Homeಸಿನಿಮಾಕ್ರೀಡೆಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಪರಾಕ್ರಮ: ನಾಳೆ ಡೆಲ್ಲಿ ವಿರುದ್ಧ ಸೆಮಿಫೈನಲ್‌ ಕಾದಾಟ..

ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಪರಾಕ್ರಮ: ನಾಳೆ ಡೆಲ್ಲಿ ವಿರುದ್ಧ ಸೆಮಿಫೈನಲ್‌ ಕಾದಾಟ..

- Advertisement -
- Advertisement -

ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಯು.ಪಿ.ಯೋಧಾ ತಂಡವನ್ನು ರೋಚಕ 3 ಪಾಯಿಂಟ್‌ಗಳಿಂದ ಸೋಲಿಸಿದ ಬೆಂಗಳೂರು ಬುಲ್ಸ್ ತಂಡ ಸೆಮಿಫೈನಲ್‌ ಪ್ರವೇಶಿಸಿದೆ. ಪ್ರೊ ಕಬಡ್ಡಿ ಲೀಗ್ ನಲ್ಲಿ ಮೊದಲ ಬಾರಿ ಟೈಬ್ರೇಕರ್ ಗೆ ಹೋದ ಪ್ಲೇ ಆಫ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 48-45 ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿತು. ಪಂದ್ಯದ ಆರಂಭದಲ್ಲಿ ಮುಗ್ಗರಿಸಿದ್ದ ತಂಡ ಕೊನೆ ಕೊನೆಗೆ ಪವನ್ ಶೆರಾವತ್ ರ ಅಮೋಘ ರೇಡಿಂಗ್ ಮೂಲಕ ಜಯಸಾಧಿಸಿತು.

ನಿನ್ನೆ ನಡೆದ ಪಂದ್ಯದಲ್ಲಿ ನಿಗದಿತ 40 ನಿಮಿಷಗಳವರೆಗೆ ನಡೆದ ಕಾದಾಟದಲ್ಲಿ ಎರಡೂ ತಂಡಗಳು 36-36 ಸಮ ಸಮ ಪಾಯಿಂಟ್ ಗಳಿಸಿದ್ದವು. ಎಲಿಮಿನೇಟರ್ ಪಂದ್ಯ ಟೈ ಆದ ಕಾರಣ ಮತ್ತೆ ಆರು ನಿಮಿಷಗಳ ಆಟ ಆಡಿಸಲಾಯಿತು. ನಂತರ ಪವನ್‌ ಒಂದೇ ರೈಡ್‌ನಲ್ಲಿ ನಾಲ್ಕು ಪಾಯಿಂಟ್‌ ಗಳಿಸುವ ಮೂಲಕ ಅಮೋಘ ಪ್ರದರ್ಶನದಿಂದ ಗೆಲುವಿನ ಕೇಕೆ ಹಾಕಿತು.

ಇಡೀ ಪಂದ್ಯದಲ್ಲಿ 25 ರೈಡ್‌ ಮಾಡಿದ ಪವನ್‌ ನಾಲ್ಕು ಪಾಯಿಂಟ್ ಗಳ ಎರಡು ರೇಡ್ ಸೇರಿದಂತೆ 20 ಪಾಯಿಂಟ್ ಗಳನ್ನು ಗಳಿಸಿ ಮಿಂಚಿದರು.

ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸೆಮಿಫೈನಲ್ ನಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಯು ಮುಂಬಾ, ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ಪಂದ್ಯಗಳು ಅ.16ರ ಬುಧವಾರದಂದು ನಡೆಯಲಿದ್ದು, ಫೈನಲ್‌ ಅಕ್ಟೋಬರ್ 19ರ ಶನಿವಾರ ನಡೆಯಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್‌| ನರ್ಸಿಂಗ್ ಓದುತ್ತಿದ್ದ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ; ಪ್ರಿನ್ಸಿಪಲ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಗುಜರಾತ್‌ನ ಖೇಡಾ ಜಿಲ್ಲೆಯ ನರ್ಸಿಂಗ್ ಕಾಲೇಜಿನ 19 ವರ್ಷದ ದಲಿತ ವಿದ್ಯಾರ್ಥಿಯೊಬ್ಬ, "ಪುರಾವೆಗಳಿಲ್ಲದೆ ಮೇಡಂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ" ಎಂದು ಚಿತ್ರಹಿಂಸೆ ಉಲ್ಲೇಖಿಸುವ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ...

