ಕರ್ನಾಟಕವು ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಪೆಟ್ರೊಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು 7 ರೂವರೆಗೆ ಕಡಿಮೆಗೊಳಿಸಿದ್ದರ ಬೆನ್ನಲ್ಲೆ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸರ್ಕಾರವು ಲೀಟರ್ ಪೆಟ್ರೊಲ್‌ಗೆ 10 ರೂ ಹಾಗೂ ಡೀಸೆಲ್‌ಗೆ 5 ರೂ ಕಡಿತಗೊಳಿಸಿದೆ.
‘ಪಂಜಾಬ್‌ನಲ್ಲಿ ಪೆಟ್ರೊಲ್ ಅಗ್ಗವಾಗಿದೆ. ದೆಹಲಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪೆಟ್ರೊಲ್ ಬೆಲೆ ಈಗ 9 ರೂ ಕಡಿಮೆಯಾಗಿದೆ’ ಎಂದಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ’ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆಯನ್ನು ₹ 10 ಮತ್ತು ಡೀಸೆಲ್‌ಗೆ ₹ 5 ಕಡಿತಗೊಳಿಸಲಾಗುವುದು. ಕಳೆದ 70 ವರ್ಷಗಳಲ್ಲಿ ಇದು ಸಂಭವಿಸಿಲ್ಲ’ ಎಂದು ತಿಳಿಸಿದ್ದಾರೆ.
[Live] Press conference at Punjab Bhawan, Chandigarh.
https://t.co/PSqhwexoQb— Charanjit S Channi (@CHARANJITCHANNI) November 7, 2021
ಕಳೆದ ವಾರವಷ್ಟೆ ಪ್ರತಿದಿನ 35 ಪೈಸೆಗಳಂತೆ ಆರು ದಿನಗಳ ಕಾಲ ಸತತವಾಗಿ ಪೆಟ್ರೋಲ್ ಬೆಲೆ ಏರಿಕೆಯಾಗಿತ್ತು. 2020ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಪೆಟ್ರೊಲ್ ಬೆಲೆ 86.47 ರೂ ಆಗಿತ್ತು. ಒಂದು ವರ್ಷದ ಅವಧಿಯಲ್ಲಿ ಅದು 113 ರೂ ತಲುಪಿತ್ತು. ಅಂದರೆ ಒಂದು ವರ್ಷದ ಅವಧಿಯಲ್ಲಿ ಸುಮಾರು 30 ರೂಗಳಷ್ಟು ಬೆಲೆ ಏರಿಕೆಯಾಗಿದೆ.
ಒಕ್ಕೂಟ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಶುಂಕವನ್ನು ಪ್ರತಿ ಲೀಟರ್ ಮೇಲೆ 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ. ಇದರ ಬೆನ್ನಲ್ಲೆ ಬಿಜೆಪಿ ಆಡಳಿತದ 10 ರಾಜ್ಯಗಳು ಮತ್ತು ಇತರ ಎರಡು ರಾಜ್ಯಗಳು ಸಹ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿವೆ.
ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ ಉತ್ತರಖಂಡ, ಬಿಹಾರ ಮತ್ತು ಓರಿಸ್ಸಾ ರಾಜ್ಯಗಳು ತಮ್ಮ ವ್ಯಾಟ್ ಕಡಿತ ಮಾಡಿವೆ. ಕರ್ನಾಟಕ, ತ್ರಿಪುರ, ಮಣಿಪುರ, ಅಸ್ಸಾಂ, ಹರಿಯಾಣ, ಗೋವಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ ತಲಾ 7 ರೂ ಕಡಿತಗೊಳಿಸಿವೆ. ಉಳಿದ ರಾಜ್ಯಗಳು ತಲಾ 2 ರೂನಷ್ಟು ಕಡಿತಗೊಳಿಸಿವೆ.
ಬಿಹಾರ
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್‌ರವರು ಲೀಟರ್ ಪೆಟ್ರೋಲ್ ಮೇಲೆ 3.20 ರೂ ಮತ್ತು ಡೀಸೆಲ್ ಮೇಲೆ 3.90ರೂ ವ್ಯಾಟ್ ಕಡಿತ ಮಾಡಿದ್ದಾರೆ.
ಓರಿಸ್ಸಾ
ಓರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರವರು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 3 ರೂ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.
ತಮಿಳುನಾಡು ಸರ್ಕಾರವು ಆಗಸ್ಟ್ 6 ರಂದೇ ಲೀಟರ್ ಪೆಟ್ರೋಲ್ ಮೇಲೆ ತಲಾ 3 ರೂ ತೆರಿಗೆ ಕಡಿತ ಘೋಷಿಸಿತ್ತು.


