Homeಮುಖಪುಟಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

- Advertisement -
- Advertisement -

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ ಅವರನ್ನು ಗ್ವಾಲಿಯರ್‌ನಲ್ಲಿ ಬಂಧಿಸಿ ಪಟಿಯಾಲಕ್ಕೆ ಕರೆತರಲಾಗಿದೆ ಎಂದು ಪಟಿಯಾಲ ಎಸ್‌ಎಸ್‌ಪಿ ವರುಣ್ ಶರ್ಮಾ ತಿಳಿಸಿದ್ದಾರೆ.

ನಂತರ ಶಾಸಕರನ್ನು ಇಲ್ಲಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಪಠಣಮಜ್ರಾ ಮೇಲೆ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1, 2025 ರಂದು, ಪೊಲೀಸರು ಪಠಾಣಮಜ್ರಾ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು.

ಜಿರಾಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಶಾಸಕರು ತಮ್ಮನ್ನು ವಿಚ್ಛೇದಿತ ಎಂದು ತಪ್ಪಾಗಿ ಬಿಂಬಿಸಿಕೊಂಡು, ನನ್ನೊಂದಿಗೆ ಸಂಬಂಧ ಬೆಳೆಸಿದ್ದರು, ನಂತರ 2021 ರಲ್ಲಿ ನಮ್ಮಿಬ್ಬರಿಗೂ ಮದುವೆಯಾಗಿದ್ದರೂ ವಿವಾಹವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಆತ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡಿ, ಬೆದರಿಕೆ ಹಾಕಿದ್ದು, “ಅಶ್ಲೀಲ” ವಿಷಯಗಳನ್ನು ಕಳುಹಿಸಿದ್ದಾನೆ ಎಂದು ದೂರು ದಾಖಲಿಸಿದ್ದಳು. 

ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಎಎಪಿ ಶಾಸಕನನ್ನು ಘೋಷಿತ ಅಪರಾಧಿ ಎಂದು ಘೋಷಿಸಲಾಗಿತ್ತು. ಪಟಿಯಾಲ ಪೊಲೀಸರು ಶಾಸಕನ ವಿರುದ್ಧ ಲುಕ್-ಔಟ್ ನೋಟಿಸ್ ಸಹ ಹೊರಡಿಸಿದ್ದರು.

ಅತ್ಯಾಚಾರ ಪ್ರಕರಣದಲ್ಲಿ ಪಠಾಣಮಜ್ರಾ ಸೆಪ್ಟೆಂಬರ್ 2 ರಿಂದ ತಲೆಮರೆಸಿಕೊಂಡಿದ್ದ. ಪಂಜಾಬ್ ಪೊಲೀಸರು ಆತನನ್ನು ಬಂಧಿಸಲು ಹರಿಯಾಣದ ಕರ್ನಾಲ್‌ಗೆ ಹೋದಾಗ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ.

ಕರ್ನಾಲ್ ಜಿಲ್ಲೆಯ ದಾಬ್ರಿ ಗ್ರಾಮದಲ್ಲಿ ಶಾಸಕರನ್ನು ಬಂಧಿಸಲು ಪೊಲೀಸ್ ತಂಡ ಹೋದಾಗ ಅವರ ಬೆಂಬಲಿಗರು ಗುಂಡು ಹಾರಿಸಿದರು ಮತ್ತು ಕಲ್ಲುಗಳನ್ನು ಎಸೆದರು ಎಂದು ಪೊಲೀಸರು ಹೇಳಿಕೊಂಡಿದ್ದರು. ಶಾಸಕನು ತನ್ನ ಸಂಬಂಧಿಕರೊಬ್ಬರ ಮನೆಯಲ್ಲಿದ್ದನು.

