ಜಾಗತಿಕವಾಗಿ ಉಂಟಾಗಿರುವ ಅರೆವಾಹಕಗಳ ಕೊರತೆಯಿಂದಾಗಿ ಎಲ್ಲ ದೊಡ್ಡ ಮಟ್ಟದ ತಾಂತ್ರಿಕ ಉತ್ಪನ್ನಗಳಿಗೆ, ಕಾರಿನಿಂದ ಹಿಡಿದು ಟೆಲಿವಿಷನ್‌ವರೆಗೂ ತೊಂದರೆಯಾಗಿದೆ. ಭಾರತದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಗೆ ತರಬೇಕೆಂದಿದ್ದ ಸ್ಮಾರ್ಟ್‌ಪೋನ್‌ ಉದ್ಯಮಕ್ಕೂ ಸಮಸ್ಯೆಯಾಗಿದೆ ಎಂದು ಸ್ಕ್ರೋಲ್‌ ಡಾಟ್ ಇನ್ ಸುದ್ದಿ ಜಾಲತಾಣ ವರದಿ ಮಾಡಿದೆ.

ರಿಲಿಯನ್ಸ್‌ ಮತ್ತು ಗೂಗಲ್ ಜಂಟಿಯಾಗಿ ಜಿಯೋಪೋನ್‌ ನೆಕ್ಸ್‌ಟ್‌ ಎಂಬ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಕೋಟ್ಯಾಂತರ ಭಾರತೀಯರಿಗೆ ತಲುಪಿಸುವ ಗುರಿ ಹೊಂದಿದ್ದವು. ಸೆಪ್ಟೆಂಬರ್ 10ರಂದು ಈ ಪೋನ್‌ಗಳನ್ನು ಮಾರುಕಟ್ಟೆಗೆ ತರುವುದಾಗಿ ಘೋಷಿಸಲಾಗಿತ್ತು. ಆದರೆ ರಿಲಿಯನ್ಸ್ ಕಂಪನಿಯ ಟೆಲಿಕಾಂ ಘಟಕವು ಕೊನೆ ಕ್ಷಣದಲ್ಲಿ ಹೊಸ ಪೋನ್‌ಗಳ ಅನಾವರಣ ಕಾರ್ಯಕ್ರಮವನ್ನು ಮುಂದೂಡಿದೆ. ದೀಪಾವಳಿ (ನವೆಂಬರ್‌) ಸಮಯದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

“ಈ ಹೆಚ್ಚುವರಿ ಸಮಯವು ಜಾಗತಿಕವಾಗಿ ಅರೆವಾಹಕಗಳ ಕೊರತೆಯನ್ನು ತಗ್ಗಿಸುತ್ತದೆ” ಎಂದು ಜಿಯೋ ಹಾಗೂ ಗೂಗಲ್ ಸಂಸ್ಥೆಗಳು ಜಂಟಿಯಾಗಿ ಹೇಳಿಕೆ ನೀಡಿವೆ.

ಇದನ್ನೂ ಓದಿ:ರಿಲಯನ್ಸ್‌ ಫೈನಾನ್ಸ್‌ಗಳಿಂದ ಬ್ಯಾಂಕಿಂಗ್ ಫ್ರಾಡ್- ಕರ್ನಾಟಕ ಬ್ಯಾಂಕ್‌ಗೆ ವಂಚನೆ

ಭಾರತದ ತಾಂತ್ರಿಕ ವಲಯ ಸೆಮಿಕಂಡಕ್ಟರ್‌ಗಳ ಆಮದಿನ ಮೇಲೆ ಅವಲಂಬಿತವಾಗಿದೆ ಎಂದು ಸ್ಕೋಲ್‌ ವರದಿ ಮಾಡಿದೆ. ಕೋವಿಡ್ ಬಿಕ್ಕಟ್ಟಿನಿಂದಾಗಿ ಜಿಯೋ, ಗೂಗಲ್‌ ಕೈಗೊಂಡಿದ್ದ ಈ  ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ ಎಂದು ಉಲ್ಲೇಖಿಸಲಾಗಿದೆ.