Homeಚಳವಳಿಭೂಷಣ್ ಪ್ರಕರಣ: ವಕೀಲಿ ವೃತ್ತಿಗೆ ನಿಷೇಧವೇರುವುದು ಸುಪ್ರೀಂ ವ್ಯಾಪ್ತಿಯಲ್ಲಿಲ್ಲ

ಭೂಷಣ್ ಪ್ರಕರಣ: ವಕೀಲಿ ವೃತ್ತಿಗೆ ನಿಷೇಧವೇರುವುದು ಸುಪ್ರೀಂ ವ್ಯಾಪ್ತಿಯಲ್ಲಿಲ್ಲ

"ಬಾರ್ ಕೌನ್ಸಿಲ್ ಮಾತ್ರ ಕಾನೂನು ವೃತ್ತಿಯ ನಡವಳಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ವಿಶೇಷ ಅಧಿಕಾರವನ್ನು ಬಳಸುವುದು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳಿಗೆ ವಿರುದ್ಧವಾಗಿದೆ” ಎಂದು ಚಂದ್ರುರವರು ಹೇಳಿದ್ದಾರೆ.

- Advertisement -
- Advertisement -

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ’ವಕೀಲಿ ವೃತ್ತಿಗೆ ನಿಷೇಧ ಹೇರಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪ್ರಶಾಂತ್‌ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ವರ್ಷಗಲ ಕಾಲ ವಕೀಲ ವೃತ್ತಿಗೆ ನಿ‍ಷೇಧ” ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪಿತ್ತಿದೆ.

ಇದನ್ನೂ ಓದಿ: ನಾನು ಟ್ವೀಟ್‌ ಮಾಡಿದ್ದು, ನಾಗರಿಕನ ಕರ್ತವ್ಯವಾಗಿತ್ತು. ಆದರೆ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್

ಈ ಬಗ್ಗೆ ಪ್ರತಿಕ್ರಿಯಿದ ರಾಜ್‌ದೀಪ್, ನ್ಯಾಯಾಲಯವು ತಾನೆ ಉಂಟು ಮಾಡಿದ ಮುಜುಗರದಿಂದ ಹೊರಬರಲು ನೋಡುತ್ತಿದೆ ಎಂದು ಕುಟುಕಿದ್ದಾರೆ.

ಐಪಿಸಿ ಸೆಕ್ಷನ್ 67 ರ ಪ್ರಕಾರ – ರೂ. 50 ರೂಗಿಂತ ಕಡಿಮೆ ದಂಡವಿದ್ದರೆ, ಜೈಲು ಶಿಕ್ಷೆ 2 ತಿಂಗಳು ಮೀರಬಾರದು. ಆದರೆ ಸುಪ್ರೀಂಕೋರ್ಟ್ ದಂಡ ಪಾವತಿಸದಿದ್ದರೆ 3 ತಿಂಗಳು ಜೈಲು ಘೋಷಿಸಿದೆ. ಅಷ್ಟೇ ಅಲ್ಲದೆ ಅವರ ವಕೀಲಿ ವೃತ್ತಿಗೆ ನಿಷೇಧ ಮಾಡಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವಿಲ್ಲ. ಇದು ವಿಸಿ ಮಿಶ್ರಾ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪು. ಇಷ್ಟೆಲ್ಲ ಮಾಡುವುದರ ಬದಲು ಸುಪ್ರೀಂ ಕೋರ್ಟ್ ಯಾಕೆ ಕ್ಷಮೆ ಕೇಳಿ ಬಿಟ್ಟುಬಿಡಬಾರದು” ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೆ ತೀರ್ಪಿನ ಕುರಿತು ಚೆನ್ನೈ ಹೈಕೋರ್ಟ್‌ ಮಾಜಿ ಮುಖ್ಯ ನ್ಯಾಯಧೀಶ ಚಂದ್ರುರವರು ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ವಿಶೇಷ ಅಧಿಕಾರವನ್ನು ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

“ಅವರಿಗೆ 1 ರೂ. ದಂಡ ಮತ್ತು ದಂಡ ಪಾವತಿಸದಿದ್ದರೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ, ಇದು ಹಿಂದಿನ ಸುಪ್ರೀಂ ಕೋರ್ಟ್ ತೀರ್ಪಿಗೆ ತದ್ವಿರುದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ: ಪ್ರಶಾಂತ್ ಭೂಷಣ್

“ಬಾರ್ ಕೌನ್ಸಿಲ್ ಮಾತ್ರ ಕಾನೂನು ವೃತ್ತಿಯ ನಡವಳಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ವಿಶೇಷ ಅಧಿಕಾರವನ್ನು ಬಳಸುವುದು ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪುಗಳಿಗೆ ವಿರುದ್ಧವಾಗಿದೆ” ಎಂದು ಚಂದ್ರುರವರು ಹೇಳಿದರು.

“ವಕೀಲರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾದರೆ, ಅದನ್ನು ಮೊದಲು ರಾಜ್ಯ ಬಾರ್ ಕೌನ್ಸಿಲ್ ನಿರ್ಧರಿಸಬೇಕು. ಅಲ್ಲಿ ಮೇಲ್ಮನವಿ ಸಲ್ಲಿಸಿದರೆ, ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕ್ರಮ ತೆಗೆದುಕೊಳ್ಳುತ್ತದೆ. ಅದನ್ನು ಮೀರಿದ ಮೇಲ್ಮನವಿಯನ್ನು ಮಾತ್ರ ಸುಪ್ರೀಂ ಕೋರ್ಟ್ ಆಲಿಸಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀವೆಷ್ಟೇ ಸಮಯ ನೀಡಿದರೂ ನನ್ನ ಹೇಳಿಕೆ ಬದಲಿಸುವುದಿಲ್ಲ: ಪ್ರಶಾಂತ್ ಭೂಷಣ್

“ವಿಶೇಷ ಅಧಿಕಾರಗಳ ಹೊರತಾಗಿಯೂ, ಸಂಸತ್ತು ಜಾರಿಗೆ ತಂದ ಕಾನೂನಿನಡಿಯಲ್ಲಿ ತೀರ್ಪು ನೀಡುವುದನ್ನು ಬಿಟ್ಟು ವಿಶೇಷ ಅಧಿಕಾರವನ್ನು ಚಲಾಯಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ. ಶಿಸ್ತು ಕ್ರಮವು ಬಾರ್ ಕೌನ್ಸಿಲ್‌ನ ಅಧಿಕಾರಕ್ಕೆ ಒಳಪಟ್ಟಿರುತ್ತದೆ” ಎಂದು ಅವರು ಹೇಳಿದ್ದಾರೆ.

ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಬಿ.ಟಿ ವೆಂಕಟೇಶ್ ಈ ಬಗ್ಗೆ ಪ್ರತಿಕ್ರಿಯಿಸಿ, “ಸುಪ್ರೀಂ ಕೋರ್ಟ್ ತಮ್ಮ ಹಿಂದಿನ ತೀರ್ಪುಗಳ ವ್ಯಾಖ್ಯಾನಗಳನ್ನು ಕಾಲಕಾಲಕ್ಕೆ ಬದಲಾಯಿಸಬಹುದು. ನ್ಯಾಯಾಂಗ ನಿಂದನೆಯನ್ನು ದೂರ ಮಾಡುವಂತೆ ಒತ್ತಾಯಿಸುವ ಅವಶ್ಯಕತೆಯಿದೆ. ನಾವು ಇನ್ನೂ ‘ನಿಂದನೆ’ ಎಂಬ ಪದಕ್ಕೆ ಏಕೆ ತೂಗು ಹಾಕುತ್ತೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.

“ನ್ಯಾಯಾಲಯದ ಆದೇಶಗಳ ಅಸಹಕಾರಕ್ಕೆ ಶಿಕ್ಷಿಸಬಹುದು, ನ್ಯಾಯಾಲಯದ ಗೌರವಕ್ಕಲ್ಲ. ಇದು ನಮ್ಮದೇ ವ್ಯವಸ್ಥೆಯ ಸಂಸ್ಥೆಗಳಲ್ಲಿ ಒಂದಾಗಿದೆ. ಅವರು ತಪ್ಪು ಮಾಡಿದರೆ ಅದನ್ನು ಟೀಕಿಸಲು ನಮಗೆ ಸ್ವಾತಂತ್ರ್ಯವಿದೆ ಎಂದು ಪ್ರಶಾಂತ್‌ ಭೂಷಣ್ ಚೆನ್ನಾಗಿ ಹೇಳಿದರು. ರಾಷ್ಟ್ರಪಿತ ಗಾಂಧೀಜಿ ಅದನ್ನು ಸಂಪೂರ್ಣ ಸ್ಪಷ್ಟತೆಯೊಂದಿಗೆ ಹೇಳಿದ್ದಾರೆ. ನಮ್ಮದೆ ವ್ಯವಸ್ಥೆಯ ಸಂಸ್ಥೆಯೊಂದು ಅದು ದೋಷಗಳನ್ನು ಮಾಡಿದಾಗಲೆಲ್ಲಾ ಟೀಕಿಸುವುದು ಸಾಂವಿಧಾನಿಕ ಕರ್ತವ್ಯವಾಗುತ್ತದೆ” ಎಂದು ಬಿ.ಟಿ ವೇಂಕಟೇಶ್ ಹೇಳಿದರು.


ಓದಿ:  ಸುಪ್ರೀಂಕೋರ್ಟಿನಲ್ಲಿ ಪ್ರಶಾಂತ್ ಭೂಷಣ್ ಅವರ ಐತಿಹಾಸಿಕ ಹೇಳಿಕೆಯ ಪೂರ್ಣಪಾಠ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...