ಆದಾಗಲೂ, ಪೊಲೀಸರ ಮೇಲೆ ಗುಂಡು ಹಾರಿಸಿದ್ದರಲ್ಲಿ ಭಾಗಿಯಾಗಿದ್ದೇನೆ ಎಂಬ ಪೊಲೀಸರ ಹೇಳಿಕೆಯನ್ನು ಪಠಾಣ್‌ಮಜ್ರಾ ನಿರಾಕರಿಸಿದ್ದರು ಮತ್ತು “ನಕಲಿ ಎನ್‌ಕೌಂಟರ್” ನಲ್ಲಿ ಕೊಲ್ಲಲ್ಪಡುತ್ತೇನೆ ಎಂದು ತಿಳಿದ ನಂತರ ತಾನು ಪರಾರಿಯಾಗಿದ್ದೇನೆ ಎಂದು ಹೇಳಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಚಾರಣೆಯ ನಂತರವೂ 8 ಲಕ್ಷ ಮತದಾರರ ಹೆಸರು ಅಳಿಸಲಾಗಿದೆ; ಬಂಗಾಳದಲ್ಲಿ ಎನ್.ಆರ್.ಸಿ ಇಲ್ಲ: ಮಮತಾ ಬ್ಯಾನರ್ಜಿ

ಮೊದಲ ಪೂರಕ ಮತದಾರರ ಪಟ್ಟಿ ಪ್ರಕಟವಾದ ನಂತರ ಎಂಟು ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ರಾಜ್ಯದಲ್ಲಿ ಚುನಾವಣಾ ಪಾರದರ್ಶಕತೆಯ ಬಗ್ಗೆ ಗಂಭೀರ...

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಜಾಗತಿಕ ತೈಲ ಬೆಲೆಗಳ ಏರಿಕೆಯ ಪರಿಣಾಮವನ್ನು ತಗ್ಗಿಸುವ ಪ್ರಯತ್ನದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಕಡಿಮೆ ಮಾಡಿದೆ, ಇದರಿಂದಾಗಿ ಪೆಟ್ರೋಲ್‌ಗೆ 3 ರೂ.ಗಳಷ್ಟು...

ಇಂಧನ ಬಿಕ್ಕಟ್ಟು: ‘ಭಾರತದಲ್ಲಿ ಲಾಕ್‌ಡೌನ್ ಇಲ್ಲ’: ‘ಅಂತಹ ಯಾವುದೇ ಪ್ರಸ್ತಾಪ ಪರಿಗಣನೆಯಲ್ಲಿಲ್ಲ’; ಹರ್ದೀಪ್ ಪುರಿ ಸ್ಪಷ್ಟನೆ

ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಎಲ್‌ಪಿಜಿ ಬಿಕ್ಕಟ್ಟಿನ ಮಧ್ಯೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಭಾರತದಲ್ಲಿ ಲಾಕ್‌ಡೌನ್ ವದಂತಿಗಳು "ಸುಳ್ಳು" ಎಂದು ಹೇಳಿದ್ದಾರೆ. ಇಂಧನ ಬಿಕ್ಕಟ್ಟಿನ ಕಳವಳಗಳನ್ನು ತಿಳಿಸುತ್ತಾ...

ವಿಶೇಷ ಸಚಿವ ಸಂಪುಟ ಮುಂದೂಡಿದ ಸರ್ಕಾರ; ಒಳಮೀಸಲಾತಿ ನಿರ್ಧಾರ ಮತ್ತಷ್ಟು ವಿಳಂಬ

ಪರಿಶಿಷ್ಟ ಜಾತಿಯೊಳಗಿನ (ಎಸ್‌ಸಿ) ಒಳಮೀಸಲಾತಿ ಜಾರಿ ಸಂಬಂಧ ಇಂದು ಸರ್ಕಾರ ನಡೆಸಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಉಪಚುನಾವಣೆ 'ಮಾದರಿ ನೀತಿ ಸಂಹಿತೆ' ಕಾರಣ ಮುಂದಿಟ್ಟು ಮುಂದೂಡಿದೆ. ಆ ಮೂಲಕ, ಒಳಮೀಸಲಾತಿ ನಿರ್ಧಾರವನ್ನು...

ಕಾಂಗೋ: 5 ತಿಂಗಳಲ್ಲಿ 600 ಕ್ಕೂ ಹೆಚ್ಚು ಜನರಿಗೆ ಮರಣದಂಡನೆ; 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ; ವಿಶ್ವಸಂಸ್ಥೆ 

ಆಫ್ರಿಕಾ ಖಂಡದಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿರುವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಹದಗೆಡುತ್ತಿರುವ ಮಾನವೀಯ ಮತ್ತು ಮಾನವ ಹಕ್ಕುಗಳ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಶಸ್ತ್ರ ಗುಂಪುಗಳು, ವಿದೇಶಿ ಹಸ್ತಕ್ಷೇಪ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ...

