ಹಿಂಸಾತ್ಮಕ ಘಟನೆಗಳ ನಡುವೆ ಉತ್ತರ ಪ್ರದೇಶದ ಬ್ಲಾಕ್ ಪ್ರಮುಖರ ಚುನಾವಣೆ ನಡೆದು ಫಲಿತಾಂಶವೂ ಬಂದಿದೆ. ಚುನಾವಣೆಯ ಸಂದರ್ಭದಲ್ಲಿ ಉನ್ನಾವೊ ಜಿಲ್ಲೆಯ ಒಂದು ಘಟನೆ ದೇಶದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯ ಚೀಫ್ ಡೆವಲಪ್‌ಮೆಂಟ್ ಅಧಿಕಾರಿ ದಿವ್ಯಾಂಶು ಪಟೇಲ್ ವಿವಾದಕ್ಕೆ ಕಾರಣರಾಗಿದ್ದರೆ. ಚುನಾವಣೆ ಸಮಯದಲ್ಲಿ ಅವರು ಪತ್ರಕರ್ತರನ್ನು ಥಳಿಸಿದ್ದಾರೆ ಎಂದು ಆರೋಪ ಕೇಳಿಬಂದಿದ್ದು ಆ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
IAS ಅಧಿಕಾರಿ ದಿವ್ಯಾಂಶು ಪಟೇಲ್ ಅವರ ಅಮಾನತ್ತಿಗೆ ಅನೇಕ ಹಿರಿಯ ರಾಜಕಾರಣಿಗಳು ಒತ್ತಾಯಿಸಿದ್ದಾರೆ. ಮತ್ತು ಸಿಡಿಒ ಬಂಧನಕ್ಕೆ ಒತ್ತಾಯಿಸಿ ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಟ್ರೆಂಡಿಂಗ್ ನಡೆಯುತ್ತಿದೆ.
ಉತ್ತರ ಪ್ರದೇಶದಲ್ಲಿ ನಡೆದ ಬ್ಲಾಕ್ ಪ್ರಮುಖ್ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸುತ್ತಿದ್ದಂತೆ ವ್ಯಾಪಕ ಹಿಂಸಾಚಾರ ನಡೆದಿತ್ತು. ಚುನಾವಣೆ ಫಲಿತಾಂಶ ಘೊಷಣೆ ನಡೆದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಟಿ.ವಿ. ವಾಹಿನಿಯ ಪತ್ರಕರ್ತ ಕೃಷ್ಣ ತಿವಾರಿಯವರ ಮೇಲೆ ಬಿಜೆಪಿ ಕಾರ್ಯಕರ್ತರು ಮತ್ತು ಸಿಡಿಒ ದಿವ್ಯಾಂಶು ಪಟೇಲ್ ಹಿಗ್ಗಾ ಮುಗ್ಗಾ ಥಳಿಸುತ್ತಿರುವ ವಿಡಿಯೋ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಪತ್ರಕರ್ತರ ಮೇಲಿನ ಹಲ್ಲೆಯ ದೃಶ್ಯ ಬೆಳಕಿಗೆ ಬರುತ್ತಿದಂತೆ ಘಟನೆಯನ್ನು ಖಂಡಿಸಿ ಹಿರಿಯ ಐಎಫ್‌ಎಸ್ ಅಧಿಕಾರಿ ಬ್ರಜೇಶ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಪ್ರಕಟ
उन्नाव मे ब्लॉक प्रमुख चुनाव की धांधली की कवरेज कर रहे टीवी पत्रकार कृष्णा तिवारी पर सीडीओ ने हमला कर दिया. हमलावर आईएएस अधिकारी है जो नेता के साथ मिलकर पत्रकार को पीट रहा. पत्रकारिता कितना जोखिम भरा है इस वीडियो से आपको यकीन हो जाएगा. सरकारे आएंगी-जाएंगी, लोकतंत्र अमर रहना चाहिए pic.twitter.com/Njrh3C0GoM
— Brajesh Misra (@brajeshlive) July 10, 2021
ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಜಯ್ ಸಿಂಗ್ ಪತ್ರಕರ್ತರ ಮೇಲೆ ದೌರ್ಜನ್ಯವೆಸಗಿದ ಸಿಡಿಒ ದಿವ್ಯಾಂಶು ಪಟೇಲ್ ಅವರ ಅಮಾನತ್ತಿಗೆ ಆಗ್ರಹಿಸಿದ್ದಾರೆ. ಪತ್ರಿಕೋದ್ಯಮ ಸಂವಿಧಾನದ 4 ನೇ ಅಂಗ. IAS ಅಧಿಕಾರಿಯೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದು ಸಂವಿಧಾನದ ಮೇಲೆಯೆ ಹಲ್ಲೆ ನಡೆಸಿದಂತೆ. ಜನರ ಅಭಿಪ್ರಾಯಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತ ಕೃಷ್ಣ ತಿವಾರಿಯವರಿಗೆ ಥಳಿಸಿದ ದಿವ್ಯಾಂಶು ಪಟೇಲ್ ಮತ್ತು ಬಿಜೆಪಿ ಕಾರ್ಯಕರ್ತರ ಬಂಧನವಾಗಬೇಕೆಂದು ಅವರು ಟ್ವೀಟ್ ಮಾಡಿದ್ದಾರೆ.
पत्रकारिता लोकतंत्र का चौथा स्तंभ है जिसका कार्य है जनता के समक्ष सही तथ्य लिखना यूपी में देवांशु पटेल सीडीओ द्वारा पत्रकार तिवारी जी को पीटना साथ में भाजपा के लोगों उसे पीटना दुर्भाग्यपूर्ण है इस परिवार ने धर्म परिवर्तन की बात की #Arrest_CDO_दिव्यांशु_पटेल
— Capt. Ajay Singh Yadav (@CaptAjayYadav) July 11, 2021
ಅತ್ಯಾಚಾರ, ದೌರ್ಜನ್ಯ, ಅಧಿಕಾರದ ಮದ, ಪೊಲೀಸ್ ದಬ್ಬಾಳಿಕೆ ಇದು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಪ್ರಾಯೋಜಿತ ಕಾರ್ಯಕ್ರಮಗಳು. ಇನ್ನು ಮೌನ ವಹಿಸಿ ಕೂತರೆ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಮರೀಚಿಕೆಗಳಷ್ಟೆ ಎಂದು ಪತ್ರಕರ್ತನ ಮೇಲಿನ ಹಲ್ಲೆ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ಅರ್ಚನಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
अत्याचार, सत्तामद और पुलिसिया दमन।
अब भी रहे मौन,तो लुट जायेगा चैन ओ अमन।कसम खालो। ख़त्म कर के रहेंगे#यूपी_में_गुंडाराज#Arrest_CDO_दिव्यांशु_पटेल#प्रपंची_भाजपा
— Dr. Archana Sharma (@DrArchanaINC) July 10, 2021
ಸಾಮಾಜಿಕ ಜಾಲತಾಣದಲ್ಲಿ ಸಿಡಿಒ ದಿವ್ಯಾಂಶು ಪಟೇಲ್ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಉತ್ತರ ಪ್ರದೇಶ ಸರ್ಕಾರ ಮತ್ತು ಜಿಲ್ಲಾಡಳಿತ ಘಟನೆಯ ವರದಿಯನ್ನು ಕೇಳಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
उन्नाव के डीएम से यूपी सरकार ने मांगी रिपोर्ट, सीडीओ दिव्यांशु पर ब्लॉक प्रमुख चुनाव के दौरान पत्रकार की पिटाई का आरोप https://t.co/4sgoGal2wr#DivyanshuPatel #Arrest_CDO_दिव्यांशु_पटेल
— NBT Uttar Pradesh (@UPNBT) July 11, 2021
ಇದನ್ನೂ ಓದಿ: ಉತ್ತರ ಪ್ರದೇಶ: 2015-19ರ ನಡುವೆ ದ್ವಿಗುಣಗೊಂಡ ಮಹಿಳೆಯರ ಮೇಲಿನ ದೌರ್ಜನ್ಯ!
