Homeಮುಖಪುಟದುರಹಂಕಾರಿ ರಾಜ ಜನರ ದನಿಯನ್ನು ಬೀದಿಬೀದಿಯಲ್ಲಿ ಹತ್ತಿಕ್ಕುವನು: ಕುಸ್ತಿಪಟುಗಳ ಮೇಲಿನ ಕ್ರಮಕ್ಕೆ ಪ್ರತಿಪಕ್ಷಗಳ ಪ್ರತಿಕ್ರಿಯೆ

ದುರಹಂಕಾರಿ ರಾಜ ಜನರ ದನಿಯನ್ನು ಬೀದಿಬೀದಿಯಲ್ಲಿ ಹತ್ತಿಕ್ಕುವನು: ಕುಸ್ತಿಪಟುಗಳ ಮೇಲಿನ ಕ್ರಮಕ್ಕೆ ಪ್ರತಿಪಕ್ಷಗಳ ಪ್ರತಿಕ್ರಿಯೆ

- Advertisement -
- Advertisement -

ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಖ್ಯಾತ ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರು ಜರುಗಿಸಿರುವ ಕ್ರಮದ ವಿರುದ್ಧ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

“ದುರಹಂಕಾರಿ ರಾಜ ಬೀದಿಗಳಲ್ಲಿ ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕುವನು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಒಂದೆಡೆ ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಕೇಂದ್ರ ಸರ್ಕಾರ ಮುಳುಗಿದ್ದರೆ, ಸಂಸತ್ ಭವನದಿಂದ ಸುಮಾರು ಎರಡು ಕಿಮೀ ದೂರದಲ್ಲಿ ಪ್ರತಿಭಟಿಸುತ್ತಿದ್ದ ಕುಸ್ತಿಪಟುಗಳನ್ನು ಬಲವಂತವಾಗಿ ಪೊಲೀಸರು ಬಂಧಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್‌ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಂಧಿಸುವಂತೆ ಆಗ್ರಹಿಸಿ ನೂತನ ಸಂಸತ್ ಭವನದ ಮುಂದೆ ಪ್ರತಿಭಟಿಸಲು ಕುಸ್ತಿಪಟುಗಳು ಮುಂದಾಗಿದ್ದರು.

ದೆಹಲಿ ಪೊಲೀಸರ ಕ್ರಮವು ರಾಜಕೀಯ ವಲಯದಲ್ಲಿ ತೀವ್ರ ಖಂಡನೆಗೆ ಒಳಗಾಗಿದೆ. “ಬಿಜೆಪಿ ಸರ್ಕಾರವು ಅನ್ಯಾಯ ಎಸಗುತ್ತಿದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹತ್ತಿಕ್ಕುತ್ತಿದೆ” ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.

ಇದನ್ನೂ ಓದಿರಿ: ಪ್ರತಿಭಟನಾನಿರತ ಕುಸ್ತಿಪಟುಗಳ ಮೇಲೆ ಪೊಲೀಸ್ ದರ್ಪ; ಭುಗಿಲೆದ್ದ ಜನಾಕ್ರೋಶ

ಪೊಲೀಸರ ವರ್ತನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. “ಭಾರತದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಕ್ರೀಡಾಪಟುಗಳೊಂದಿಗೆ ಇಂತಹ ವರ್ತನೆಯು ತುಂಬಾ ತಪ್ಪು ಮತ್ತು ಖಂಡನೀಯ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, “ಪ್ರಧಾನಿ ಮೋದಿಯವರು ನೂತನ ಸಂಸತ್ ಭವನದ ಉದ್ಘಾಟನೆಯನ್ನು ಪಟ್ಟಾಭಿಷೇಕದ ಸಮಾರಂಭವೆಂದು ಪರಿಗಣಿಸಿದ್ದಾರೆ. ಪಟ್ಟಾಭಿಷೇಕ ಮುಗಿದಿದೆ – ದುರಹಂಕಾರಿ ರಾಜ ಬೀದಿಬೀದಿಗಳಲ್ಲಿ ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕುತ್ತಿದ್ದಾನೆ” ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, “ಬಿಜೆಪಿ ಸರ್ಕಾರದ ದುರಹಂಕಾರವು ಎಷ್ಟು ಹೆಚ್ಚಾಗಿದೆ ಎಂದರೆ- ಸರ್ಕಾರವು ನಮ್ಮ ಮಹಿಳಾ ಆಟಗಾರರ ಧ್ವನಿಯನ್ನು ನಿರ್ದಯವಾಗಿ ಬೂಟಿನ ಕೆಳಗೆ ಹಾಕಿ ತುಳಿಯುತ್ತಿದೆ” ಎಂದು ಟೀಕಿಸಿದ್ದಾರೆ.

