Homeಕರ್ನಾಟಕ6 ವರ್ಷದ UKG ಮಗುವನ್ನು ಫೇಲ್ ಎಂದು ಘೋಷಿಸಿದ ಖಾಸಗಿ ಶಾಲೆ: ಪೋಷಕರ ಆಕ್ರೋಶ

6 ವರ್ಷದ UKG ಮಗುವನ್ನು ಫೇಲ್ ಎಂದು ಘೋಷಿಸಿದ ಖಾಸಗಿ ಶಾಲೆ: ಪೋಷಕರ ಆಕ್ರೋಶ

ಸೇಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆಯು 6 ವರ್ಷದ UKG ಮಗು ಶಿಶುಗೀತೆ (ರೈಮ್ಸ್) ಹೇಳಲಿಲ್ಲ ಎಂಬ ಕಾರಣಕ್ಕೆ ಫೇಲ್ ಎಂದು ಘೋಷಿಸಿ ವಿವಾದಕ್ಕೆ ಕಾರಣವಾಗಿದೆ.

- Advertisement -
- Advertisement -

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೇಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿ ಶಾಲೆಯು 6 ವರ್ಷದ UKG ಮಗು ಶಿಶುಗೀತೆ (ರೈಮ್ಸ್) ಹೇಳಲಿಲ್ಲ ಎಂಬ ಕಾರಣಕ್ಕೆ ಫೇಲ್ ಎಂದು ಘೋಷಿಸಿ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಶಾಲೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

“ನಮ್ಮ ಒಬ್ಬಳೆ ಮಗಳು ಕಲಿಕೆಯಲ್ಲಿ ಮುಂದಿದ್ದಾಳೆ. ಇಂಗ್ಲಿಷ್‌ನಲ್ಲಿ 40ಕ್ಕೆ 31 ಅಂಕ, ಗಣಿತದಲ್ಲಿ 40ಕ್ಕೆ 35 ಅಂಕ ಮತ್ತು ಪರಿಸರ ವಿಜ್ಞಾನದಲ್ಲಿ 40ಕ್ಕೆ 28 ಅಂಕ ಗಳಿಸಿದ್ದಾಳೆ. ಆದರೆ ಶಾಲೆಯ ಮೌಖಿಕ ಪರೀಕ್ಷೆಯಲ್ಲಿ ಶಿಶುಗೀತೆ ಹೇಳಲಿಲ್ಲ ಎಂಬ ಕಾರಣಕ್ಕೆ ಶಾಲೆಯ ಪ್ರಗತಿ ಪತ್ರದಲ್ಲಿ ಫೇಲ್ ಎಂದು ನಮೂದಿಸಲಾಗಿದೆ” ಎಂದು ಪೋಷಕರಾದ ಮನೋಜ್ ಬಾದಲ್ ಆರೋಪಿಸಿದ್ದಾರೆ.

ಮಗುವಿನ ಅಂಕಪಟ್ಟಿ ನೋಡಿ ನಮಗೆ ಘಾಸಿಯಾಗಿದೆ. ಅಧಿಕೃತವಾಗಿ ಅನುತ್ತೀರ್ಣ ಎಂದು ಬರೆದಿರುವುದರಿಂದ ಮಗುವಿಗೆ ಮಾನಸಿಕ ಹಿಂಸೆಯಾಗುತ್ತದೆ. ಹಾಗಾಗಿ ಅಂಕಪಟ್ಟಿಯನ್ನು ಮಗುವಿಗೆ ತೋರಿಸಿಲ್ಲ. ದಯವಿಟ್ಟು ಈ ಕುರಿತು ಗಮನವಹಿಸಿ ಸರಿಪಡಿಸಿ ಎಂದು ಅವರು ಶಾಲೆಗೆ ಇಮೇಲ್ ಮೂಲಕ ಮನವಿ ಮಾಡಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲರು ಅಸೂಕ್ಷ್ಮವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

