Homeಕರ್ನಾಟಕಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ದರ್ಪ; ಭುಗಿಲೆದ್ದ ಜನಾಕ್ರೋಶ

ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ದರ್ಪ; ಭುಗಿಲೆದ್ದ ಜನಾಕ್ರೋಶ

- Advertisement -
- Advertisement -

ಅಪ್ರಾಪ್ತ ಮತ್ತು ವಯಸ್ಕ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತೀಯ ಕುಸ್ತಿ ಫೆಡರೇಷನ್‌ ಮುಖ್ಯಸ್ಥ, ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್‌ನನ್ನು ಬಂಧಿಸಬೇಕೆಂದು ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ತೋರಿಸುವ  ದರ್ಪಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದ ಅನೇಕ ಜನರು ಈ ಘಟನೆಯನ್ನು ಖಂಡಿಸಿದ್ದಾರೆ. ನೂತನ ಸಂಸತ್‌ ಭವನದ ಉದ್ಘಾಟನೆಯ ವೈಭವದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವಿದ್ದರೆ, ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳು ಬಂಧನಕ್ಕೊಳಗಾಗಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕುತ್ತಿರುವ ಜನತೆ, ಮೋದಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ದೇಶಕ್ಕಾಗಿ ಪದಕಗಳನ್ನು ತಂದ ಕುಸ್ತಿಪಟುಗಳ ಸಾಧನೆಯನ್ನು ಸ್ಮರಿಸಿದ್ದಾರೆ. ಕುಸ್ತಿಪಟುಗಳನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪ್ರತಿಭಟನೆಯೂ ನಡೆದಿದೆ.

ಲೈಂಗಿಕ ಕುರುಕುಳ ಪ್ರಕರಣದ ಆರೋಪಿ ಬ್ರಿಜ್‌ಭೂಷಣ್ ಶರಣ್‌ಸಿಂಗ್‌ನನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಯಿತು.

“ಕಲ್ಲಿನ ಕಟ್ಟಡದೊಳಗೆ ನಿಂತು ಭಾರತ‌ಮಾತೆಗೆ ಜೈ ಎನ್ನುವವರಿಗೆ ಬೀದಿಯಲ್ಲಿ ಭಾರತ ಮಾತೆಯರನ್ನು ಎಳೆದಾಡುತ್ತಿರುವುದು ಕಾಣುತ್ತಿಲ್ಲವಲ್ಲ, ನಾಚಿಕೆಗೇಡು. ಬಂಧಿಸಲಾದ ಎಲ್ಲ ಕುಸ್ತಿಪಟುಗಳು ಮತ್ತು ಹೋರಾಟಗಾರ್ತಿಯರನ್ನು ಬಿಡುಗಡೆ ಮಾಡಲೇಬೇಕು. ಲೈಂಗಿಕ ದೌರ್ಜನ್ಯದ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಮಲ್ಲು ಕುಂಬಾರ್‌ ಆಗ್ರಹಿಸಿದ್ದಾರೆ.

“ಅಂದು ಈ ಮಹಿಳಾ ಕುಸ್ತಿಪಟುಗಳು ದೇಶಕ್ಕೆ ಪದಕದ ಜೊತೆ ಕೀರ್ತಿ ಹೊತ್ತು ತಂದರು. ಇಂದು ನ್ಯಾಯ ಬೇಡಿದ್ದೆ ತಪ್ಪಾಗಿ, ಹೊಡೆದು ಬಡಿದು ಚಿತ್ರಹಿಂಸೆ ನೀಡಿ ಅವರನ್ನು ಜೈಲಿಗೆ ಅಟ್ಟುತ್ತಿದ್ದಾರೆ. ಎಂಥ ದರಿದ್ರ ಆಡಳಿತದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೆಣ್ಣುಮಕ್ಕಳಿಗೆ ಗೌರವ ಕೊಡದವನು ಯಾವ ರಾಜದಂಡ ಹಿಡಿದರೇನು ಪ್ರಯೋಜನ?” ಎಂದು ಮಂಜುನಾಥ್ ಎಂಬವರು ಪ್ರಶ್ನಿಸಿದ್ದಾರೆ.