“ಕ್ರೀಡಾಪಟುಗಳ ಎದೆಯ ಮೇಲಿರುವ ಪದಕಗಳು ನಮ್ಮ ದೇಶದ ಹೆಮ್ಮೆ” ಎಂದು ಅವರು ತಿಳಿಸಿದ್ದಾರೆ.

ಆಡಳಿತಾರೂಢ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪ್ರಜಾಪ್ರಭುತ್ವ ಎಂದರೆ ಕೇವಲ ಕಟ್ಟಡಗಳಲ್ಲ, ಸಾರ್ವಜನಿಕರ ಧ್ವನಿಯ ಮೂಲಕ ಪ್ರಜಾಪ್ರಭುತ್ವ ನಡೆಯುತ್ತದೆ” ಎಂದು ಸರ್ಕಾರಕ್ಕೆ ಕಿವಿಹಿಂಡಿದ್ದಾರೆ.

ಇದನ್ನೂ ಓದಿರಿ: ಮಹಿಳಾ ಕುಸ್ತಿಪಟುಗಳು ಭಾರತದ ’ಬೇಟಿ’ಗಳಲ್ಲವೇ?

“ಸರ್ವಾಧಿಕಾರಿ ಧೋರಣೆಯ ಮೂಲಕ ಮಹಿಳಾ ಆಟಗಾರ್ತಿಯರ ಮೇಲೆ ಬೀದಿಬೀದಿಯಲ್ಲಿ ಹಲ್ಲೆ ಮಾಡಲಾಗಿದೆ. ಬಿಜೆಪಿ-ಆರ್‌ಎಸ್‌ಎಸ್ ಆಡಳಿತಗಾರರ 3 ಸುಳ್ಳುಗಳು ಈಗ ದೇಶದ ಮುಂದೆ ಬಯಲಾಗಿವೆ 1. ಪ್ರಜಾಪ್ರಭುತ್ವ 2. ರಾಷ್ಟ್ರೀಯತೆ 3. ಬೇಟಿ ಬಜಾವೋ” ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಮೋದಿ ಸರ್ಕಾರ ಇಂದು ಹೊಸ ಸಂಸತ್ ಭವನವನ್ನು ಉದ್ಘಾಟಿಸಿರಬಹುದು. ಆದರೆ ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ನಿಜವಾಗಿಯೂ ಏನು ಯೋಚಿತ್ತಿದೆ ಎಂಬುದನ್ನು ದೆಹಲಿ ಪೊಲೀಸರು ಬೀದಿಯಲ್ಲಿ ತೋರಿಸಿದ್ದಾರೆ” ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

ತೃಣಮೂಲ ಕಾಂಗ್ರೆಸ್ ವರಿಷ್ಠೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ ಕುಸ್ತಿಪಟುಗಳ ವಿರುದ್ಧ ದೆಹಲಿ ಪೊಲೀಸರು ತೆಗೆದುಕೊಂಡಿರುವ ಕ್ರಮವನ್ನು ಖಂಡಿಸಿದ್ದಾರೆ. “ನಮ್ಮ ಚಾಂಪಿಯನ್‌ಗಳನ್ನು ಈ ರೀತಿ ನಡೆಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...