“ರೈಮ್ಸ್ ಕಲಿಸುವ ಶಿಕ್ಷಕರ ಪ್ರಕಾರ, ವಿದ್ಯಾರ್ಥಿಯು ಪರೀಕ್ಷೆಯ ಸಮಯದಲ್ಲಿ ಶಿಶುಗೀತೆಗಳನ್ನು ಹೇಳಲಿಲ್ಲ.  ಶಿಕ್ಷಕರು 2 ಅವಕಾಶ ನೀಡಿದರೂ ಮಗು ಎರಡೂ ಬಾರಿಯೂ ಓದಲಿಲ್ಲ. ಆದ್ದರಿಂದ ಶಿಕ್ಷಕರು ಕನಿಷ್ಠ 05 ಅಂಕವನ್ನು ನೀಡಿದ್ದಾರೆ. ಮೊಬೈಲ್ ಅಪ್ಲಿಕೇಶನ್‌ನಲ್ಲಿನ ನಮ್ಮ ಪರೀಕ್ಷೆಯ ಫಲಿತಾಂಶವು ಯಾವುದೇ ವಿದ್ಯಾರ್ಥಿ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದರೂ ಸಹ “ಫೇಲ್” ಎಂದು ತೋರಿಸುವಂತೆ ಹೊಂದಿಸಲಾಗಿದೆ. ಮಗುವು ಎಲ್ಲಾ ವಿಷಯಗಳಿಗೆ 35% ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದರೆ ಮಾತ್ರ “ಪಾಸ್” ಆಗುತ್ತದೆ. ಒಂದು ವಿಷಯದಲ್ಲಿ ಅನುತ್ತೀರ್ಣರಾದರು ನಾವು ಆ ಮಗುವನ್ನು ಮುಂದಿನ ತರಗತಿಗೆ ಕಳಿಸುತ್ತೇವೆ. ನಾವು ಉತ್ತಮ ಉದ್ದೇಶದಿಂದ ಅಂಕ ಪಟ್ಟಿ ರಚಿಸಿದ್ದೇವೆ ಮತ್ತು ನಿಮ್ಮ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೂ ಮುದ್ರಿತ ಪ್ರಗತಿ ವರದಿ ಕಾರ್ಡ್‌ನಲ್ಲಿ ನಿಮ್ಮ ಮಗುವನ್ನು “ಫೇಲ್” ಎಂದು ಸೂಚಿಸುವುದಿಲ್ಲ. ಆದ್ದರಿಂದ, ನಿಮ್ಮ ಮಗು ಫೇಲ್ ಎಂದು ತೋರಿಸಲು ನೀವು ಬಯಸದಿದ್ದರೆ, ನೀವು ಅವಳ ಮುದ್ರಿತ ಪ್ರಗತಿ ವರದಿಯನ್ನು ತೋರಿಸಬಹುದು. ಆದರೆ ನೀವು ಮೊಬೈಲ್ ಅಪ್ಲಿಕೇಶನ್‌ನಲ್ಲಿನ ಅಂಕಪಟ್ಟಿಯಲ್ಲಿನ ಪರೀಕ್ಷೆಯಲ್ಲಿ ಶಿಶುಗೀತೆ ಹೇಳಲಿಲ್ಲದ್ದಾರಿಂದ ಆ ವಿಷಯದಲ್ಲಿ ಫೇಲ್ ಆಗಿದ್ದಾರೆ ಎಂದು ಮಗುವಿಗೆ ವಿವರಿಸಿದರೆ ಉತ್ತಮ ಎಂದು ನಾವು ಶಿಫಾರಸು ಮಾಡುತ್ತೇವೆ” ಎಂದು ಶಾಲೆಯು ಇಮೇಲ್ ಮೂಲಕ ಸ್ಪಷ್ಟೀಕರಣ ನೀಡಿದೆ ಎಂದು ಮನೋಜ್ ಬಾದಲ್ ತಿಳಿಸಿದ್ದಾರೆ.

