ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ ಮತ್ತು ಕರ್ತವ್ಯದಲ್ಲಿರುವ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೆಹಲಿಯ ಮುಖ್ಯಮಂತ್ರಿ ಹಾಗೂ ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಅತಿಶಿ ಮರ್ಲೇನಾ ವಿರುದ್ಧ ಪೊಲೀಸರು ಮಂಗಳವಾರ (ಫೆಬ್ರವರಿ 4,2025) ಎಫ್‌ಐಆರ್ ದಾಖಲಿಸಿದ್ದಾರೆ.
“ನಾವು ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿಯ ವಿರುದ್ಧ ಗೋವಿಂದಪುರಿ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಫತೇ ಸಿಂಗ್ ಮಾರ್ಗದಲ್ಲಿ 50-70 ಬೆಂಬಲಿಗರು ಮತ್ತು 10 ವಾಹನಗಳೊಂದಿಗೆ ಅತಿಶಿ ಅವರು ಕಾಣಿಸಿಕೊಂಡಿದ್ದರು. ಚುನಾವಣೆಯ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳ ಪ್ರಕಾರ, ಆ ಪ್ರದೇಶವನ್ನು ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಅತಿಶಿ ಅವರು ಅಧಿಕಾರಿಯೊಬ್ಬರು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಾರೆ. ಹಾಗಾಗಿ, ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಾಗಿರುವ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅತಿಶಿ ಅವರು ಚುನಾವಣಾ ಆಯೋಗದ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಮತ್ತು ಅವರ ಕುಟುಂಬದ ಸದಸ್ಯರು ಬಹಿರಂಗವಾಗಿ ‘ಗೂಂಡಾಗಿರಿ’ ನಡೆಸುತ್ತಿದ್ದಾರೆ. ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅತಿಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
चुनाव आयोग भी ग़ज़ब है!
रमेश बिधूड़ी जी के परिवार के सदस्य खुले-आम आचार संहिता का उल्लंघन कर रहे हैं। उन पर कोई एक्शन नहीं।
मैंने शिकायत कर के पुलिस और @ECISVEEP को बुलाया, और इन्होंने मेरे ऊपर केस दर्ज कर दिया!
राजीव कुमार जी: आप चुनावी प्रक्रिया कि कितनी धज्जियां उड़ायेंगे https://t.co/UlRiBzbELV
— Atishi (@AtishiAAP) February 4, 2025
ಈ ಕುರಿತು ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, “ದೆಹಲಿ ಸಿಎಂ ಬಹಿರಂಗ ಗೂಂಡಾಗಿರಿಯ ಬಗ್ಗೆ ದೂರು ನೀಡಿದ ನಂತರ ಚುನಾವಣಾ ಆಯೋಗ ಅವರ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದೆ” ಎಂದು ಆರೋಪಿಸಿದ್ದಾರೆ.
“ದೆಹಲಿ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕೃತ ನಿಲುವು ಇದು. ದೆಹಲಿ ಪೊಲೀಸರು ಮತ್ತು ಚುನಾವಣಾ ಆಯೋಗದ ಕೆಲಸವೆಂದರೆ ಆಮ್ ಆದ್ಮಿ ಪಕ್ಷದ ವಿರುದ್ಧ ಗೂಂಡಾಗಿರಿ ಮಾಡುವುದು. ಬಿಜೆಪಿಯ ಗೂಂಡಾಗಿರಿಗೆ ರಕ್ಷಣೆ ನೀಡುವುದು. ಮದ್ಯ, ಹಣ ಮತ್ತು ವಸ್ತುಗಳನ್ನು ವಿತರಿಸುವುದು” ಎಂದು ಕೇಜ್ರಿವಾಲ್ ಹೇಳಿದ್ದಾರೆ.