1.50 ಕೋಟಿ ರೂ. ಐಟಿ ದಂಡ ಪ್ರಶ್ನಿಸಿ ಟಿವಿಕೆ ಮುಖ್ಯಸ್ಥ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ 

ಚೆನ್ನೈ: 2015–16ರ ಮೌಲ್ಯಮಾಪನ ವರ್ಷದಲ್ಲಿ ಆದಾಯ ಬಹಿರಂಗಪಡಿಸದಿದ್ದಕ್ಕಾಗಿ 1.50 ಕೋಟಿ ರೂ. ದಂಡ ವಿಧಿಸಿದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಪ್ರಶ್ನಿಸಿ ನಟ-ರಾಜಕಾರಣಿ ವಿಜಯ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದಾಯ...

ಮೇಘಾಲಯ ಗಣಿ ಸ್ಫೋಟ: ಸಾವನ್ನಪ್ಪಿದ ಮೂವರು ಅಸ್ಸಾಂ ಮೂಲದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಗುವಾಹಟಿ: ಮೇಘಾಲಯದ ಪಕ್ಕದ ಕಲ್ಲಿದ್ದಲು ಗಣಿ ಸ್ಫೋಟದಲ್ಲಿ ಸಾವನ್ನಪ್ಪಿದ ಅಸ್ಸಾಂ ರಾಜ್ಯದ ಮೂವರು ಕಾರ್ಮಿಕರ ಕುಟುಂಬಗಳಿಗೆ  ಸರ್ಕಾರ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ, ಸಂತ್ರಸ್ತರು...

ದೆಹಲಿಯಲ್ಲಿ ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣ ಹೆಚ್ಚಳವಾಗುತ್ತಿರುವ ವರದಿ ನಿರಾಕರಿಸಿದ ಪೊಲೀಸರು: ಕಠಿಣ ಕ್ರಮದ ಎಚ್ಚರಿಕೆ

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹುಡುಗಿಯರು ಕಾಣೆಯಾಗುವ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂಬ ವರದಿಗಳನ್ನು ದೆಹಲಿ ಪೊಲೀಸರು ತಿರಸ್ಕರಿಸಿದ್ದಾರೆ. ಈ ಆರೋಪಗಳು ದಾರಿತಪ್ಪಿಸುವಂತಿದ್ದು, ಭೀತಿ ಸೃಷ್ಟಿಸುವ ಗುರಿಯನ್ನು ಹೊಂದಿರುವ ಪಾವತಿಸಿದ ಆನ್‌ಲೈನ್ ಪ್ರಚಾರದಿಂದ ನಡೆಸಲ್ಪಡುತ್ತಿದೆ ಎಂದು ಅವರು...

ಲೋಕಸಭೆ ಕಲಾಪ ಹಲವು ಬಾರಿ ಮುಂದೂಡಿಕೆ, ಪ್ರಧಾನಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ

ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಹಿನ್ನೆಲೆ ಇಂದು (ಫೆ.5, ಗುರುವಾರ) ಲೋಕಸಭೆ ಕಲಾಪ ಹಲವು ಬಾರಿ ಮುಂದೂಡಿಕೆಯಾಯಿತು. ಆದರೂ, ಗದ್ದಲ ಕಡಿಮೆಯಾಗದ ಕಾರಣ ಅಂತಿಮವಾಗಿ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಒಂದು ದಿನದ ಮಟ್ಟಿಗೆ,...

