಿಸುವುದನ್ನು ಫ್ರಾಂಕೊ ನಿಷೇಧಿಸಿದ ಮತ್ತು ಅದರ ಬದಲು ಕಾಸ್ಟೀಲಿಯನ್ ಭಾಷೆಯನ್ನು ಚಾಲ್ತಿಗೊಳಿಸಿದ. ರಾಷ್ಟ್ರೀಯ ಐಕ್ಯತೆಗೆ ಇದು ಬಹಳ ಮುಖ್ಯ ಎಂದು ಅವನು ಪ್ರತಿಪಾದಿಸಿದ. ಪ್ರಾಂತ್ಯದಲ್ಲೆಲ್ಲಾ ಇದಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಯಿತು. ಜರ್ಮನಿ ಮತ್ತು ಇಟಲಿ ದೇಶಗಳಿಗೆ ತದ್ವಿರುದ್ಧವಾಗಿ, ಸ್ಪಾನಿಷ್ ಫ್ಯಾಸಿಸಮ್ 1975ರವರೆಗೂ ಚಾಲ್ತಿಯಲ್ಲಿತ್ತು. ಫ್ರಾಂಕೋನ ಸಾವಿನ ನಂತರ, ಕೆಟಲಾನ್‌ನ ಅಸಮಿತೆ ಪುನರುತ್ಥಾನಗೊಂಡಿತು. ಅರವತ್ತನೇ ದಶಕದಲ್ಲಿ ಫ್ರಾಂಕೊನ ಸ್ಪೇನ್ ಒಳಗೇ ಭಿನ್ನಮತ ಬೆಳೆಯುತ್ತಾ ಹೋಯಿತು. ಅತಿಯಾದ ಸಹಿಷ್ಣುತೆಯನ್ನು ಪ್ರಭುತ್ವ ದುರ್ಬಲತೆ ಎಂದು ಪರಿಗಣಿಸಿತು. ಭಿನ್ನಮತೀಯತೆ ಉಲ್ಬಣವಾಯಿತು. ಪ್ರತಿರೋಧದಲ್ಲಿ ಕೆಟಲಾನ್ ಪ್ರದೇಶ ಗಣನೀಯವಾದಂತಹ ಪಾತ್ರವನ್ನು ವಹಿಸಿತು. ನೊವ ಕಾನ್ಕೊ ಎಂಬ ಸಾಂಸ್ಕೃತಿಕ ಚಳುವಳಿಯ ಹೊರಹೊಮ್ಮುವಿಕೆ ಕೆಟಲಾನ್ ಭಾಷೆಯ ಮತ್ತು ಸಂಸ್ಕೃತಿಯ ಮೇಲೆ ಹೇರಲಾಗಿದ್ದ ನಿಷೇಧವನ್ನು ಮುರಿಯಿತು; 1971ರಲ್ಲಿ ಸ್ಥಾಪಿಸಲಾಗಿದ್ದ ಕೆಟಲೋನಿಯಾ ಒಕ್ಕೂಟ, ವಿವಿಧ ರಾಜಕೀಯ ಪಕ್ಷಗಳನ್ನೂ ಮತ್ತು ಸಂಸ್ಥೆಗಳನ್ನು ಸರ್ವಾಧಿಕಾರಿ ಆಡಳಿತದ ವಿರುದ್ಧ ಒಂದುಗೂಡಿಸಿತು. 1978ರ ನೂತನ ಸ್ಪಾನಿಷ್ ಸಂವಿಧಾನದ ಜೊತೆಯಲ್ಲಿ, ಕೆಟಲೋನಿಯಾಗೆ ಸ್ವಾಯತ್ತತೆಯನ್ನು ನೀಡಲಾಯಿತು; ಇದು ಆ ಪ್ರದೇಶ ಆರ್ಥಿಕವಾಗಿ ಸಮೃದ್ಧಿ ಹೊಂದಲು ದಾರಿ ಮಾಡಿಕೊಟ್ಟಿತು.

