Homeಅಂತರಾಷ್ಟ್ರೀಯBig Breaking: ನೇಪಾಳ ಸಂಸತ್ತು ವಿಸರ್ಜನೆಗೆ ಪ್ರಧಾನಿ ಕೆ ಪಿ ಶರ್ಮಾ ಒಲಿ ನಿರ್ಧಾರ!

Big Breaking: ನೇಪಾಳ ಸಂಸತ್ತು ವಿಸರ್ಜನೆಗೆ ಪ್ರಧಾನಿ ಕೆ ಪಿ ಶರ್ಮಾ ಒಲಿ ನಿರ್ಧಾರ!

- Advertisement -
- Advertisement -

ದೇಶದ ಸಂಸತ್ ಅನ್ನು ವಿಸರ್ಜಿಸಲು ನೇಪಾಳದ ಕ್ಯಾಬಿನೆಟ್ ಶಿಫಾರಸು ಮಾಡಿದ್ದು, ಇಂದು ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಇದರ ಹಿಂದಿನ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ.

“ಇಂದಿನ ತುರ್ತು ಕ್ಯಾಬಿನೆಟ್ ಸಭೆಯಲ್ಲಿ ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಲು ನಿರ್ಧರಿಸಿದೆ” ಎಂದು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿರುವ ಬರ್ಸಮನ್ ಪುನ್ ತಿಳಿಸಿದ್ದಾರೆ.

ಕಳೆದ ವಾರ ಹೊರಡಿಸಿದ ಕಾರ್ಯಕಾರಿ ಆದೇಶದ ಮೇರೆಗೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ದೇಶದ ಸಂಸತ್ತನ್ನು ವಿಸರ್ಜಿಸಲು ಶಿಫಾರಸು ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: 1 ಮಿಲಿಯನ್ ವಂಚನೆ: ನೀರವ್ ಮೋದಿ ಸಹೋದರನ ಮೇಲೆ ಅಮೆರಿಕಾದಲ್ಲಿ ಪ್ರಕರಣ ದಾಖಲು!

ರಾಯಿಟರ್ಸ್ ವರದಿಯ ಪ್ರಕಾರ, ನೇಪಾಳದ ಪ್ರಧಾನ ಮಂತ್ರಿಯವರ ಕಮ್ಯುನಿಸ್ಟ್ ಪಕ್ಷವು ಬಹುಮತದ ಬೆಂಬಲವನ್ನು ಕಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

“ಪ್ರಧಾನಿಯವರು ಸಂಸದೀಯ ಪಕ್ಷ, ಕೇಂದ್ರ ಸಮಿತಿಯಲ್ಲಿ ಬಹುಮತವನ್ನು ಕಳೆದುಕೊಂಡಿದ್ದಾರೆ” ಎಂದು ಎನ್‌ಪಿಸಿಯ ಕೇಂದ್ರ ಸಮಿತಿ ಸದಸ್ಯ ಬಿಷ್ಣು ರಿಜಾಲ್ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೇಪಾಳದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ 2022 ರಲ್ಲಿ ನಡೆಯಲಿದೆ.


ಇದನ್ನೂ ಓದಿ: ಕೃಷಿ ಸಚಿವರು ಬೇಡ; ಮೋದಿ-ಶಾ ಬಂದು ನಮ್ಮ ಜೊತೆ ಮಾತಾಡಲಿ – ಕಿಸಾನ್ ಒಕ್ಕೂಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...