Homeಮುಖಪುಟಆಸ್ಕರ್‌, ಆಸ್ಕರಣ್ಣನಾಗಿಯೇ ಉಳಿದಿದ್ದರು: ಪುರುಷೋತ್ತಮ ಬಿಳಿಮಲೆ

ಆಸ್ಕರ್‌, ಆಸ್ಕರಣ್ಣನಾಗಿಯೇ ಉಳಿದಿದ್ದರು: ಪುರುಷೋತ್ತಮ ಬಿಳಿಮಲೆ

ಆಸ್ಕರ್‌ ಫೆರ್ನಾಂಡಿಸ್‌ ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧೀ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ.

- Advertisement -
- Advertisement -

ಕಾಲನ ಗರ್ಭ ಸೇರಿದ ಆಸ್ಕರ್‌

80 ವರ್ಷದ ಆಸ್ಕರ್‌ ಫೆರ್ನಾಂಡಿಸ್‌ ( ಮಾರ್ಚ್‌ 27, 1941) ಇನ್ನಿಲ್ಲವೆಂಬ ಸುದ್ದಿ ತಲುಪಿದಾಗ ಕಾಲನ ಚಕ್ರಗಳು ಹಿಂದಕ್ಕೆ ಸರಿಯತೊಡಗಿದುವು. ದೇವರಾಜು ಅರಸು ಕಾಲದಲ್ಲಿ ಕರಾವಳಿಯ ಹಿಂದುಳಿದ ವರ್ಗದಿಂದ ಮೇಲೆದ್ದು ಬಂದ ಶ್ರೀಗಳಾದ ಜನಾರ್ದನ ಪೂಜಾರಿ, ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿ ತಮ್ಮ ರಾಜಕೀಯ ಏಳುಬೀಳುಗಳ ನಡುವೆಯೂ ಕೊನೆಯವರೆಗೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿಯೇ ಉಳಿದರು.

ಈ ತ್ರಿಮೂರ್ತಿಗಳಲ್ಲಿ ಆಸ್ಕರ್‌ ಫೆರ್ನಾಂಡಿಸ್‌ ರಾಜೀವ್‌ ಗಾಂಧಿ ಕಾಲದಿಂದಲೂ ಗಾಂಧೀ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು. ಆದರೆ ಈ ಸಂಬಂಧವನ್ನು ಅವರೆಂದೂ ದುರುಪಯೋಗಪಡಿಸಿಕೊಂಡವರಲ್ಲ. ಜೊತೆಗೆ ಆಸ್ಕರ್‌ ಎಂದೂ ಮಹತ್ವಾಕಾಂಕ್ಷಿಯೂ ಆಗಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸುತ್ತಿದ್ದ ಅವರು ಕೇಂದ್ರದಲ್ಲಿ ರಸ್ತೆ ಸಾರಿಗೆ, ಹೆದ್ದಾರಿ, ಕಾರ್ಮಿಕ ಮತ್ತು ಉದ್ಯೋಗ, ಯೋಜನಾ ಅನುಷ್ಠಾನ, ಯುವಜನ ಹಾಗೂ ಕ್ರೀಡಾ ಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ. ಮಂತ್ರಿಯಾದಾಗ ಅವರು ಹಿಗ್ಗಿದವರಲ್ಲ, ಆಗದಿದ್ದಾಗ ಅವರು ಕುಗ್ಗಿದವರಲ್ಲ. ಆಸ್ಕರ್‌, ಆಸ್ಕರಣ್ಣ ನಾಗಿಯೇ ಉಳಿದಿದ್ದರು.

1975-76ರ ಅವಧಿಯಲ್ಲಿ ಉಡುಪಿಯ ಮುನ್ಸಿಪಲ್‌ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು 1980ರಲ್ಲಿ ಮೊದಲ ಬಾರಿಗೆ ವಿ.ಎಸ್‌ ಆಚಾರ್ಯರನ್ನು ಸೋಲಿಸಿ, ಉಡುಪಿ ಕ್ಷೇತ್ರದಿಂದ ಏಳನೇ ಲೋಕ ಸಭೆ ಪ್ರವೇಶಿಸಿದ ಅವರು ಮುಂದೆ, 1984 ರಲ್ಲಿ ಕೆ ಎಸ್‌ ಹೆಗ್ಡೆ , 1989 ರಲ್ಲಿ ಎಂ ಸಂಜೀವ, 1991ರಲ್ಲಿ ರುಕ್ಮಯ್ಯ ಪೂಜಾರಿಯರನ್ನು ಮತ್ತು 1996ರಲ್ಲಿ ಜಯರಾಮ ಶೆಟ್ಟರನ್ನು ಸೋಲಿಸಿ ಲೋಕ ಸಭೆಗೆ ಆಯ್ಕೆಯಾದರು.