ಶಾಲೆಯ ಸ್ಪಷ್ಟೀಕರಣದಿಂದ ಮತ್ತಷ್ಟು ಆಕ್ರೋಶಗೊಂಡ ಬಾದಲ್, “06 ವರ್ಷದ ಮಗುವಿನ ಅರ್ಥಕ್ಕೆ ನಿಲುಕದ ಫೇಲ್ ಎಂಬ ವಿಚಾರವನ್ನು ತಿಳಿಸಿದರೆ ಮಾನಸಿಕ ಹಿಂಸೆಯಾಗುತ್ತದೆ. ಇದು ಸರ್ಕಾರಿ ಅದೇಶಗಳಿಗೆ ವಿರುದ್ಧವಾಗಿದೆ ಎಂದು ನಂಬುತ್ತೇವೆ. ಹಾಗಾಗಿ ನಮ್ಮ ಮಗುವನ್ನು ಫೇಲ್ ಎಂದು ಘೋಷಿಸಿದ ಶಾಲೆಯ ವಿರುದ್ಧ ಶಿಕ್ಷಣ ಸಚಿವಾಲಯ ಮತ್ತು ಐಸಿಎಸ್‌ಸಿ ಕೇಂದ್ರವನ್ನು ಸಂಪರ್ಕಿಸಿ ಇಂತಹ ಕಾನೂನುಬಾಹಿರ ಕೆಲಸಗಳನ್ನು ನಿಲ್ಲಿಸುವಂತೆ ಮತ್ತು ನಮ್ಮ ಮಗುವಿನ ಫಲಿತಾಂಶವನ್ನು ಸರಿಪಡಿಸುವಂತೆ ಒತ್ತಾಯಿಸಿಸುತ್ತೇವೆ” ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಶಾಲೆಯ ಮಾನ್ಯತೆ ರದ್ದುಗೊಳಿಸಬೇಕು: ಡಾ.ವಿ.ಪಿ ನಿರಂಜನಾರಾಧ್ಯ

5ನೇ ಮತ್ತು 8ನೇ ತರಗತಿಯ ಪರೀಕ್ಷೆಗಳಲ್ಲಿಯೇ ನಾವು ಫೇಲ್ ಮಾಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಪಬ್ಲಿಕ್ ಪರೀಕ್ಷೆಯಲ್ಲಿಯೇ ಫೇಲ್-ಪಾಸ್ ಮುಖ್ಯವಲ್ಲವೆಂದ ಮೇಲೆ ಯುಕೆಜಿ ಮಗುವನ್ನು ಫೇಲ್ ಮಾಡುವುದರಲ್ಲಿ ಯಾವ ಅರ್ಥವಿದೆ? ಇದು RTE ಕಾಯಿದೆಯ ಸೆಕ್ಷನ್ 16, 17 ಮತ್ತು 29 ರ ಉಲ್ಲಂಘನೆಯಾಗಿದೆ ಎನ್ನುತ್ತಾರೆ ಶಿಕ್ಷಣ ತಜ್ಞರಾದ ಡಾ.ವಿ.ಪಿ ನಿರಂಜನಾರಾಧ್ಯರವರು.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಮಕ್ಕಳಲ್ಲಿ ಭಯ, ಆತಂಕ ಉಂಟು ಮಾಡಬಾರದು, ಮಾನಸಿದ ಹಿಂಸೆ ನೀಡಬಾರದು ಮತ್ತು 8ನೇ ತರಗತಿಯವರೆಗೆ ಫೇಲ್ ಮಾಡಬಾರದು, ತಡೆ ಹಿಡಿಯಬಾರದು ಮತ್ತು ಶಾಲೆಯಿಂದ ಹೊರಹಾಕಬಾರದು ಎಂದು ಆರ್‌ಟಿಇ ಕಾಯ್ದೆ ಹೇಳುತ್ತದೆ. ಸಣ್ಣ ಮಕ್ಕಳು ಆಗ ತಾನೇ ಸಮಾಜಕ್ಕೆ ತೆರೆದುಕೊಳ್ಳುತ್ತ, ಕಲಿಕೆಯಲ್ಲಿ ತೊಡಗಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಆಟ-ಪಾಠದ ಮೂಲಕ ಕಲಿಕೆ ನಡೆಯಬೇಕೆ ಹೊರತು ಆ ಹಂತದಲ್ಲಿ ಪಾಸ್-ಫೇಲ್ ಎನ್ನುವುದೇ ಅರ್ಥಹೀನ. ಈ ಮಗವಿನ ವಿಚಾರದಲ್ಲಿ ಆ ಶಾಲೆ ನಡೆಸುವವರಿಗೆ ಮತ್ತು ಮುಖ್ಯೋಪಾಧ್ಯಯರಿಗೆ ಶಿಕ್ಷಣದ ಬಗ್ಗೆಯಾಗಲಿ, ಶಿಕ್ಷಣದ ಶಾಸ್ತ್ರದ ಎಷ್ಟು ಕಳಪೆ ಜ್ಞಾನವಿದೆ ಎಂಬುದುನ್ನು ತೋರಿಸುತ್ತದೆ. ಆ ಶಾಲೆಯ ವಿರುದ್ಧ ಆರ್‌ಟಿಇ ಕಾಯ್ದೆ ನಿಯಮಗಳ ಪ್ರಕಾರ ಪ್ರಕರಣ ದಾಖಲಿಸಬೇಕು” ಎಂದರು.

