Homeಮುಖಪುಟಟ್ವಿಟರ್ V/s ಕೇಂದ್ರ: ಕುಂದುಕೊರತೆ ನಿವಾರಣೆಗೆ ಭಾರತದ ಅಧಿಕಾರಿಯನ್ನು ನೇಮಿಸಿದ ಟ್ವಿಟರ್

ಟ್ವಿಟರ್ V/s ಕೇಂದ್ರ: ಕುಂದುಕೊರತೆ ನಿವಾರಣೆಗೆ ಭಾರತದ ಅಧಿಕಾರಿಯನ್ನು ನೇಮಿಸಿದ ಟ್ವಿಟರ್

- Advertisement -
- Advertisement -

ಟ್ವಿಟರ್ ಇಂಡಿಯಾ ದೇಶದ ಹೊಸ ಐಟಿ ನಿಯಮಗಳ ಅಡಿಯಲ್ಲಿ ಅಗತ್ಯವಿರುವ ಕುಂದುಕೊರತೆಗಳ ಪರಿಹಾರಕ್ಕಾಗಿ ಭಾರತೀಯ ಅಧಿಕಾರಿಯನ್ನು ತನ್ನ ಸ್ಥಾನಿಕ ಕುಂದುಕೊರತೆ ಅಧಿಕಾರಿಯಾಗಿ ನೇಮಿಸಿದೆ. ಟ್ವಿಟರ್ ತನ್ನ ವೆಬ್‌ಸೈಟ್‌ನಲ್ಲಿ ವಿನಯ್ ಪ್ರಕಾಶ್‌ರನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿ ಎಂದು ತಿಳಿಸಿದೆ.

ಭಾರತದಲ್ಲಿ ಹೊಸ ಐಟಿ ನಿಯಮಗಳು ಜಾರಿಗೆ ಬರುತ್ತಿದ್ದಂತೆ ಒಕ್ಕೂಟ ಸರ್ಕಾರ ಮತ್ತು ಟ್ವಿಟರ್‌ ನಡುವೆ ಸಾಕಷ್ಟು ಸಂಘರ್ಷ ನಡೆದಿದೆ. ಟ್ವಿಟರ್‌ ಇಂಡಿಯಾದ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಿ, ಟ್ವಿಟರ್‌ ಎಂಡಿಯನ್ನು ಎರಡು -ಮೂರು ಬಾರಿ ವಿಚಾರಣೆ ನಡೆಸಲಾಗಿದೆ.

“ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು, 2021 ರ ನಿಯಮ 4 (1) (ಡಿ) ಗೆ ಅನುಸಾರವಾಗಿ, 2021 ರ ಮೇ 11 ರಿಂದ ಜೂನ್ 25, 2021 ರವರೆಗಿನ ಪ್ರಾಥಮಿಕ ವರದಿಯನ್ನು ಜುಲೈ 11, 2021 ರಂದು ನಮ್ಮ ಪ್ರಕಟಿಸಿದ್ದೇವೆ” ಎಂದು ಟ್ವಿಟರ್‌ ಮಾಹಿತಿ ನೀಡಿದೆ.

ಇದನ್ನೂ ಓದಿ: ಮುಂದುವರೆದ ಒಕ್ಕೂಟ ಸರ್ಕಾರ-ಟ್ವಿಟರ್‌‌‌ ಸಂಘರ್ಷ: ಮಧ್ಯಪ್ರದೇಶದಲ್ಲೂ ಕೇಸ್‍!

ಐಟಿ ನಿಯಮದ ಪ್ರಕಾರ ವಿನಯ್ ಪ್ರಕಾಶ್​ ಅವರನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆಯಿದ್ದರೂ grievance-officer-in @ twitter.com ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.

ಈ ತಿಂಗಳ ಆರಂಭದಲ್ಲಿ, ಶೀಘ್ರದಲ್ಲೇ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಇತರ ಇಬ್ಬರು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ನೇಮಿಸುವುದಾಗಿ ಟ್ವಿಟರ್‌ ಹೇಳಿತ್ತು. ದೇಶದಲ್ಲಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ದೆಹಲಿ ಹೈಕೋರ್ಟ್‌ನಿಂದ ಎಂಟು ವಾರಗಳ ಕಾಲಾವಕಾಶ ಕೋರಿತ್ತು. ಜುಲೈ 11 ರೊಳಗೆ ತನ್ನ ಪ್ರಾಥಮಿಕ ವರದಿಯನ್ನು ಸಾರ್ವಜನಿಕಗೊಳಿಸುವುದಾಗಿ ತಿಳಿಸಿತ್ತು. ಐಟಿ ನಿಯಮ ಪಾಲನೆ ಮಾಡುವಲ್ಲಿ ಟ್ವಿಟರ್​ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು.

ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್, ಭಾರತದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿದ್ದರೆ ಟ್ವಿಟರ್‌ಗೆ ಕಾನೂನು ರಕ್ಷಣೆ ಸಿಗುವುದಿಲ್ಲ ಎಂದು ತಿಳಿಸಿತ್ತು.

ಜೂನ್‌ನಲ್ಲಿ, ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಮಕ್ಕಳ ಅಶ್ಲೀಲ ವಿಷಯದ ಕುರಿತ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಗಾಜಿಯಾಬಾದ್, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ಟ್ವಿಟರ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಬಿಜೆಪಿ ನಾಯಕರು ಮಾಡಿದ್ದ “ಕಾಂಗ್ರೆಸ್ ಟೂಲ್‌ಕಿಟ್” ಟ್ವೀಟ್‌ಗಳನ್ನು ಟ್ವಿಟರ್‌ “ತಿರುಚಿದ ಮಾಧ್ಯಮ” (manipulated media) ಎಂದು ಕರೆದಿತ್ತು. ಅದರ ಬಳಿಕ ಒಕ್ಕೂಟ ಸರ್ಕಾರ ಮತ್ತು ಟ್ವಿಟರ್‌ ನಡುವೆ ಘರ್ಷಣೆ ನಡೆಯುತ್ತಲೆ ಇದೆ.


ಇದನ್ನೂ ಓದಿ: ಮುಸ್ಲಿಂ ವೃದ್ಧರ ಮೇಲೆ ಹಲ್ಲೆ ಪ್ರಕರಣ: ಟ್ವಿಟರ್‌ ಇಂಡಿಯಾ ಎಂಡಿಗೆ ಯುಪಿ ಪೊಲೀಸರ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...