1980ರಲ್ಲಿ ಮೊದಲ ಸಲ ಆಸ್ಕರ್‌ ಗೆದ್ದಾಗ ಅವರ ಗೆಲುವಿನ ಅಂತರ ಒಂದೂವರೆ ಲಕ್ಷವಾಗಿದ್ದರೆ, 196ರಲ್ಲಿ ಅವರ ಗೆಲುವಿನ ಅಂತರ ಕೇವಲ ಎರಡು ಸಾವಿರವಾಗಿತ್ತು. ಆ ಹೊತ್ತಿಗೆ ದೆಹಲಿ ಕೇಂದ್ರಿತ ರಾಜಕಾರಣದಲ್ಲಿ ಮುಳುಗಿದ್ದ ಆಸ್ಕರ್‌ ಅವರಿಗೆ ತನ್ನ ಕಾಲ ಕೆಳಗಿನ ನೆಲ ಕುಸಿಯುವುದು ಗೊತ್ತಾಗಲೇ ಇಲ್ಲ. ಅವರು ತನಗೆ ಮತ ಹಾಕಿದವರಿಗಿಂತ ಹೆಚ್ಚಗಿ ದೆಹಲಿ ಜನಗಳಿಗೇ ಹತ್ತಿರವಾಗುತ್ತಾ ಹೋದರು. ಕಾಂಗ್ರೆಸ್‌ ನ ಕೇಂದ್ರ ಕಚೇರಿಯಲ್ಲಿಯೇ ಅವರು 24 ಗಂಟೆಗಳ ಕಾಲ ದುಡಿಯತೊಡಗಿದರು. ಪರಿಣಾಮವಾಗಿ, 1998ರ ಲೋಕ ಸಭಾ ಚುನಾವಣೆಯಲ್ಲಿ ಅವರು ಸುಮಾರು 42 ಸಾವಿರ ಮತಗಳಿಂದ ಸೋತರು. ಸೋತರೂ ಮತ್ತೆ ರಾಜ್ಯ ಸಭೆಗೆ ಪ್ರವೇಶ ಪಡೆದರು.

80-90ರ ದಶಕದಲ್ಲಿ ಆಗಿನ್ನೂ ಯುವಕರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ವೀರಪ್ಪ ಮೊಯಿಲಿಯವರು ತಮಗೊದಗಿದ ಅವಕಾಶಗಳನ್ನು ಉಪಯೋಗಿಸಿಕೊಂಡು ಉಡುಪಿ ಮಂಗಳೂರುಗಳಲ್ಲಿ ಹೆಚ್ಚು ಕೆಲಸ ಮಾಡಿದ್ದರೆ, ಕರಾವಳಿ ಇವತ್ತು ಈ ಮಟ್ಟಿನ ಕೋಮುವಾದಕ್ಕೆ ಬಲಿಯಾಗುತ್ತಿರಲಿಲ್ಲ. ಭೂ ಸುಧಾರಣೆಯ ಆನಂತರ ಹುಟ್ಟಿಕೊಂಡ ಹೊಸ ತಲೆಮಾರಿನ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ನಾಯಕರು ವಿಫಲರಾಗಿದ್ದರು. ಕಾರಣ ತಮ್ಮದೇ ಜನಗಳಿಂದ ದೂರವಾಗುತ್ತಲೇ ಹೋದರು. ಪೂಜಾರಿಯವರು ಮತ್ತು ಮೊಯಿಲಿಯವರು ಸೋತರು, ಆಸ್ಕರ್‌ ಇದೀಗ ಕೊನೆಯುಸಿರು ಎಳೆದರು.

ಮೃದು ಮಾತಿನ ಆಸ್ಕರ್‌ ಅಂದರೆ ದೆಹಲಿಯಲ್ಲಿ ಎಲ್ಲರಿಗೂ ಇಷ್ಟ. ಯೋಗ ಮತ್ತು ಕಥಕ್‌ ಅವರ ಪ್ರೀತಿಯ ಹವ್ಯಾಸಗಳು. ಹೆಂಡತಿ ಬ್ಲೋಸಮ್‌ ರನ್ನು ಹತ್ತಿರ ಕುಳಿತುಕೊಳ್ಳಿಸದೇ ಇದ್ದರೆ ಅವರು ಭಾಷಣ ಮಾಡುತ್ತಲೇ ಇರಲಿಲ್ಲ. ಕಚೇರಿಗೆ ಯಾರು ಹೋದರೂ ಕರೆದು ಮಾತಾಡಿಸುವ ಸೌಜನ್ಯ, ನಮ್ಮಂಥ ರಾಜಕೀಯೇತರ ಜನರು ಹೋದರೆ ಹತ್ತಿರ ಕುಳ್ಳಿರಿಸಿಕೊಂಡು ಹೆಗಲ ಮೇಲೆ ಕೈ ಹಾಕಿ ಹರಟುವ ಪ್ರೀತಿ ಮೊದಲಾದ ಗುಣಗಳಿಂದಾಗಿ ಆಸ್ಕರ್‌ ಅಜಾತ ಶತ್ರುವಾಗಿಯೇ ಉಳಿದರು.