ಲೇಖಕಿ ಪಲ್ಲವಿ ಇಡೂರು ಪ್ರತಿಕ್ರಿಯಿಸಿ, “ನನ್ನಂತಹ ಕೋಟ್ಯಂತರ ಮಂದಿಯ ಮನಸ್ಸು ಬಿಜೆಪಿ ಅಥವಾ ಬಲಪಂಥೀಯರ ಅಸಹ್ಯದ ರಾಜಕಾರಣದೆಡೆಗೆ ತಿರುಗುವುದಿಲ್ಲ, ಆದರೆ ಅದಾಗಲೇ ಭಕ್ತಿಯಲ್ಲಿ ಮಿಂದೇಳುತ್ತಿರುವ ಅಸಹ್ಯದ ಹುಳುಗಳು ಬದಲಾಗುತ್ತಾರೆ ಎನ್ನುವ ಭ್ರಮೆಯೂ ನನಗಿಲ್ಲ. ಇನ್ನು ಅವರನ್ನು ದಿನ ಬೆಳಗಾದರೆ ಖಂಡಿಸುತ್ತಾ ಕೂರುವುದರಿಂದ ನನ್ನ ಮಾನಸಿಕ ಸ್ಥಿತಿ ಒತ್ತಡಕ್ಕೊಳಗಾಗಿ ಜೀವನಕ್ಕೆ ಮಾರಕವೇ ಹೊರತು ಬೇರೆ ಉಪಯೋಗವಂತೂ ಆಗಲಾರದು. ಮನುಷ್ಯ ಪ್ರತಿಯೊಬ್ಬನೂ ಪ್ರತಿಕ್ರಿಯಿಸುವುದು ತನಗೆ ಬಿಸಿಯ ಅನುಭವವಾದಾಗಲೇ! ನಾವೆಷ್ಟೇ ಎಚ್ಚರಿಸಿದರೂ ಎಚ್ಚರಗೊಳ್ಳಲಾರರು” ಎಂದು ವಿಷಾದಿಸಿದ್ದಾರೆ.

“ಈಗ ಹೀಗೆ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿರುವ ದೇಶದ ಅತ್ಯುನ್ನತ ಕ್ರೀಡಾಪಟುಗಳು ಅವರ ಸಾಧನೆಯ ಸಲುವಾಗಿಯಾದರೂ ಚರ್ಚೆಗೊಳಗಾಗುತ್ತಿದ್ದಾರೆ. ನನ್ನಂತವರು ಹೀಗೆ ಬೀದಿಗಿಳಿದರೆ ಕೇಳುವವರೇ ಇರುವುದಿಲ್ಲ. ಕಹಿ ಅನಿಸಬಹುದು ಆದರೆ ಇದೇ ಸತ್ಯ. ಇಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಾಲಿಡಾರಿಟಿಯ ಪೋಸ್ಟ್‌ಗಳನ್ನು ಬರೆಯಲೂ ನಮಗೆ ಕಮ್ಯುನಿಟಿ ಸ್ಟಾಂಡರ್ಡ್ ಫಿಕ್ಸ್ ಮಾಡಲಾಗಿದೆ. ಇಂತದ್ದೊಂದು ಕೈಕಾಲು ಮುರಿದುಕೊಂಡ ಪ್ರಜಾಪ್ರಭುತ್ವದಲ್ಲಿ ಒಗ್ಗಟ್ಟಿನ ವಿರೋಧ ಮತಗಟ್ಟೆಯಲ್ಲಷ್ಟೇ ತೋರಿಸಲು ಸಾಧ್ಯ ಅನ್ನುವ ದಿವ್ಯಸತ್ಯದ ಅರಿವಾಗಿರುವುದಕ್ಕೇ ಮಾತಿಗಿಂತ ಕೃತಿ ಮೇಲೆನ್ನಿಸಿರುವುದು. ಅಂದಹಾಗೆ ಒಂದುಕಾಲದಲ್ಲಿ ಬಿಜೆಪಿಯ ಪ್ರಧಾನಮಂತ್ರಿಯವರ ಆರಾಧಕರಾಗಿದ್ದ ಈ ಕ್ರೀಡಾಪಟುಗಳು ತಮ್ಮ ಹಕ್ಕಿಗಾಗಿ ತಮ್ಮದೇ ಸರ್ಕಾರದ ಮುಂದೆ ಹೀಗೆ ಬೀದಿ ಬದಿಯಲ್ಲಿ ತುಳಿತಕ್ಕೊಳಗಾಗಬೇಕಾದ ಈ ಪರಿಸ್ಥಿತಿಯನ್ನು ನೋಡುವಾಗ ನೋವಾಗುವುದಂತೂ ನಿಜ. ಸಂವೇದನೆಯನ್ನು ಕಳೆದುಕೊಂಡಿರುವ ಈ ದೇಶದ ಭಕ್ತರು ಬೇಗ ಎಚ್ಚೆತ್ತುಕೊಂಡು ದೇಶ ಉಳಿಸಲಿ ಅನ್ನುವುದಷ್ಟೇ ನನ್ನ ಈ ಕ್ಷಣದ ಆಸೆ” ಎಂದು ಆಶಿಸಿದ್ದಾರೆ.