60 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹವಿದೆ, 1 ತಿಂಗಳ ಎಲ್‌ಪಿಜಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ: ಕೇಂದ್ರ ಸರ್ಕಾರ

ಭಾರತದ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣವಾಗಿ ಸುರಕ್ಷಿತ ಹಾಗೂ ನಿಯಂತ್ರಣದಲ್ಲಿದೆ ಎಂದು ಸರ್ಕಾರ ಗುರುವಾರ ಪ್ರತಿಪಾದಿಸಿದೆ. "ಉದ್ದೇಶಪೂರ್ವಕವಾಗಿ ದುರುದ್ದೇಶಪೂರಿತ, ಸಂಘಟಿತ ತಪ್ಪು ಮಾಹಿತಿಯ ಅಭಿಯಾನದಿಂದ ನಿವಾಸಿಗಳು ಮೋಸಹೋಗಬಾರದು" ಎಂದು ಎಚ್ಚರಿಸಿದೆ. "ಭಾರತವು...

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ನೋಟಿಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾಗಿರುವ ಮುಡಾ ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ 'ಬಿ ರಿಪೋರ್ಟ್' / ಮುಕ್ತಾಯ ವರದಿಯನ್ನು ವಿಚಾರಣಾ ನ್ಯಾಯಾಲಯ ಸ್ವೀಕರಿಸುವುದನ್ನು ಪ್ರಶ್ನಿಸಿ ಸ್ನೇಹಮಯಿ...

ದೆಹಲಿ| ಹೊಸ ಮಸೂದೆ ವಿರೋಧಿಸಿ ಟ್ರಾನ್ಸ್‌ಜೆಂಡರ್ ಸಮುದಾಯದಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ

ಹೊಸದಾಗಿ ಪರಿಚಯಿಸಲಾದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. "ಹೊಸ ಮಸೂದೆ ನಮ್ಮ ಹಕ್ಕುಗಳು ಮತ್ತು ಘನತೆಯನ್ನು...

ವಂದೇ ಭಾರತ್ ಪ್ರಯಾಣಿಕನಿಗೆ ಕೊಟ್ಟ ಮೊಸರಿನಲ್ಲಿ ಜೀವಂತ ಹುಳುಗಳು ಪತ್ತೆ; ಮಾರಾಟಗಾರನಿಗೆ ದಂಡ

ಪಾಟ್ನಾ-ಟಾಟಾನಗರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನೊಬ್ಬನಿಗೆ ನೀಡಿದ ಪ್ಯಾಕ್ ಮಾಡಿದ ಮೊಸರಿನಲ್ಲಿ ಹುಳುಗಳು ಕಂಡುಬಂದ ನಂತರ ರೈಲ್ವೆ ಇಲಾಖೆ ಮಾರಾಟಗಾರನ ನಡುವಿನ ಒಪ್ಪಂದವನ್ನು ರದ್ದುಗೊಳಿಸಿದ್ದಿ, ಕಂಪನಿಗೆ 50 ಲಕ್ಷ ರೂ. ದಂಡ...

ಮಹಾರಾಷ್ಟ್ರ: ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಕಿಗೆ ಲೈಂಗಿಕ ಕಿರುಕುಳ ಆರೋಪ: ಶಾಲಾ ಟ್ರಸ್ಟಿಯ ಮಗ ಬಂಧನ

ಮಹಾರಾಷ್ಟ್ರದ ಡೊಂಬಿವ್ಲಿಯ ಸಾಗವ್ ಪ್ರದೇಶದ ಪ್ರಸಿದ್ಧ ಶಾಲೆಯಲ್ಲಿ ಶಾಲಾ ಟ್ರಸ್ಟಿಯ ಮಗ ಶಿಕ್ಷಕಿಯೊಬ್ಬರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಅದಲ್ಲದೇ ಶಿಕ್ಷಕಿಯನ್ನು ದೈಹಿಕ ಸಂಬಂಧಕ್ಕಾಗಿ ಪೀಡಿಸಿರುವ ಆರೋಪದ ಮೇಲೆ...