2004-2008ರ ಅವಧಿಯಲ್ಲಿ ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸಂಘಕ್ಕೊಂದು ಸಾಂಸ್ಕೃತಿಕ ಸಮುಚ್ಚಯ ಕಟ್ಟುತ್ತಿದ್ದಾಗ, ಆಸ್ಕರ್‌, ಮೊಯಿಲಿ ಮತ್ತು ಅನಂತ ಕುಮಾರ್‌ ನಮ್ಮ ಸಹಾಯಕ್ಕೆ ನಿಂತಿದ್ದರು. ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಗೆಳೆಯ ವಸಂತ ಶೆಟ್ಟಿ ಬೆಳ್ಳಾರೆಯವರು ಆಸ್ಕರ್‌ ಮತ್ತು ಮೊಯಿಲಿಯವರನ್ನು ಸೇರಿಸಿ ಯಕ್ಷಗಾನವನ್ನು ಮಾಡುವ ಯೋಜನೆ ರೂಪಿಸಿದರು. ಮಂಗಳೂರಿನಿಂದ ಕಲಾವಿದ ಭಾಸ್ಕರ ರೈ ಕುಕ್ಕುವಳ್ಳಿಯವರು ಸಹಾಯ ಹಸ್ತ ಚಾಚಿದರು. ವಿದ್ಯಾ ಕೋಳ್ಯೂರು ತರಬೇತಿ ನೀಡಿದರು. ಕೃಷ್ಣ ಭಟ್ಟರು ಎಲ್ಲ ವ್ಯವಸ್ಥೆ ಮಾಡಿದರು. ಆಸ್ಕರ್‌ ಅವರದು ʼ ಅತ್ಯುನ್ನತಿಯೊಳ್‌ ಅಮರಸಿಂಧೂದ್ಭವನಾದ ಭೀಷ್ಮಾಚಾರ್ಯ, ಮೊಯಿಲಿಯವರದು ʼ ಸೂತ ಪುತ್ರ ಕರ್ಣʼ, ನಂದು ʼನೀತಿವಂತ ವಿದುರʼ ಇತ್ಯಾದಿ. ಒಂದು ಹಂತದಲ್ಲಿ ಭೀಷ್ಮಚಾರ್ಯ ಅವರು ಇದಿರಾದಾಗ ನಾನು ( ವಿದುರ) ಹೇಳಿದೆ-
ʼ ಅಚಾರ್ಯರೇ, ನಿಮಗೆ ಹಸ್ತಿನಾಪುರದ ಪಟ್ಟವನ್ನು ಕಾಯುವುದೇ ಕೆಲಸವಾಯಿತಲ್ಲ? ನೀವು ಪಟ್ಟವೇರುವುದು ಯಾವಾಗ?

ತುಂಬಿದ ಸಭೆ ಚಪ್ಪಳೆ ತಟ್ಟಿತು, ಭೀಷ್ಮರು ಮುಗುಳ್ನಕ್ಕರು.

ಮರುದಿನ ದೇಶದಾದ್ಯಂತ ʼ ನೇತಾ ಬನ್‌ ಗಯಾ ಅಭಿನೇತಾʼ ಅಂತ ಸುದ್ದಿಯಾಯಿತು.
ರಾಜಕೀಯದ ಪಟ್ಟುಗಳು ಕ್ಷಿಪ್ರವಾಗಿ ಬದಲಾಗುತ್ತಿರುವಾಗ ಆಸ್ಕರ್‌ ಮರೆಯಾದದ್ದು ಸಾಂಕೇತಿಕವೂ ಹೌದು .

ಪೋತು ಬಲೆ ಆಸ್ಕರಣ್ಣ!

(ಚಿತ್ರದಲ್ಲಿ ಎಡಬದಿಗೆ ಕರ್ಣನಾಗಿ ಮೊಯಿಲಿ, ಮಧ್ಯೆ ಭೀಷ್ಮನಾಗಿ ಆಸ್ಕರ್‌ ಮತ್ತು ಬಲಬದಿಯಲ್ಲಿ ವಿದುರನಾಗಿ ನಾನು, ಫೋಟೋ: ದಿನೇಶ್‌ ಶೆಣೈ)
  • ಪುರುಷೋತ್ತಮ ಬಿಳಿಮಲೆ

ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (80) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...