“ನಿಮ್ಮ ಆತ್ಮವಂಚನೆಗೆ, ಅಷಾಢಭೂತಿತನಕ್ಕೆ ಕೊನೆಯೇ ಇಲ್ಲವೇ ಮಿಸ್ಟರ್ ಪಿಎಂ?” ಎಂದು ಪತ್ರಕರ್ತ ಶಶಿ ಸಂಪಳ್ಳಿ ಪ್ರಶ್ನಿಸಿದ್ದಾರೆ.

“ಸರ್ವಾಧಿಕಾರಿ ಆಡಳಿತದಲ್ಲಿ ಇದೆಲ್ಲಾ ಸಹಜವಾಗಿಯೇ ನಡೆಯುವ ಘಟನಾವಳಿಗಳು ನ್ಯಾಯ ಎಲ್ಲಿದೆ?” ಎಂದು ಯುವ ಹೋರಾಟಗಾರ ಹನುಮೇಶ್ ಗುಂಡೂರು ಪ್ರತಿಕ್ರಿಯಿಸಿದ್ದಾರೆ.

“ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅಂಜಿಕೆಯಿಲ್ಲದೆ ಬೀದಿ ಸುತ್ತುತ್ತಿದ್ದಾನೆ. ಸಂತ್ರಸ್ತ ಹೆಣ್ಮಕ್ಳು ಲಾಠಿ, ಬೂಟುಗಳ ಪೆಟ್ಟು ತಿಂದು ಬಂಧಿಯಾಗಿದ್ದಾರೆ. ದೇಶಕ್ಕೆ ಪದಕ, ಹೆಮ್ಮೆ ತಂದ ಕುಸ್ತಿಪಟುಗಳ ಪರಿಸ್ಥಿತಿಯೇ ಹೀಗಾದರೆ, ನ್ಯಾಯಕ್ಕಾಗಿ ಜನಸಾಮಾನ್ಯರು ಧ್ವನಿ ಎತ್ತಿದರೆ ಅವರ ಪಾಡೇನು? ಮಿಸ್ಟರ್ ಮೋದಿ ಅಮಿತ್ ಷಾ ಅವರೇ, ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷವಾಕ್ಯಕ್ಕೆ ಅರ್ಥವಿದೆಯಾ?” ಎಂದು ಯುವ ಪತ್ರಕರ್ತೆ ಧನಲಕ್ಷ್ಮಿ ಪೋಸ್ಟ್‌ ಮಾಡಿದ್ದಾರೆ.

