‘ಅಂತರರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ’ಯ ಸಂದರ್ಭದಲ್ಲಿ ಪಂಜಾಬ್ ಸರ್ಕಾರವು ರಾಜ್ಯದಾದ್ಯಂತ ಅಗತ್ಯವಿರುವ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಉಚಿತ ‘ಸ್ಯಾನಿಟರಿ ನ್ಯಾಪ್‌ಕಿನ್’ ನೀಡುವ ಯೋಜನೆಯನ್ನು ಶುಕ್ರವಾರ ಪ್ರಾರಂಭಿಸಿತು.
‘ಉದಾನ್’ ಎಂದು ಕರೆಯಲ್ಪಡುವ ಈ ಯೋಜನೆಗೆ ವರ್ಷಕ್ಕೆ 40.55 ಕೋಟಿ ರೂ ಬೇಕಾಗುತ್ತದೆ ಎಂದು ಪಂಜಾಬ್ ಸಾಮಾಜಿಕ ಭದ್ರತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅರುಣಾ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಮತ್ತು ಅವರ ಪುತ್ರನ ಕಾಲು ಹಿಡಿದು ಸಿ.ಪಿ. ಯೋಗೇಶ್ವರ್ ಸಚಿವರಾಗಿದ್ದು: ರೇಣುಕಾಚಾರ್ಯ
ಹೊಸ ಯೋಜನೆಯು ಶಾಲೆಯಿಂದ ಹೊರಗುಳಿಯುವ ಹುಡುಗಿಯರು, ಕಾಲೇಜಿಗೆ ಹಾಜರಾಗದ ಯುವತಿಯರು, ಬಿಪಿಎಲ್ ಕುಟುಂಬಗಳ ಮಹಿಳೆಯರು, ಮನೆಯಿಲ್ಲದ ಮಹಿಳೆಯರು, ಕೊಳೆಗೇರಿ ಪ್ರದೇಶದ ನಿವಾಸಿಗಳು ಮತ್ತು ಇತರ ಇಲಾಖೆಗಳ ಯಾವುದೇ ಯೋಜನೆಯಡಿ ಉಚಿತ ಅಥವಾ ಸಬ್ಸಿಡಿಯ ರೂಪದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಪಡೆಯದವರನ್ನು ಒಳಗೊಳ್ಳುತ್ತದೆ ಅವರು ಹೇಳಿದ್ದಾರೆ.
ಪ್ರತಿ ಫಲಾನುಭವಿಗೆ ತಿಂಗಳಿಗೆ ಗರಿಷ್ಠ ಒಂಬತ್ತು ಪ್ಯಾಡ್‌ಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಒಟ್ಟು 1,22,91,300 ಸ್ಯಾನಿಟರಿ ಪ್ಯಾಡ್‌ಗಳನ್ನು 13,65,700 ಫಲಾನುಭವಿಗಳಿಗೆ 27,314 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಮತ್ತು ಸಹಾಯಕರ ಮೂಲಕ ವಿತರಿಸಲಾಗುವುದು ಎಂದು ಅರುಣಾ ಹೇಳಿದ್ದಾರೆ.
ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಮೂಲಭೂತ ಉತ್ಪನ್ನಗಳ ಲಭ್ಯತೆಯನ್ನು ಸುಧಾರಿಸುವುದು, ಉತ್ತಮ ಜೀವನ ಮಟ್ಟವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತಾತಾ, ನೀವು ಎಂದಾದರೂ ಮಾಂಸ ತಿಂದಿದ್ದೀರಾ ಎಂಬ ಪ್ರಶ್ನೆಗೆ ದೊರೆಸ್ವಾಮಿಯವರ ಉತ್ತರವೇನು ಗೊತ್ತೆ?
ಮಹಿಳಾ ಆಧಾರಿತ ಯೋಜನೆಯು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು, ಅವರ ಸ್ವಾಭಿಮಾನವನ್ನು ಹೆಚ್ಚಿಸುವುದು ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಸುರಕ್ಷಿತವಾಗಿ ವಿಲೇವಾರಿ ಮಾಡುವುದನ್ನು ಖಚಿತಪಡಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಯೋಜನೆಯ ಉಧ್ಘಾಟನಾ ಸಮಾರಂಭದಲ್ಲಿ 1,500 ಸ್ಥಳಗಳಲ್ಲಿ ಮತ್ತು ರಾಜ್ಯದ ಇತರ ಅಂಗನವಾಡಿ ಕೇಂದ್ರಗಳಲ್ಲಿ ಒಂದು ಲಕ್ಷ ಪ್ಯಾಕೆಟ್ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಯೋಜನೆಯ ಒಟ್ಟಾರೆ ಪ್ರಗತಿ ಮತ್ತು ಸುಗಮ ಅನುಷ್ಠಾನದ ಮೇಲ್ವಿಚಾರಣೆಗಾಗಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡ ರಾಜ್ಯ ಕಾರ್ಯಪಡೆ ರಚಿಸಲಾಗಿದೆ ಎಂದು ಸಚಿವೆ ಹೇಳಿದ್ದಾರೆ.
ಪ್ರತಿ ತಿಂಗಳು, ಸರ್ಕಾರದಿಂದ ಅನುಮೋದಿತ ಎಂಪನೇಲ್ಡ್ ಪ್ರಯೋಗಾಲಯಗಳು ಸ್ಯಾನಿಟರಿ ಪ್ಯಾಡ್ ಗುಣಮಟ್ಟದ ಪರೀಕ್ಷೆಯನ್ನು ನಡೆಸುತ್ತವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1