ಕೆಟಲಾನ್ ಸ್ವಾತಂತ್ರ್ಯ ಹೋರಾಟದ ಒಳಗಡೆಯೇ ಎರಡು ಪ್ರಮುಖವಾದಂತಹ ಎಳೆಗಳು ಕಾಣಿಸಿಕೊಂಡವು. ಒಂದು ಸ್ಥಳೀಯ ಕೆಟಲಾನ್ಸ್‌ಗೆ ಸಂಬಂಧಪಟ್ಟಿದ್ದು- ಅವರು ಆರ್ಥಿಕವಾದ ಸಮೃದ್ಧಿಯನ್ನು ಫ್ರಾಂಕೋನ ನಂತರದ ಕಾಲದಲ್ಲಿ ಹೊಂದಿ ಅನುಭವಿಸಿದವರು; ಈ ಕೆಟಲಾನ್‌ಗಳು ಹೆಚ್ಚು ವಲಸಿಗರ ದ್ವೇಷಿಗಳು ಮತ್ತು ಕಾರ್ಮಿಕವರ್ಗದ ವಿರುದ್ಧ ಇದ್ದವರು. ಸ್ಥಳೀಯ ಕೆಟಲಾನ್‌ಗಳು ಸಮೃದ್ಧಿ ಹೊಂದುತ್ತಿರುವಾಗಲೇ, ಅನೇಕ ಕೆಟಲಾನೇತರರು ಇಲ್ಲಿಗೆ ಕೆಲಸಕ್ಕೋಸ್ಕರ ವಲಸೆ ಬಂದರು. ಕೆಟಲೋನಿಯಾದ ಕಾರ್ಮಿಕವರ್ಗದವರೆಲ್ಲರೂ ಈಗ ವಲಸೆ ಬಂದ ಕೆಟಲೋನಿಯೇತರರಾಗಿದ್ದರು. ಇವರೆಲ್ಲರೂ ಕೂಡ ಕೆಟಲಾನ್ ಸ್ವಾತಂತ್ರ್ಯವನ್ನು ವಿರೋಧಿಸಿದರು.

ಸ್ವಾತಂತ್ರ್ಯ ಹೋರಾಟದ ಚಳವಳಿಯ ಎಡಪಂಥೀಯ ಬಣ, ಅಂದರೆ ರಿಪಬ್ಲಿಕನ್ ಲೆಫ್ಟ್ ಆಫ್ ಕೆಟಲೋನಿಯ (ERC), ಅದು ಎಡಪಂಥೀಯ ಧೋರಣೆಗಳನ್ನು ಒಳಗೊಂಡ ಮತ್ತು ಎಡಪಂಥೀಯ ನೀತಿಗಳಿಗೆ ಬದ್ಧತೆಯುಳ್ಳ ಸ್ವಾತಂತ್ರ್ಯವನ್ನು ಪ್ರತಿಪಾದಿಸಿತು. ಚಾರಿತ್ರಿಕವಾಗಿ ERC ಕೆಟಲೋನಿಯದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದ ಪಕ್ಷವಾಗಿತ್ತು; ಆದರೆ ಇತ್ತೀಚಿನ ಚುನಾವಣೆಯಲ್ಲಿ ಅದಕ್ಕೆ ಹಿನ್ನಡೆ ಉಂಟಾಗಿ ಅರ್ಧದಷ್ಟು ಸ್ಥಾನಗಳನ್ನು ಕಳೆದುಕೊಂಡಿದೆ.

ಈಗ PSOEಗೆ ಇರುವ ಒಂದೇ ಭರವಸೆಯಂದರೆ ಅವರೀಗ ERC ಮತ್ತು ಜಂಟ್ಸ್‌ಗಳ ಬೆಂಬಲವನ್ನು ಪಡೆಯುವುದು. ಇದು ಕೆಟಲಾನ್‌ಗಳಿಗೆ ಸದೃಢವಾದ ಬೆಂಬಲ ಸಿಗುವಂತೆ ಮಾಡುತ್ತದೆ; ಆದರೆ ಇದರಿಂದ ಲೆಫ್ಟ್ ಆಫಗ ಸೆಂಟರ್ ಎಡಪಂಥೀಯ ಆರ್ಥಿಕ ನೀತಿಗಳನ್ನು ಜಾರಿ ಮಾಡುವ ಅವಕಾಶ ವಂಚಿತವಾಗಬಹುದು. ಈ ಎರಡೂ ಪಕ್ಷಗಳಿಲ್ಲದೆ PSOEಗೆ ಅಧಿಕಾರವನ್ನು ಪುನಃ ಪಡೆಯಲು ಸಾಧ್ಯವಿಲ್ಲ. ಇದು ಯಾವುದೇ ಸದೃಢವಾದ ಎಡಪಂಥೀಯ ಪಕ್ಷವನ್ನೂ ದುರ್ಬಲಗೊಳಿಸುತ್ತದೆ.

ಕನ್ನಡಕ್ಕೆ: ಶ್ರೀನಾಥ್ ಕೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...