ಮಾಲೂರು ಮರು ಮತ ಎಣಿಕೆ : ಕಾಂಗ್ರೆಸ್‌ನ ನಂಜೇಗೌಡ ಗೆಲುವು ಎತ್ತಿಹಿಡಿದ ಸುಪ್ರೀಂ ಕೋರ್ಟ್

ರಾಜ್ಯ ವಿಧಾನಸಭೆಯ 2023ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ವೈ ನಂಜೇಗೌಡ ಗೆಲುವು ಸಾಧಿಸಿರುವುದನ್ನು ಸುಪ್ರೀಂ ಕೋರ್ಟ್ ಗುರುವಾರ (ಫೆ.5) ಎತ್ತಿ ಹಿಡಿದಿದೆ. ಮತಗಳ ಮರುಎಣಿಕೆಯ ನಂತರವೂ, ನಂಜೇಗೌಡರು ತಮ್ಮ ಎದುರಾಳಿ...

ಅತ್ಯಾಚಾರಿ ಅಸಾರಾಂ ಆಶ್ರಮದ ಭೂಮಿ ವಶಕ್ಕೆ ಪಡೆಯಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ

ಅತ್ಯಾಚಾರ ಪ್ರಕರಣದ ಅಪರಾಧಿ ಮತ್ತು ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುನ ಅಹಮದಾಬಾದ್‌ನ ಮೊಟೇರಾದಲ್ಲಿರುವ ಆಶ್ರಮದಿಂದ 45,000 ಚದರ ಮೀಟರ್‌ಗೂ ಹೆಚ್ಚು ಭೂಮಿಯನ್ನು ವಾಪಸ್ ಪಡೆಯಲು ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುಮತಿ...

ಬಿಹಾರ ಚುನಾವಣೆಯಲ್ಲಿ ಅಕ್ರಮ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಜನ್ ಸುರಾಜ್ ಪಕ್ಷ : ಹೊಸದಾಗಿ ಚುನಾವಣೆ ನಡೆಸುವಂತೆ ಮನವಿ

ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು 2025ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಗುರುವಾರ (ಫೆ.5) ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ...

ಸಭಾಪತಿ ಹೊರಟ್ಟಿ ಉಮಾಶ್ರೀ ಜೊತೆ ಬಳಸಿದ ಭಾಷೆ ಶಿಸ್ತಿನ ಹೆಸರಿನ ಅಹಂಕಾರ: ನಿರ್ದೇಶಕಿ ಸುಮನಾ ಕಿತ್ತೂರು

ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್‌ನಲ್ಲಿ ಉಮಾಶ್ರೀ ಅವರಿಗೆ ಬಳಸಿದ ಭಾಷೆ ಶಿಸ್ತಿನ ಹೆಸರಲ್ಲಿನ ಅಹಂಕಾರವಾಗಿದೆ ಎಂದು ನಿರ್ದೇಶಕಿ ಸುಮನಾ ಕಿತ್ತೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುರುವಾರ (ಫೆ.5) ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ...

ವಾಷಿಂಗ್ಟನ್ ಪೋಸ್ಟ್‌ನಲ್ಲಿ ಉದ್ಯೋಗ ಕಡಿತ : ಕೆಲಸ ಕಳೆದುಕೊಂಡ ಶಶಿ ತರೂರ್ ಮಗ

ಪ್ರಮುಖ ಮಾಧ್ಯಮ ಸಂಸ್ಥೆ ವಾಷಿಂಗ್ಟನ್‌ ಪೋಸ್ಟ್‌ನಲ್ಲಿ ಭಾರೀ ಉದ್ಯೋಗ ಕಡಿತ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಕೆಲಸ ಕಳೆದುಕೊಂಡಿರುವ ಹಿರಿಯ ಕಾಂಗ್ರೆಸ್‌ ನಾಯಕ ಹಾಗೂ ಸಂಸದ ಶಶಿ ತರೂರ್ ಅವರ ಮಗ...