ಪತ್ರಕರ್ತರ ಮೇಲಿನ ಹಲ್ಲೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾದಂತಿದೆ. ನಾವು ಪ್ರಜಾಪ್ರಭುತ್ವ ದೇಶದಲ್ಲಿ ಇದ್ದೇವೆಯೇ ಅಥವಾ ಪೊಲೀಸ್ ರಾಜ್ಯದಲ್ಲಿರುವುದೋ ಎಂದು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು ಪೊಲೀಸರ ಎದುರಿನಲ್ಲಿಯೇ ಘರ್ಷಣೆ ಮತ್ತು ಗುಂಡಿನ ದಾಳಿಗಳು ಸಹ ನಡೆದಿವೆ ಎಂದು ರಾಷ್ಟ್ರೀಯ ವಾಹಿನಿಯೊಂದು ವರದಿ ಮಾಡಿದೆ.
ಬ್ಲಾಕ್ ಪ್ರಮುಖ್ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಂಗ್ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ್ದರು.
उत्तर प्रदेश में ब्लॉक प्रमुखों के चुनाव में भी @BJP4UP ने अपना परचम लहराया है। @myogiadityanath सरकार की नीतियों और जनहित की योजनाओं से जनता को जो लाभ मिला है, वो पार्टी की भारी जीत में परिलक्षित हुआ है। इस विजय के लिए पार्टी के सभी कार्यकर्ता बधाई के पात्र हैं। https://t.co/QZP6u1kjVT
— Narendra Modi (@narendramodi) July 10, 2021
ಗ್ರಾಮ ಪಂಚಾಯತಿ, ಬ್ಲಾಕ್ ಪಂಚಾಯತಿಯಂತಹ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಅಭಿನಂದಿಸುವ ಪ್ರಧಾನಿ ಮೋದಿಯವರು ಪತ್ರಕರ್ತರ ಮೇಲೆ ಹಲ್ಲೆ ನಡೆದಾಗ ಯಾಕೆ ತುಟಿ ಬಿಚ್ಚುವುದಿಲ್ಲ ? ತಮ್ಮ ಕಾರ್ಯಕರ್ತರಲ್ಲಿ ಶಾಂತಿ ಸ್ಥಾಪನೆಗೆ ಕರೆ ನೀಡುವುದಿಲ್ಲ ? ಈಶಾನ್ಯ ದೆಹಲಿಯ ಗಲಭೆ ಸಂದರ್ಭದಿಂದ ಹಿಡಿದು ನಿನ್ನೆಯ ಪೊಲೀಸ್ ದೌರ್ಜನ್ಯದವರೆಗೆ ಪ್ರಧಾನಿಯವರ ದಿವ್ಯ ಮೌನ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ದೇಶದ ಅನೇಕ ರಾಜಕೀಯ ನಾಯಕರು, ನ್ಯಾಯವಾದಿಗಳು ಮತ್ತು ಹರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಪ್ರಾಯೋಜಿತ ಹಿಂಸಾಚಾರ ಮತ್ತು ಭಿನ್ನಮತವನ್ನು ಪೊಲೀಸ್ ಬಲದಿಂದ ದಮನಿಸುವ ಬಿಜೆಪಿ ತಂತದ್ರದ ವಿರುದ್ಧ ಜನರು ಧ್ವನಿ ಎತ್ತಬೇಕು ಎಂದು ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ ನಡುವೆಯೂ ನಿಲ್ಲದ ಗೋ ರಕ್ಷಕರ ಗೂಂಡಾ ವರ್ತನೆ : ಉತ್ತರ ಪ್ರದೇಶದಲ್ಲಿ ಮುಸ್ಲೀಂ ಯುವಕನ ಮೇಲೆ ಮನಸೋ…
-ರಾಜೇಶ್ ಹೆಬ್ಬಾರ್