“ಏನು ಸಾಧಿಸಬೇಕೆಂದು ಈ ರೀತಿ ಫೇಲ್ ಮಾಡಲಾಗಿದೆ. ಅಂದುಕೊಂಡಿದ್ದನ್ನು ಮಗು ಕಲಿತಿಲ್ಲ ಎಂದರೆ ಮಗುವಿನಲ್ಲಿನ ಯಾವುದೇ ಅಂತರ್ಗತ ನ್ಯೂನತೆಯಿಂದಾಗಿ ಕಲಿತಿಲ್ಲ ಎಂದಲ್ಲ. ಕಲಿಕೆಯ ವಾತಾವರಣ ಮತ್ತು ನಿಮ್ಮ ಬೋಧನಾ ಕ್ರಮ ಸರಿಯಿಲ್ಲ ಎಂದರ್ಥ. ಅದಕ್ಕೆ ಶಿಕ್ಷಕರು ಮತ್ತು ಶಾಲೆ ಜವಾಬ್ದಾರಿಯೇ ಹೊರತು ಮಗು ಅಲ್ಲ. ನಿಮ್ಮ ವೈಫಲ್ಯ ಎದ್ದು ಕಾಣುತ್ತಿರುವುದರಿಂದ ಮಗುವಿಗೆ ಕಟ್ಟಿಸಿಕೊಂಡಿದ್ದ ಶುಲ್ಕವನ್ನು ಮರುಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.

ಮಾಜಿ ಶಿಕ್ಷಣ ಸಚಿವರ ಕಿಡಿ

UKG ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು “ಫೇಲ್” ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಶಿಕ್ಷಣ ಸಂಸ್ಥೆ!
ನನ್ನ ಗಮನಕ್ಕೆ ಈ “ಮಹಾಕೃತ್ಯ” ಬಂದ ಕೂಡಲೇ ಶಿಕ್ಷಣ ಇಲಾಖೆಯ ಆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಮನವಿ ಮಾಡಿದ್ದೇನೆ. ನಾನು ಕೂಡ ಈ ಮಹಾ ಶಾಲೆಗೆ ಸದ್ಯದಲ್ಲಿಯೇ ಒಮ್ಮೆ ಭೇಟಿ ನೀಡಿ “ಪಾವನ” ನಾಗಲು ಬಯಸಿದ್ದೇನೆ ಎಂದು ಮಾಜಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಕಿಡಿಕಾರಿದ್ದಾರೆ.

ಎಚ್ಚೆತ್ತುಕೊಂಡ ಶಾಲೆ; ಕ್ಷಮೆಯಾಚನೆ

ಶಾಲೆ ಬಳಸುತ್ತಿರುವ ಸಾಫ್ಟ್‌ವೇರ್‌ನಲ್ಲಿ ‘ಫೇಲ್’ ಎಂಬ ಪದವನ್ನು ನಮೂದಿಸಲಾಗಿದೆ. ಒಮ್ಮೆ ಪೋಷಕರು ಈ ಸಮಸ್ಯೆಯನ್ನು ನಮಗೆ ತಿಳಿಸಿದ ನಂತರ, ಆಪ್‌ನ ಅಂಕಪಟ್ಟಿಯಿಂದ ‘ಫೇಲ್’ ಪದವನ್ನು ತೆಗೆದುಹಾಕಲು ನಾವು ಸಾಫ್ಟ್‌ವೇರ್ ಕಂಪನಿಯನ್ನು ಕೇಳಿದ್ದೇವೆ ಮತ್ತು ಆದ್ಯತೆಯ ಮೇರೆಗೆ ಮಾಡುವಂತೆ ನೆನಪಿಸಿದ್ದೇನೆ. ಇದರಿಂದ ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ ಎಂದು ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಹೋರಾಟ ಸಂಘಟನೆಯಿಂದ ಬೃಹತ್ ರ್‍ಯಾಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...