ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಹೊಸ ಕೃಷಿ ಕಾನೂನುಗಳನ್ನು ತಿರಸ್ಕರಿಸುವ ನಿರ್ಣಯವನ್ನು ಮಂಡಿಸಿದೆ. ಕೇಂದ್ರದ ಕೃಷಿ ಕಾನೂನುಗಳು ರೈತರು ಮತ್ತು ಭೂಹೀನ ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದ್ದಾರೆ.
“ಕೃಷಿ ಸುಗ್ರೀವಾಜ್ಞೆಗಳು ಮತ್ತು ವಿದ್ಯುತ್ ಕಾಯ್ದೆಯ ತಿದ್ದುಪಡಿಗಳ ವಿರುದ್ಧದ ನಿರ್ಣಯವು ಮುಗಿದಿದೆ. ಮೂರು ಕೃಷಿ ಶಾಸನಗಳು ಮತ್ತು ಪ್ರಸ್ತಾವಿತ ವಿದ್ಯುತ್ (ತಿದ್ದುಪಡಿ) ಮಸೂದೆ, ರೈತರು ಮತ್ತು ಭೂಹೀನ ಕಾರ್ಮಿಕರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ” ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
On my way to Vidhan Sabha for one of the most important sessions in the history of Punjab. We have taken feedback of Farmer Unions, Officials and above all, Punjabis and it will be my endeavour today to ensure farmers are duly protected from the Anti-Farmers Laws of Central Govt. pic.twitter.com/x5PLr761as
— Capt.Amarinder Singh (@capt_amarinder) October 20, 2020
ಇದನ್ನೂ ಒದಿ: ಕೃಷಿ ಮಸೂದೆಗೆ ವಿರೋಧ: ಪಂಜಾಬ್ BJP ಪ್ರಧಾನ ಕಾರ್ಯದರ್ಶಿ ರಾಜೀನಾಮೆ!
ಕೇಂದ್ರದ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ನಿರ್ಣಯವನ್ನು ಮಂಡಿಸಿದ ಮೊದಲ ರಾಜ್ಯ ಪಂಜಾಬ್ ಆಗಿದೆ. ನಿರ್ಣಯದ ಹೊರತಾಗಿ, ರೈತರ ಉತ್ಪಾದನಾ ಸೌಲಭ್ಯ ಕಾಯ್ದೆಗೆ ತಿದ್ದುಪಡಿ, ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ, ರೈತರ ಒಪ್ಪಂದಕ್ಕೆ ತಿದ್ದುಪಡಿ ಮತ್ತು ಕೃಷಿ ಸೇವೆಗಳ ಕಾಯ್ದೆ ಸೇರಿದಂತೆ ಒಟ್ಟು ಮೂರು ಹೊಸ ಮಸೂದೆಗಳನ್ನು ಮುಖ್ಯಮಂತ್ರಿ ಇಂದು ಅಸೆಂಬ್ಲಿಯಲ್ಲಿ ಮಂಡಿಸಿದ್ದಾರೆ.
ಈ ತಿದ್ದುಪಡಿಗಳಿಗೆ ಭಾರತದ ರಾಷ್ಟ್ರಪತಿಗಳ ಒಪ್ಪಿಗೆಯ ಅಗತ್ಯವಿರುತ್ತದೆ. ಇದಕ್ಕೂ ಮೊದಲು, ಆಗಸ್ಟ್ 28 ರಂದು, ವಿಧಾನಸಭೆಯಲ್ಲಿ ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ತಿರಸ್ಕರಿಸುವ ನಿರ್ಣಯವನ್ನು ಅಂಗೀಕರಿಸಿತ್ತು.
ಮಸೂದೆಯ ಪ್ರತಿಗಾಗಿ ಎಎಪಿ ಹಟ
ವಿರೋಧ ಪಕ್ಷ ಎಎಪಿ ಮಸೂದೆಯ ಪ್ರತಿಗಳನ್ನು ನೀಡುವಂತೆ ಧರಣಿ ಮಾಡುತ್ತಿದೆ. ಸೋಮವಾರ ಮಧ್ಯಾಹ್ನ ಅಧಿವೇಶನವನ್ನು ಮುಂದೂಡಿದ ನಂತರವು ಎಎಪಿ ಶಾಸಕರು ತಮ್ಮ ಧರಣಿಯನ್ನು ಮುಂದುವರೆಸಿ, ಕೇಂದ್ರವು ಜಾರಿಗೆ ತಂದ ಶಾಸನವನ್ನು ಎದುರಿಸುವ ಮಸೂದೆಯ ಪ್ರತಿಗಳನ್ನು ಕೋರಿದ್ದರು.
ಪಂಜಾಬ್ ಹಣಕಾಸು ಮತ್ತು ಕಾರ್ಯಕಾರಿ ಸಂಸದೀಯ ವ್ಯವಹಾರಗಳ ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ಹೊಸ ಕೃಷಿ ಕಾನೂನುಗಳನ್ನು ಎದುರಿಸಲು ರಾಜ್ಯ ಸರ್ಕಾರ ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚಿಸುತ್ತಿದೆ ಮತ್ತು ಅಧಿವೇಶನದಲ್ಲಿ ಮಂಡಿಸಬೇಕಾದ ವಿವಿಧ ಮಸೂದೆಗಳ ಪ್ರತಿಗಳನ್ನು ಪ್ರತಿಪಕ್ಷಗಳಿಗೆ ಸಂಜೆಯ ಹೊತ್ತಿಗೆ ನೀಡಲಾಗುವುದು ಎಂದು ನಿನ್ನೆ ಹೇಳಿದ್ದರು.
ಪ್ರತಿಪಕ್ಷದ ನಾಯಕ ಮತ್ತು ಎಎಪಿ ಮುಖಂಡ ಹರ್ಪಾಲ್ ಸಿಂಗ್ ಚೀಮಾ, “ಸದನದಲ್ಲಿ ಮಂಡಿಸಲಾಗುವ ಮಸೂದೆಗಳ ಪ್ರತಿ ಸಿಗುವ ತನಕ ನಾವು ಇಲ್ಲಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ” ಎಂದು ನಿನ್ನೆ ತಡರಾತ್ರಿ ಹೇಳಿದ್ದಾರೆ.
“ಕೃಷಿ ಕಾನೂನುಗಳ ವಿರುದ್ಧದ ಶಾಸನವನ್ನು ಎಎಪಿ ಬೆಂಬಲಿಸುತ್ತದೆ ಆದರೆ ಸರ್ಕಾರವು ಅದರ ಪ್ರತಿಗಳನ್ನು ನಮಗೆ ನೀಡಬೇಕಾಗಿತ್ತು. ನಮಗೆ ಇತರ ಮಸೂದೆಗಳ ಪ್ರತಿಗಳೂ ಸಿಕ್ಕಿಲ್ಲ. ಇದು ಸಿಗದೆ ನಮ್ಮ ಶಾಸಕರು ಪ್ರಮುಖ ವಿಷಯಗಳ ಬಗ್ಗೆ ಹೇಗೆ ಚರ್ಚಿಸುತ್ತಾರೆ” ಎಂದು ಚೀಮಾ ಹೇಳಿದ್ದಾರೆ.
ಇದನ್ನೂ ಓದಿ: ’ಮಹಾಘಟಬಂಧನ್’ ಗೆದ್ದರೆ ಕೇಂದ್ರದ ಕೃಷಿ ವಿರೋಧಿ ಕಾನೂನುಗಳು ರದ್ದು!


