Homeಮುಖಪುಟಎಕ್ಸಿಟ್ ಪೋಲ್‌ಗಳನ್ನು ಮೋದಿಯೇ ಸಂಯೋಜಿಸಿದ್ದಾರೆ, ಫಲಿತಾಂಶ ಭಿನ್ನವಾಗಿರಲಿದೆ: ಕಾಂಗ್ರೆಸ್‌

ಎಕ್ಸಿಟ್ ಪೋಲ್‌ಗಳನ್ನು ಮೋದಿಯೇ ಸಂಯೋಜಿಸಿದ್ದಾರೆ, ಫಲಿತಾಂಶ ಭಿನ್ನವಾಗಿರಲಿದೆ: ಕಾಂಗ್ರೆಸ್‌

- Advertisement -
- Advertisement -

ಎಕ್ಸಿಟ್ ಪೋಲ್‌ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು “ಸಂಯೋಜಿತ” ಮಾಡಿದ್ದಾರೆ. ಇವೆಲ್ಲವೂ ಅವರು ಮಾಸ್ಟರ್ ಮೈಂಡ್ ಮಾಡುತ್ತಿರುವ ಮಾನಸಿಕ ಆಟಗಳಾಗಿವೆ, ಆದರೆ ನಿಜವಾದ ಫಲಿತಾಂಶಗಳು ತುಂಬಾ ಭಿನ್ನವಾಗಿರುತ್ತವೆ ಎಂದು ಎಕ್ಸಿಟ್ ಪೋಲ್‌ ಫಲಿತಾಂಶಗಳ ಬಗ್ಗೆ ಕಾಂಗ್ರೆಸ್‌ ಹೇಳಿಕೊಂಡಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ದೊಡ್ಡ ಬಹುಮತವನ್ನು ಗೆಲ್ಲುವ ನಿರೀಕ್ಷೆಯೊಂದಿಗೆ ಪ್ರಧಾನಿ ಮೋದಿ ಸತತ ಮೂರನೇ ಅವಧಿಗೆ ಅಧಿಕಾರಕ್ಕೇರಳಿದ್ದಾರೆ ನಿನ್ನೆ ಬಿಡುಗಡೆಯಾದ ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು.

ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ತಮಿಳುನಾಡು ಮತ್ತು ಕೇರಳದಲ್ಲಿ ತನ್ನ ಖಾತೆಯನ್ನು ತೆರೆಯುತ್ತದೆ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಆದರೆ ಬಿಹಾರ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ  ಲೆಕ್ಕಾಚಾರದಲ್ಲಿ ಕುಸಿತವನ್ನು ಕಾಣಬಹುದು ಎಂದು ಸಮೀಕ್ಷೆಗಳು ತಿಳಿಸಿವೆ.

ಎಕ್ಸಿಟ್ ಪೋಲ್‌ಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜೂನ್ 4 ರಂದು ನಿರ್ಗಮನ ಖಚಿತವಾಗಿರುವ ವ್ಯಕ್ತಿ ಈ ನಿರ್ಗಮನ ಸಮೀಕ್ಷೆಗಳನ್ನು ಆಯೋಜಿಸಿದ್ದಾರೆ. ಇಂಡಿಯಾ ಮೈತ್ರಿಕೂಟವು ಖಂಡಿತವಾಗಿಯೂ ಕನಿಷ್ಠ 295 ಸ್ಥಾನಗಳನ್ನು ಪಡೆಯಲಿದೆ, ಇದು ಸ್ಪಷ್ಟ ಮತ್ತು ನಿರ್ಣಾಯಕ ಬಹುಮತವಾಗಿದೆ ಎಂದು ಹೇಳಿದ್ದಾರೆ.

“ಹೊರಹೋಗುವ ಪ್ರಧಾನ ಮಂತ್ರಿ ಈ ಮಧ್ಯೆ ಮೂರು ದಿನಗಳ ಕಾಲ ಆತ್ಮತೃಪ್ತಿಯಿಂದ ಉಳಿಯಬಹುದು. ಇವೆಲ್ಲವೂ ಅವರು ಮಾಸ್ಟರ್ ಮೈಂಡ್ ಮಾಡುತ್ತಿರುವ ಮಾನಸಿಕ ಆಟಗಳು. ಆದರೆ ನಿಜವಾದ ಫಲಿತಾಂಶಗಳು ತುಂಬಾ ವಿಭಿನ್ನವಾಗಿರುತ್ತದೆ” ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟ 295ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರವಿಂದ್‌ ಕೇಜ್ರಿವಾಲ್‌ ಪ್ರತಿಪಕ್ಷದ ಇಂಡಿಯಾ ಮೈತ್ರಿಕೂಟದ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಕೊನೆಯ ಹಂತದ ಮತದಾನ ನಿನ್ನೆ ಕೊನೆಗೊಂಡಿದೆ. ಇದರ ಬೆನ್ನಲ್ಲಿ  ಎಕ್ಸಿಟ್ ಪೋಲ್‌ಗಳ ಫಲಿತಾಂಶ ಹೊರಬಿದ್ದಿದೆ.  2014 ಮತ್ತು 2019ರಲ್ಲಿ ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವುದನ್ನು ಹೇಳಿದ್ದವು. ಆದರೆ ವಿಜಯದ ಅಂತರವನ್ನು ನಿಖರವಾಗಿ ಊಹಿಸಲು ವಿಫಲವಾಗಿದ್ದವು.

ಇದನ್ನು ಓದಿ: ವಿಧಾನಸಭೆ ಚುನಾವಣೆ ಫಲಿತಾಂಶ: ಸಿಕ್ಕಿಂ, ಅರುಣಾಚಲದಲ್ಲಿ ಮತ ಎಣಿಕೆ ಆರಂಭ; ಬಿಜೆಪಿ, ಎಸ್‌ಕೆಎಂಗೆ ಮುನ್ನಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...