“ಅಗೋ ಅಲ್ಲಿ ನೋಡಿ ಭವ್ಯ ಸಂಸತ್ತು, ಸಂವಿಧಾನವನ್ನು ಪಕ್ಕಕ್ಕೆ ಎಸೆದು ನಮ್ಮ ಕೋಟ್ಯಾಂತರ ರೂಪಾಯಿ ತೆರಿಗೆ ಹಣದಲ್ಲಿ ಕಟ್ಟಿಸಿ ಸ್ವಂತ ಮನೆಯಂತೆ ಗೃಹ ಪ್ರವೇಶ ಮಾಡಿದ ಕೆಟ್ಟ ಪ್ರಧಾನಿ. ಇಲ್ಲಿ ನೋಡಿ, ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು. ದೇಶದ ಹೆಮ್ಮೆ ಎಂದು ಟೀ ಕುಡಿಯಲು, ಸೆಲ್ಫಿ ತೆಗೆದುಕೊಳ್ಳಲು ಕರೆದ ಸೋಗಲಾಡಿಗೆ ಈಗ ಇವರು ಯಾರು ನೆನಪಿಲ್ಲ. ರಸ್ತೆಯಲ್ಲಿ ಹೀಗೇ ಹೀನಾಯವಾಗಿ ಎಳೆದಾಡುತ್ತಿದ್ದರೂ ಬಿಜೆಪಿಯ ಯಾವ ಮಹಿಳಾ ನಾಯಕಿಯು ತುಟಿ ಬಿಚ್ಚಿಲ್ಲ. ಇವರು ಕೇಳುತ್ತಿರುವುದು ಕೂಡ ಏಳು ಹೆಣ್ಣು ಮಕ್ಕಳ ಮೇಲೆ ಅದರಲ್ಲೂ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಒಬ್ಬ ಬಿಜೆಪಿ ಸಂಸದನ ವಿರುದ್ಧ ಕ್ರಮ! ಅದು ಬಿಜೆಪಿ ಸಾಧ್ಯವಿಲ್ಲ. ಆತ ಮುಂದಿನ ತಿಂಗಳು ಅಯೋಧ್ಯೆಯಲ್ಲಿ ಬೃಹತ್ ರ್‍ಯಾಲಿ ನಡೆಸುತ್ತಿದ್ದಾನೆ. ನೆನಪಿಡಿ ನೀವು ರೈತರನ್ನು ಹೀಗೆ ನಡೆಸಿಕೊಂಡಿದ್ದಿರಿ, ಕೊನೆಗೆ ಏನಾಯಿತು?” ಎಂಬ ಸಂದೇಶವನ್ನು ಶರಣು ಎಂಬವರು ಹಂಚಿಕೊಂಡಿದ್ದಾರೆ.

“ಅವರೆಲ್ಲಾ ದೇಶವನ್ನು ಪ್ರತಿನಿಧಿಸಿ, ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸುವ ಕನಸು ಹೊತ್ತು ಕುಸ್ತಿಪಟುಗಳಾಗಲು ಮುಂದಾದವರು. ಅಪ್ರಾಪ್ತ ವಯಸ್ಸಿನಲ್ಲೇ ಅಭ್ಯಾಸ ನಿರತರಾಗಿ, ವಿಶೇಷ ಕೋಚಿಂಗ್ ಪಡೆದು ಕುಸ್ತಿಪಟುಗಳಾಗಿ ದೇಶಕ್ಕೆ ಒಲಂಪಿಕ್ ನಲ್ಲಿ ಪದಕವನ್ನೂ ತಂದುಕೊಟ್ಟ ಭಾರತಾಂಬೆಯ ಹೆಮ್ಮೆಯ ಕುವರಿಯರು. ಲೈಂಗಿಕ ದೌರ್ಜನ್ಯ ಎಸಗಿದ್ದಾರೆನ್ನುವ ಆರೋಪ ಹೊರಿಸಿರುವ ಮಹಿಳಾ ಕುಸ್ತಿಪಟುಗಳು ತಮಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಸರಕಾರ ತನ್ನ ಸಂಸದನ ಪರವಾಗಿ ನಿಂತು ಈ ಹೆಣ್ಣುಮಕ್ಕಳನ್ನೇ ಬಂಧಿಸಿದೆ ಇಂದು? ಇದೆಂತಹ ಅನ್ಯಾಯ ಸ್ವಾಮಿ, ಈ ದೇಶದಲ್ಲಿ ಕಾನೂನು ಇದೆಯೋ ಇಲ್ಲವೋ? ಲೈಂಗಿಕ ದೌರ್ಜನ್ಯ ಆಗಿದೆ ಎಂದು ನೊಂದು ಪ್ರತಿಭಟಿಸುವ ಈ ಹೆಣ್ಣು ಮಕ್ಕಳನ್ನು ಹಾದಿಬೀದಿಯಲ್ಲಿ ಪ್ರಾಣಿಗಳಂತೆ ಎಳೆದೊಯ್ಯುತ್ತಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಲ್ಲವೇ?” ಎಂದು ಸುಬ್ರಮಣ್ಯ ಭಟ್‌ ಕೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...