खुले आम हो रही गुंडागर्दी के ख़िलाफ़ शिकायत करने पर दिल्ली की मुख्यमंत्री के ख़िलाफ़ चुनाव आयोग ने पुलिस केस किया।
तो अब दिल्ली पुलिस और चुनाव आयोग का ये official stand है-
दिल्ली पुलिस और चुनाव आयोग का “काम” आम आदमी पार्टी के ख़िलाफ़ ख़ुद गुंडागर्दी करना, बीजेपी की… https://t.co/9dQ3sTcsuZ
— Arvind Kejriwal (@ArvindKejriwal) February 4, 2025
“ಬಿಜೆಪಿ ಗೂಂಡಾಗಿರಿಯಲ್ಲಿ ತೊಡಗಿದೆ, ಚು. ಆಯೋಗ ಪಕ್ಷಪಾತಿ”: ಅತಿಶಿ
ಎಫ್‌ಐಆರ್ ದಾಖಲಾದ ನಂತರ, ಅತಿಶಿ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ‘ಗೂಂಡಾಗಿರಿ’ಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಆಯೋಗ ಮತ್ತು ದೆಹಲಿ ಪೊಲೀಸರು ಎಎಪಿ ನಾಯಕರು ಮತ್ತು ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಕೇಸರಿ ಪಕ್ಷದ ಕಾರ್ಯಕರ್ತರನ್ನು ರಕ್ಷಿಸುತ್ತಿದ್ದಾರೆ” ಎಂದು ಅತಿಶಿ ಆರೋಪಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಕೈಯಲ್ಲಿದೆ. ಅದು ರಾಷ್ಟ್ರ ರಾಜಧಾನಿಯಲ್ಲಿ ಉಳಿಯುತ್ತದೆಯೇ ಎಂದು ದೇಶ ನೋಡುತ್ತಿದೆ ಎಂದು ಅತಿಶಿ ಹೇಳಿದ್ದಾರೆ.
“ಬಿಜೆಪಿ ಬಹಿರಂಗವಾಗಿ ಗೂಂಡಾಗಿರಿಯಲ್ಲಿ ತೊಡಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ದೆಹಲಿ ಪೊಲೀಸರು ರಕ್ಷಿಸುತ್ತಿದ್ದಾರೆ. ಚುನಾವಣಾ ಆಯೋಗ ದೂರು ನೀಡುತ್ತಿರುವವರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸುತ್ತಿದೆ” ಎಂದು ಅತಿಶಿ ಆರೋಪಿಸಿದ್ದಾರೆ.
आचार संहिता की धज्जियां उड़ा रही BJP‼️
♦️ Silence Period में रमेश बिधूड़ी के परिवार के लोग और कार्यकर्ता झुग्गियों के लोगों को धमका रहे थे
♦️ कानून के मुताबिक Silence Period में किसी भी अन्य विधानसभा का कोई भी व्यक्ति किसी दूसरी विधानसभा में नहीं जा सकता है
♦️ हमने दिल्ली… pic.twitter.com/mzNFhEib2T
— AAP (@AamAadmiParty) February 4, 2025
ತನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಮತ್ತು ಅವರ ಕುಟುಂಬ ಸದಸ್ಯರು ಕಲ್ಕಾಜಿಯಲ್ಲಿ ‘ಗೂಂಡಾಗಿರಿ’ಯಲ್ಲಿ ತೊಡಗಿದ್ದಾರೆ ಎಂದು ಅತಿಶಿ ನಿರ್ದಿಷ್ಟವಾಗಿ ಆರೋಪಿಸಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
“ದೆಹಲಿಯ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಒಂದೆಡೆ, ಉಚಿತ ಕಲ್ಯಾಣ ಯೋಜನೆಗಳನ್ನು ನಿಲ್ಲಿಸಲು ಬಯಸುವ ಮತ್ತು ಹಿಂಸಾಚಾರದಲ್ಲಿ ತೊಡಗಿರುವ ಪಕ್ಷವಿದೆ. ಮತ್ತೊಂದೆಡೆ, ಪ್ರತಿ ಮನೆಯೂ ತಿಂಗಳಿಗೆ ₹25,000 ಉಳಿಸುವಂತೆ ಎಎಪಿ ಕೆಲಸ ಮಾಡುತ್ತಿದೆ” ಎಂದು ಅತಿಶಿ ಪ್ರತಿಪಾದಿಸಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಫೆಬ್ರವರಿ 5ರಂದು ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಮಹಾರಾಷ್ಟ್ರ | ಎಲ್ಲಾ ಸರ್ಕಾರಿ ಸಂವಹನಗಳಿಗೆ ಮರಾಠಿ ಭಾಷೆ ಬಳಕೆ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ!


